Budget History: ಭಾರತದಲ್ಲಿ ಮೊದಲ ಬಜೆಟ್ ಮಂಡಿಸಿದ ವ್ಯಕ್ತಿ ಯಾರು ಗೊತ್ತಾ..?

India's First Budget: ಭಾರತದಲ್ಲಿ ಮೊದಲ ಬಜೆಟ್‌ನ್ನು ಈಸ್ಟ್‌ ಇಂಡಿಯಾ ಕಂಪನಿಯ ಜೇಮ್ಸ್ ವಿಲ್ಸನ್ 1860ರ ಫೆಬ್ರವರಿ 18ರಂದು ಮೊದಲ ಬಾರಿ ಮಂಡಿಸಿದರು. ಜೇಮ್ಸ್ ವಿಲ್ಸನ್‌ರನ್ನು ಭಾರತೀಯ ಬಜೆಟ್‌ ವ್ಯವಸ್ಥೆಯ ಜನಕ ಎಂದೂ ಕರೆಯಲಾಗುತ್ತದೆ

ಜೇಮ್ಸ್ ವಿಲ್ಸನ್

ಜೇಮ್ಸ್ ವಿಲ್ಸನ್

 • Share this:
  ಹಣಕಾಸು ಸಚಿವೆ (Finance Minister)ನಿರ್ಮಲಾ ಸೀತಾರಾಮನ್(Nirmala Sitharaman) ಫೆಬ್ರವರಿ(February) 1 ರಂದು ಬಜೆಟ್ ಮಂಡಿಸಲಿದ್ದಾರೆ. ವ್ಯಕ್ತಿಯೊಬ್ಬ ತಮ್ಮ ಮನೆ(Home) ಖರ್ಚು ವೆಚ್ಚಕ್ಕಾಗಿ(Expenditure) ಯಾವ ರೀತಿ ಲೆಕ್ಕಾಚಾರ ಮಾಡುತ್ತಾರೋ, ಹಾಗೆಯೇ ಸರ್ಕಾರ(Government) ಕೂಡಾ ಒಂದಿಡೀ ವರ್ಷದ ಬಜೆಟ್ ರೂಪಿಸುತ್ತದೆ. ಈ ಬಜೆಟ್‌ನಲ್ಲಿ ಸರ್ಕಾರದ ಆದಾಯ(Income) ಹಾಗೂ ಖರ್ಚಿನ ವಿವರವಿರುತ್ತದೆ. ಅಲ್ಲದೇ ಯೋಜನೆಗಳಿಗೆ ವ್ಯಯಿಸುವ ಮೊತ್ತದ ಮಾಹಿತಿಯೂ ಇರುತ್ತದೆ. ಹೀಗಾಗಿ ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2022 ಅನ್ನು ಮಂಡಿಸಲು ಸಜ್ಜಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಪುಸ್ತಕದಲ್ಲಿ(Budget Book) ಏನಿದೆ ಎಂದು ತಿಳಿಯಲು ಎಲ್ಲರೂ ಉತ್ಸುಕರಾಗಿದ್ದಾರೆ.. ಆದರೆ ಇದಕ್ಕೂ ಮುಂಚೆ ಭಾರತದ ಮೊದಲ ಬಜೆಟ್ ಮಂಡನೆ ಯಾಗಿದ್ದು ಯಾವಾಗ..? ಭಾರತದ ಮೊದಲ ಬಜೆಟ್ ಮಂಡನೆ ಮಾಡಿದ ವ್ಯಕ್ತಿ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ.. ಹೀಗಾಗಿ ಭಾರತದ ಬಜೆಟ್ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

  ಭಾರತದ ಮೊದಲ ಬಜೆಟ್ ಮಂಡಿಸಿದ್ದು ಓರ್ವ ವಿದೇಶಿ ಪ್ರಜೆ..

  ಭಾರತದಲ್ಲಿ ಮೊದಲ ಬಜೆಟ್‌ನ್ನು ಈಸ್ಟ್‌ ಇಂಡಿಯಾ ಕಂಪನಿಯ ಜೇಮ್ಸ್ ವಿಲ್ಸನ್ 1860ರ ಫೆಬ್ರವರಿ 18ರಂದು ಮೊದಲ ಬಾರಿ ಮಂಡಿಸಿದರು. ಜೇಮ್ಸ್ ವಿಲ್ಸನ್‌ರನ್ನು ಭಾರತೀಯ ಬಜೆಟ್‌ ವ್ಯವಸ್ಥೆಯ ಜನಕ ಎಂದೂ ಕರೆಯಲಾಗುತ್ತದೆ.

  ಭಾರತದಲ್ಲಿ 1867ರಿಂದ, ಏಪ್ರಿಲ್ 1 ರಿಂದ ಮಾರ್ಚ್ 31ರವರೆಗೆ ಅಸ್ತಿತ್ವದಲ್ಲಿರುವ ಹಣಕಾಸು ವರ್ಷ ಜಾರಿಗೆ ಬಂತು. ಅದಕ್ಕೂ ಮುನ್ನ 1 ಮೇ ನಿಂದ 30 ಏಪ್ರಿಲ್‌ವರೆಗೆ ಹಣಕಾಸು ವರ್ಷವಾಗಿರುತ್ತಿತ್ತು. ಹೀಗಾಗಿ ಭಾರತದ ಮೊದಲ ಬಜೆಟನ ಜೇಮ್ಸ್ ವಿಲ್ಸನ್ ಅವರು ಮಂಡನೆ ಮಾಡಿದ್ದರು.

  ಇದನ್ನೂ ಓದಿ: ದಶಕಗಳ ಸಂಪ್ರದಾಯಗಳನ್ನ ಬದಲಿಸಿದ ಮೋದಿ ಸರ್ಕಾರ: ಇಲ್ಲಿವೆ ಬದಲಾದ ಬದಲಾವಣೆಗಳು!

  ಯಾರು ಈ ಜೇಮ್ಸ್ ವಿಲ್ಸನ್..?

  1805 ರಲ್ಲಿ ಸ್ಕಾಟ್ಲೆಂಡ್‌ನ ಸಣ್ಣ ಗಡಿ ಪಟ್ಟಣವಾದ ಹಾವಿಕ್‌ನಲ್ಲಿ ಜನಿಸಿದ ವಿಲ್ಸನ್,16 ನೇ ವಯಸ್ಸಿನಲ್ಲಿ, ಟೋಪಿ ಕಾರ್ಖಾನೆಯಲ್ಲಿ ಅಪ್ರೆಂಟಿಸ್ ಆದರು. ದಿನವಿಡೀ ಕೆಲಸ ಮಾಡಿ, ವಿಲ್ಸನ್ ರಾತ್ರಿ ಅರ್ಥಶಾಸ್ತ್ರದ ಬಗ್ಗೆ ಓದುತ್ತಿದ್ದರು. 1824 ರಲ್ಲಿ, ಲಂಡನ್‌ಗೆ ಬಂದರು. 1837 ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ, ವಿಲ್ಸನ್ ತನ್ನ ಹೆಚ್ಚಿನ ಸಂಪತ್ತನ್ನು ಕಳೆದುಕೊಂಡರು.

  ಬೇರೆ ದಾರಿ ಇಲ್ಲದೆ ತನ್ನ ಉಳಿದ ಆಸ್ತಿಯನ್ನು ಮಾರಾಟ ಮಾಡಿದರು. ಒಂದು ದಶಕದ ನಂತರ 1853 ರಲ್ಲಿ, ವಿಲ್ಸನ್ ಚಾರ್ಟರ್ಡ್ ಬ್ಯಾಂಕ್ ಆಫ್ ಇಂಡಿಯಾ, ಆಸ್ಟ್ರೇಲಿಯಾ ಮತ್ತು ಚೀನಾವನ್ನು ಸ್ಥಾಪಿಸಿದರು. ನಂತರ 1969 ರಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಆಯಿತು. ವಿಲ್ಸನ್ 1843 ರಲ್ಲಿ ದಿ ಎಕನಾಮಿಸ್ಟ್ ಪತ್ರಿಕೆ ಸ್ಥಾಪಿಸಿದರು.

  ಮುಂದೆ ನವೆಂಬರ್ 28, 1859 ರಂದು ಮೊದಲು ಭಾರತಕ್ಕೆ ಬಂದರು. ಬಳಿಕ ಅವಿಭಜಿತ ಭಾರತದಲ್ಲಿ ವೈಸ್‌ರಾಯ್ ಲಾರ್ಡ್ ಕ್ಯಾನಿಂಗ್ಸ್ ಕೌನ್ಸಿಲ್‌ನಲ್ಲಿ ಹಣಕಾಸು ಸದಸ್ಯರಾಗಿ ನೇಮಕಗೊಂಡರು. ಇದಾದ ಬಳಿಕ ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಸರ್ಕಾರವು ಭಾರಿ ಸಂಕಷ್ಟದಲ್ಲಿ ಸಿಲುಕಿತ್ತು.

  ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿತು. ಈ ಸಂದರ್ಭದಲ್ಲಿ 1860 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಜೆಟ್‌ ಅನ್ನು ಮಂಡನೆ ಮಾಡಿದವರು ಜೇಮ್ಸ್ ವಿಲ್ಸನ್. ಇನ್ನು ವಿಲ್ಸನ್ ಸಂದರ್ಭದಲ್ಲಿ ಆದಾಯ ತೆರಿಗೆ, ಪರವಾನಗಿ ತೆರಿಗೆ ಮತ್ತು ತಂಬಾಕು ಸುಂಕ ಎಂಬ ಮೂರು ರೀತಿಯ ತೆರಿಗೆಗಳನ್ನು ಪರಿಚಯಿಸಿದರು.

  ಇದನ್ನೂ ಓದಿ: ಈ ಬಾರಿ ಬಜೆಟ್ ಮೇಲೆ Work From Home ಉದ್ಯೋಗಿಗಳ ನಿರೀಕ್ಷೆಗಳೇನು? ಹೊಸ ಯೋಜನೆಗಳು ಘೋಷಣೆ ಆಗುತ್ತಾ?

  ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆಯಾಗಿದ್ದು ಯಾವಾಗ?

  ಇನ್ನೂ ಸ್ವತಂತ್ರ ಭಾರತದ ಮೊದಲ ಬಜೆಟ್ 1947ರ ನವೆಂಬರ್ 26ರಂದು ಮಂಡಿಸಲಾಯ್ತು. ಇದನ್ನು ವಿತ್ತ ಸಚಿವ ಆರ್‌. ಕೆ. ಷಣ್ಮುಖಂ ಚೆಟ್ಟಿ ಮಂಡಿಸಿದ್ದರು. ಇನ್ನು ಗಣರಾಜ್ಯ ಭಾರತದ ಮೊದಲ ಬಜೆಟ್‌ನ್ನು 28 ಫೆಬ್ರವರಿ 1950 ರಂದು ಮಂಡಿಸಿದ್ದರು.
  Published by:ranjumbkgowda1 ranjumbkgowda1
  First published: