ಇದು ಫೋಟೊ QR ಸಮಯ, ರೆಗ್ಯುಲರ್ QR ಸಾಕು ಬಿಡಿ

ಫೋಟೊ QR ಬಳಸುವುದರಿಂದ ಹಲವಾರು ಪ್ರಯೋಜನಗಳಿದ್ದು, ಅದರಲ್ಲಿ ಮುಖ್ಯವಾದದ್ದು ಎಂದರೆ ವಹಿವಾಟುಗಳ ಉದ್ಯಮಕ್ಕೊಂದು ವೈಯಕ್ತಿಕ ಸ್ಪರ್ಶವನ್ನು ಒದಗಿಸುತ್ತದೆ. ಅಂದರೆ ಈ ಅಂಗಡಿ ಯಾರದ್ದು, ನಾವು ಯಾರಿಗೆ ಪಾವತಿಸುತ್ತಿದ್ದೇವೆ ಎಂಬ ವಿವರವನ್ನು ನಿಮ್ಮ ಫೋಟೊ ಮತ್ತು ಫೋನ್ ನಂಬರ್ನೊಂದಿಗೆ ತಿಳಿಸಿಕೊಡುತ್ತದೆ.

ಫೋಟೊ QR ಎಂಬುದು Paytm ನ ಒಂದು ವಿಶಿಷ್ಟ ಸೌಲಭ್ಯವಾಗಿದ್ದು, ಈಗಾಗಲೇ 20 ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ಅದನ್ನು ಬಳಸುತ್ತಿದ್ದಾರೆ.

ಫೋಟೊ QR ಎಂಬುದು Paytm ನ ಒಂದು ವಿಶಿಷ್ಟ ಸೌಲಭ್ಯವಾಗಿದ್ದು, ಈಗಾಗಲೇ 20 ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ಅದನ್ನು ಬಳಸುತ್ತಿದ್ದಾರೆ.

 • Share this:
  ಡಿಜಿಟಲೀಕರಣವು (Digitalization) ಖರೀದಿ ಸ್ಥಳಗಳಲ್ಲಿ QR ಅನ್ನು ಸರ್ವವ್ಯಾಪಿಯನ್ನಾಗಿಸಿದೆ. ಅದು ಅತಿ ದೊಡ್ಡ ಮಾಲ್ನಲ್ಲಿ ಇರುವ ಅತ್ಯುನ್ನತ ಶಾಪಿಂಗ್ (Shopping) ಸ್ಟೋರ್ ಆಗಿರಲಿ ಅಥವಾ ನೀವು ಆಗಾಗ ಚಾಟ್ಗಾಗಿ ಭೇಟಿ ನೀಡುವ ನಿಮ್ಮ ನೆಚ್ಚಿನ ಚಾಟ್ವಾಲಾ ಆಗಿರಲಿ, ಎರಡೂ ಕಡೆಗೂ ನಿಮ್ಮ ಖರೀದಿಯನ್ನು ಡಿಜಿಟಲ್ (Digital) ಆಗಿ ಸ್ಕ್ಯಾನ್ (Scan) ಮಾಡುವ QR ಕೋಡ್ (Code) ಅನ್ನು ನೀವು ನೋಡಿರುತ್ತೀರಿ ಎಂಬುದಂತೂ ಸುಸ್ಪಷ್ಟ. ಫೋಟೊ QR ಎಂಬುದು Paytm ನ ಒಂದು ವಿಶಿಷ್ಟ ಸೌಲಭ್ಯವಾಗಿದ್ದು, ಈಗಾಗಲೇ 20 ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ಅದನ್ನು ಬಳಸುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಫೋಟೊ QR ಎಂಬುದು ಈಗ ನಾವು ಎಲ್ಲೆಡೆ ನೋಡುತ್ತಿರುವ, ಬಳಸುತ್ತಿರುವ ರೆಗ್ಯುಲರ್ QR ನ ಹೊಸದಾಗಿ ಆವಿಷ್ಕರಿಸಿದ ಮತ್ತು ಸುಧಾರಿತ ಆವೃತ್ತಿ ಎಂದು ಹೇಳಬಹುದು. 

  ಹಲವಾರು ವ್ಯಾಪಾರಿಗಳು ತಮ್ಮದೇ ಪ್ರತ್ಯೇಕ ಅಂಗಡಿಗಳಿಗಾಗಿ ಹಲವು ವಿಭಿನ್ನ ಪ್ರಕಾರಗಳ QR ಕೋಡ್ಗಳನ್ನು ಬಳಸಬಹುದು ಎಂಬ ಸಂಗತಿಯು ಮೇಲ್ನೋಟಕ್ಕೆ ಅಸಾಧಾರಣ ಕಾರ್ಯ ಎನ್ನಿಸುವುದಾದರೂ, ನಾವು ಇಲ್ಲಿ ಹೊಸದಾದ, ಅಸಾಮಾನ್ಯ-ಬದಲಾವಣೆ ಉಂಟುಮಾಡುವ, ಮುಂದಿನ ದಿನಗಳಲ್ಲಿ QR ಕೋಡ್ಗಳನ್ನು ಕ್ರಾಂತಿಕಾರಕವಾಗಿ ಬದಲಾಯಿಸುವ ಭರವಸೆ ನೀಡುವ ವೈಶಿಷ್ಟ್ಯದ ಕುರಿತು ವಿವರಿಸಲಿದ್ದೇವೆ. ಅದನ್ನು ಫೋಟೊ QR ಎಂದು ಕರೆಯಲಾಗಿದ್ದು, QR ಕೋಡ್ಗಳಲ್ಲಿನ ತ್ವರಿತ ಬದಲಾವಣೆಯ ಕುರಿತು ನೀವು ತಿಳಿಯಬೇಕಾದ ಪ್ರತಿಯೊಂದು ವಿಷಯವನ್ನು ಇಲ್ಲಿ ತಿಳಿಸಲಾಗಿದೆ.

  ಫೋಟೊ QR ಎಂದರೇನು –
  ಫೋಟೊ QR ಎಂಬುದು Paytm ನ ಒಂದು ವಿಶಿಷ್ಟ ಸೌಲಭ್ಯವಾಗಿದ್ದು, ಈಗಾಗಲೇ 20 ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ಅದನ್ನು ಬಳಸುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಫೋಟೊ QR ಎಂಬುದು ಈಗ ನಾವು ಎಲ್ಲೆಡೆ ನೋಡುತ್ತಿರುವ, ಬಳಸುತ್ತಿರುವ ರೆಗ್ಯುಲರ್ QR ನ ಹೊಸದಾಗಿ ಆವಿಷ್ಕರಿಸಿದ ಮತ್ತು ಸುಧಾರಿತ ಆವೃತ್ತಿ ಎಂದು ಹೇಳಬಹುದು. ಈ ವೈಶಿಷ್ಟ್ಯದೊಂದಿಗೆ, ವ್ಯಾಪಾರಿಯೊಬ್ಬರು ಅವರ ಆಯ್ಕೆಯ ಯಾವುದೇ ಫೋಟೊ ಸೇರಿಸುವ ಮೂಲಕ ಆಕೆಯ ಅಥವಾ ಆತನ ಸ್ವಂತ QR ಅನ್ನು ವೈಯಕ್ತೀಕರಿಸಬಹುದು. ಅಂದರೆ ತಮ್ಮ ಇಷ್ಟದಂತೆ ರೂಪಿಸಿಕೊಳ್ಳಬಹುದು. ಫೋಟೊ QR ಅಂಗಡಿ ಹೆಸರು ಮತ್ತು ಫೋನ್ ನಂಬರ್ ವೈಶಿಷ್ಟ್ಯಗಳನ್ನು ಹೊಂದಿದ್ದು, ಅದು ಇತರ ರೆಗ್ಯುಲರ್ QR ಗಳಿಗಿಂತ ಈ QR ಅನ್ನು ಭಿನ್ನವಾಗಿ ಗುರುತಿಸಿಕೊಳ್ಳುವಂತೆ ಮಾಡುತ್ತದೆ.

  ಫೋಟೊ QR ಬಳಸುವುದು ಹೇಗೆ –
  ಫೋಟೊ QR ಎಂಬುದು ನಿಮ್ಮದೇ ಸ್ವಂತ QR ಅನ್ನು ರಚಿಸಲು ಫೋಟೊ ಬಳಸುವುದನ್ನು ಸೂಚಿಸುತ್ತದೆ. ಒಬ್ಬ ವ್ಯಾಪಾರಿಯು ಸೆಲ್ಫಿ, ಅವರ ಬ್ರ್ಯಾಂಡ್ ಲೋಗೊ ಅಥವಾ ಅವರ ಫೋನ್ ಗ್ಯಾಲರಿಯಲ್ಲಿ ಸೇವ್ ಮಾಡಿರುವ ಯಾವುದೇ ಫೋಟೊಗಳನ್ನು ಒಳಗೊಳ್ಳುವುದನ್ನು ಆಯ್ಕೆ ಮಾಡಬಹುದು. ಅದಕ್ಕೆ ಪರ್ಯಾಯವಾಗಿ ಆತ/ಆಕೆ, Paytm-for-Business App ಗ್ಯಾಲರಿಯಲ್ಲಿರುವ ಫೋಟೊ ಕಸ್ಟಮೈಸೇಷನ್ ಪುಟದಲ್ಲಿ ಲಭ್ಯವಿರುವ ವಿಸ್ತೃತ ಶ್ರೇಣಿಯ ಫೋಟೊಗಳಿಂದ ಸಹ ಆಯ್ಕೆ ಮಾಡಬಹುದು. ಇವು ಇತರ ಫೋಟೊಗಳೊಂದಿಗೆ ಉತ್ಸವಗಳು, ಸ್ಮಾರಕಗಳು ಮತ್ತು ಬಿಸಿನೆಸ್ ಐಕಾನ್ಗಳನ್ನು ಒಳಗೊಂಡಿರುತ್ತವೆ.

  ಒಮ್ಮೆ ವ್ಯಾಪಾರಿಯು ತನ್ನ ಫೋಟೊ QR ಅನ್ನು ರಚಿಸಿದರೆ, ಅವರು QR ನ ಡಿಜಿಟಲ್ ಆವೃತ್ತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಅದನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳಬಹುದು. ಪರ್ಯಾಯವಾಗಿ, ಫೋಟೊ QR ನ ಭೌತಿಕ ಆವೃತ್ತಿಯನ್ನು ಸಹ ಆರ್ಡರ್ ಮಾಡಬಹುದಾಗಿದ್ದು, ಪಾವತಿಗಳನ್ನು ಸ್ವೀಕರಿಸಲು ಅದನ್ನು ತಮ್ಮ ಅಂಗಡಿ ಅಥವಾ ವ್ಯಾಪಾರ ಮಳಿಗೆಯಲ್ಲಿ ಇರಿಸಬಹುದು. ಭೌತಿಕ ಫೋಟೊ QR ಅನ್ನು ಆಯ್ಕೆ ಮಾಡುವ ವ್ಯಾಪಾರಿಗಳು 1 ಸ್ಟ್ಯಾಂಡಿ ಮತ್ತು ಪೋಟೊ QR ನ 1 ಸ್ಟಿಕರ್ ಅನ್ನು ತಮ್ಮ ಮನೆಬಾಗಿಲಿನಲ್ಲಿಯೇ ಪಡೆದುಕೊಳ್ಳುತ್ತಾರೆ.

  ನೀವೇಕೆ ಫೋಟೊ QR ಬಳಸಬೇಕು –
  ಫೋಟೊ QR ಬಳಸುವುದರಿಂದ ಹಲವಾರು ಪ್ರಯೋಜನಗಳಿದ್ದು, ಅದರಲ್ಲಿ ಮುಖ್ಯವಾದದ್ದು ಎಂದರೆ ವಹಿವಾಟುಗಳ ಉದ್ಯಮಕ್ಕೊಂದು ವೈಯಕ್ತಿಕ ಸ್ಪರ್ಶವನ್ನು ಒದಗಿಸುತ್ತದೆ. ಅಂದರೆ ಈ ಅಂಗಡಿ ಯಾರದ್ದು, ನಾವು ಯಾರಿಗೆ ಪಾವತಿಸುತ್ತಿದ್ದೇವೆ ಎಂಬ ವಿವರವನ್ನು ನಿಮ್ಮ ಫೋಟೊ ಮತ್ತು ಫೋನ್ ನಂಬರ್ನೊಂದಿಗೆ ತಿಳಿಸಿಕೊಡುತ್ತದೆ. ಇದಕ್ಕಿಂತ ಇನ್ನೇನು ಬೇಕು ಹೇಳಿ? ಇದು ಗ್ರಾಹಕರನ್ನು ನಿಮ್ಮ ವ್ಯಾಪಾರದೊಂದಿಗೆ ನಿರಂತರವಾಗಿ ಉಳಿಸಿಕೊಳ್ಳುವುದಕ್ಕೆ ಅಷ್ಟೇ ಅಲ್ಲದೆ ದೀರ್ಘಾವಧಿಯಲ್ಲಿ ಹೆಚ್ಚು ಆದಾಯ ಗಳಿಸಲು ಸಹ ಸಹಾಯ ಮಾಡುತ್ತದೆ.

  ನಿಮ್ಮ ವ್ಯಾಪಾರವನ್ನು ವ್ಯಾಪಕವಾಗಿ ಪ್ರಚಾರಪಡಿಸಲು ನಿಮ್ಮ ಆಯ್ಕೆಯ ಫೋಟೊ ಆರಿಸಲು ಸರಿಸಾಟಿಯಿಲ್ಲದ ಸ್ವಾತಂತ್ರ್ಯವನ್ನು ಫೋಟೊ QR ನೀಡುತ್ತದೆ. ಹಾಗಾಗಿ, ಇನ್ನು ಮುಂದೆ ಅವೇ ಹಳೆಯ, ಬೇಸರ ಉಂಟು ಮಾಡುವ QR ಆಗಲೀ ಅಥವಾ ಚಿತ್ರಗಳ ಸೀಮಿತ ಶ್ರೇಣಿಯಿಂದ ಚಿತ್ರ ಆಯ್ಕೆ ಮಾಡುವುದಾಗಲೀ ಇರುವುದಿಲ್ಲ. ವ್ಯಾಪಾರಿಗಳು ಈ ಹಿಂದೆ ಎಂದೂ ಮಾಡಿರದ ರೀತಿಯಲ್ಲಿ ತಮ್ಮ QR ಅನ್ನು ಕಸ್ಟಮೈಸ್ ಮಾಡಲು ಫೋಟೊ QR ಅವಕಾಶ ಮಾಡಿಕೊಡುತ್ತದೆ – ಅದು ವ್ಯಾಪಾರಿಯೊಬ್ಬರು ಅವರ ಆಯ್ಕೆಯ ಯಾವುದೇ ಫೋಟೊ ಆಯ್ಕೆ ಮಾಡುವುದಾಗಿದೆ.

  ಬರೀ ಪಾವತಿಗಳನ್ನು ಸ್ವೀಕರಿಸುವ ಮಾಧ್ಯಮವಾಗಿ ಅಷ್ಟೇ ಅಲ್ಲದೆ, ವ್ಯಾಪಾರಿಗಳು ತಮ್ಮ ಬ್ರ್ಯಾಂಡ್ ಅನ್ನು ಪ್ರದರ್ಶಿಸಲು ಮತ್ತು ಗ್ರಾಹಕರ ಮನಸಿನಲ್ಲಿ ಬಲವಾಗಿ ನೆಲೆಯೂರುವಂತೆ ಮಾಡುವ ಅವಕಾಶವನ್ನು ಫೋಟೊ QR ನೀಡುತ್ತದೆ. ಇದು ಅವರ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಸಹಕರಿಸುವುದಷ್ಟೇ ಅಲ್ಲದೆ, ಸರಿಯಾದ QR ಅನ್ನು ಸ್ಕ್ಯಾನ್ ಮಾಡಿದ್ದೇವೆಯೋ ಇಲ್ಲವೋ ಎಂಬ ಗೊಂದಲವನ್ನು ಗ್ರಾಹಕರ ಮನಸಿನಿಂದ ಹೋಗಲಾಡಿಸುತ್ತದೆ.

  ನಿಮ್ಮದೇ ಆದ ಫೋಟೊ QR ಪಡೆಯುವುದು ಹೇಗೆ –
  ವ್ಯಾಪಾರಿಗಳು ತಮ್ಮದೇ ಆದ ಫೋಟೊ QR ಗೆ ಆರ್ಡರ್ ಮಾಡುವುದು ಈಗ ತೀರಾ ಸುಲಭ. ಮೊದಲು Paytm For Business app ತೆರೆಯಿರಿ. ಅದರ ಹೋಮ್ಪೇಜ್ನಲ್ಲಿ ಕಾಣಿಸುವ ಫೋಟೊ QR ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು QR ನಲ್ಲಿ ಸೇರಿಸಬೇಕಿರುವ ಫೋಟೊ ಆಯ್ಕೆ ಮಾಡಿ.

  ಚಿತ್ರವನ್ನು ಆಯ್ಕೆ ಮಾಡುವುದು ಮುಂದಿನ ಹಂತವಾಗಿದೆ.
  ಇದಾದ ನಂತರ, ವ್ಯಾಪಾರಿಯು ತಾವು ಲಭ್ಯವಿರುವ ವಿಳಾಸ ಅಥವಾ ಹೊಸ ವಿಳಾಸವನ್ನು ಆಯ್ಕೆ ಮಾಡಬೇಕಾಗುತ್ತದೆ, ಅಂತಿಮ ಹಂತವು, ಫೋಟೊ QR ಗೆ ಆರ್ಡರ್ ಮಾಡಲು ಅಗತ್ಯ ಪಾವತಿ ಮಾಡುವುದನ್ನು ಒಳಗೊಂಡಿದೆ. ನಂತರ, ಮನೆಬಾಗಿಲಿಗೆ ಆರ್ಡರ್ ಯಾವಾಗ ತಲುಪಲಿದೆ ಎಂಬುದನ್ನು ತಿಳಿದುಕೊಳ್ಳಲು Paytm For Business app ನಿಂದ ಆರ್ಡರ್ನ ಸ್ಟೇಟಸ್ ಟ್ರ್ಯಾಕ್ ಮಾಡಬಹುದು.

  ಈಗಂತೂ ಎಲ್ಲಿ ನೋಡಿದರೂ ರೆಗ್ಯುಲರ್ QR ತೀರಾ ಸಾಮಾನ್ಯವಾಗಿ ಹೋಗಿದೆ. ಮೇಲೆ ವಿವರಿಸಿದಂತೆ ಫೋಟೊ QR ನ ಎಲ್ಲಾ ಪ್ರಯೋಜನಗಳನ್ನು ತಿಳಿದುಕೊಂಡ ನಂತರ, ನಿಮ್ಮ ವ್ಯಾಪಾರ ಅವಕಾಶಗಳನ್ನು ವೃದ್ಧಿಸಿಕೊಳ್ಳಲು ನಿಮ್ಮ ವ್ಯಾಪಾರಕ್ಕಾಗಿ ಒಂದು ಫೋಟೊ QR ಪಡೆದುಕೊಳ್ಳುವುದು ಜಾಣತನವಾಗುತ್ತದೆ. ಜತೆಗೆ, ಅದು ನಿಮ್ಮ ಅನನ್ಯತೆಯೂ, ವಿಶಿಷ್ಟತೆಯೂ ಆಗುವುದರ ಜತೆಗೆ, ನಿಮ್ಮ ಬುದ್ಧಿವಂತಿಕೆಯನ್ನೂ ತೋರಿಸುತ್ತದೆ. ಇಲ್ಲಿ ನಿಮ್ಮ ಫೋಟೊ QR ಆರ್ಡರ್ ಮಾಡಿ ಮತ್ತು ನಿಮ್ಮ ವ್ಯಾಪಾರದ ಬೆಳವಣಿಗೆಯ ವಿಶಿಷ್ಟ ಅಂಶಗಳನ್ನು ವೀಕ್ಷಿಸಿ.
  Published by:Rahul TS
  First published: