• Home
  • »
  • News
  • »
  • business
  • »
  • ITR Filing: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಬಳಿಕ ದಾಖಲೆ ಕಾಪಾಡಬೇಕಾ? ಎಷ್ಟು ಸಮಯದವರೆಗೆ ಇಟ್ಟುಕೊಳ್ಳಬೇಕು?

ITR Filing: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಬಳಿಕ ದಾಖಲೆ ಕಾಪಾಡಬೇಕಾ? ಎಷ್ಟು ಸಮಯದವರೆಗೆ ಇಟ್ಟುಕೊಳ್ಳಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆದಾಯ ತೆರಿಗೆದಾರರು ತಮ್ಮ ಐಟಿಆರ್ ದಾಖಲೆಗಳನ್ನು ಎಷ್ಟು ಸಮಯದವರೆಗೆ ತಮ್ಮ ಬಳಿ ಸಿದ್ಧವಾಗಿಟ್ಟಕೊಳ್ಳಬೇಕು ಎಂಬುದರ ಕುರಿತು ಮುಂಬೈ ಮೂಲದ ತೆರಿಗೆ ಮತ್ತು ಹೂಡಿಕೆ ತಜ್ಞ ಬಲ್ವಂತ್ ಜೈನ್ ಮಾಹಿತಿ ನೀಡಿದ್ದಾರೆ.

  • Trending Desk
  • 4-MIN READ
  • Last Updated :
  • Share this:

ಆದಾಯ ತೆರಿಗೆ ರಿಟರ್ನ್ (Income Tax Return) ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದೆನಿಸಿದೆ. ಉದ್ಯೋಗಿಗಳಿಗೆ (Employees ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು (ITR) ಫೈಲ್ ಮಾಡುವುದು ಪ್ರಮುಖ ಜವಬ್ದಾರಿಗಳಲ್ಲೊಂದಾಗಿದೆ. ಅದೇ ರೀತಿ ತೆರಿಗೆ ಡಾಕ್ಯುಮೆಂಟ್‌ಗ (Tax Document) ಳನ್ನು ಸುರಕ್ಷಿತವಾಗಿ ತಮ್ಮ ಬಳಿ ಇಟ್ಟುಕೊಳ್ಳುವುದು ಮುಖ್ಯವೆಂದೆನಿಸಿದೆ. ಇದು ಏಕೆ? ಎಂಬುದನ್ನು ತಿಳಿದುಕೊಳ್ಳೋಣ. ಭವಿಷ್ಯದಲ್ಲಿ ತೆರಿಗೆ ಸಂಬಂಧಿತ ಸಮಸ್ಯೆಗಳಿಂದ ಸುರಕ್ಷಿತವಾಗಿರಲು ಹಾಗೂ ಕಪ್ಪು ಹಣ ಕಾಯ್ದೆ 2015 ರಡಿಯಲ್ಲಿ ಕ್ರಮ ಕೈಗೊಳ್ಳದಂತೆ ರಕ್ಷಣೆ ಪಡೆದುಕೊಳ್ಳಲು ತೆರಿಗೆ ರಿಟರ್ನ್ ಸಂಬಂಧಿತ ದಾಖಲೆಗಳನ್ನು ತಮ್ಮ ಬಳಿ ಇರಿಸಿಕೊಳ್ಳುವುದು ತೆರಿಗೆದಾರನಿಗೆ ಮುಖ್ಯವಾಗಿದೆ.


ತೆರಿಗೆ ಮೌಲ್ಯಮಾಪನದಲ್ಲಿ ದಾಖಲೆ ಅತ್ಯಗತ್ಯ


ಬ್ಲ್ಯಾಕ್ ಮನಿ ಕಾಯ್ದೆ ಅನುಸಾರವಾಗಿ ತೆರಿಗೆದಾರರು ಐಟಿಆರ್ ಡಾಕ್ಯುಮೆಂಟ್‌ಗಳನ್ನು ಇರಿಸಲು ಯಾವುದೇ ಸಮಯದ ಮಿತಿ ಇರುವುದಿಲ್ಲ. ಆದರೆ, ಆದಾಯ ತೆರಿಗೆ ಮೌಲ್ಯಮಾಪನದಿಂದ ತೆರಿಗೆದಾರನು ಲೋಪದೋಷವೆಸಗಿದರೆ, ಆದಾಯ ತೆರಿಗೆ ಇಲಾಖೆಯು 10 ವರ್ಷಗಳ ಅವಧಿಯವರೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 147 ರ ಅಡಿಯಲ್ಲಿ ನೋಟಿಸ್ ನೀಡಬಹುದು.


ತೆರಿಗೆ ಅಧಿಕಾರಿಗೆ ನೋಟೀಸ್ ಕಳುಹಿಸುವ ಅಧಿಕಾರವಿದೆ


ಆದಾಯ ತೆರಿಗೆದಾರರು ತಮ್ಮ ಐಟಿಆರ್ ದಾಖಲೆಗಳನ್ನು ಎಷ್ಟು ಸಮಯದವರೆಗೆ ತಮ್ಮ ಬಳಿ ಸಿದ್ಧವಾಗಿಟ್ಟಕೊಳ್ಳಬೇಕು ಎಂಬುದರ ಕುರಿತು ಮುಂಬೈ ಮೂಲದ ತೆರಿಗೆ ಮತ್ತು ಹೂಡಿಕೆ ತಜ್ಞ ಬಲ್ವಂತ್ ಜೈನ್ ಮಾಹಿತಿ ನೀಡಿದ್ದು, ಅವರು ಹೇಳುವ ಪ್ರಕಾರ ಬ್ಲ್ಯಾಕ್ ಮನಿ ಆ್ಯಕ್ಟ್‌ಗೆ ಅನುಸಾರವಾಗಿ ದಾಖಲೆಗಳನ್ನು ಇರಿಸಿಕೊಳ್ಳಲು ಇಂತಿಷ್ಟೇ ಕಾಲಾವಕಾಶ ಎಂಬುದಿಲ್ಲ.


ತೆರಿಗೆಯನ್ನು ನೀವು ಸಮಯಕ್ಕೆ ಸರಿಯಾಗಿ ಪಾವತಿಸುತ್ತಿಲ್ಲ ಇಲ್ಲವೇ ತೆರಿಗೆ ಸಂಬಂಧಿತ ಪ್ರಕ್ರಿಯೆಯಲ್ಲಿ ಏನಾದರೂ ಲೋಪದೋಷವುಂಟಾದರೆ ನಿಮಗೆ ನೋಟೀಸ್ ಕಳುಹಿಸಲು ಸಂಬಂಧಿತ ಅಧಿಕಾರಿಗೆ ಅಧಿಕಾರವಿದೆ ಎಂದು ತಿಳಿಸಿದ್ದಾರೆ. ಈ ಸೂಚನೆಯನ್ನು 10 ವರ್ಷಗಳವರೆಗೆ ಐಟಿಆರ್ ಫೈಲಿಂಗ್‌ಗೆ ಕಳುಹಿಸಬಹುದು ಎಂಬ ಮಾಹಿತಿಯನ್ನು ಜೈನ್ ನೀಡಿದ್ದಾರೆ.


ತೆರಿಗೆ ದಾಖಲೆ ಎಷ್ಟು ವರ್ಷಗಳವರೆಗೆ ತೆರಿಗೆದಾರನ ಬಳಿ ಇರಬೇಕು


ತೆರಿಗೆ ಕಟ್ಟದ ಮೌಲ್ಯಮಾಪನ ಹಾಗೂ ಕಪ್ಪು ಹಣ ಕಾಯ್ದೆಗಳ ಪ್ರಕಾರ ಒಬ್ಬ ತೆರಿಗೆದಾರನು ತೆರಿಗೆ ಸಂಬಂಧಿತ ದಾಖಲೆಗಳನ್ನು ಹತ್ತು ವರ್ಷಗಳ ಕಾಲ ಇರಿಸಿಕೊಳ್ಳಬೇಕು.


ಸಾಮಾನ್ಯವಾಗಿ ಒಂದೆರಡು ವರ್ಷಗಳ ಒಳಗೆ ತೆರಿಗೆ ರಿಟರ್ನ್ ಪ್ರಕ್ರಿಯೆಗೆ ಸೂಚನೆಯನ್ನು ಸ್ವೀಕರಿಸಲಾಗುತ್ತದೆ. ತೆರಿಗೆ ರಿಟರ್ನ್ ಸಲ್ಲಿಸುವ ತಿಂಗಳಿನಿಂದ ಯಾವುದೇ ಪ್ರಾಥಮಿಕ ಹೊಂದಾಣಿಕೆಗಳನ್ನು ಮಾಡಲಾಗುತ್ತದೆ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಆರತಿ ರಾವೊಟೆ ತಿಳಿಸಿದ್ದಾರೆ. ವಿವರವಾದ ಮೌಲ್ಯಮಾಪನ ಸೂಚನೆಯನ್ನು ಸಾಮಾನ್ಯವಾಗಿ ತೆರಿಗೆದಾರನು ತೆರಿಗೆ ರಿಟರ್ನ್ ಅನ್ನು ಒದಗಿಸಿದ ಆರ್ಥಿಕ ವರ್ಷದ ಅಂತ್ಯದಿಂದ ಮೂರು ತಿಂಗಳ ಅವಧಿಯಲ್ಲಿ ಯಾವುದೇ ಸಮಯದಲ್ಲಿ ನಿರೀಕ್ಷಿಸಬಹುದು ಎಂಬುದು ಆರತಿಯವರ ಮಾತಾಗಿದೆ.


ಇದನ್ನೂ ಓದಿ: ಈ ಬಾರಿ ಬಜೆಟ್​ನಲ್ಲಿ ಮಧ್ಯಮ ವರ್ಗಕ್ಕೆ ಬಂಪರ್, ಸುಳಿವು ಕೊಟ್ಟ ನಿರ್ಮಲಾ ಸೀತಾರಾಮನ್!


ತೆರಿಗೆ ನೋಟೀಸ್ 10 ವರ್ಷಗಳವರೆಗೆ ನೀಡಬಹುದು


ಆದಾಯ ತೆರಿಗೆ ಮೌಲ್ಯಮಾಪನದಿಂದ ಬಿಟ್ಟುಬಿಡಲಾದ ಆದಾಯವನ್ನು ಲೆಕ್ಕಾಚಾರ ಮಾಡುವ 3 ವರ್ಷಗಳ ಅವಧಿ ಮುಗಿಯುವ ಮೊದಲು ನೋಟಿಸ್ ಕಳುಹಿಸಬಹುದು ಮತ್ತು ಆದಾಯದಿಂದ ತಪ್ಪಿಸಿಕೊಳ್ಳುವ ಮೌಲ್ಯಮಾಪನವು ₹ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ್ದಾಗಿದ್ದರೆ ನೋಟಿಸ್ ಅನ್ನು 10 ವರ್ಷಗಳ ಅವಧಿಯವರೆಗೆ ನೀಡಬಹುದು ಎಂದು ತಿಳಿಸಿದ್ದಾರೆ.


ದಾಖಲೆಗಳ ಸಾಫ್ಟ್ ಕಾಪಿಯನ್ನು ಇರಿಸಿಕೊಳ್ಳಲು ಸಲಹೆ


ತೆರಿಗೆ ಮೌಲ್ಯಮಾಪನ ಸಂದರ್ಭದಲ್ಲಿ ಸರಿಯಾದ ದಾಖಲೆಗಳೊಂದಿಗೆ ನೋಟಿಸ್‌ಗೆ ಉತ್ತರಿಸಲು, ಕನಿಷ್ಠ 10 ವರ್ಷಗಳವರೆಗೆ ಐಟಿಆರ್ ದಾಖಲೆಗಳನ್ನು ಇರಿಸಿಕೊಳ್ಳಲು ತೆರಿಗೆದಾರರಿಗೆ ಡೆಲಾಯ್ಟ್ ಇಂಡಿಯಾ ತಜ್ಞರು ಸಲಹೆ ನೀಡಿದ್ದಾರೆ.ಕಪ್ಪುಹಣ ಕಾಯಿದೆಯಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಲು ಯಾವುದೇ ಸಮಯದ ಮಿತಿಯನ್ನು ನಿಗದಿಪಡಿಸಲಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಹೀಗಾಗಿ ದೀರ್ಘಕಾಲದವರೆಗೆ ತೆರಿಗೆ ದಾಖಲೆಗಳನ್ನು ನಿರ್ವಹಿಸುವುದು ಕಷ್ಟಕರವಾಗಿದ್ದರೂ, ತೆರಿಗೆ ಅಧಿಕಾರಿಯ ನೋಟಿಸ್‌ಗೆ ಪ್ರತಿಕ್ರಿಯಿಸಲು ಸಾಧ್ಯವಾಗುವಂತೆ ಕನಿಷ್ಠ ಸಾಫ್ಟ್ ಕಾಪಿಯಲ್ಲಿ ದಾಖಲೆಗಳನ್ನು ಉಳಿಸಿಕೊಳ್ಳುವುದು ತೆರಿಗೆ ಪಾವತಿದಾರರಿಗೆ ಅನುಕೂಲಕರವಾಗಿದೆ ಎಂಬುದು ಪರಿಣಿತರ ಸಲಹೆಯಾಗಿದೆ.

Published by:ವಾಸುದೇವ್ ಎಂ
First published: