• Home
  • »
  • News
  • »
  • business
  • »
  • ITR ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ಗಡುವು; ತಾಂತ್ರಿಕ ಜ್ಞಾನ ಇಲ್ಲದವರಿಗೂ ಈ ಸೌಲಭ್ಯದಿಂದ ಅನುಕೂಲ!

ITR ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ಗಡುವು; ತಾಂತ್ರಿಕ ಜ್ಞಾನ ಇಲ್ಲದವರಿಗೂ ಈ ಸೌಲಭ್ಯದಿಂದ ಅನುಕೂಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊ-ಬ್ರೌಸಿಂಗ್, ತೆರಿಗೆದಾರರಿಗೆ ಹೆಚ್ಚು ಖಾಸಗಿ ಹಾಗೂ ಸುರಕ್ಷಿತ ಅನುಭವವನ್ನು ಒದಗಿಸುತ್ತದೆ. ಏಕೆಂದರೆ ಇಲ್ಲಿ ತೆರಿಗೆ ಏಜೆಂಟ್ ಸಕ್ರಿಯಗೊಂಡಿರುವ ವಿಂಡೋವನ್ನು ಮಾತ್ರ ನೋಡಬಹುದಾಗಿದೆ ಎಂದು ಖುದ್ದು ಐಟಿ ವಿಭಾಗ ತಿಳಿಸಿದೆ.

  • Share this:

ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ಅಂತಿಮ ಗಡುವು (ITR Filing Deadline) ಡಿಸೆಂಬರ್ 31 ರಂದು ಕೊನೆಗೊಳ್ಳುವುದರಿಂದ ಐಟಿಆರ್ ಫೈಲ್ ಮಾಡದೇ ಇರುವವರು ಶೀಘ್ರದಲ್ಲೇ ಆದಾಯ ತೆರಿಗೆ (Income Tax Filing) ಸಲ್ಲಿಸಬೇಕು. ಹಿರಿಯ ನಾಗರಿಕರು ಹಾಗೂ ತಾಂತ್ರಿಕ ಜ್ಞಾನ ಇಲ್ಲದವರು ಕೂಡ ಕೊ-ಬ್ರೌಸಿಂಗ್ (ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳು ನೈಜ ಸಮಯದಲ್ಲಿ ಅದೇ ಬ್ರೌಸರ್ ಟ್ಯಾಬ್‌ನಲ್ಲಿ ಬ್ರೌಸಿಂಗ್ ಮಾಡಬಹುದು) ಫೀಚರ್ (Co-Browsing Feature) ಬಳಸಿಕೊಂಡು ಐಟಿಆರ್ ಸಲ್ಲಿಸಬಹುದಾಗಿದೆ. ಕೊ-ಬ್ರೌಸಿಂಗ್ ಎಂಬುದು ಮೇಲೆ ತಿಳಿಸಿದಂತೆ ಸಹಯೋಗವಾಗಿ ಬ್ರೌಸಿಂಗ್ ಮಾಡುವ ವಿಧಾನವಾಗಿದ್ದು ಇದು ಸ್ಕ್ರೀನ್ ಶೇರಿಂಗ್ ಮಾಡಿದಂತಲ್ಲ.


ಈ ಫೀಚರ್ ಬಳಸಿಕೊಂಡು ತೆರಿಗೆದಾರರು ನೈಜ ಸಮಯದಲ್ಲಿ ಆದಾಯ ತೆರಿಗೆ ಏಜೆಂಟ್‌ನೊಂದಿಗೆ ತಮ್ಮ ಐಟಿಆರ್ ವೆಬ್ ಪುಟವನ್ನು ಹಂಚಿಕೊಳ್ಳಬಹುದಾಗಿದೆ. ಸ್ಕ್ರೀನ್ ಶೇರಿಂಗ್ ಮೋಡ್‌ನಲ್ಲಿ ಇನ್ನೊಂದು ಬದಿಯಲ್ಲಿರುವ ವ್ಯಕ್ತಿ ಸಂಪೂರ್ಣ ಸ್ಕ್ರೀನ್ ಅನ್ನು ನೋಡಬಹುದು. ಆದರೂ ಕೊ-ಬ್ರೌಸಿಂಗ್ ಮೋಡ್‌ನಲ್ಲಿ ಇದು ಸಾಧ್ಯವಿಲ್ಲ.


ಐಟಿ ವಿಭಾಗ ಹಂಚಿಕೊಂಡ ಮಾಹಿತಿ ಹೀಗಿದೆ
ಕೊ-ಬ್ರೌಸಿಂಗ್, ತೆರಿಗೆದಾರರಿಗೆ ಹೆಚ್ಚು ಖಾಸಗಿ ಹಾಗೂ ಸುರಕ್ಷಿತ ಅನುಭವವನ್ನು ಒದಗಿಸುತ್ತದೆ. ಏಕೆಂದರೆ ಇಲ್ಲಿ ತೆರಿಗೆ ಏಜೆಂಟ್ ಸಕ್ರಿಯಗೊಂಡಿರುವ ವಿಂಡೋವನ್ನು ಮಾತ್ರ ನೋಡಬಹುದಾಗಿದೆ ಎಂದು ಖುದ್ದು ಐಟಿ ವಿಭಾಗ ತಿಳಿಸಿದೆ.


ಕೊ-ಬ್ರೌಸಿಂಗ್ ಫೀಚರ್ ಐಟಿಆರ್ ಸಂಸ್ಥೆಯ ಸ್ವಾಗತಾರ್ಹ ವೈಶಿಷ್ಟ್ಯವಾಗಿದ್ದು ಸಾಂಪ್ರದಾಯಿಕ ಶೈಲಿಯಲ್ಲಿ ಪ್ರಶ್ನೆಗಳನ್ನು ಪರಿಹರಿಸುವುದಕ್ಕಿಂತಲೂ ಆನ್‌ಲೈನ್‌ನಲ್ಲಿ ನೈಜ-ಸಮಯದ ಸಹಾಯಕ್ಕೆ ಮಾನ್ಯತೆ ನೀಡಲಾಗುತ್ತದೆ. ಈ ಫೀಚರ್ ಈ ಕೆಳಗಿನ ವಿಧಗಳಲ್ಲಿ ಸಹಾಯ ಮಾಡುತ್ತದೆ.


ಉಚಿತ ವೈಯಕ್ತೀಕರಿಸಿದ ಬೆಂಬಲ
ಮೊದಲಿಗೆ ತೆರಿಗೆದಾರರು ಐಟಿಆರ್ ಪೋರ್ಟಲ್‌ಗೆ ಲಾಗ್ ಇನ್ ಆಗಬೇಕು ಹಾಗೂ ಕೊ-ಬ್ರೌಸಿಂಗ್ ಬಟನ್ ಅನ್ನು ಕ್ಲಿಕ್ ಮಾಡಬೇಕು. ಇದರ ನಂತರ ಆದಾಯ ತೆರಿಗೆ ಏಜೆಂಟ್ ಕರೆ ಸ್ವೀಕರಿಸುತ್ತಾರೆ ಹಾಗೂ ಸಿಆರ್‌ಎಮ್ ಪಾಪ್ ಅಪ್ ಆಗುತ್ತದೆ. ಏಜೆಂಟ್ ತೆರಿಗೆದಾರರನ್ನು ಸಂಪರ್ಕಿಸುತ್ತಾರೆ ಹಾಗೂ ಐಟಿಆರ್ ಫೈಲಿಂಗ್ ಪ್ರಕ್ರಿಯೆಯ ಮೂಲಕ ಅವರಿಗೆ ಮಾರ್ಗದರ್ಶನ ನೀಡುತ್ತಾರೆ.


Taxbuddy.com ನ ಸಂಸ್ಥಾಪಕ ಸುಜಿತ್ ಬಂಗಾರ್ ಹೀಗಂತಾರೆ
ತೆರಿಗೆದಾರರು ಸ್ಟಾಪ್ ಬಟನ್ ಕ್ಲಿಕ್ ಮಾಡಿದರೆ ಏಜೆಂಟ್ ಸೆಷನ್ ಮುಚ್ಚುತ್ತದೆ ಎಂಬುದನ್ನು ಮರೆಯದಿರಿ.  ಶೇರ್ ಮಾಡಿದ ಸ್ಕ್ರೀನ್ ಅನ್ನು ಅವರಿಗೆ ನೋಡಲು ಸಾಧ್ಯವಾಗುವುದಿಲ್ಲ.


ತೆರಿಗೆ ಸಲ್ಲಿಕೆ ನೆರವು ಕಂಪನಿಯಾದ Taxbuddy.com ನ ಸಂಸ್ಥಾಪಕ ಸುಜಿತ್ ಬಂಗಾರ್, ಕೊ-ಬ್ರೌಸಿಂಗ್ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು, ಕೊ-ಬ್ರೌಸಿಂಗ್‌ನ ಅತ್ಯಂತ ಮಹತ್ವದ ಪ್ರಯೋಜನವೆಂದರೆ ನೈಜ-ಸಮಯದ ಬೆಂಬಲ ನೀಡುವುದರ ಜೊತೆಗೆ, ತೆರಿಗೆ ಸಲಹೆಗಾರರ ​​ಕಚೇರಿಗಳಿಗೆ ಭೇಟಿ ನೀಡುವ ಸಾಂಪ್ರದಾಯಿಕ ವಿಧಾನವನ್ನು ಬದಲಾಯಿಸುತ್ತದೆ ಎಂದಾಗಿದೆ.


ಹೆಚ್ಚಿನ ಲ್ಯಾಪ್‌ಟಾಪ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ
ಈ ವೈಶಿಷ್ಟ್ಯವನ್ನು ಬಳಸಲು ತೆರಿಗೆದಾರರಿಗೆ ಯಾವುದೇ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡುವುದು ಅಥವಾ ಪ್ಲಗಿನ್‌ಗಳ ಅಗತ್ಯವಿಲ್ಲ. ವಿಶ್ವಾಸಾರ್ಹ ಇಂಟರ್ನೆಟ್ ಸಂಪರ್ಕ ಮಾತ್ರ ಇದ್ದರೆ ಸಾಕಾಗುತ್ತದೆ. ಪ್ರಕ್ರಿಯೆಯು ತ್ವರಿತ ಮತ್ತು ಸುಲಭವಾಗಿದೆ.


ಇದನ್ನೂ ಓದಿ: PNB News: ಗಮನಿಸಿ, ಡಿಸೆಂಬರ್ 12ರೊಳಗೆ ಈ ಕೆಲಸ ಪೂರ್ಣಗೊಳಿಸಿ; ಇಲ್ಲವಾದ್ರೆ ನಿಮ್ಮ ಖಾತೆ ಕ್ಲೋಸ್ ಆಗುತ್ತೆ!


ಮಾಹಿತಿ ಸೋರಿಕೆಯಾವುದಿಲ್ಲ
ಕೊ-ಬ್ರೌಸಿಂಗ್ ಸಂಪೂರ್ಣ ಕಂಪ್ಯೂಟರ್‌ಗೆ ಪ್ರವೇಶವನ್ನು ಒದಗಿಸುವುದಿಲ್ಲ. ಆದಾಯ ತೆರಿಗೆ ಏಜೆಂಟ್ ತೆರಿಗೆದಾರರೊಂದಿಗೆ ತೆರೆದಿರುವ ಸಕ್ರಿಯ ವಿಂಡೋವನ್ನು ಮಾತ್ರ ವೀಕ್ಷಿಸಬಹುದು. ಅಲ್ಲದೆ, ಸೆಶನ್ ಅನ್ನು ಪ್ರಾರಂಭಿಸಲು ತೆರಿಗೆದಾರರು ಏಜೆಂಟ್‌ಗೆ ಪಿನ್ ಕೋಡ್ ಅನ್ನು ಒದಗಿಸಬೇಕು.


ಕೊ -ಬ್ರೌಸಿಂಗ್ ಬಳಸುವ ಮುನ್ನ ತಿಳಿದುಕೊಳ್ಳಬೇಕಾದ ಅಂಶಗಳು
ಕೊ-ಬ್ರೌಸಿಂಗ್ ಕೇವಲ ಮಾರ್ಗದರ್ಶನ ಪರಿಕರವಾಗಿದೆ ಹಾಗೂ ವಿಶೇಷ ತೆರಿಗೆ ಯೋಜನೆ ಮಾರ್ಗದರ್ಶನ ಮತ್ತು ಆದಾಯ ತೆರಿಗೆಯ ಇತರ ಕಾನೂನು ವಿಷಯಗಳನ್ನು ಹುಡುಕುತ್ತಿರುವವರಿಗೆ ಈ ಫೀಚರ್ ಸಹಾಯ ಮಾಡುವುದಿಲ್ಲ.


ಇದನ್ನೂ ಓದಿ: EPFO Retirement Savings Scheme: ಇಪಿಎಫ್​ಒ ಖಾತೆದಾರರೇ ಗಮನಿಸಿ, ಮಹತ್ವದ ನಿರ್ಧಾರದತ್ತ ಸರ್ಕಾರದ ನಡೆ


ITR ರಿಟರ್ನ್ ಫೈಲಿಂಗ್ ಸಮಯದಲ್ಲಿ ಸಹಾಯ
ಐಟಿಆರ್ ಫೈಲಿಂಗ್ ಪ್ರಕ್ರಿಯೆಯ ನಂತರ ತಮ್ಮ ನೈಜ-ಸಮಯದ ಸೆಷನ್‌ನ ನಂತರ ಹೆಚ್ಚಿನ ಬೆಂಬಲದ ಅಗತ್ಯವನ್ನೊದಗಿಸುವುದು ಇನ್ನೂ ಪರಿಹರಿಸಬೇಕಾದ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ ಎಂದು ಬಂಗಾರ್ ತಿಳಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: