• Home
  • »
  • News
  • »
  • business
  • »
  • Jack Ma: ಚೀನಾದ ಆರ್ಥಿಕತೆಗೆ ದೊಡ್ಡ ಹೊಡೆತ! ಜಾಗತಿಕ ಹೂಡಿಕೆದಾರರಿಗೆ ಆಘಾತ

Jack Ma: ಚೀನಾದ ಆರ್ಥಿಕತೆಗೆ ದೊಡ್ಡ ಹೊಡೆತ! ಜಾಗತಿಕ ಹೂಡಿಕೆದಾರರಿಗೆ ಆಘಾತ

ಜಾಕ್​​ ಮಾ

ಜಾಕ್​​ ಮಾ

ಐವತ್ತಾರು ವರ್ಷ ವಯಸ್ಸಿನ ಜಾಕ್ ಮಾ ಅವರು 2019 ರಲ್ಲಿ ಅಲಿಬಾಬಾದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು ಆದರೆ ಆಲಿಬಾಬಾದ ಪಾಲುದಾರಿಕೆಯ ಭಾಗವಾಗಿರುವ ಮಾ, ಬಹುಪಾಲು ನಿರ್ದೇಶಕರ ಮಂಡಳಿಯನ್ನು ನಾಮನಿರ್ದೇಶನ ಮಾಡುವ ಹಕ್ಕನ್ನು ಹೊಂದಿರುವ 36 ಸದಸ್ಯರಲ್ಲಿ ಒಬ್ಬರು ಹಾಗೂ ಅತಿದೊಡ್ಡ ಷೇರುದಾರರಲ್ಲಿ ಒಬ್ಬರಾಗಿದ್ದಾರೆ. 

ಮುಂದೆ ಓದಿ ...
  • Share this:

ಚೀನಾದ ಸಂಘಟಿತ ಅಲಿಬಾಬಾ ಗ್ರೂಪ್‌ನ ಅಂಗಸಂಸ್ಥೆಯಾದ ಆಂಟ್ ಗ್ರೂಪ್‌ ಅನ್ನು, ಸಂಸ್ಥಾಪಕರಾದ ಜ್ಯಾಕ್ ಮಾ (Jack Ma) ಇನ್ನು ಮುಂದೆ ನಿಯಂತ್ರಿಸುವುದಿಲ್ಲವೆಂದು ವರದಿಯಾಗಿದ್ದು, ಕೆಲವೊಂದು ಹೊಂದಾಣಿಕೆಗಳಿಗೆ ಷೇರುದಾರರು ಅಂಗೀಕರಿಸಿದ್ದು ಈ ಹಿನ್ನಲೆಯಲ್ಲಿ ಮಾ ಸಂಸ್ಥೆಯಲ್ಲಿನ ತಮ್ಮ ವೋಟಿಂಗ್ ಹಕ್ಕುಗಳನ್ನು (Vooting Right) ತ್ಯಜಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಪ್ರಸ್ತುತ ಈ ಬೆಳವಣಿಗೆಯು, 2020 ರ ಕೊನೆಯಲ್ಲಿ ಆಂಟ್‌ನ $ 37 ಶತಕೋಟಿ IPO ದಾಖಲೆಯ ಕುಸಿತ ತದನಂತರ ಸಂಸ್ಥೆಯ ಪುನರ್‌ರಚನೆಗೆ ನಾಂದಿಹಾಡಿದ ಘಟನೆಯ ನಂತರದ ದೊಡ್ಡ ಬೆಳವಣಿಗೆಯಾಗಿದೆ (Big Change) ಎನ್ನಲಾಗಿದೆ.


ಚೀನಾದ ಆರ್ಥಿಕತೆಗೆ ದೊಡ್ಡ ಹೊಡೆತ


ತಾನೇ ಸ್ಥಾಪಿಸಿದ ಸಂಸ್ಥೆ ಆಂಟ್‌ನಿಂದ ಮಾ ನಿರ್ಗಮಿಸಿರುವುದು, ಚೀನಾ ಸರ್ಕಾರವು ಖಾಸಗಿ ಹೂಡಿಕೆದಾರರ ಪ್ರಭಾವ ತಗ್ಗಿಸುವ ಪ್ರಕ್ರಿಯೆಗೆ ಉದಾಹರಣೆಯಾಗಿದೆ. ಚೀನಾದ ಆರ್ಥಿಕತೆಗೆ ಇದು ದೊಡ್ಡ ಹೊಡೆತವಾಗಿದೆ ಎಂದು ಓರಿಯಂಟ್ ಕ್ಯಾಪಿಟಲ್ ರಿಸರ್ಚ್‌ನ ವ್ಯವಸ್ಥಾಪಕ ನಿರ್ದೇಶಕ ಆಂಡ್ರೆ ಕೊಲಿಯರ್ ತಿಳಿಸಿದ್ದಾರೆ.


ಚೀನಾದ ಅತ್ಯಂತ ಪ್ರಭಾವಿ ವಾಣಿಜ್ಯೋದ್ಯಮಿಗಳಲ್ಲಿ ಒಬ್ಬರಾದ ಮಾ, ಟೆಕ್ ವಲಯದ ಮೇಲೆ ಚೀನಾದ ಕಮ್ಯುನಿಸ್ಟ್ ಆಡಳಿತದ ಹದ್ದುಬಸ್ತಿನಲ್ಲಿ ಆಂಟ್ ಗ್ರೂಪ್‌ನ ನಿಯಂತ್ರಣವನ್ನು ಬಿಟ್ಟುಕೊಡುತ್ತಾರೆ ಎಂದು ಕಂಪನಿ ಘೋಷಿಸಿದೆ. ಆಂಟ್‌ನ 53.46% ರಷ್ಟು ಷೇರುಗಳನ್ನು ಪರೋಕ್ಷವಾಗಿ ನಿಯಂತ್ರಿಸುವ ವ್ಯಕ್ತಿಯನ್ನು ನಿಯಂತ್ರಣಕ್ಕೊಳಗಾದ ವ್ಯಕ್ತಿ ಎಂದು ಪರಿಗಣಿಸಿದೆ ಎಂಬುದಾಗಿ ವರದಿ ತಿಳಿಸಿದೆ.


ಇದನ್ನೂ ಓದಿ:Explainer: ಭೂಕುಸಿತಕ್ಕೆ ಬೆಚ್ಚಿಬಿದ್ದ ಹಿಂದೂಗಳ ಪ್ರಸಿದ್ಧ ಯಾತ್ರಾ ಸ್ಥಳ ಜೋಶಿಮಠ: ಈ ಅಧೋಗತಿಗೆ ಕಾರಣ ಏನು?


ಮಾ ವೋಟಿಂಗ್ ಹಕ್ಕು


ಷೇರುದಾರರು ಸಂಸ್ಥೆಯ ಸ್ಥಿರತೆ ಹಾಗೂ ಅಭಿವೃದ್ಧಿಯನ್ನು ಕಾಪಾಡಿಕೊಳ್ಳಲು ಕೆಲವೊಂದು ನಿಯಮಗಳನ್ನು ರೂಪಿಸಿದ್ದು, ಆ ನಿಯಮಗಳಿಗೆ ಅನುಸಾರವಾಗಿ ಜಾಕ್ ಮಾ 6.2% ದಷ್ಟು ವೋಟಿಂಗ್ ಹಕ್ಕುಗಳನ್ನು ಹೊಂದಿರುತ್ತಾರೆ ಎಂಬುದಾಗಿ ಸಂಸ್ಥೆ ತಿಳಿಸಿದೆ. ಚೀನಾದ ಆರ್ಥಿಕತೆ ಹೀನಾಯವಾಗಿದ್ದು, ಸುಧಾರಣೆಯತ್ತ ಚಿತ್ತ ನೆಟ್ಟಿದೆ. ಹೀಗಾಗಿ ತಂತ್ರಜ್ಞಾನ/ಖಾಸಗಿ ವಲಯಗಳನ್ನು ಸರಕಾರ ಗುರಿಯಾಗಿರಿಸಿಕೊಂಡಿದೆ ಎಂದು ಬೀಜಿಂಗ್‌ನ ಹೂಡಿಕೆ ಸಲಹಾ ಸಂಸ್ಥೆ BDA ಯ ಅಧ್ಯಕ್ಷರಾದ ಡಂಕನ್ ಕ್ಲಾಕ್ ತಿಳಿಸಿದ್ದಾರೆ.


ಸಂಸ್ಥಾಪಕರು, ನಿರ್ವಹಣೆ ಮತ್ತು ಸಿಬ್ಬಂದಿ ಸೇರಿದಂತೆ ಹತ್ತು ವ್ಯಕ್ತಿಗಳು ತಮ್ಮ ಮತದಾನದ ಹಕ್ಕುಗಳನ್ನು ಸ್ವತಂತ್ರವಾಗಿ ಚಲಾಯಿಸುತ್ತಾರೆ ಎಂದು ಸಂಸ್ಥೆ ತಿಳಿಸಿದೆ.


ಜಾಗತಿಕ ಹೂಡಿಕೆದಾರರಿಗೆ ಆಘಾತ


ಆಂಟ್ ತನ್ನ ವ್ಯಾಪಾರ ಕಾರ್ಯಾಚರಣೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದೆ ಹಾಗೂ ಬಂಡವಾಳ ನೆಲೆಯನ್ನು ಹೆಚ್ಚಿಸಿದೆ. ಮಾ ಇನ್ನೂ ಕಂಪನಿಯಲ್ಲಿ ಮತದಾನದ ಹಕ್ಕುಗಳು ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಹೊಂದಿದ್ದಾರೆ. ಚೀನೀ ಸರಕಾರದ ಆಡಳಿತವು ಇಂಟರ್ನೆಟ್ ವಲಯದ ಬೆಳವಣಿಗೆಯ ಮೇಲೆ ಅಧಿಕಾರ ಚಲಾಯಿಸಿದ್ದು ಇದರಿಂದ ಜಾಗತಿಕ ಹೂಡಿಕೆದಾರರಿಗೆ ಆಘಾತವುಂಟಾಗಿದೆ. ಚೀನಾ ಸಂಪೂರ್ಣ ದೇಶಕ್ಕೆ ಹೊಸ ಮಾದರಿಯ ವ್ಯವಸ್ಥೆಯನ್ನು ಜಾರಿಗೆ ತಂದಿದೆ


ಮಾ ಹಠಾತ್ ಕಣ್ಮರೆ


ನವೆಂಬರ್‌ನಲ್ಲಿ ಜಾಕ್ ಮಾ ಅವರ ಹಠಾತ್ ಕಣ್ಮರೆಯು ವಿವಾದಗಳ ಸರಣಿಯನ್ನು ಹುಟ್ಟುಹಾಕಿತು, ಅವರ ಇರುವಿಕೆಯ ಕುರಿತು ಪ್ರತೀ ದಿನ ಹೊಸ ಹೊಸ ಸುದ್ದಿಗಳು ಲಭಿಸುತ್ತಿದ್ದವು. ಕೆಲವು ನಿಯಂತ್ರಕರು ಭಾಗವಹಿಸಿದ್ದ ಶಾಂಘೈನ ವ್ಯಾಪಾರ ಸಮ್ಮೇಳನದಲ್ಲಿ ಮಾ ತಮ್ಮ ಭಾಷಣದಿಂದ ನಿಯಂತ್ರಕರನ್ನು ಕೆರಳಿಸಿದರು. ಚೀನಾದ ಉಪಾಧ್ಯಕ್ಷ ವಾಂಗ್ ಕಿಶನ್ ಕೂಡ ಸಭಿಕರಲ್ಲಿದ್ದರು.


ನಿಯಂತ್ರಕರ ಮೇಲೆ ವಾಗ್ದಾಳಿ ನಡೆಸಿದ್ದ ಮಾ


ನಿಯಂತ್ರಕರು ತಮ್ಮ ಪುರಾತನ ಧೋರಣೆಗೆ ಬದ್ಧರಾಗಿದ್ದು ಉದ್ಯಮದಲ್ಲಿ ನವೀನತೆಯನ್ನು ತರುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಮಾ ದೂರಿದ್ದರು. ವಾಣಿಜ್ಯೋದ್ಯಮಿಗಳು ಮತ್ತು ಯುವಜನರಿಗೆ ಸುಲಭವಾಗಿ ಸಾಲ ಪಡೆಯಲು ಅನಿಯಮಿತ ವಿಧಾನಗಳನ್ನು ಬೆಂಬಲಿಸಲು ಮಾ ತಮ್ಮ ಭಾಷಣದಲ್ಲಿ ಮನವಿ ಮಾಡಿದರು. ಮಾ ಭಾಷಣದ ನಂತರ ಚೀನಾದ ಇ-ಕಾಮರ್ಸ್ ದೈತ್ಯ ಅಲಿಬಾಬಾ ದೊಡ್ಡ ಹಿನ್ನಡೆ ಅನುಭವಿಸಿತು.


ಐವತ್ತಾರು ವರ್ಷ ವಯಸ್ಸಿನ ಜಾಕ್ ಮಾ ಅವರು 2019 ರಲ್ಲಿ ಅಲಿಬಾಬಾದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು ಆದರೆ ಆಲಿಬಾಬಾದ ಪಾಲುದಾರಿಕೆಯ ಭಾಗವಾಗಿರುವ ಮಾ, ಬಹುಪಾಲು ನಿರ್ದೇಶಕರ ಮಂಡಳಿಯನ್ನು ನಾಮನಿರ್ದೇಶನ ಮಾಡುವ ಹಕ್ಕನ್ನು ಹೊಂದಿರುವ 36 ಸದಸ್ಯರಲ್ಲಿ ಒಬ್ಬರು ಹಾಗೂ ಅತಿದೊಡ್ಡ ಷೇರುದಾರರಲ್ಲಿ ಒಬ್ಬರಾಗಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು