• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Isha Ambani: ಫೋರ್ಬ್ಸ್ ಇಂಡಿಯಾ ಲೀಡರ್‌ಶಿಪ್ ಅವಾರ್ಡ್ಸ್‌ನಲ್ಲಿ ಇಶಾ, ಜೆನ್‍ನೆಕ್ಸ್ಟ್ ವಾಣಿಜ್ಯೋದ್ಯಮಿ ಪ್ರಶಸ್ತಿ ಗೆದ್ದ ಅಂಬಾನಿ ಪುತ್ರಿ

Isha Ambani: ಫೋರ್ಬ್ಸ್ ಇಂಡಿಯಾ ಲೀಡರ್‌ಶಿಪ್ ಅವಾರ್ಡ್ಸ್‌ನಲ್ಲಿ ಇಶಾ, ಜೆನ್‍ನೆಕ್ಸ್ಟ್ ವಾಣಿಜ್ಯೋದ್ಯಮಿ ಪ್ರಶಸ್ತಿ ಗೆದ್ದ ಅಂಬಾನಿ ಪುತ್ರಿ

ಇಶಾ ಅಂಬಾನಿ ಅವರಿಗೆ ಹೆಮ್ಮೆಯ ಪ್ರಶಸ್ತಿ

ಇಶಾ ಅಂಬಾನಿ ಅವರಿಗೆ ಹೆಮ್ಮೆಯ ಪ್ರಶಸ್ತಿ

12ನೇ ಫೋರ್ಬ್ಸ್ ಇಂಡಿಯಾ ಲೀಡರ್‌ಶಿಪ್ ಅವಾರ್ಡ್ಸ್ 2023ರಲ್ಲಿ ಇಶಾ ಅಂಬಾನಿ ಅವರು ಜೆನ್‍ನೆಕ್ಸ್ಟ್ ಎಂಟರ್‍ಪ್ರೆನಿಯರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

  • News18 Kannada
  • 5-MIN READ
  • Last Updated :
  • Mumbai, India
  • Share this:

ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ಪುತ್ರಿ, ರಿಲಯನ್ಸ್ ರಿಟೇಲ್ ನಿರ್ದೇಶಕಿ (Reliance Retail director) ಇಶಾ ಅಂಬಾನಿ (Isha Ambani) ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಶುಕ್ರವಾರ ನಡೆದ 12ನೇ ಫೋರ್ಬ್ಸ್ ಇಂಡಿಯಾ ಲೀಡರ್‌ಶಿಪ್ ಅವಾಡ್ರ್ಸ್ 2023ರಲ್ಲಿ ರಿಲಯನ್ಸ್ ರಿಟೇಲ್ ನಿರ್ದೇಶಕಿ ಇಶಾ ಅಂಬಾನಿ ಅವರು ಜೆನ್‍ನೆಕ್ಸ್ಟ್ (GenNext) ಎಂಟರ್‍ಪ್ರೆನಿಯರ್ ಪ್ರಶಸ್ತಿಯನ್ನು (Award) ಗೆದ್ದಿದ್ದಾರೆ. ಇಶಾ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಯವರ ಮಗಳು. ಇಶಾ ಅಂಬಾನಿ ಅವರು ಪಿರಮಲ್ ಗ್ರೂಪ್ ಅಧ್ಯಕ್ಷ ಅಜಯ್ ಪಿರಮಲ್ ಅವರ ಮಗ ಆನಂದ್ ಅವರನ್ನು ವಿವಾಹವಾಗಿದ್ದಾರೆ. ಪ್ರಶಸ್ತಿ ಪಡೆದ ಇಶಾ ಅಂಬಾನಿ ತಮ್ಮನ್ನು ಬೆಂಬಲಿಸಿದ ಪೋಷಕರಿಗೆ ಮತ್ತು ಮಕ್ಕಳಿಗೆ ಧನ್ಯವಾದಗಳನ್ನು ಅರ್ಪಿಸಿದರು.


ಜೆನ್‍ನೆಕ್ಸ್ಟ್ ವಾಣಿಜ್ಯೋದ್ಯಮಿ ಪ್ರಶಸ್ತಿ
12ನೇ ಫೋರ್ಬ್ಸ್ ಇಂಡಿಯಾ ಲೀಡರ್‌ಶಿಪ್ ಅವಾಡ್ರ್ಸ್ 2023ರಲ್ಲಿ ರಿಲಯನ್ಸ್ ರಿಟೇಲ್ ನಿರ್ದೇಶಕಿ ಇಶಾ ಅಂಬಾನಿ ಅವರು ಜೆನ್‍ನೆಕ್ಸ್ಟ್ ಎಂಟರ್‍ಪ್ರೆನಿಯರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದರಿಂದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ತುಂಬಾ ಖುಷಿಯಾಗಿದ್ದಾರೆ.


ಯಶಸ್ಸಿನ ಹಾದಿಯಲ್ಲಿ ಇಶಾ ಅಂಬಾನಿ
ಆಗಸ್ಟ್ 2022 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಮುಖೇಶ್ ಅಂಬಾನಿ ಅವರು ಇಶಾ ಅವರನ್ನು ರಿಲಯನ್ಸ್ ರಿಟೇಲ್ ನಿರ್ದೇಶಕಿಯಾಗಿ ಪರಿಚಯಿಸಿದರು. ಅಂದಿನಿಂದ ಇಶಾ ಅವರು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ.


ಇಶಾ ಅಂಬಾನಿಯವರ ಪರಿಚಯ
ಇಶಾ ಅಂಬಾನಿ ಅವರು 2018, ಡಿಸೆಂಬರ್ 12 ರಂದು ಆನಂದ್ ಅವರನ್ನು ವಿವಾಹವಾಗಿದ್ದಾರೆ. ಮುಂಬೈನಲ್ಲಿರುವ ಅಂಬಾನಿ ಅವರ ಅಲ್ಟಾಮೌಂಟ್ ರೋಡ್ ನಿವಾಸ, ಆಂಟಿಲಿಯಾದಲ್ಲಿ ಇವರ ಮದುವೆ ನಡೆದಿತ್ತು. ಆನಂದ್ ಅವರು ಪಿರಮಲ್ ಗ್ರೂಪ್‍ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.




ಇಟಲಿಯಲ್ಲಿ ನಿಶ್ಚಿತಾರ್ಥ
ಇಶಾ ಮತ್ತು ಆನಂದ್ ಸೆಪ್ಟೆಂಬರ್ 2018 ರಲ್ಲಿ ಇಟಲಿಯ ಲೇಕ್ ಕೊಮೊದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇವರ ಮದುವೆಗೆ ಬಾಲಿವುಡ್‍ನ ಕ್ರೀಮ್ ಡೆ ಲಾ ಕ್ರೀಮ್ ಮತ್ತು ರಾಜಕೀಯ, ವ್ಯಾಪಾರ ಮತ್ತು ಕ್ರೀಡಾ ಪ್ರಪಂಚದ ಹಲವಾರು ದಿಗ್ಗಜರನ್ನು ಆಗಮಿಸಿದ್ದರು.


isha ambani, mukesh ambani, reliance retail director, nita ambani, genNext entrepreneur award, ಇಶಾ ಅಂಬಾನಿ, ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ, ರಿಲಯನ್ಸ್ ರೀಟೇಲ್‌ ನಿರ್ದೇಶಕಿ, ಫೋರ್ಬ್ಸ್ ಇಂಡಿಯಾ ಲೀಡರ್‌ಶಿಪ್ ಅವಾಡ್ರ್ಸ್ 2023, kannada news, karnataka news,
ಇಶಾ ಅಂಬಾನಿ


ಹೈ-ಪ್ರೊಫೈಲ್ ಮದುವೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಅಮೆರಿಕದ ಮಾಜಿ ರಾಜ್ಯ ಕಾರ್ಯದರ್ಶಿ ಮತ್ತು ಪ್ರಥಮ ಮಹಿಳೆ ಹಿಲರಿ ಕ್ಲಿಂಟನ್, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಅಂದಿನ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ರತನ್ ಟಾಟಾ, ಬಚ್ಚನ್, ರಜನಿಕಾಂತ್, ಅಮೀರ್ ಖಾನ್, ಸಚಿನ್ ತೆಂಡೂಲ್ಕರ್ ಮುಂದಾದವರು ಬಂದಿದ್ದರು.


ಅವಳಿ ಮಕ್ಕಳ ಅಮ್ಮ
ನವೆಂಬರ್ 19, 2022ರಂದು ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಇಶಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ಪೈಕಿ ಒಂದು ಗಂಡು ಮತ್ತೊಂದು ಹೆಣ್ಣು. ಹೆಣ್ಣು ಮಗುವಿಗೆ ಆದಿಯಾ ಮತ್ತು ಗಂಡು ಮಗುವಿಗೆ ಕೃಷ್ಣ ಎಂದು ಹೆಸರಿಟ್ಟಿದ್ದಾರೆ.


isha ambani, mukesh ambani, reliance retail director, nita ambani, genNext entrepreneur award, ಇಶಾ ಅಂಬಾನಿ, ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ, ರಿಲಯನ್ಸ್ ರೀಟೇಲ್‌ ನಿರ್ದೇಶಕಿ, ಫೋರ್ಬ್ಸ್ ಇಂಡಿಯಾ ಲೀಡರ್‌ಶಿಪ್ ಅವಾಡ್ರ್ಸ್ 2023, kannada news, karnataka news,
ಇಶಾ ಅಂಬಾನಿ


ಇದನ್ನೂ ಓದಿ: ಅವಳಿ ಮಕ್ಕಳೊಂದಿಗೆ ಮುಂಬೈ ನಿವಾಸಕ್ಕೆ ಬಂದ ಇಶಾ ಅಂಬಾನಿ, ಮುದ್ದು ಕಂದಮ್ಮಗಳಿಗೆ ಅದ್ಧೂರಿ ಸ್ವಾಗತ 

top videos


    ಅಂಬಾನಿ ಅವರಿಗೆ ಮೂವರು ಮಕ್ಕಳು
    ಅಂಬಾನಿ ಅವರಿಗೆ ಮೂವರು ಮಕ್ಕಳಿದ್ದಾರೆ. ಅವಳಿಗಳಾದ ಆಕಾಶ್-ಇಶಾ ಮತ್ತು ಕಿರಿಯ ಮಗ ಅನಂತ್. ಆಕಾಶ್ ವಜ್ರದ ವ್ಯಾಪಾರಿ ರಸೆಲ್ ಮೆಹ್ತಾ ಅವರ ಮಗಳು ಶ್ಲೋಕಾ ಅವರನ್ನು ಮಾರ್ಚ್ 2019 ರಲ್ಲಿ ವಿವಾಹವಾದರು. ಅವರಿಗೆ ಎರಡು ವರ್ಷದ ಮಗ ಪೃಥ್ವಿ ಇದ್ದಾನೆ.

    First published: