ಹೊಸಾ ವರ್ಷದ ಆರಂಭದಿಂದಲೇ ಹೀಗೆ ಮಾಡಿದ್ರೆ ಸಖತ್ತಾಗಿ ಹಣ ಉಳಿಸಬಹುದು ನೋಡಿ!

Money Savings: ವಿಮೆಗಳನ್ನು ಮಾಡಿಸುವ ಮುನ್ನ ನಿಯಮಗಳು ಹಾಗೂ ಷರತ್ತುಗಳನ್ನು ಸಂಪೂರ್ಣವಾಗಿ ಓದಿ ಮನನ ಮಾಡಿಕೊಳ್ಳಿ. ವಿಮೆಗಳ ಕುರಿತು ಸಂಪೂರ್ಣ ವಿವರಗಳನ್ನು ಪಡೆದುಕೊಂಡು ನಂತರ ನಿಮಗೆ ಸೂಕ್ತವಾಗುವ ಆರೋಗ್ಯ ವಿಮೆಗಳನ್ನು ಪಡೆದುಕೊಳ್ಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ಆಧುನಿಕ ಜಗತ್ತಿನಲ್ಲಿ ( Modern world )ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದಿದ್ದಾರೆ. ಆದರೂ ಹಣ ಉಳಿಸುವ ಯೋಜನೆ ಹಾಗೂ ಕುಟುಂಬದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಇಂದಿಗೂ ಪುರುಷರೇ ಪ್ರಾಬಲ್ಯ ತೋರಿಸುತ್ತಿದ್ದಾರೆ ಎಂಬುದು 2017ರ ಎಕನಾಮಿಕ್ ಟೈಮ್ಸ್ ವರದಿ (Economic Times report) ಮಾಡಿದೆ. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿದ್ದರೂ ((Financially independent)ಇಂದು ತಮಗೇನಾದರೂ ಖರೀದಿಸುವ ಸಮಯದಲ್ಲಿ ಎರಡೆರಡು ಬಾರಿ (Think twice) ಯೋಚಿಸುತ್ತಾರೆ. ಹೀಗಾಗಿ ಈ ವ್ಯವಸ್ಥೆ ಬದಲಾಗಬೇಕು ಎಂದಾದಲ್ಲಿ ಮಹಿಳೆಯರೂ ಕೂಡ ಸೂಕ್ತ ಆರ್ಥಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂಬುದು ಪೀಕ್‌ಆಲ್ಫಾ ಇನ್‌ವೆಸ್ಟ್‌ಮೆಂಟ್‌ನ (Investment) ಪೋರ್ಟ್‌ಫೋಲಿಯೋ ಮ್ಯಾನೇಜರ್ ಆಗಿರುವ ಅಪರ್ಣಾ ಅಭಿಪ್ರಾಯವಾಗಿದೆ.

ಆರ್ಥಿಕ ಯೋಜನೆ
ಇನ್ನೇನು ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಮಯದಲ್ಲಿ ಪ್ರತಿಯೊಬ್ಬರೂ ಹೊಸ ಹೊಸ ನಿರ್ಧಾರಗಳನ್ನು ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಮಹಿಳೆಯರು ಕೂಡ ಇದೇ ಸಮಯದಲ್ಲಿ ಆರ್ಥಿಕ ಯೋಜನೆಗಳನ್ನು ನಡೆಸಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Cryptocurrency ವಹಿವಾಟಿನಲ್ಲಿ ಮಹಿಳೆಯರಿಗೇ ಹೆಚ್ಚು ಆಸಕ್ತಿ ಅಂತೆ, ಪರುಷರ ಇಂಟ್ರೆಸ್ಟ್ ಬೇರೆಯೇ ಇದೆ

ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವೆಷ್ಟು..? ಕ್ರೆಡಿಟ್ ಕಾರ್ಡ್‌ನಲ್ಲಿರುವ ಔಟ್‌ಸ್ಟ್ಯಾಂಡಿಂಗ್ ಮೊತ್ತವೆಷ್ಟು? ಹೀಗೆ ನಿಮ್ಮ ಖರ್ಚು ಹಾಗೂ ಸಂಪಾದನೆಗಳ ಮೇಲೆ ನಿಯಂತ್ರಣವಿರಿಸಿದಾಗ ನೀವು ಕೂಡ ಆರ್ಥಿಕ ನಿರ್ಧಾರಗಳನ್ನು ಧೈರ್ಯವಾಗಿ ತೆಗೆದುಕೊಳ್ಳಬಹುದು ಎಂಬುದು ಅಪರ್ಣ ಸಲಹೆಯಾಗಿದೆ. ಈ ಲೇಖನದಲ್ಲಿ ಆರ್ಥಿಕ ಸಲಹೆಯ ಕುರಿತು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಅವುಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಖರ್ಚುಗಳ ಟ್ರ್ಯಾಕರ್ ಆ್ಯಪ್ ಅಳವಡಿಸಿ:
ಯಾವುದೇ ವಿಷಯದಲ್ಲಿ ಕೂಡ ಧಾವಂತ ಬೇಡ ಎಂದು ಸಲಹೆ ನೀಡುವ ಅಪರ್ಣ, ಖರ್ಚು ಟ್ರ್ಯಾಕಿಂಗ್ ಆ್ಯಪ್ ಅಳವಡಿಸಿಕೊಂಡು ಆರ್ಥಿಕ ನಿರ್ಣಯಗಳನ್ನು ಮಾಡಬಹುದು ಎಂದು ತಿಳಿಸುತ್ತಾರೆ. ಬಾಡಿಗೆ ಹಾಗೂ ನೀವು ಮಾಡುವ ಖರ್ಚುಗಳಿಗೆ (ಇದರಲ್ಲಿ ನಿಮ್ಮ ಸಂಜೆಯ ದುಬಾರಿ ಖರ್ಚುಗಳೂ ಒಳಗೊಂಡಿರಲಿ) ನಿಮ್ಮ ಸಂಬಳದ ಎಷ್ಟು ಭಾಗ ವಿನಿಯೋಗವಾಗುತ್ತದೆ. ಖರ್ಚು ಮಾಡುವ ಸಮಯದಲ್ಲಿ ನೀವು ಅದರ ಮೇಲೆ ನಿಗಾ ಇರಿಸುವುದು ಮುಂದಿನ ಬಾರಿ ಹೆಚ್ಚಿನ ಖರ್ಚುಗಳಿಗೆ ಕಡಿವಾಣ ಹಾಕುತ್ತದೆ ಎಂಬುದು ಅಪರ್ಣಾ ಸಲಹೆಯಾಗಿದೆ.

ಪೇಸ್ಲಿಪ್ ಬಗ್ಗೆ ತಿಳಿದುಕೊಳ್ಳಿ:
ಆಫರ್ ಲೆಟರ್‌ನಲ್ಲಿದ್ದಂತೆ ನಮ್ಮ ಕೈಗೆ ಸಂಬಳದ ಮೊತ್ತ ಸಿಗುವುದಿಲ್ಲ ಎಂಬುದು ಗೊತ್ತಿರುವ ವಿಷಯವೇ. ಸಂಸ್ಥೆಯ ಖಾತೆಗಳ ವಿಭಾಗವು ನೀಡುವ ಅಧಿಕೃತ ಸಂಬಳ/ಪೇಸ್ಲಿಪ್ ನಿಮ್ಮ ಮಾಸಿಕ ಪಾವತಿಯ ಸಂಪೂರ್ಣ ಬ್ರೇಕ್‌ಡೌನ್ ನೀಡುತ್ತದೆ. ನಿಮ್ಮ ಒಟ್ಟು ಸಂಬಳವು ಬೇರೆ ಬೇರೆ ಘಟಕಗಳಲ್ಲಿ ವಿಭಜನೆಯಾಗುವುದರಿಂದ ಇದು ನಿಮಗೆ ತೆರಿಗೆ ಪ್ರಯೋಜನಗಳನ್ನು ಪಡೆದುಕೊಳ್ಳಲು ನೆರವನ್ನು ನೀಡುತ್ತದೆ.

ಉದ್ಯೋಗಿಗಳ ಭವಿಷ್ಯ ನಿಧಿ ಕೊಡುಗೆಗಳು (EPF), ಊಟದ ಕೂಪನ್‌ಗಳು, ಮನೆ ಬಾಡಿಗೆ ಭತ್ಯೆ (HRA), ರಜೆ ಪ್ರಯಾಣ ಭತ್ಯೆ (LTA), ನಿಮ್ಮ EPFಗೆ ಕೊಡುಗೆ ಹಾಗೂ ತೆರಿಗೆ ಕಡಿತಗಳ ನಂತರ ನಿಮ್ಮ ನಿವ್ವಳ ಸಂಬಳವನ್ನು ನಿಮಗೆ ನೀಡಲಾಗುತ್ತದೆ. ತೆರಿಗೆ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಹಕಾರಿಯಾಗಿರುವ ವಿಭಾಗಗಳನ್ನು ಗಮನಿಸಿ. ನಿಮ್ಮ ತೆರಿಗೆಗಳನ್ನು ನೀವು ನಿಭಾಯಿಸಿದಾಗ ತಿಂಗಳ ಕೊನೆಯಲ್ಲಿ ಅದು ಸೂಕ್ತವಾಗಿ ಬರುತ್ತದೆ.

ತುರ್ತು ನಗದಿಗಾಗಿ ಲಿಕ್ವಿಡ್ ಡೆಬ್ಟ್‌ ಮ್ಯೂಚುವಲ್ ಫಂಡ್ ನಿರ್ಮಿಸಿ:
ಕೆಲಸದಿಂದ ವಿಶ್ರಾಂತಿ ತೆಗೆದುಕೊಳ್ಳುವ ಯೋಚನೆಯಲ್ಲಿರಲಿ ಇಲ್ಲವೇ ವೈದ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸುತ್ತಿರಿ. ನಮ್ಮೆಲ್ಲರ ಕೈಯಲ್ಲಿ ಹೆಚ್ಚುವರಿ ಹಣ ಸಂಗ್ರಹಣೆ ಇರಲೇಬೇಕು. ನೀವು ಯಾವುದೇ ಉದ್ಯೋಗ ಮಾಡುತ್ತಿರಿ, ಹೆಚ್ಚುವರಿ ಹಣ ಸಂಗ್ರಹಣೆ ಎಂಬುದು ನಿಮಗೆ ತುರ್ತು ಸಮಯದಲ್ಲಿ ಉಪಕಾರಿಯಾಗಿರುತ್ತದೆ. ಹಾಗಾಗಿ ಈ ಹಣವನ್ನು ಸಂಗ್ರಹಿಸಿಟ್ಟುಕೊಳ್ಳುವ ವಿವಿಧ ಯೋಜನೆಗಳತ್ತ ಕೂಡ ನೀವು ಗಮನ ನೀಡಬೇಕು.

ಅಪರ್ಣಾ ತಿಳಿಸುವಂತೆ ಮ್ಯೂಚುವಲ್ ಫಂಡ್‌ಗಳು ಈ ನಿಟ್ಟಿನಲ್ಲಿ ಸುರಕ್ಷಿತವಾಗಿದ್ದು ಹೆಚ್ಚುನ ಕ್ರೆಡಿಟ್ ಗುಣಮಟ್ಟ, ಕಡಿಮೆ ಕಾಲಾವಧಿಯ ಸ್ವತ್ತುಗಳಲ್ಲಿ ಹೂಡಿಕೆ ಮಾಡಬಹುದು ಎಂದು ಸಲಹೆ ನೀಡುತ್ತಾರೆ. ಹೂಡಿಕೆಗಳನ್ನು ಮಾರಾಟ ಮಾಡುವವರೆಗೆ ಲಿಕ್ವಿಡ್ ಸಾಲ ನಿಧಿಯ ಮೇಲಿನ ಲಾಭಗಳಿಗೆ ತೆರೆಗೆ ವಿಧಿಸಲಾಗದೇ ಇರುವುದರಿಂದ ಮ್ಯೂಚುವಲ್ ಫಂಡ್‌ಗಳು ಉತ್ತಮವಾಗಿವೆ. ತುರ್ತು ನಿಧಿಗಳನ್ನು FDಗಳಲ್ಲಿ ಸಂಗ್ರಹಿಸುಡುವುದರಿಂದ ಹೆಚ್ಚಿನ ತೆರಿಗೆ ಖರ್ಚುಗಳು ಉಂಟಾಗುತ್ತವೆ.

ಸಂಸ್ಥೆಗಳು ಒದಗಿಸುವ ಆರೋಗ್ಯ ವಿಮೆಯಲ್ಲದೆ ಬೇರೆ ಆರೋಗ್ಯ ವಿಮೆಗಳನ್ನು ಪಡೆದುಕೊಳ್ಳಿ:
ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ರಕ್ಷಣೆಗಳನ್ನು ಒದಗಿಸುವ ಕೆಲವು ಸಂಸ್ಥೆಗಳು ನಮ್ಮ ದೇಶದಲ್ಲಿವೆ. ನೀವು ಅವುಗಳ ಪ್ರಯೋಜನ ಪಡೆದುಕೊಳ್ಳಬಹುದು. ನಿಮ್ಮ ವಯಸ್ಸಿಗೆ ಅನುಗುಣವಾಗಿ ಶೀಘ್ರದಲ್ಲೇ ಆರೋಗ್ಯ ವಿಮೆಗಳನ್ನು ಪಡೆದುಕೊಳ್ಳಿ. ಸರಿಯಾದ ವಯಸ್ಸಿನಲ್ಲಿ ಸರಿಯಾದ ವಿಮೆ ಪಡೆದುಕೊಳ್ಳುವುದು ನಿಮಗೆ ವಯಸ್ಸಾದಂತೆ ನಿಮಗೆ ಹೆಚ್ಚಿನ ಆರೋಗ್ಯ ಭದ್ರತೆ ಒದಗಿಸುತ್ತದೆ. ನೀವು ಶೀಘ್ರದಲ್ಲಿ ಆರೋಗ್ಯ ವಿಮೆ ರಕ್ಷಣೆ ಪಡೆದುಕೊಂಡಂತೆ ಈಗಾಗಲೇ ಇರುವ ಕಾಯಿಲೆಗಳಿಗೆ ಕಾಯುವ ಸಮಯವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂಬುದು ಅಪರ್ಣಾ ಅಭಿಪ್ರಾಯವಾಗಿದೆ.

ವಿಮೆಗಳನ್ನು ಮಾಡಿಸುವ ಮುನ್ನ ನಿಯಮಗಳು ಹಾಗೂ ಷರತ್ತುಗಳನ್ನು ಸಂಪೂರ್ಣವಾಗಿ ಓದಿ ಮನನ ಮಾಡಿಕೊಳ್ಳಿ. ವಿಮೆಗಳ ಕುರಿತು ಸಂಪೂರ್ಣ ವಿವರಗಳನ್ನು ಪಡೆದುಕೊಂಡು ನಂತರ ನಿಮಗೆ ಸೂಕ್ತವಾಗುವ ಆರೋಗ್ಯ ವಿಮೆಗಳನ್ನು ಪಡೆದುಕೊಳ್ಳಿ.

ನಿಮಗೆ ಅಗತ್ಯವಿರುವ ವಿಮೆಯ ಅಂದಾಜು ಮಾಡಿಕೊಳ್ಳಿ:
ನಿಮ್ಮ ಮನೆಯಲ್ಲಿ ನೀವು ಮಾತ್ರವೇ ಆದಾಯ ಗಳಿಸುವವರಾಗಿದ್ದರೆ ಸೂಕ್ತವಾದ ವೈದ್ಯಕೀಯ ವಿಮೆ ಪಡೆದುಕೊಳ್ಳಿ. ವಿಮೆಯ ಆಯ್ಕೆಯನ್ನು ಹೇಗೆ ಸೂಕ್ತವಾಗಿ ಮಾಡಿಕೊಳ್ಳಬಹುದು ಎಂಬುದಕ್ಕೆ ಅಪರ್ಣಾ DIC-E ಫ್ರೇಮ್‌ವರ್ಕ್ ಬಳಸುತ್ತಾರೆ.
ಬಾಕಿ ಉಳಿದಿರುವ ಸಾಲ ಹಾಗೂ ಹೊಣೆಗಾರಿಕೆಗಳನ್ನು ಸೇರಿಸುವುದು + ಆದಾಯ/ ನಿವೃತ್ತಿಗೆ X ವರ್ಷಗಳ ಸಂಖ್ಯೆ) ನಿಮ್ಮ ಮಕ್ಕಳು ಪ್ರಸ್ತುತ ಕಾಲೇಜಿಗೆ ಹಾಜರಾಗಿದ್ದರೆ ಕಾಲೇಜು ನಿಧಿಗಳು, ಅಸ್ತಿತ್ವದಲ್ಲಿರುವ ಜೀವ ವಿಮಾ ರಕ್ಷಣೆ, ಉಳಿತಾಯ ಮತ್ತು ಕಾಲೇಜು ಶಿಕ್ಷಣಕ್ಕೆ ಈಗಾಗಲೇ ಸಂಗ್ರಹವಾಗಿರುವ ನಿಧಿ, ನಿಮಗೆ ಅಗತ್ಯವಿರುವ ಹೆಚ್ಚುವರಿ ಜೀವ ವಿಮೆಯ ಅಂದಾಜನ್ನು ನೀಡುತ್ತದೆ.

ಉದಾಹರಣೆಗೆ ನೀವು 35 ಲಕ್ಷ ರೂ.ಗಳ ಗೃಹ ಸಾಲ ಹಾಗೂ 7 ಲಕ್ಷ ರೂಗಳ ಕಾರು ಸಾಲಗಳನ್ನು ಹೊಂದಿರುವಿರಿ ಎಂದು ಭಾವಿಸೋಣ. ವರ್ಷಕ್ಕೆ ನೀವು ಗಳಿಸುವ ಆದಾಯ 20 ಲಕ್ಷ ರೂ.ಗಳು ಹಾಗೂ 25 ವರ್ಷಗಳಲ್ಲಿ ನೀವು ನಿವೃತ್ತಿ ಹೊಂದುವ ಯೋಜನೆಯಲ್ಲಿದ್ದೀರಿ. ನಿಮ್ಮ ಮಗನನ್ನು ಕಾನೂನು ಶಾಲೆಗೆ ಕಳುಹಿಸುವ ಇಚ್ಛೆ ಕೂಡ ನಿಮ್ಮದಾಗಿದೆ. ಇನ್ನು ನೀವು ಆಯ್ಕೆಮಾಡಿರುವ ಕಾಲೇಜು ತಮ್ಮ ಯುಜಿ ಪ್ರೋಗ್ರಾಂಗಾಗಿ 50 ಲಕ್ಷ ರೂ.ಗಳ ಶುಲ್ಕ ವಿಧಿಸುತ್ತಿದೆ. ನಿಮ್ಮ ಮಗುವಿನ ಕಾಲೇಜು ಶಿಕ್ಷಣದ ಸಲುವಾಗಿ ನಿಮ್ಮ ಪೋಷಕರು ಉಡುಗೊರೆಯಾಗಿ ನೀಡಿರುವ ಆಸ್ತಿಯನ್ನು ನೀವು ಹೊಂದಿದ್ದೀರಿ. ಇದರ ಮೌಲ್ಯ ಸುಮಾರು 10 ಲಕ್ಷ ರೂ. ನಿಮ್ಮ ಉದ್ಯೋಗದಾತರಿಂದ ನೀವು 2 ಕೋಟಿ ಜೀವವಿಮೆ ರಕ್ಷಣೆ ಪಡೆದುಕೊಂಡಿದ್ದೀರಿ.

D : 35ಲಕ್ಷ + 7 ಲಕ್ಷ= 42 ಲಕ್ಷ

I: 20ಲಕ್ಷ X 25 ವರ್ಷಗಳು = 5 ಕೋಟಿ

C: 50ಲಕ್ಷ

E: 10 ಲಕ್ಷ + 2 ಕೋಟಿ = 2.1 ಕೋಟಿ

ಹೀಗೆ ನೀವು ಲೆಕ್ಕಾಚಾರ ಹಾಕಿ ನಿಮ್ಮ ಮುಂದಿನ ಯೋಜನೆಗಳನ್ನು ನಿರ್ವಹಿಸಬಹುದಾಗಿದೆ.

ತೆರಿಗೆ ಪದ್ಧತಿ ಆಯ್ಕೆಮಾಡುವುದು:
ವರ್ಷದ ಅಂತ್ಯವು ಬೇರೆ ಬೇರೆ ಅನುಭವಗಳನ್ನು ಪ್ರಾಮುಖ್ಯತೆಗಳನ್ನು ಜನರಿಗೆ ತಿಳಿಸುತ್ತದೆ. ಆರ್ಥಿಕ ವರ್ಷದ ಆರಂಭದಲ್ಲಿ ಹಳೆಯ ಅಥವಾ ಹೊಸ ಪದ್ಧತಿ ಎಂಬುದನ್ನು ಆಧರಿಸಿ ಹೆಚ್ಚಿನವರಿಗೆ ಬೇರೆ ಬೇರೆ ಆಯ್ಕೆ ಇದೆ. ಏಪ್ರಿಲ್‌ನಲ್ಲಿ ನೀವು ಆರಿಸಿಕೊಂಡಿರುವ ತೆರಿಗೆ ವಿಧಾನ ತಪ್ಪಾಗಿದೆ ಎಂದು ನಿಮಗೆ ಅನ್ನಿಸಿದರೆ ನಿಮ್ಮ ತೆರಿಗೆ ರಿಟರ್ನ್‌ಗಳನ್ನು ನೀವು ಸಲ್ಲಿಸಿದಾಗ ನೀವು ಅದನ್ನು ಬದಲಾಯಿಸಬಹುದು ಎಂದು ಅಪರ್ಣಾ ಸಲಹೆ ನೀಡುತ್ತಾರೆ.

ನೀವು ಕ್ಲೈಮ್ ಮಾಡಬಹುದಾದ ತೆರಿಗೆ ವಿನಾಯಿತಿಗಳನ್ನು ಗುರುತಿಸಿ:
ತೆರಿಗೆಗಳನ್ನು ಸಲ್ಲಿಸಲು ಕೊನೆಯ ದಿನಾಂಕವು ತಿಂಗಳ ಅಂತ್ಯದಲ್ಲಿ ಬರುತ್ತದೆ. ನೀವು ಹಳೆಯ ತೆರಿಗೆ ಸಲ್ಲಿಸುವಿಕೆ ವಿಧಾನಗಳನ್ನು ಅನುಸರಿಸುತ್ತಿದ್ದರೆ ನೀವು ಪಡೆದುಕೊಳ್ಳಬಹುದಾದ ವಿನಾಯಿತಿಗಳು ಹಾಗೂ ಕಡಿತಗಳ ಬಗ್ಗೆ ಗಮನವಿರಿಸಿಕೊಳ್ಳಿ.ಕೆಲವು ಜೀವ ವಿಮಾ ಕಂತುಗಳು ಮತ್ತು ಉದ್ಯೋಗಿಗಳ ಭವಿಷ್ಯ ನಿಧಿಗೆ ಕೊಡುಗೆಗಳನ್ನು ಒಳಗೊಂಡಿವೆ. ನಿಮಗೆ, ನಿಮ್ಮ ಸಂಗಾತಿ ಮತ್ತು ನಿಮ್ಮ ಮಕ್ಕಳಿಗೆ ಆರೋಗ್ಯ ವಿಮಾ ಕಂತುಗಳು 25,000 ರೂ. ವರೆಗಿನ ರಿಯಾಯಿತಿಗಳಿಗೆ ಅರ್ಹವಾಗಿವೆ.

ಸೂಕ್ತವಾದ ಸಾಲ ಈಕ್ವಿಟಿ ಹಂಚಿಕೆ ಗುರುತಿಸಿ:
ನಿಮ್ಮ ಹಣಕಾಸಿನ ಸ್ವತ್ತುಗಳ ಮೇಲೆ ಗಮನ ಹರಿಸಿ ಹಣಕಾಸು ಸಲಹೆಗಾರರಿಂದ ಸಲಹೆಗಳನ್ನು ಪಡೆದುಕೊಂಡು ಹೂಡಿಕೆ ಮಾಡಲು ಯಾವ ವಿಧಾನ ಸೂಕ್ತ ಎಂಬುದನ್ನು ಆಯ್ಕೆಮಾಡಿಕೊಳ್ಳಿ.

 ಇದನ್ನೂ ಓದಿ: ಹೆಚ್ಚುವರಿ ಆದಾಯ ಗಳಿಸಲು ಟ್ರೇಡಿಂಗ್ ಈಗ ಜನಪ್ರಿಯವಾಗುತ್ತಿದೆ, ಇದಕ್ಕಾಗಿ ಇಲ್ಲಿವೆ 7 ಸರಳ ವಿಧಾನಗಳು

ನಿಮ್ಮ ತಿಂಗಳ ಹೂಡಿಕೆಗಳನ್ನು ಯೋಜಿಸಿ:
ತಿಂಗಳಲ್ಲಿ ನೀವು ಮಾಡುವ ಖರ್ಚುವೆಚ್ಚಗಳ ಮೇಳೆ ಗಮನ ಹರಿಸಿ. ಎಷ್ಟು ಹೂಡಿಕೆ ಮಾಡಬೇಕು ಹಾಗೂ ಆಸ್ತಿ ಬಂಡವಾಳಗಳನ್ನು ಹೇಗೆ ನಿರ್ಮಿಸಬೇಕು ಎಂಬ ನಿರ್ಧಾರಗಳನ್ನು ಮಾಡಿ. ನಿಮ್ಮ ಆದಾಯದಿಂದ ಕನಿಷ್ಠ 30% ಹೂಡಿಕೆ ಮಾಡಲು ಪ್ರಯತ್ನಿಸಿ. ಸಾಲ ಹಾಗೂ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಮಾಸಿಕ ಹೂಡಿಕೆಗಳನ್ನು ಯೋಜಿಸಿ. ಹೀಗೆ ಮಾಡಿದಾಗ ಮಾಸಿಕವಾಗಿ ನಿಮ್ಮ ಸಂಬಳದಿಂದ ಹಣ ಆ ಯೋಜನೆಗೆ ವಿನಿಯೋಗವಾಗುತ್ತದೆ ಎಂಬುದು ಅಪರ್ಣಾ ಸಲಹೆಯಾಗಿದೆ.

ಉತ್ತಮ ಆರ್ಥಿಕ ಸಲಹೆ ಪಡೆದುಕೊಳ್ಳಿ:
ನಿಮ್ಮ ಸಂಪತ್ತಿನ ಆರೋಗ್ಯದ ಬಗ್ಗೆ ಗಮನಿಸಿ ಹಾಗೂ ಉತ್ತಮ ಆರ್ಥಿಕ ಸಲಹೆಯನ್ನು ಪಡೆದುಕೊಳ್ಳಿ ಈ ಕುರಿತು ಬ್ಯಾಂಕ್ ವ್ಯವಸ್ಥಾಪಕರ ಸಲಹೆ ಪಡೆದುಕೊಳ್ಳಿ. ನಿಮ್ಮ ಹೂಡಿಕೆಗಳಲ್ಲಿ ವಸ್ತುನಿಷ್ಠವಾಗಿ ನಿಮಗೆ ಮಾರ್ಗದರ್ಶನ ನೀಡುವ ಪ್ರಮಾಣೀಕೃತ ಸಲಹೆಗಾರರೊಂದಿಗೆ ಸಂಪರ್ಕ ಹೊಂದುವುದು ಉತ್ತಮ ವಿಧಾನವಾಗಿದೆ.
Published by:vanithasanjevani vanithasanjevani
First published: