ದೇಶದಲ್ಲಿ ಕೋವಿಡ್ ಹಾವಳಿ(COVID Pandemic)ಯಿಂದಾಗಿ ಶುರುವಾದ ವರ್ಕ್ ಫ್ರಮ್ ಹೋಮ್ (Work From Home) ಇನ್ನೂ ಮುಂದುವರಿಯುತ್ತಿದೆ. ಸುಮಾರು 2 ವರ್ಷದಿಂದ ಐಟಿ ಮತ್ತು ಇತರ ಕೆಲವೊಂದು ಕಚೇರಿಗಳ ಉದ್ಯೋಗಿಗಳು ಮನೆಯಿಂದಲೇ ಆಫೀಸ್ ಕೆಲಸ ಮಾಡುತ್ತಿದ್ದಾರೆ. ಆದರೆ ವರ್ಕ್ ಫ್ರಮ್ ಹೋಮ್ನಿಂದ ಹೊಸ ಸಂಕಷ್ಟವೊಂದು ಶುರುವಾಗಿದೆ ಎಂದು ಬೆಂಗಳೂರಿನಲ್ಲಿರುವ ಕೆಲವು ಐಟಿ ಕಂಪನಿಗಳು (IT Company) ಹೇಳುತ್ತಿವೆ. ಕೊರೊನಾ ಸಮಯದಲ್ಲಿ ಉದ್ಯೋಗಿಗಳ (Employees)ಹಿತ ಕಾಯುವುದು ಮತ್ತು ಕೆಲಸ ಸುಸೂತ್ರವಾಗಿ ಸಾಗಲು ಈ ವರ್ಕ್ ಫ್ರಮ್ ಹೋಮ್ ವ್ಯವಸ್ಥೆಯನ್ನು ಕಂಪನಿಗಳು ಕಲ್ಪಿಸಿದ್ದವು. ಆದರೆ ಈ ಕ್ರಮ ಸ್ವತ: ಕಂಪನಿಗಳಿಗೆ ಹೊಡೆತ ನೀಡುವ ಸ್ಥಿತಿ ತಲುಪಿದೆ.
ಐಟಿ ಉದ್ಯೋಗಿಗಳನ್ನೇ ನೆಚ್ಚಿಕೊಂಡಿದ್ದ ಹೋಟೆಲ್, ಆಟೋ ಹಾಗೂ ಕ್ಯಾಬ್ ಮಾಲೀಕರು ಮತ್ತು ಇತರೆ ವಾಣಿಜ್ಯ ಉದ್ಯಮಿಗಳು ನಷ್ಟ ಅನುಭವಿಸುವುದರ ಜೊತೆಗೆ ಉದ್ಯೋಗ ನೀಡಿದ ಕಂಪನಿಯ ಲಾಭಕ್ಕೆ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಕುತ್ತು ತಂದಿದೆ.
ಪಾರ್ಟ್ ಟೈಮ್ ಕೆಲಸ ಮಾಡ್ತಿರೋ ಉದ್ಯೋಗಿಗಳು
ವರ್ಕ್ ಫ್ರಮ್ ಹೋಮ್ ಐಟಿ ಕಂಪನಿಗೆ ಈಗ ಒಂದು ದೊಡ್ಡ ಸವಾಲಾಗಿದೆ. ಉದ್ಯೋಗಿಗಳು ತಮ್ಮ ಪೂರ್ಣ ಸಮಯದ ದಿನ-ಉದ್ಯೋಗ ಹೊಂದಿದ್ದರು. ಅದರ ಜೊತೆ ಇತರೆ ವೃತ್ತಿಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ತಮ್ಮ ಕಂಪನಿಯ ಕೆಲಸದ ಜೊತೆ ಇನ್ನಿತರ ಹಲವು ಪಾರ್ಟ್ ಟೈಮ್ ಕೆಲಸಗಳನ್ನು ಉದ್ಯೋಗಿಗಳು ಮಾಡುತ್ತಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ ಎಂದು ಕಂಪನಿಗಳು ಆರೋಪ ಮಾಡುತ್ತಿವೆ.
ಇದನ್ನೂ ಓದಿ: Shark Tank India: ನಮಿತಾ ಥಾಪರ್ ನಿಂದ ಹಿಡಿದು ಅನುಪಮ್ ಮಿತ್ತಲ್ ಜಡ್ಜ್ ಗಳು ಪಡೆಯುವ ಸಂಭಾವನೆ ಇಲ್ಲಿದೆ
ನಾವು ಪೂರ್ಣ ಉದ್ಯೋಗ ಮತ್ತು ಸಂಬಳ ನೀಡುತ್ತಿದ್ದರು, ನಮ್ಮ ಉದ್ಯೋಗಿಗಳು ಬೇರೆ ಬೇರೆ ಕಂಪನಿ ಅಥವಾ ಇನ್ಯಾವುದೋ ಕ್ಷೇತ್ರದಲ್ಲಿ ವೃತ್ತಿಪರ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕಂಪನಿ ಆದಾಯಕ್ಕೆ ಮತ್ತು ಉತ್ಪಾದಕತೆ ಮೇಲೆ ಹೊಡೆತ ಬೀಳುತ್ತಿದೆ ಎಂದಿವೆ.
ಏಳು ಕಂಪನಿಗಳಲ್ಲಿ ಉದ್ಯೋಗ
ಬಿರ್ಲಾಸಾಫ್ಟ್ ಸಿಇಒ ಮತ್ತು ಇವರು ನಾಸ್ಕಾಮ್ ನೋಯ್ಡಾದ ಪ್ರಾದೇಶಿಕ ಮಂಡಳಿಯ ಅಧ್ಯಕ್ಷರು ಆಗಿರುವ ಧರ್ಮೇಂದರ್ ಕಪೂರ್ ಮಾತಾಡಿ, ಒಬ್ಬ ವ್ಯಕ್ತಿ ತನ್ನ ಫುಲ್ ಟೈಮ್ ಕೆಲಸದ ಜೊತೆ ಇತರೆ ಏಳು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ದೂರು ನಮಗೆ ಬಂದಿದೆ.
ವ್ಯಕ್ತಿಯ ಹೆಸರು ಮತ್ತು ಅವರು ಯಾವ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಹ ತಿಳಿದಿದೆ ಎಂದು ಹೇಳಿದ್ದಾರೆ. ಆ ವ್ಯಕ್ತಿಯ ಪಿಎಫ್ ದಾಖಲೆಗಳು ಆತ ಎಲ್ಲೆಲ್ಲಿ ಉದ್ಯೋಗ ಮಾಡುತ್ತಿದ್ದಾನೆ ಎಂಬ ವಿವರಗಳನ್ನು ತೋರಿಸಿದೆ.
ಒಂದು ಕಂಪನಿಯ ಎಚ್ಆರ್ ಇದನ್ನು ಕಂಡುಹಿಡಿದಿದ್ದು ಅವರು ಬಹು ಸಕ್ರಿಯ PF ಖಾತೆಗಳನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ ಎಂದು ಧರ್ಮೇಂದರ್ ಕಪೂರ್ ಹೇಳಿದ್ದಾರೆ. ಅನೇಕ ಉದ್ಯೋಗಿಗಳು ಇದೇ ಹಾದಿಯಲ್ಲಿ ಇರುವುದು ನಮಗೆ ತಿಳಿದು ಬಂದಿದೆ. ಆದರೆ ಎಲ್ಲರೂ ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯುವುದು ಕಷ್ಟ ಎಂದು ಅವರು ಹೇಳಿದರು.
ಉತ್ಪಾದಕತೆ ಮೇಲೆ ನೇರ ಪರಿಣಾಮ
ವಿಕ್ರಮ್ ಶ್ರಾಫ್, ಕಾನೂನು ಸಂಸ್ಥೆಯ ಎಚ್ಆರ್ ಮತ್ತು ಮುಖ್ಯಸ್ಥ ನಿಶ್ಚಿತ್ ಡಿ . ದೇಸಾಯ್ ಅಸೋಸಿಯೇಟ್ಸ್, ಹೇಳುವ ಪ್ರಕಾರ ಭಾರತದಲ್ಲಿ ಡೇಟಾಬೇಸ್ ಉದ್ಯೋಗದಾತರರ ಈ ಕ್ರಮ ಕಂಡುಹಿಡಿಯುವುದು ಕಷ್ಟ. ಗೌಪ್ಯತೆ ಪರಿಗಣನೆಗಳಿಗೆ ಒಳಪಟ್ಟು ಉದ್ಯೋಗಿಯ ಟ್ಯಾಕ್ಸ್ ಫೈಲಿಂಗ್ಗಳು ಅಥವಾ ಪಿಎಫ್ ಖಾತೆಯನ್ನು ಪರಿಶೀಲಿಸಿ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳಬಹುದು. ಉದ್ಯೋಗಿಗಳ ಈ ನಡೆ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Healthy Snacks: ಈ ಸ್ನಾಕ್ಸ್ ತಿಂದ್ರೆ ಆರೋಗ್ಯ ಇನ್ನೂ ಚೆನ್ನಾಗಿ ಆಗುತ್ತಂತೆ, ಬಾಯಿರುಚಿಗೆ ಇದು ಬೆಸ್ಟ್ ನೋಡಿ!
ಭಾರತೀಯ ನ್ಯಾಯಾಲಯಗಳು ಫುಲ್ ಟೈಮ್ ಉದ್ಯೋಗದಲ್ಲಿದ್ದಾಗ ಬೇರೆ ಕಂಪನಿಯಲ್ಲಿ ಕೆಲಸ ಮಾಡುವುದರ ಬಗ್ಗೆ ತಿಳಿದುಕೊಂಡಿದೆ. ಅಲ್ಲದೇ ಭಾರತದಲ್ಲಿ ಉಭಯ ಉದ್ಯೋಗದ ಮೇಲೆ ನಿರ್ಬಂಧಗಳಿವೆ ಎಂದು ಶ್ರಾಫ್ ಹೇಳಿದರು. ಒಂದು ಕಂಪನಿಯಲ್ಲಿ ಕೆಲಸ ಮಾಡುವ ಮೊದಲು ಒಪ್ಪಂದಗಳು ಸಹ ಉದ್ಯೋಗಿಗಳು ಬೇರೆ ಯಾವುದೇ ಬೇರೆ ಉದ್ಯೋಗ ತೆಗೆದುಕೊಳ್ಳುವುದಿಲ್ಲ ಎಂದಾಗಿರುತ್ತದೆ. ಅವರ ತಮ್ಮ ಮತ್ತೊಂದು ಕೆಲಸದ ನಿಮಿತ್ತ ಕಂಪನಿ ಕೆಲಸವನ್ನು ತಡ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾರ್ಟ್ ಟೈಮ್ ಉದ್ಯೋಗಸ್ಥರಿಗೂ ನಾವು ಹೈಬ್ರಿಡ್ ವರ್ಕ್ ಪ್ಲೇಸನ್ನು ರಚಿಸಬೇಕಾಗಿದೆ. ಹೈಬ್ರಿಡ್ ರಚನೆಯಲ್ಲಿ ಅಳವಡಿಸಿಕೊಳ್ಳಿ. ಕೆಲಸದ ಭವಿಷ್ಯತುಂಬಾ ಡಿಫರೆಂಟ್ ಆಗಿ ಕಾಣಿಸುತ್ತದೆ” ಎಂದು ಅರುಂಧತಿ ಭಟ್ಟಾಚಾರ್ಯ, ಸೇಲ್ಸ್ಫೋರ್ಸ್ನ ಅಧ್ಯಕ್ಷೆ ಮತ್ತು ಸಿಇಒ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ