Explained: Moonlighting ಅಂದ್ರೇನು? ಒಂದು ಕಂಪೆನಿಯಲ್ಲಿದ್ದುಕೊಂಡು ಇನ್ನೊಂದು ಕಡೆ ಕೆಲಸ ಮಾಡುವುದೆಷ್ಟು ಸರಿ?

ಮೂನ್‌ಲೈಟಿಂಗ್ ಎಂಬುದು ತಮ್ಮ ಕಂಪೆನಿಯಲ್ಲದೆ ಇತರೆಡೆಗಳಲ್ಲಿ ಉದ್ಯೋಗ ಮಾಡುವವರಿಗೆ ಬಳಸುವ ಪದವಾಗಿದೆ. ಸಾಂಕ್ರಾಮಿಕದ ಸಮಯದಲ್ಲಿ ಆರ್ಥಿಕ ಅಡಚಣೆಯಿಂದಾಗಿ ಹಲವಾರು ಉದ್ಯೋಗಗಳನ್ನು ನಿರ್ವಹಿಸುವ ಪರಿಸ್ಥಿತಿ ಬಂದೊದಗಿದ್ದು ಮೂನ್ ಲೈಟಿಂಗ್ ಆ ಸಮಯದಲ್ಲಿಯೇ ಹೆಚ್ಚು ವ್ಯಾಪಕತೆಯನ್ನು ತೆಗೆದುಕೊಂಡಿತು ಎಂಬುದು ಐಟಿ ವಲಯದಲ್ಲಿರುವ ಮಾತಾಗಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕೆಂಬುದು ಕಂಪೆನಿಗಳ ಅಭಿಪ್ರಾಯವಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಐಟಿ ದೈತ್ಯ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಕಂಪನಿಯಲ್ಲಿದ್ದು (Company) ಕೊಂಡು ಬೇರೆ ಕಡೆ ಉದ್ಯೋಗ ಮಾಡದಂತೆ ಅಗ್ರಹಿಸಿದ್ದು, ಉದ್ಯೋಗಿ ಈ ರೀತಿ ಮಾಡುತ್ತಿರುವುದು ಕಂಡುಬಂದಲ್ಲಿ ಉದ್ಯೋಗದಿಂದ (Employee) ವಜಾಮಾಡುವುದಾಗಿ ತಿಳಿಸಿ ಇಮೇಲ್ ಕಳುಹಿಸಿದೆ. ಇದಕ್ಕೂ ಮುನ್ನ ಫುಡ್ ಡೆಲಿವರಿ ಕಂಪೆನಿ ಸ್ವಿಗ್ಗಿ (Swiggy) ಕೂಡ ಬೇರೆ ಕಡೆ ಉದ್ಯೋಗ ಮಾಡಲು ತನ್ನ ಉದ್ಯೋಗಿಗಳನ್ನು ಅನುಮತಿಸುತ್ತಿರುವುದಾಗಿ ಆಹಾರ ವಿತರಣಾ ಕಂಪೆನಿ ಹೇಳಿಕೊಂಡಿದ್ದು, ನಿಯಮಗಳಿಗೆ ಅನುಸಾರವಾಗಿ ಹೊರಗಿನ ಪರ್ಯಾಯ ಉದ್ಯೋಗಗಳನ್ನು ಅವರು ಮಾಡಬಹುದು ಎಂದು ಒಪ್ಪಿಗೆ ನೀಡಿತ್ತು. ಈ ಎರಡೂ ಕಂಪೆನಿಗಳು ಉದ್ಯೋಗಿಗಳು ಬೇರೆ ಕಡೆ ಕೆಲಸ (Work) ಮಾಡುವುದರ ಬಗ್ಗೆ ಬೇರೆ ಬೇರೆ ನಿರ್ಧಾರಗಳನ್ನು ಪ್ರಕಟಿಸಿರುವುದು ನೈತಿಕ ಚರ್ಚೆಯನ್ನು ಹುಟ್ಟುಹಾಕಿದೆ.

ಎರಡೆರಡು ಉದ್ಯೋಗ ಮಾಡುವುದು ಎಷ್ಟು ಸರಿ?
ಮೂನ್‌ಲೈಟಿಂಗ್ ಎಂಬುದು ತಮ್ಮ ಕಂಪೆನಿಯಲ್ಲದೆ ಇತರೆಡೆಗಳಲ್ಲಿ ಉದ್ಯೋಗ ಮಾಡುವವರಿಗೆ ಬಳಸುವ ಪದವಾಗಿದೆ. ಸಾಂಕ್ರಾಮಿಕದ ಸಮಯದಲ್ಲಿ ಆರ್ಥಿಕ ಅಡಚಣೆಯಿಂದಾಗಿ ಹಲವಾರು ಉದ್ಯೋಗಗಳನ್ನು ನಿರ್ವಹಿಸುವ ಪರಿಸ್ಥಿತಿ ಬಂದೊದಗಿದ್ದು ಮೂನ್ ಲೈಟಿಂಗ್ ಆ ಸಮಯದಲ್ಲಿಯೇ ಹೆಚ್ಚು ವ್ಯಾಪಕತೆಯನ್ನು ತೆಗೆದುಕೊಂಡಿತು ಎಂಬುದು ಐಟಿ ವಲಯದಲ್ಲಿರುವ ಮಾತಾಗಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕೆಂಬುದು ಕಂಪನಿಗಳ ಅಭಿಪ್ರಾಯವಾಗಿದೆ.

ಫ್ರಿಲ್ಯಾನ್ಸಿಂಗ್ ಕೆಲಸದಿಂದ ಆದಾಯವೂ ಇದೆ ಕ್ರಿಯಾತ್ಮಕತೆಯೂ ಇದೆ
ಒಬ್ಬ ಉದ್ಯೋಗಿಯು ತನ್ನ ಕಂಪೆನಿಯಲ್ಲಿ ಎಂಟರಿಂದ ಒಂಭತ್ತು ಗಂಟೆಗಳವರೆಗೆ ದುಡಿದ ನಂತರ, ಕೆಲಸದ ಅವಧಿಯ ನಂತರ ಅವರು ಏನು ಮಾಡುತ್ತಾರೆ ಎಂಬುದನ್ನು ನಿರ್ಬಂಧಿಸುವ ಹಕ್ಕು ಕಂಪೆನಿಗಿಲ್ಲ ಎಂಬುದು ಹಲವರ ಮಾತಾಗಿದೆ.

ಇದನ್ನೂ ಓದಿ: Cash Withdrawal: ಬ್ಯಾಂಕ್‌ಗಳಲ್ಲಿ ಎಟಿಎಮ್ ವಿತ್​ಡ್ರಾ ಮಿತಿ ಎಷ್ಟಿದೆ? ಉಚಿತ ವಹಿವಾಟು ಮುಗಿದಿದ್ರೆ ಏನ್​ ಮಾಡ್ಬೇಕು ಅಂತ ನೋಡಿ

ಪ್ರಾಥಮಿಕವಾಗಿ ಡೇಟಾ ಗೌಪ್ಯತೆ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸಾಯಿ ಕಿರಣ್ ಒಬ್ಬ ಫ್ರಿಲ್ಯಾನ್ಸ್ ಜರ್ನಲಿಸ್ಟ್ ಆಗಿ ಸಿಂಗಪೂರ್ ಹಾಗೂ ಬೆಂಗಳೂರಿಗೆ ಓಡಾಡುತ್ತಿರುತ್ತಾರೆ. ಇಂಡಿಯಾ ಟುಡೇ, ದ ಡಿಪ್ಲೊಮ್ಯಾಟ್, ಜೆಂಗರ್ ನ್ಯೂಸ್ ಹಾಗೂ ಇತರ ಪತ್ರಿಕೆಗಳಿಗೆ ಫ್ರಿಲ್ಯಾನ್ಸರ್ ಆಗಿರುವ ಸಾಯಿ ಕಿರಣ್, ನಾನು ಮಾಡುತ್ತಿರುವ ಕೆಲಸ ನನಗಿಷ್ಟವಾದುದು, ಸುದ್ದಿ ಬರೆಯುವುದು ನನ್ನ ಮೆಚ್ಚಿನ ಕೆಲಸ, ಈ ಕುರಿತು ನನ್ನ ಕಂಪೆನಿಗೂ ಗೊತ್ತು. ನಾನು ನಿಯಮಿತವಾಗಿ ನನ್ನ ಕೆಲಸದ ಮಾಹಿತಿಗಳನ್ನು ಹಂಚಿಕೊಳ್ಳುತ್ತೇನೆ. ವಿಡಿಯೋ ಸ್ಟೋರಿ, ಸುದ್ದಿಗಳು, ಡಿಬೇಟ್‌ಗಳು ಹೀಗೆ ನಾನು ಮಾಡಿದ ಕೆಲಸಗಳನ್ನು ಕಂಪೆನಿಯೊಂದಿಗೆ ಹಂಚಿಕೊಳ್ಳುತ್ತೇನೆ ಎಂಬುದು ಸಾಯಿ ಮಾತಾಗಿದೆ.

ಸಮಯ ನಿರ್ವಹಣೆ ಅಗತ್ಯ
ಸಮಯ ನಿರ್ವಹಣೆಯ ವಿಷಯದಲ್ಲಿ ಪ್ರಾಥಮಿಕ ಉದ್ಯೋಗದಾತರಿಗೆ ಮಹತ್ವ ನೀಡಬೇಕು ಎಂದು ಹೇಳುವ ಸಾಯಿ, ನಮ್ಮ ಮೊದಲ ಕೆಲಸದಲ್ಲಿ ಯಾವುದೇ ತಪ್ಪಿಲ್ಲದಂತೆ ನಿರ್ವಹಣೆ ಮಾಡಬೇಕು, ಆಗ ನಮ್ಮನ್ನು ಯಾರೂ ಪ್ರಶ್ನಿಸುವುದಿಲ್ಲ ಎಂದು ಹೇಳಿದ್ದಾರೆ. ನನ್ನ ನಿಯಮಿತ ಉದ್ಯೋಗ ಸಮಯದಲ್ಲಿ ಫ್ರಿಲ್ಯಾನ್ಸಿಂಗ್ ಅನ್ನು ತುರುಕುವುದಿಲ್ಲ. ಫ್ರಿಲ್ಯಾನ್ಸಿಂಗ್ ಸಮಯದಲ್ಲಿ ಕಚೇರಿ ಕೆಲಸ ಮಾಡುವುದಿಲ್ಲ ಹೀಗೆ ಎರಡೂ ವೃತ್ತಿಗೂ ಅದರದ್ದೇ ಆದ ಸಮಯವಿದೆ, ಆ ಸಮಯದಲ್ಲಿ ಮಾತ್ರವೇ ನಾನು ಕೆಲಸಮಾಡುತ್ತೇನೆ ಎಂದು ಸಾಯಿ ತಿಳಿಸಿದ್ದಾರೆ.

ನನ್ನ ಮೆಚ್ಚಿನ ಕೆಲಸವನ್ನು ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಸಾಯಿ, ಫ್ರಿಲ್ಯಾನ್ಸಿಂಗ್ ನನಗೆ ಆದಾಯವನ್ನು ನೀಡುವುದರ ಜೊತೆಗೆ ನನ್ನ ಬುದ್ಧಿಮತ್ತೆಯನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ. ಇನ್ನು ಸಾಫ್ಟ್‌ವೇರ್ ಉದ್ಯೋಗಿಗಳು ತಮ್ಮ ಕೌಶಲ್ಯಗಳನ್ನು ಇನ್ನಷ್ಟು ಕುಶಾಗ್ರಗೊಳಿಸಲು ಅಂತೆಯೇ ಹೆಚ್ಚುವರಿ ಹಣ ಸಂಪಾದಿಸಲು ಹೆಚ್ಚುವರಿ ಸಾಫ್ಟ್‌ವೇರ್ ಉದ್ಯೋಗಗಳನ್ನು ಕಂಡುಕೊಳ್ಳುತ್ತಾರೆ.

ಒಂದು ಕಂಪನಿಯಲ್ಲಿ 24/7 ಕೆಲಸ ಮಾಡಲು ಸಾಧ್ಯವಿಲ್ಲ
ಉದ್ಯೋಗಿಯೂ ಎರಡೂ ಕಡೆ ಕೆಲಸ ಮಾಡುವುದು ಕಂಪೆನಿಯ ನಿಯಮಗಳಿಗೆ ವಿರುದ್ಧವಾಗಿದ್ದು ಆಫರ್ ಲೆಟರ್‌ನಲ್ಲಿಯೇ ಈ ಬಗ್ಗೆ ಸ್ಪಷ್ಟನೆ ನೀಡುತ್ತದೆ. ಐಟಿ ಉದ್ಯಮದಲ್ಲಿ ಉದ್ಯೋಗಿಯು ಬೇರೆಡೆ ಕೆಲಸ ಮಾಡಬಾರದು ಎಂಬ ಷರತ್ತು ವಿಧಿಸುತ್ತದೆ. ಈ ರೀತಿಯಾಗಿ ಅವರು ಕೆಲಸದ ಸಮಯವನ್ನು ನಿಯಂತ್ರಿಸುವುದು ಮಾತ್ರವಲ್ಲದೆ ಉದ್ಯೋಗಿಯ ವಿರಾಮ ಸಮಯವನ್ನು ಸಹ ನಿಯಂತ್ರಿಸುತ್ತಾರೆ.

ಇದನ್ನೂ ಓದಿ:  Loan Payment: ಸಾಲಗಾರ ಅಕಸ್ಮಾತ್ ಸಾವನ್ನಪ್ಪಿದರೆ ಆತನ ಸಾಲ ಯಾರು ಮರುಪಾವತಿಸಬೇಕು?

ಇಂದಿನ ಭಾರತ ಮಲ್ಟಿ ಟಾಸ್ಕಿಂಗ್ ಹಾಗೂ ಉದ್ಯೋಗಿಯ ಉತ್ಸಾಹಕ್ಕೆ ಪ್ರೋತ್ಸಾಹವನ್ನು ನೀಡುತ್ತದೆ ಎಂದು ತಿಳಿಸುವ ಸಾಯಿ ಕಿರಣ್, ಕೆಲವೊಂದು ಕಂಪೆನಿಗಳು ಉದ್ಯೋಗಿಯ ಹಿತವನ್ನು ಬಯಸುವುದಿಲ್ಲ ಬದಲಿಗೆ ಅವರಿಂದ ಬರುವ ಲಾಭವನ್ನು ಬಯಸುತ್ತಾರೆ ಎಂದು ಭಾವಿಸುವ ಉದ್ಯೋಗಿಗಳಿಗೆ ಈ ರೀತಿ ಸಲಹೆ ನೀಡುತ್ತಾರೆ.
Published by:Ashwini Prabhu
First published: