Share Market| ಶೇ300ರಷ್ಟು ಏರಿಕೆಯಾದ IRCTC ಷೇರು ಬೆಲೆ: 1 ಲಕ್ಷ ಕೋಟಿ ದಾಖಲಿಸಿದ ಮಾರುಕಟ್ಟೆ ಬಂಡವಾಳ!

Indian Railways Catering Tourism Corporation ltd; ಸರಕಾರಿ ಸ್ವಾಮ್ಯದ ಪ್ರವಾಸೋದ್ಯಮ ಸೇವಾ ಕಂಪನಿಯು ಕಳೆದ 9 ತಿಂಗಳುಗಳಲ್ಲಿ 30,000 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೆಚ್ಚಿಸಿಕೊಂಡಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:

ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ ಲಿಮಿಟೆಡ್ (indian railways catering tourism corporation ltd) ಮಂಗಳವಾರ 1 ಲಕ್ಷ ಕೋಟಿ ಮೌಲ್ಯದ ಮಾರುಕಟ್ಟೆ ಸಮೂಹಕ್ಕೆ ಸೇರಿಕೊಂಡಿದೆ. IRCTC ಷೇರು ಅಕ್ಟೋಬರ್ 19ರಂದು (ಇಂದು) 6,375.45 ರೂ. ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ದಾಖಲೆಗಳ ಪ್ರಕಾರ ಇದೇ ಮೊದಲ ಬಾರಿಗೆ IRCTC ಷೇರು 6,000 ರೂ. ದಾಟಿದೆ. 1142 ಗಂಟೆಗಳಲ್ಲಿ IRCTC ಷೇರು BSEನಲ್ಲಿ ತನ್ನ ಹಿಂದಿನ ಮುಕ್ತಾಯಕ್ಕಿಂತ 6.31%ಕ್ಕಿಂತ ಹೆಚ್ಚಾಗಿದ್ದು 6,248.00 ರೂ. ಗೆ ವ್ಯಾಪಾರ ನಡೆಸುತ್ತಿದೆ. NSEನಲ್ಲಿ IRCTC ಷೇರು, 6.53% ಏರಿಕೆ ಕಂಡು, 6,261.35 ರೂ. ಗೆ ತಲುಪಿದೆ. BSEಯಲ್ಲಿ ಕಂಡುಬಂದಿರುವ ಅಂಕಿ ಅಂಶಗಳ ಪ್ರಕಾರ IRCTCಯ ಮಾರುಕಟ್ಟೆ ಬಂಡವಾಳವು 1,00,285.60 ಕೋಟಿಯಷ್ಟಿದೆ.


ಸರಕಾರಿ ಸ್ವಾಮ್ಯದ ಪ್ರವಾಸೋದ್ಯಮ ಸೇವಾ ಕಂಪನಿಯು ಕಳೆದ 9 ತಿಂಗಳುಗಳಲ್ಲಿ 30,000 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೆಚ್ಚಿಸಿಕೊಂಡಿದೆ. ಈ ಹಿಂದೆ PSU ಸ್ಟಾಕ್‌ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಲ್ ಇಂಡಿಯಾ, NMDC ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್, ಪವರ್ ಗ್ರಿಡ್ ಕಾರ್ಪೋರೇಶನ್‌ ಲಿಮಿಟೆಡ್‌, ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಹಾಗೂ ಎಸ್‌ಬಿಐ ಕಾರ್ಡ್‌ಗಳು 1 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಸಾಧಿಸಿದ್ದವು.


IRCTCಯನ್ನು ಅಕ್ಟೋಬರ್ 14, 2019 ರಂದು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಯಿತು ಹಾಗೂ ಅದರ ಇಶ್ಯೂ ಬೆಲೆಯು ಪ್ರತೀ ಷೇರಿಗೆ 320 ರೂ. ಆಗಿತ್ತು. ಅಲ್ಲಿಂದೀಚೆಗೆ, IRCTC ಷೇರು 1,737% ಅಥವಾ 18 ಪಟ್ಟು ಏರಿಕೆಯಾಗಿದೆ. IRCTC ಷೇರು ಇಲ್ಲಿಯವರೆಗೆ 300%ಕ್ಕಿಂತ ಹೆಚ್ಚಾಗಿದೆ. PSU ಸ್ಟಾಕ್‌ನ ನಿರಂತರ ಚೇತರಿಕೆಯ ಹಿಂದೆ ಒಂದಕ್ಕಿಂತ ಹೆಚ್ಚಿನ ಅಂಶಗಳನ್ನು ವಿಶ್ಲೇಷಕರು ಸೂಚಿಸಿದ್ದಾರೆ. ವ್ಯಾಕ್ಸಿನೇಶನ್ ಪ್ರಕ್ರಿಯೆಯು ವೇಗ ಪಡೆದುಕೊಳ್ಳುತ್ತಿದೆ.


ಜೊತೆಗೆ ಕೋವಿಡ್-19 ಕೇಸ್‌ಗಳು ನಿಯಂತ್ರಣಕ್ಕೆ ಬರುತ್ತಿದ್ದು ಆರ್ಥಿಕತೆಯು ಪುನಃ ಚೇತರಿಕೆಯ ಹಾದಿ ಕಂಡುಕೊಳ್ಳುತ್ತಿದೆ. ಹಬ್ಬದ ಋತುಮಾನಕ್ಕನುಗುಣವಾಗಿ IRCTC ಕೂಡ ವಿಶೇಷ ರೈಲುಗಳನ್ನು ಘೋಷಿಸಲು ಆರಂಭಿಸಿವೆ. ಮಾರುಕಟ್ಟೆಯಲ್ಲಿರುವ ಧನಾತ್ಮಕ ಅಂಶಗಳು ಹಾಗೂ ಹಬ್ಬದ ಮೆರುಗಿನಿಂದ IRCTC ಷೇರು ಅಕ್ಟೋಬರ್ 19ರಂದು ಚೇತರಿಸಿಕೊಳ್ಳಲು ಕಾರಣವಾಗಿವೆ.


ಇದನ್ನೂ ಓದಿ: Explained: Crypto ಸ್ವತ್ತುಗಳ ಮೇಲೆ 18-20% ಬಡ್ಡಿ ಆದಾಯ ಗಳಿಸುವುದು ಹೇಗೆ ವಿವರ ಇಲ್ಲಿದೆ

ಕಂಪನಿಯು ಷೇರುಗಳನ್ನು ವಿಭಜಿಸಲು ನಿರ್ಧರಿಸಿದ ನಂತರ IRCTCಯ ಷೇರು ದ್ವಿಗುಣಗೊಳ್ಳುತ್ತಿದೆ. ಆಗಸ್ಟ್ 12ರಂದು ಇ-ಟಿಕೆಟಿಂಗ್ ಹಾಗೂ ಕ್ಯಾಟರಿಂಗ್ ವಿಭಾಗವು 10 ರೂ. ಮುಖಬೆಲೆಯ ಈಕ್ವಿಟಿ ಷೇರನ್ನು 2 ರೂ. ಮುಖಬೆಲೆಯ ಐದು ಷೇರುಗಳಾಗಿ ವಿಭಜಿಸಿತು. ಸ್ಟಾಕ್ ವಿಭಜನೆಯಿಂದ ಸಣ್ಣ ಹೂಡಿಕೆದಾರರಿಗೆ ಷೇರು ಹೆಚ್ಚು ಕೈಗೆಟಕುತ್ತದೆ ಹಾಗೂ ದ್ರವ್ಯರಾಶಿಯನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ: Indian Currency: ನೋಟುಗಳು ಹೇಗೆ, ಎಲ್ಲಿ ತಯಾರಾಗ್ತವೆ? ದುಡ್ಡು ರೆಡಿಯಾಗೋ ರೀತಿಯೇ ರೋಚಕ!

ಷೇರು ಬಂಡವಾಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವಾದರೂ, ಷೇರುಗಳ ಸಂಖ್ಯೆ 5 ಪಟ್ಟು ಹೆಚ್ಚಾಗುತ್ತದೆ. ಸ್ಟಾಕ್ ವಿಭಜನೆಯಿಂದಾಗಿ ಮಾರುಕಟ್ಟೆಯಲ್ಲಿನ ದ್ರವ್ಯತೆ ಹೆಚ್ಚಾಗಿದ್ದು ಷೇರುದಾರರಿಗೆ ಬೆಂಬಲ ಒದಗಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 24.60 ಕೋಟಿ ರೂ. ನಷ್ಟಕ್ಕೆ ಹೋಲಿಸಿದರೆ ಕಂಪನಿಯು ಜೂನ್ ಅಂತ್ಯದ ತ್ರೈಮಾಸಿಕದಲ್ಲಿ 82.52 ಕೋಟಿ ರೂ. ಲಾಭವನ್ನು ವರದಿ ಮಾಡಿದೆ.

Published by:MAshok Kumar
First published: