• Home
  • »
  • News
  • »
  • business
  • »
  • Jack Ma: ಕೋಟಿ ಕೋಟಿ ಒಡೆಯ ಜಾಕ್​ ಮಾ ಇದ್ದಕ್ಕಿದ್ದ ಹಾಗೆ ಕಣ್ಣರೆಯಾಗಿದ್ದೇಕೆ? ಇದೇ ಕಾರಣವಂತೆ!

Jack Ma: ಕೋಟಿ ಕೋಟಿ ಒಡೆಯ ಜಾಕ್​ ಮಾ ಇದ್ದಕ್ಕಿದ್ದ ಹಾಗೆ ಕಣ್ಣರೆಯಾಗಿದ್ದೇಕೆ? ಇದೇ ಕಾರಣವಂತೆ!

ಜಾಕ್​ ಮಾ

ಜಾಕ್​ ಮಾ

ಪ್ರಾಮಾಣಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಜಾಕ್ ಮಾ ನಂತರ ಶ್ರೀಮಂತ ಉದ್ಯಮದಾರನಾಗಿ ಪ್ರಗತಿ ಹೊಂದಿದ್ದು ಇತಿಹಾಸದಲ್ಲಿಯೇ ಉಲ್ಲೇಖಗೊಂಡಿತ್ತು

  • Trending Desk
  • Last Updated :
  • New Delhi, India
  • Share this:

ಚೀನಾ (China) ದ ಅತ್ಯಂತ ಶ್ರೀಮಂತ ಉದ್ಯಮಿ, ಅಲಿಬಾಬಾ ಗ್ರೂಪ್‌ (Alibaba Group) ನ ಸ್ಥಾಪಕರಾದ ಜಾಕ್ ಮಾ  (Jack Ma) ಚೀನಾದ ಅಧಿಕಾರಿಗಳ ಕಣ್ತಪ್ಪಿಸಿಕೊಂಡು ಎರಡು ವರ್ಷಗಳಿಂದ ಸಾರ್ವಜನಿಕವಾಗಿ ಮರೆಯಾಗಿದ್ದು ಇದೀಗ ಟೋಕಿಯೋ (Tokyo) ದಲ್ಲಿ ವಾಸವಾಗಿದ್ದಾರೆ ಎಂಬುದಾಗಿ ಸುದ್ದಿಮಾಧ್ಯಮ ವರದಿ ಮಾಡಿದೆ.ಪ್ರಾಮಾಣಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಜಾಕ್ ಮಾ ನಂತರ ಶ್ರೀಮಂತ ಉದ್ಯಮದಾರನಾಗಿ ಪ್ರಗತಿ ಹೊಂದಿದ್ದು ಇತಿಹಾಸದಲ್ಲಿಯೇ ಉಲ್ಲೇಖಗೊಂಡಿತ್ತು ಎಂದು ಹೇಳಬಹುದು. ಚೀನಾದಲ್ಲಿಯೇ ಅತ್ಯಂತ ದೊಡ್ಡ ಸಂಸ್ಥೆ ಅಲಿಬಾಬಾ ಹುಟ್ಟಿಹಾಕಿದ ತಾಂತ್ರಿಕ ಪರಿಣಿತರಾಗಿ ಮಾ ಹೆಸರುವಾಸಿಯಾಗಿದ್ದರು.


ಸರಕಾರದ ಕಣ್ಣು ಕೆಂಪಗಾಗಿಸಿದ ಜಾಕ್ ಹೇಳಿಕೆ


ಆದರೆ 2020 ರಲ್ಲಿ ಮಾ ಚೀನಾದ ಹಣಕಾಸು ನಿಯಂತ್ರಣ ವ್ಯವಸ್ಥೆಯ ಕುರಿತು ನೀಡಿದ ಹೇಳಿಕೆ ಅಲ್ಲಿನ ಸರಕಾರದ ಕಣ್ಣು ಕೆಂಪಗಾಗಿಸಿತ್ತು. ಇದರಿಂದ ಚೀನಾದ ಅಧಿಕಾರಿಗಳ ನಿರಂತರ ದಾಳಿಗೆ ತುತ್ತಾದ ಮಾ, ವ್ಯವಹಾರಗಳ ಮೇಲೆ ತೀವ್ರ ಗಮನವಿರಿಸುವ ಪರಿಸ್ಥಿತಿಗೆ ಒಳಗಾದರು.


ಸಾರ್ವನಿಕವಾಗಿ ಕೂಡ ಮಾ ಅವರು ದಿಢೀರ್ ಆಗಿ ಕಣ್ಮರೆಯಾಗಿದ್ದು ಅವರ ಇರುವಿಕೆಯ ಬಗ್ಗೆಯೇ ಅನೇಕ ಸಂದೇಹಗಳನ್ನು ಹುಟ್ಟುಹಾಕಿತ್ತು. ಬಿಲಿಯನೇರ್ ಜಾಕ್ ಮಾ, ಜುಲೈನಲ್ಲಿ ವ್ಯಾಗೆನಿಂಗನ್ ವಿಶ್ವವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರಕ್ಕೆ ಭೇಟಿ ನೀಡಿದ್ದರು ಎಂದು ಡಚ್ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.


ಟೋಕಿಯೋದಲ್ಲಿ ವಾಸಿಸ್ತಿದ್ದಾರೆ ಜಾಕ್​ ಮಾ!


ಇನ್ನು ನಗರದ ಫೈನಾನ್ಶಿಯಲ್ ಟೈಮ್ಸ್ ತಿಳಿಸಿರುವ ಮಾಹಿತಿಯ ಪ್ರಕಾರ ಮಾ, ಸುಮಾರು ಅರ್ಧವರ್ಷದಿಂದ ಟೋಕಿಯೋದಲ್ಲಿ ವಾಸಿಸುತ್ತಿದ್ದರೂ ನಗರದಲ್ಲಿ ತುಂಬಾ ಕಡಿಮೆ ಸಂಪರ್ಕಗಳನ್ನು ಹೊಂದಿದ್ದಾರೆ ಎಂದಾಗಿದೆ.


ಹಲವಾರು ಖಾಸಗಿ ಸದಸ್ಯರ ಕ್ಲಬ್‌ಗಳಲ್ಲಿ ಜಾಕ್ ಮಾ ಬೆರೆಯುತ್ತಾರೆ ಎಂಬುದಾಗಿ ಸುದ್ದಿಪತ್ರಿಕೆ ವರದಿ ಮಾಡಿದೆ. ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿರುವ ಜ್ಯಾಕ್, ಜಪಾನ್‌ನಲ್ಲಿನ ಗ್ರಾಮಾಂತರ ಭಾಗಗಳಿಗೆ ಭೇಟಿ ನೀಡುತ್ತಾ ಅಲ್ಲಿರುವ ಆಕರ್ಷಕ ತಾಣಗಳು, ರೆಸಾರ್ಟ್‌ಗಳಿಗೆ ಭೇಟಿ ನೀಡುವ ಮೂಲಕ ಸಮಯ ಕಳೆಯುತ್ತಿದ್ದಾರೆ ಎಂಬುದಾಗಿಯೂ ಮಾಧ್ಯಮಗಳು ವರದಿ ಮಾಡಿವೆ.


ಇದನ್ನೂ ಓದಿ: ಭಾರತದಲ್ಲಿ ಸಗಟು ವಿತರಣೆ ಉದ್ಯಮಕ್ಕೆ ಅಂತ್ಯ ಹಾಡಲು ಅಮೆಜಾನ್ ನಿರ್ಧಾರ


ಚೀನಾದಲ್ಲಿ ಮುಂದುವರಿದಿರುವ ಲಾಕ್‌ಡೌನ್‌ಗಳು


ಇನ್ನು ಜಾಕ್ ಮಾ ಇಸ್ರೇಲ್ ಹಾಗೂ ಅಮೇರಿಕಾಕ್ಕೂ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ವರದಿ ಮಾಡಿದೆ. ಸಾಂಕ್ರಾಮಿಕದ ಸಮಯದಲ್ಲಿ ಚೀನಾದಂತೆಯೇ ಜಪಾನ್ ಕೂಡ ಕೆಲವೊಂದು ಗಡಿ ನಿಯಂತ್ರಣಗಳನ್ನು ಹೊಂದಿತ್ತು ಆದರೆ ಕಳೆದ ತಿಂಗಳಿನಿಂದ ವೀಸಾ ಮುಕ್ತ ಪ್ರಯಾಣಕ್ಕೆ ದೇಶವು ಅನುವುಮಾಡಿಕೊಟ್ಟಿದೆ.


ಇದಕ್ಕೆ ವಿರುದ್ಧವಾಗಿ ಚೀನಾದಲ್ಲಿ ಲಾಕ್‌ಡೌನ್‌ಗಳು ಮುಂದುವರಿದಿದ್ದು, ವಾರಾಂತ್ಯದಲ್ಲಿ ಚೀನೀಯರು ಲಾಕ್‌ಡೌನ್ ವಿರೋಧಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂಬುದು ವರದಿಯಾಗಿದೆ.


ಸಮಾನ ಸಮಾಜದ ಪರಿಕಲ್ಪನೆ


ಶ್ರೀಮಂತರು ತಮ್ಮ ಸಂಪತ್ತನ್ನು ಬಡವರೊಂದಿಗೆ ಹಂಚಿಕೊಳ್ಳುವ ಮೂಲಕ ಸಮಾನ ಸಮಾಜವನ್ನು ನಿರ್ಮಿಸಲು ಕೈಜೋಡಿಸಬೇಕು ಎಂಬ ಪರಿಕಲ್ಪನೆಯು ಮಾ ಅವರ ಚಟುವಟಿಕೆಗಳ ಮೇಲೆ ಬೀಜಿಂಗ್ ಕಣ್ಣಿರಿಸುವಂತೆ ಮಾಡಿತು.


ಮನೆಗಳ ಹೆಚ್ಚುವರಿ ಬೆಲೆಗಳನ್ನು ನಿಯಂತ್ರಿಸಲು ಅಧಿಕಾರಿಗಳು ಪ್ರಯತ್ನಿಸಿದ್ದರಿಂದ ಟೆಕ್ ಸಂಸ್ಥೆಗಳು ಹಾಗೂ ಸ್ವತ್ತು ಸಂಸ್ಥೆಗಳಿಗೆ ಬಲವಂತವಾಗಿ ಸಾಲದ ಮಟ್ಟವನ್ನು ಕಡಿಮೆ ಮಾಡುವ ಒತ್ತಡವನ್ನುಂಟು ಮಾಡಿತು.ಇದರಿಂದ ಚೀನೀ ತಂತ್ರಜ್ಞಾನ ಹಾಗೂ ಸ್ವತ್ತು ಸಂಸ್ಥೆಗಳ ಮೇಲೆ ಒತ್ತಡ ಉಂಟಾಯಿತು ಹಾಗೂ ದೇಶದ ಶ್ರೀಮಂತ ಜನರ ನಿವ್ವಳ ಸಂಪತ್ತನ್ನು ಕರಗಿಸಿತು.


ಕುಸಿದ ಜಾಕ್ ಮಾ ಸಂಪತ್ತು


ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, 2020 ರ ಅಕ್ಟೋಬರ್‌ನಲ್ಲಿ ಸುಮಾರು 61 ಶತಕೋಟಿ ಮೌಲ್ಯದ ಗರಿಷ್ಠ ಮೌಲ್ಯವನ್ನು ಹೊಂದಿದ್ದ ಮಾ ಸ್ವತ್ತು ಈಗ ಸುಮಾರು 30.7 ಶತಕೋಟಿ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.


ಇದನ್ನೂ ಓದಿ: ಯುಎಸ್​​ನ ಕರೆನ್ಸಿ ಮಾನಿಟರಿಂಗ್ ಪಟ್ಟಿಯಿಂದ ಭಾರತ ಔಟ್​! ಏನಿದರ ಅಸಲಿ ಕಹಾನಿ? ಇಲ್ಲಿದೆ ನೋಡಿ


ಇದಕ್ಕೆ ಪ್ರಮುಖ ಕಾರಣವಾಗಿರುವುದು ಅಲಿಬಾಬಾದ ಷೇರು ಬೆಲೆಯು ಅದರ 2020 ರ ಗರಿಷ್ಠ ಮೌಲ್ಯದಿಂದ ಸುಮಾರು 75% ರಷ್ಟು ಕುಸಿದಿರುವುದಾಗಿದೆ. 2019 ರಲ್ಲಿ ಅಲಿಬಾಬಾದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದು, ತಾವೇ ಸ್ಥಾಪಿಸಿದ ಜ್ಯಾಕ್ ಮಾ ಫೌಂಡೇಶನ್‌ನ ಮಂಡಳಿಯಲ್ಲಿದ್ದಾರೆ ಜ್ಯಾಕ್ ಮಾ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು