• Home
  • »
  • News
  • »
  • business
  • »
  • Cartoon Network: ಕಾರ್ಟೂನ್ ನೆಟ್‌ವರ್ಕ್ ಸ್ಟುಡಿಯೋ ಮುಚ್ಚೋದು ನಿಜಾನಾ? ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ನೆಟ್ಟಿಗರು

Cartoon Network: ಕಾರ್ಟೂನ್ ನೆಟ್‌ವರ್ಕ್ ಸ್ಟುಡಿಯೋ ಮುಚ್ಚೋದು ನಿಜಾನಾ? ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ನೆಟ್ಟಿಗರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

90 ರ ದಶಕದ ಮಕ್ಕಳಲ್ಲಿ ಕಾರ್ಟೂನ್ ನೆಟ್‌ವರ್ಕ್ ಎಂಬುದು ವಿಸ್ಮಯಕಾರಿಯಾದ ಲೋಕವಾಗಿತ್ತು. ಚಾನಲ್‌ನಲ್ಲಿ ಮೂಡಿಬರುತ್ತಿದ್ದ ದೃಶ್ಯವೈಭವನ, ಕಥಾನಕವನ್ನು ರಸವತ್ತಾಗಿ ಬಣ್ಣಿಸುತ್ತಿದ್ದ ಶೈಲಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ ಎಂಬುದೇ ಕಾರ್ಟೂನ್ ಅಭಿಮಾನಿಗಳ ಮಾತು. ಆದರೆ ಕಾರ್ಟೂನ್ ನೆಟ್‌ವರ್ಕ್ ಮುಚ್ಚಲಿದೆ ಎಂಬ ಸುದ್ದಿ ಇದೀಗ ಗೊಂದಲ ಹಾಗೂ ಬೇಸರವನ್ನು ತರಿಸಿದೆ.

ಮುಂದೆ ಓದಿ ...
  • Share this:

ಕಾರ್ಟೂನ್ ನೆಟ್‌ವರ್ಕ್ (Cartoon Network) ಪ್ರತಿಯೊಬ್ಬರ ಬಾಲ್ಯದ ಭಾಗವಾಗಿಯೇ ಪರಿಗಣಿತವಾಗಿದೆ. ರಸವತ್ತಾಗಿ ಚಿತ್ರಕಥೆಗಳನ್ನು ಬಣ್ಣಿಸುವ ಈ ಚಾನಲ್‌ನಲ್ಲಿ (Channel) ಮೂಡಿಬರುತ್ತಿದ್ದ ಕಥೆಗಳು ಅದೆಷ್ಟೋ. 90 ರ ದಶಕದ ಮಕ್ಕಳಲ್ಲಿ ಕಾರ್ಟೂನ್ ನೆಟ್‌ವರ್ಕ್ ಎಂಬುದು ವಿಸ್ಮಯಕಾರಿಯಾದ ಲೋಕವಾಗಿತ್ತು. ಚಾನಲ್‌ನಲ್ಲಿ ಮೂಡಿಬರುತ್ತಿದ್ದ ದೃಶ್ಯವೈಭವನ, ಕಥಾನಕವನ್ನು ರಸವತ್ತಾಗಿ ಬಣ್ಣಿಸುತ್ತಿದ್ದ ಶೈಲಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ ಎಂಬುದೇ ಕಾರ್ಟೂನ್ ಅಭಿಮಾನಿಗಳ (Cartoon Fans) ಮಾತು. ಆದರೆ ಕಾರ್ಟೂನ್ ನೆಟ್‌ವರ್ಕ್ ಮುಚ್ಚಲಿದೆ ಎಂಬ ಸುದ್ದಿ ಇದೀಗ ಗೊಂದಲ ಹಾಗೂ ಬೇಸರವನ್ನು ತರಿಸಿದೆ. ಕಾರ್ಟೂನ್ ನೆಟ್‌ವರ್ಕ್ ಸ್ಟುಡಿಯೋ ಮುಚ್ಚಲಿದೆ ಎಂಬ ವರದಿಗಳನ್ನು ತಳ್ಳಿಹಾಕಿರುವ ವಾರ್ನರ್ ಬ್ರದರ್ಸ್ (Warner Bros) ಈ ಹೇಳಿಕೆ ನಿಖರವಲ್ಲ ಎಂದು ಹೇಳಿದ್ದಾರೆ.


ಉದ್ಯೋಗಿಗಳನ್ನು ಸಂಸ್ಥೆಯಿಂದ ವಜಾಗೊಳಿಸಿದ್ದರೂ ಕಾರ್ಟೂನ್ ನೆಟ್‌ವರ್ಕ್ ಲಭ್ಯವಿರುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.


ಟ್ವಿಟ್ಟರ್ ಬಳಕೆದಾರರು "RIP ಕಾರ್ಟೂನ್ ನೆಟ್‌ವರ್ಕ್" ಎಂದು ಟ್ವೀಟ್ ಮಾಡಿದ್ದು, ಇದು ವೀಕ್ಷಕರಲ್ಲಿ ಭೀತಿ ಮತ್ತು ಗೊಂದಲಕ್ಕೆ ಕಾರಣವಾಯಿತು. ಆದರೆ, ಕಾರ್ಟೂನ್ ನೆಟ್‌ವರ್ಕ್ ಮೊದಲಿನಂತೆಯೇ ಕಾರ್ಯನಿರ್ವಹಿಸಲಿದೆ ಎಂದು ಸಿಎನ್ ಸ್ಟುಡಿಯೋಸ್ ಅಧ್ಯಕ್ಷರು ತಿಳಿಸಿದ್ದಾರೆ.


ರೂಮರ್ ಪ್ರಾರಂಭವಾದುದು ಎಲ್ಲಿಂದ?
ವಾರ್ನರ್ ಬ್ರದರ್ಸ್ ಕಳುಹಿಸಿದ ಇತ್ತೀಚಿನ ಮೆಮೊದಲ್ಲಿ, ಕಂಪನಿಯು ಅನಿಮೇಷನ್, ಸ್ಕ್ರಿಪ್ಟೆಡ್ ಮತ್ತು ಅನ್‌ಸ್ಕ್ರಿಪ್ಟ್ ವಿಭಾಗಗಳು ಸೇರಿದಂತೆ ವಿವಿಧ ಡೊಮೇನ್‌ಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 82 ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಹೇಳಿದೆ. ಕಾರ್ಟೂನ್ ನೆಟ್‌ವರ್ಕ್ ಸ್ಟುಡಿಯೋವನ್ನು ವಿಲೀನಗೊಳಿಸಲು ಕಂಪನಿಯು ಘೋಷಿಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ ಮತ್ತು ವಾರ್ನರ್ ಬ್ರದರ್ಸ್ ಬ್ರ್ಯಾಂಡ್ ಹೆಸರಿನಲ್ಲಿ ಒಂದೇ ಘಟಕವಾಗಿ ವಾರ್ನರ್ ಬ್ರದರ್ಸ್ ಚಾನೆಲ್ ಕಾರ್ಯನಿರ್ವಹಿಸುತ್ತಿದೆ.


ಮಾಧ್ಯಮ ವರದಿಗಳ ಪ್ರಕಾರ, ವಾರ್ನರ್ ಬ್ರದರ್ಸ್ ಟೆಲಿವಿಷನ್ ಹೊಸ ಪ್ರತಿಭೆಗಳನ್ನು ಹುಡುಕುತ್ತಿದೆ ಮತ್ತು ಅದರ ವ್ಯವಹಾರ ಮಾದರಿಯನ್ನು ಪುನರ್ ರಚಿಸಲು ಆಶಿಸುತ್ತಿದೆ.


ಕುಸಿದ ಕಾರ್ಟೂನ್ ನೆಟ್‌ವರ್ಕ್ ರೇಟಿಂಗ್‌
ಕಾರ್ಟೂನ್ ನೆಟ್‌ವರ್ಕ್ ಸ್ಟುಡಿಯೋಗಳು ಮಾಡಿದ ಇತ್ತೀಚಿನ ಕೆಲವು ಅನಿಮೇಟೆಡ್ ಪ್ರದರ್ಶನಗಳು ವೀಕ್ಷಕರಿಗೆ ಕಡಿಮೆ ಲಭ್ಯತೆಯನ್ನು ಒದಗಿಸಿವೆ. ಹೆಚ್ಚುವರಿಯಾಗಿ, ಕಾರ್ಟೂನ್ ನೆಟ್‌ವರ್ಕ್ ರೇಟಿಂಗ್‌ಗಳು ಸ್ವಲ್ಪ ಸಮಯದಿಂದ ಕುಸಿಯುತ್ತಿವೆ; ನೀಲ್ಸನ್ ಮಾಹಿತಿಯ ಪ್ರಕಾರ, 2021 ರಲ್ಲಿ ವೀಕ್ಷಕರ ಸಂಖ್ಯೆ 26% ರಷ್ಟು ಕಡಿಮೆಯಾಗಿದೆ.


ಇದನ್ನೂ ಓದಿ: Business Idea: ಬೈಕ್​ನಲ್ಲೇ ಇಡ್ಲಿ ವ್ಯಾಪಾರ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪದವೀಧರನ ಕಥೆ

ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ನೆಟ್ಟಿಗರು
ಕಾರ್ಟೂನ್ ನೆಟ್‌ವರ್ಕ್ ಸ್ಟುಡಿಯೋಸ್ ಮುಚ್ಚಲಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆಯೇ ಹಲವಾರು ನೆಟ್ಟಿಗರು ಭಾವನಾತ್ಮಕ ಮೀಮ್‌ಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ 30 ವರ್ಷಗಳ ಕಾಲ ಮೀಡಿಯಾ ಜಗತ್ತನ್ನು ಆಳಿದ ಕಾರ್ಟೂನ್ ನೆಟ್‌ವರ್ಕ್ ಮುಚ್ಚುತ್ತಿದೆ ಹಾಗೂ ವಾರ್ನರ್ ಬ್ರಸರ್ಸ್‌ನೊಂದಿಗೆ ವಿಲೀನಗೊಳ್ಳುತ್ತಿದೆ ಎಂದು ರ‍್ಯಾಪ್ ಟಿವಿ ತಿಳಿಸಿದೆ. ಇನ್ನು ಕೆಲವರು ವಿದಾಯ ಕಾರ್ಟೂನ್ ನೆಟ್‌ವರ್ಕ್‌ಗೆ ಎಂದು ಭಾವನಾತ್ಮಕ ವಿದಾಯವನ್ನು ಪೋಸ್ಟ್ ಮಾಡಿದ್ದಾರೆ.




ಇನ್ನು ಕೆಲವರು ಕಾರ್ಟೂನ್ ನೆಟ್‌ವರ್ಕ್ (1992-2022) ಎಂಬುದಾಗಿ ದಿನಾಂಕವನ್ನು ಪ್ರಕಟಿಸಿದ್ದು ವಿದಾಯ ಎಂದು ಕೋರಿದ್ದಾರೆ. ಸಣ್ಣವರಿಂದ ಹಿಡಿದು ದೊಡ್ಡವರವರೆಗೆ ಮನರಂಜನೆಯನ್ನು ನೀಡಿದ್ದ ಕಾರ್ಟೂನ್ ನೆಟ್‌ವರ್ಕ್‌ಗೆ ವಿದಾಯ ಹಾಗೂ ನಮ್ಮ ಬಾಲ್ಯವನ್ನು ಹೆಚ್ಚು ರಂಜನೀಯಗೊಳಿಸಿದ ಕಾರ್ಟೂನ್ ನೆಟ್‌ವರ್ಕ್‌ಗೆ ಧನ್ಯವಾದಗಳು ಎಂದು ಬಹಳಷ್ಟು ಟ್ವಿಟ್ಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ:  Indian IT Companies: ಭಾರತೀಯ ಐಟಿ ಕಂಪನಿಗಳಿಗೆ ಕಿರಿಕಿರಿಯಾಗಿರುವ ಕನ್ಸಲ್ಟಿಂಗ್ ಸಂಸ್ಥೆಗಳು, ವರದಿ ಏನು ಹೇಳ್ತಿದೆ?

ಅಬ್ರಮ್ ಸ್ಕ್ಯಾರಿ ಎಂಬ ಟ್ವಿಟರ್ ಬಳಕೆದಾರರು ಕಾರ್ಟೂನ್ ನೆಟ್‌ವರ್ಕ್ ನಿನಗೆ ವಿದಾಯ. ನೀನು ನಿಜಕ್ಕೂ ಮನರಂಜನಾತ್ಮಕ ಚಾನಲ್ ಹಾಗೂ ನೀನೆಂದೂ ನಿನ್ನನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದೇ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಹೀಗೆ ಬಾಲ್ಯದ ಕಾಲವನ್ನು ರಂಜನೀಯಗೊಳಿಸಿದ ಕಾರ್ಟೂನ್ ನೆಟ್‌ವರ್ಕ್ ಮುಚ್ಚುತ್ತಿದೆ ಎಂಬ ಸುದ್ದಿ ಪ್ರತಿಯೊಬ್ಬರನ್ನು ದಂಗುಬಡಿಸಿದ್ದಂತೂ ಸುಳ್ಳಲ್ಲ. ವಾರ್ನರ್ ಬ್ರದರ್ಸ್ ಹೇಳಿಕೆಯಂತೆ ಕಂಪನಿ ವಿಲೀನಗೊಂಡಿದ್ದರೂ ಈ ಹಿಂದೆಯಂತೆಯೇ ಕಾರ್ಯನಿರ್ವಹಿಸಲಿದೆ ಎಂಬುದಾಗಿ ಭರವಸೆಯನ್ನು ನೀಡಿದ್ದಾರೆ.

Published by:Ashwini Prabhu
First published: