• Home
  • »
  • News
  • »
  • business
  • »
  • Business Opportunity: ವ್ಯವಹಾರದಲ್ಲಿನ ಸೋಲನ್ನು ಹೀಗೆ ಎದುರಿಸಿ, ಯೋಚನೆಯನ್ನು ಈ ರೀತಿ ಬದಲಾಯಿಸಿ ನೋಡಿ

Business Opportunity: ವ್ಯವಹಾರದಲ್ಲಿನ ಸೋಲನ್ನು ಹೀಗೆ ಎದುರಿಸಿ, ಯೋಚನೆಯನ್ನು ಈ ರೀತಿ ಬದಲಾಯಿಸಿ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Business Opportunity: ನಿಮ್ಮ ಕಲ್ಪನೆಯು ಯಶಸ್ಸನ್ನು ನೀಡುತ್ತದೆಯೇ ಇಲ್ಲವೇ ಅಥವಾ ವ್ಯಾಪಾರಕ್ಕೆ ಅವಕಾಶ ನೀಡಬಹುದೇ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿದೆ ಕೆಲವೊಂದು ವಿಧಾನಗಳು.

  • Share this:

ಕಲ್ಪನೆಗಳು ಹಾಗೂ ಅವಕಾಶಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿಚಾರಗಳು ಸಾಬೀತುಮಾಡದೇ ಇರುವ ಪರಿಕಲ್ಪನೆಗಳಾಗಿದ್ದರೆ ಅವಕಾಶಗಳು ಮೌಲ್ಯವನ್ನು ಒಳಗೊಂಡಿರುವ ರುಜುವಾತು ಪಡಿಸಿರುವ ಪರಿಕಲ್ಪನೆಗಳಾಗಿವೆ. ಇವೆರಡಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ ಎಂಬುದು ಅಧ್ಯಯನಕಾರರ ಮಾತಾಗಿದೆ. IGI ಗ್ಲೋಬಲ್ ನಡೆಸಿರುವ ಅಧ್ಯಯನದ (Study) ಪ್ರಕಾರ ಕೇವಲ 6% ಕಲ್ಪನೆಗಳು ವಾಣಿಜ್ಯ (Commerce) ಯಶಸ್ಸನ್ನು ಪಡೆಯುತ್ತವೆ. ಕಲ್ಪನೆಯನ್ನು ಅವಕಾಶವಾಗಿ ಪರಿವರ್ತಿಸುವುದು ಸುಲಭದ ಕೆಲಸವಲ್ಲ ಎಂಬುದು ಅಧ್ಯಯನಕಾರರ ಮಾತಾಗಿದ್ದು, ಇದಕ್ಕೆ ತಾಳ್ಮೆ, ಪರಿಶ್ರಮ, ಸಂಪನ್ಮೂಲಗಳು, ಶ್ರದ್ಧೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ತಿಳಿಸಿದ್ದಾರೆ.


ಕಲ್ಪನೆಯನ್ನು ಅವಕಾಶವನ್ನಾಗಿ ಪರಿವರ್ತಿಸುವುದು ಹೇಗೆ?:


ಕಲ್ಪನೆಯನ್ನು ಅವಕಾಶವನ್ನಾಗಿ ಪರಿವರ್ತಿಸಲು ಮುಖ್ಯವಾಗಿ ಬೇಕಾಗಿರುವುದು ಆತ್ಮವಿಶ್ವಾಸವಾಗಿದ್ದು ನಿಮ್ಮ ಮೇಲೆ ಸಂಪೂರ್ಣವಾಗಿ ನಂಬಿಕೆ ಇರಿಸುವುದು ಮುಖ್ಯವಾಗಿದೆ ಎಂದು ಹೇಳುತ್ತಾರೆ. ನಿಮ್ಮ ಕಲ್ಪನೆಯು ಯಶಸ್ಸನ್ನು ನೀಡುತ್ತದೆಯೇ ಇಲ್ಲವೇ ಅಥವಾ ವ್ಯಾಪಾರಕ್ಕೆ ಅವಕಾಶ ನೀಡಬಹುದೇ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿದೆ ಕೆಲವೊಂದು ವಿಧಾನಗಳು.


ನಿಮ್ಮ ವಿಚಾರಗಳು ಸಮಸ್ಯೆಯನ್ನು ಪರಿಹರಿಸುತ್ತವೆಯೇ?:


ನಿಮ್ಮ ಯಾವುದೇ ವಿಚಾರಗಳು ಅಥವಾ ಕಲ್ಪನೆಗಳು ಸಮಸ್ಯೆಯನ್ನು ಪರಿಹರಿಸುವ ಮುಖ್ಯ ದಾಳವಾಗಿರಬೇಕು ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದೆ. ಉದಾಹರಣೆಗೆ ಒಂದು ಹೇರ್ ಬ್ರಶ್ ಅನ್ನು ತಯಾರಿಸುವ ಯೋಜನೆಯಾಗಿರಬಹುದು ಇದನ್ನು ಸುರಕ್ಷಿತವಾಗಿರಿಸುವ ಬ್ಯಾಗ್‌ನಿಂದ ಹಿಡಿದು ಅದನ್ನು ಧೂಳು ಹಾಗೂ ಕೊಳೆಗಳಿಂದ ಮುಕ್ತವಾಗಿಡುವ ಯೋಜನೆಯತ್ತಲೂ ಯೋಚಿಸಬೇಕು. ಹೀಗೆ ಎಲ್ಲಾ ವಿಚಾರಗಳನ್ನು ಯೋಚಿಸಿ ಸಂಘಟಿತವಾಗಿ ವಿಚಾರ ನಡೆಸಿದಾಗ ಉತ್ಪನ್ನ ಕಲ್ಪನೆಯು ಮೌಲ್ಯವನ್ನು ಸೇರಿಸುತ್ತದೆ ಹಾಗೆಯೇ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಅಗತ್ಯವನ್ನು ಪೂರೈಸುತ್ತದೆ.


ನಿಮ್ಮ ಕಲ್ಪನೆಗೆ ಮಾರುಕಟ್ಟೆಯಲ್ಲಿ ಅಂತರವಿದೆಯೇ?:


ಉತ್ಪನ್ನವನ್ನು ತಯಾರಿಸುವಾಗ ಅದರ ವಿಶಿಷ್ಟತೆ, ಬಾಳಿಕೆ, ಸೇರಿಸಿದ ಬಣ್ಣಗಳು ಹಾಗೂ ಪ್ರಿಂಟ್‌ಗಳು ಗ್ರಾಹಕರಿಗೆ ಉತ್ತಮ ಹೂಡಿಕೆ ಎಂದೆನಿಸಿದೆ. ಆಲೋಚನೆಗಳು ಗ್ರಾಹಕರ ಆಸಕ್ತಿಗೆ ಅನುಗುಣವಾಗಿದೆಯೇ ಎಂಬುದನ್ನು ಕಂಡುಕೊಳ್ಳಲು ಸಮೀಕ್ಷೆಗಳನ್ನು ನಡೆಸಬೇಕು. ಗ್ರಾಹಕರ ಆಯ್ಕೆ ಹಾಗೂ ಅಭಿರುಚಿಗಳಿಗೆ ತಕ್ಕಂತೆ ನಿಮ್ಮ ವಿಚಾರಗಳಿರಬೇಕು ಎಂಬುದಾಗಿ ಅಧ್ಯಯನಕಾರರು ತಿಳಿಸಿದ್ದಾರೆ.


ಇದನ್ನೂ ಓದಿ: Investment Tips: ಮೊದಲ ಬಾರಿಗೆ ಹಣವನ್ನು ಹೂಡಿಕೆ ಮಾಡೋರು ಈ ಗುಟ್ಟುಗಳನ್ನು ತಿಳಿದಿರಲೇಬೇಕು


ನಿಮ್ಮ ವಿಚಾರಗಳಿಗೆ ಜನರು ಪ್ರಾಮುಖ್ಯತೆ ನೀಡುತ್ತಾರೆಯೇ?:


ಸರಳವಾಗಿ ಹೇಳಬೇಕೆಂದರೆ, ಗ್ರಾಹಕರಿಲ್ಲದೆ ವ್ಯಾಪಾರಕ್ಕೆ ಅವಕಾಶವಿರುವುದಿಲ್ಲ. ನಿಮ್ಮ ಕಲ್ಪನೆಗೆ ಜನರು ಪಾವತಿಸಲು ಸಿದ್ಧರೇ ಎಂಬುದನ್ನು ನೀವು ಮನಗಾಣಬೇಕು. ಅದಕ್ಕಿರುವ ಬೇಡಿಕೆಯನ್ನು ನಿರ್ಧರಿಸಬೇಕು. ನಿಮ್ಮ ಉತ್ಪನ್ನಕ್ಕಾಗಿ ಜನರು ಎಷ್ಟು ಮಹತ್ವ ನೀಡಲು ಸಿದ್ಧರಿದ್ದಾರೆ ಎಂಬುದನ್ನು ನಿರ್ಧರಿಸುವುದೂ ಸಹ ಮುಖ್ಯವಾಗಿದೆ.


ಸ್ಪರ್ಧಿಯನ್ನು ಅರಿತುಕೊಳ್ಳಿ:


ಸ್ಪರ್ಧಿಗಳ ಬಗ್ಗೆ ಆಲೋಚಿಸುವಾಗ ಅವರನ್ನು ಕುರಿತು ಅವರ ಉತ್ಪನ್ನಗಳನ್ನು ಕುರಿತು ಮಾಹಿತಿಗಳನ್ನು ಸಂಗ್ರಹಿಸುವುದು ಮುಖ್ಯವಾಗಿದೆ. ಸ್ಪರ್ಧಗಳಿಗಿಂತ ನಿಮ್ಮ ಉತ್ಪನ್ನವು ಅನನ್ಯವಾಗಿದೆ ಮತ್ತು ಪ್ರತಿಸ್ಪರ್ಧಿ ಉತ್ಪನ್ನಗಳಿಗಿಂತ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಇದನ್ನು ಅರಿತುಕೊಳ್ಳುವುದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ತಲುಪಲು ಸಾಧ್ಯವಾಗುವಷ್ಟು ಹೆಚ್ಚಿನ ಗ್ರಾಹಕರೊಂದಿಗೆ ಉತ್ಪನ್ನ ಕಲ್ಪನೆಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.


ವ್ಯವಹಾರದಲ್ಲಿ ವಿಫಲತೆಯನ್ನು ಎದುರಿಸುವುದು ಹೇಗೆ?:


ವ್ಯವಹಾರದಲ್ಲಿ ಸೋಲು ಗೆಲುವು, ಯಶಸ್ಸು ವಿಫಲತೆ ಸಾಮಾನ್ಯವಾಗಿರುತ್ತದೆ ಹೀಗಿರುವ ಸಮಯದಲ್ಲಿ ನೀವು ಒಬ್ಬಂಟಿಯಲ್ಲ ಎಂಬುದನ್ನು ಅರಿತುಕೊಳ್ಳಿ. ಎಲ್ಲಿಯೂ ನಿಲ್ಲಬೇಡಿ ಹಾಗೂ ಪರೀಕ್ಷಿಸುವುದನ್ನು ಮುಂದುವರಿಸಿ. ಉತ್ಪನ್ನದ ಬಗ್ಗೆ ಸಂಶೋಧನೆಯಲ್ಲಿ ಜಾಗರೂಕತೆ ಪಾಲಿಸಿ ಹಾಗೂ ತಾರ್ಕಿಕವಾಗಿರಿ. ತಂಡದಲ್ಲಿರುವ ಪ್ರತಿಯೊಬ್ಬರ ಅಭಿಪ್ರಾಯವನ್ನು ಕೇಳಿ ಒಟ್ಟಾಗಿ ನಿರ್ಧರಿಸಿ. ನಿಯಮಿತವಾಗಿ ಸ್ವಯಂ-ಆರೈಕೆಯನ್ನು ಅಭ್ಯಸಿಸಿ. ನೀವು ಒಬ್ಬ ಮಾರ್ಗದರ್ಶಕ ಎಂಬುದನ್ನು ಮರೆಯಬೇಡಿ. ನಿಮಗೆ ಅಡೆತಡೆಗಳಿದ್ದರೂ ಅದನ್ನು ಎದುರಿಸಿ. ಯೋಜನೆಗಳನ್ನು ಮುಂದುವರಿಸಿ ಹಾಗೂ ಅದನ್ನು ಯಶಸ್ಸಿನತ್ತ ತಿರುಗಿಸಿಕೊಳ್ಳಿ. ನಿಮ್ಮ ಈ ಪ್ರಯಾಣದಲ್ಲಿ ನೀವೇ ನಿಮಗೆ ಸಂಗಾತಿ, ಬೆಂಬಲ ಹಾಗೂ ಸಹಕಾರ ನೀಡುವವರು ಎಂಬುದನ್ನು ಮರೆಯದಿರಿ.


ಉದ್ಯಮದಲ್ಲಿ ಸಾಕಷ್ಟು ಸಮಸ್ಯೆ ಇದ್ದರೂ ಸಾಧಿಸಬೇಕೆಂಬ ಹುಮ್ಮಸಿದ್ದರೆ ಅದನ್ನು ಸಾಧಿಸಬಹುದು ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದೆ. ನಿಮ್ಮ ಉತ್ಪನ್ನದ ಉದ್ದೇಶವು ನಿಮ್ಮ ಗುರಿಯನ್ನು ಸಾಧಿಸುವಂತಿರಲಿ ಎಂಬುದು ಅಧ್ಯಯನಕಾರರ ಸಲಹೆಯಾಗಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನವನ್ನು ನಿರ್ಮಿಸಿ ಎಂಬುದು ಅಧ್ಯಯನಕಾರರು ನೀಡುವ ಹೇಳಿಕೆಯಾಗಿದೆ.

Published by:shrikrishna bhat
First published: