Unacademy: ಯೂಟ್ಯೂಬ್‌ ಚಾನೆಲ್​​ನಿಂದ ಆರಂಭವಾಗಿದ್ದು ಈಗ 25 ಸಾವಿರ ಕೋಟಿಯ ಕಂಪೆನಿ!

ಗೌರವ್ ಮುಂಜಾಲ್​

ಗೌರವ್ ಮುಂಜಾಲ್​

ಯೂಟ್ಯೂಬ್​ ಚಾನೆಲ್​ ಪ್ರಾರಂಭಿಸಿದ ಗೌರವ್​ ಮುಂಜಾಲ್​ ಅವರು ಇದು 25 ಸಾವಿರ ಕೋಟಿ ಆದಾಯದ ಕಂಪೆನಿಯನ್ನು ಸ್ಥಾಪಿಸಿದ್ದಾರೆ. ಹಾಗಿದ್ರೆ ಈ ಬದಲಾವಣೆಯ ಹಿಂದಿನ ಕಥೆಯ ಬಗ್ಗೆ ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

  • Share this:

ಗೌರವ್‌ ಮುಂಜಾಲ್ (Gourav Munjal), ಯುವ ಉದ್ಯಮಿಯ ಈ ಹೆಸರು ಸ್ಟಾರ್ಟ್​​ಅಪ್​​ಗಳ ಉದ್ಯಮದಲ್ಲಿ ಚಿರಪರಿಚಿತ. ತನ್ನ ಯುಟ್ಯೂಬ್‌ ಚಾನೆಲ್‌ (Youtube Channel) ಅನ್ನು 25 ಸಾವಿರ ಕೋಟಿಯ ಕಂಪೆನಿಯಾಗಿ ಪರಿವರ್ತಿಸಿದ ಸಾಧನೆ ಗೌರವ್‌ ಅವರದ್ದು. ಹೌದು, ಇಂದಿನ ಯುವಪೀಳಿಗೆಗೆ ಸ್ಪೂರ್ತಿಯಾಗುವಂತಹ ವ್ಯಕ್ತಿತ್ವದವರು ಗೌರವ್‌ ಮುಂಜಾಲ್.‌ ಉನ್ನತ ಎಡ್ ಟೆಕ್ ಕಂಪೆನಿಗಳಲ್ಲಿ (ed-tech firm) ಒಂದಾದ ಅನ್‌ಅಕಾಡೆಮಿ ಗಮನಾರ್ಹವಾಗಿ ಅಭಿವೃದ್ಧಿ ಕಂಡಿದೆ. 2022 ರಲ್ಲಿ, ಈ ಸಂಸ್ಥೆ 3.4 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿತ್ತು, ಅಂದರೆ ಸರಿಸುಮಾರು 25,000 ಕೋಟಿ ರೂಪಾಯಿಯಾಗಿದೆ.


ಅಂದಹಾಗೆ ಗೌರವ್ ಮುಂಜಾಲ್ ಅವರ ಯೂಟ್ಯೂಬ್ ಚಾನೆಲ್ ಈ ವಾಣಿಜ್ಯ ಸಾಮ್ರಾಜ್ಯಕ್ಕೆ ಅಡಿಪಾಯವಾಗಿ ಕಾರ್ಯನಿರ್ವಹಿಸಿತು. ಪ್ರಸ್ತುತ, ಅನ್‌ಅಕಾಡೆಮಿ ವ್ಯವಹಾರದ ಸಿಇಒ ಆಗಿ ಗೌರವ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.


ಜೊತೆಗೆ ಈ ಕಂಪೆನಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಗೌರವ್‌ ಗೆ ಸಾಥ್‌ ನೀಡಿದ್ದು ವೈದ್ಯರು ಮತ್ತು ಮಾಜಿ ಐಎಎಸ್ ಅಧಿಕಾರಿ ಡಾ. ರೋಮನ್ ಸೈನಿ.


ಯಾರು ಈ ಗೌರವ್ ಮುಂಜಾಲ್ ?


ಗೌರವ್ ಮುಂಜಾಲ್ ಮುಂಬೈ ಮೂಲದವರು. ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಗೌರವ್‌ 2010ರಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ರಚಿಸುವ ಕುರಿತು ಯುಟ್ಯೂಬ್‌ ಟ್ಯುಟೋರಿಯಲ್ ಅನ್ನು ಪೋಸ್ಟ್ ಮಾಡಿದರು. ನಂತರ ಚಾನಲ್ ಅನ್ನು ಅನ್‌ಅಕಾಡೆಮಿ ಎಂದು ಮರುನಾಮಕರಣ ಮಾಡಲಾಯಿತು. ಅವರು ಈ ವಿಡಿಯೋಗಳನ್ನು ತಮ್ಮ ಸ್ನೇಹಿತರಿಗೆ ತೋರಿಸಿದ್ದು, ಅವರ ಸ್ನೇಹಿತರು, ಪರಿಚಯದವರು ಅವರ ಪ್ರಯತ್ನಗಳಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದರು.


ಇದನ್ನೂ ಓದಿ: ಒಂದು ದಿನಕ್ಕೆ 25 ಲಕ್ಷ ಸಂಬಳ ತೆಗೆದುಕೊಳ್ಳುವ ಪ್ರತಿಷ್ಠಿತ ಬ್ಯಾಂಕ್​ ಸಿಇಒ! ಪಿಯೂಷ್​ ಗುಪ್ತಾರ ಡಾಲರ್ಸ್​​​​ ಸ್ಟೋರಿ ಇಲ್ಲಿದೆ ಓದಿ


ನಂತರದಲ್ಲಿ ಪದವೀಧರರಾದ ನಂತರ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಪ್ರಾರಂಭಿಸಿದರು ಗೌರವ್‌ ಮುಂಜಾಲ್‌. ನಂತರವೂ ಅವರು ಇಂಥ ವೀಡಿಯೊಗಳನ್ನು ರಚಿಸಿ ಅದನ್ನು ಪೋಸ್ಟ್‌ ಮಾಡುತ್ತಿದ್ದರು. ಅವರ ಮೊದಲ ಯಶಸ್ವಿ ವ್ಯಾಪಾರ ಉದ್ಯಮವು ಫ್ಲಾಟ್ ಎಂಬ ಕಂಪೆನಿಯನ್ನು ಸ್ಥಾಪಿಸಲು ಕಾರಣವಾಯ್ತು. ನಂತರ ಅವರು ಆ ಕಂಪೆನಿಯನ್ನು ಮಾರಾಟ ಮಾಡಿದರು. ಆ ಹೊತ್ತಿಗೆ, ಅವರು ಬ್ಯುಸಿನೆಸ್‌ಅನ್ನು ಪ್ರಾರಂಭಿಸಲು ಬೇಕಾಗುವಂತಹ ಸೂಕ್ಷ್ಮ ಅಂಶಗಳನ್ನು ಕರಗತ ಮಾಡಿಕೊಂಡಿದ್ದರು.


ಗೌರವ್ ಮುಂಜಾಲ್​ಗೆ ಸಾಥ್‌ ನೀಡಿದ್ದು ರೋಮನ್ ಸೈನಿ!


ನಂತರದಲ್ಲಿ ಗೌರವ್‌ ಮುಂಜಾಲ್‌ಗೆ ಪಾಲುದಾರರಾಗಿ ಸಿಕ್ಕಿದ್ದು ರೋಮನ್‌ ಸೈನಿ. ಅವರು ಗೌರವ್‌ ಕೆಲಸಕ್ಕೆ ಸಾಥ್‌ ನೀಡಿದರು. ಯುಪಿಎಸ್‌ಸಿ ಪರೀಕ್ಷೆ ಹೇಗೆ ಎದುರಿಸುವುದು, ತಯಾರಿ ಹೇಗಿರಬೇಕು? ಯಾವೆಲ್ಲ ಅಂಶಗಳು ಮಹತ್ವದ್ದು ಎಂಬುದರ ಕುರಿತು ತರಗತಿಗಳನ್ನು ಕಲಿಸಲು ಪ್ರಾರಂಭಿಸಿದರು.


ಗೌರವ್ ಮುಂಜಾಲ್​


ಅಂದಹಾಗೆ ರೋಮನ್‌ ಸೈನಿ 18 ವರ್ಷದವರಾಗಿದ್ದಾಗ ಏಮ್ಸ್‌ (AIIMS) ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು 22 ವರ್ಷದವರಾಗಿದ್ದಾಗ ಯುಪಿಎಸ್‌ಸಿಯನ್ನು ಪಾಸು ಮಾಡಿದರು. ನಂತರದಲ್ಲಿ ಅವರನ್ನು ಮಧ್ಯಪ್ರದೇಶಕ್ಕೆ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಯಿತು. ರೋಮನ್‌ ಸೈನಿ ಉದ್ಯಮವನ್ನು ತಮ್ಮ ವೃತ್ತಿಯಾಗಿ ನೋಡಿದರು. 2015 ರಲ್ಲಿ, ಅವರು ಐಎಎಸ್ ಅಧಿಕಾರಿ ಹುದ್ದೆಯನ್ನು ತೊರೆದ ನಂತರ ಅನ್‌ಅಕಾಡೆಮಿ ರಚಿಸಿದರು.


ಅದಕ್ಕೂ ಮೊದಲು ಅವರು ಅನ್​ಅಕಾಡೆಮಿಯ ಮೂಲ ಸಂಸ್ಥೆಯಾಗಿದ್ದ ಸಾರ್ಟಿಂಗ್ ಹ್ಯಾಟ್ ಟೆಕ್ನಾಲಜೀಸ್ ಅನ್ನು ಸ್ಥಾಪಿಸಿದರು. ನಂತರದಲ್ಲಿ ಹೇಮೇಶ್ ಸಿಂಗ್ ಅವರೊಂದಿಗೆ ಸೇರಿಕೊಂಡಿದ್ದು ಅವರು ಅನ್‌ಅಕಾಡೆಮಿಯ ಮೂರನೇ ಸಹ-ಸಂಸ್ಥಾಪಕರಾಗಿದ್ದಾರೆ.




ಗೌರವ್ ಮುಂಜಾಲ್ ಸಂಭಾವನೆ ಎಷ್ಟು ?


ಗೌರವ್ ಮುಂಜಾಲ್ 37 ವ್ಯವಹಾರಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ. ಹೆಚ್ಚುವರಿಯಾಗಿ, ಅವರು ಫ್ಲಾಟ್‌ಚಾಟ್‌ ಕೂಡ ಸ್ಥಾಪಿಸಿದ್ದಾರೆ. ಇನ್ನು, ಗೌರವ್‌ ಮುಂಜಾಲ್ 2022 ರಲ್ಲಿ ಅನಾಕಾಡೆಮಿಯ CEO ಆಗಿ 1.58 ಕೋಟಿ ಸಂಭಾವನೆ ಪಡೆದಿದ್ದಾರೆ. ಇನ್ನು, ಹೇಮೇಶ್ ಸಿಂಗ್ 1.19 ಕೋಟಿ ರೂ. ಸಂಭಾವನೆ ಪಡೆದರೆ, ರೋಮನ್‌ ಸೈನಿ 88 ಲಕ್ಷ ರೂ. ಪಡೆದಿದ್ದಾರೆ.


ಹೀಗೆ ಯುಟ್ಯೂಬ್‌ನಿಂದ ಇಷ್ಟು ದೊಡ್ಡ ಕಂಪನಿಯಾಗಿ ಬೆಳೆದ ಅನ್‌ಅಕಾಡೆಮಿ ಬೆನ್ನೆಲುಬಾದ ಗೌರವ್‌ ಮುಂಜಾಲ್‌ ಸಾಧನೆ ದೊಡ್ಡದು. ಇವರುಗಳು ಬಹಳಷ್ಟು ಜನರಿಗೆ ಸ್ಪೂರ್ತಿಯಾಗುತ್ತಾರೆ.

top videos
    First published: