ಪ್ರೇಮಿಗಳ ದಿನ (Valentine Day) ಹತ್ತಿರದಲ್ಲಿದೆ. ಈ ಸಮಯದಲ್ಲಿ ದಂಪತಿಗಳು ವಿಶೇಷ ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಸರ್ಪ್ರೈಸ್ ಕೊಡಲು ಗಂಡ-ಹೆಂಡತಿ, ಲವ ಬರ್ಡ್ಸ್ಗಳು ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಎಲ್ಲಾ ವ್ಯಾಲೆಂಟೈನ್ ಡೇ ಕೂಡ ಸ್ಪೆಷಲ್ ಆಗಿರಬೇಕು ಎಂದು ಕಪಲ್ಗಳು ಅಂದುಕೊಳ್ಳುತ್ತಾರೆ. ಕೆಲವರು ತಮ್ಮ ಸಂಗಾತಿಯನ್ನು ಅಚ್ಚರಿಗೊಳಿಸಲು ಇಷ್ಟಪಡುತ್ತಾರೆ. ನೀವು ಸಹ ಇದೇ ರೀತಿಯ ಯೋಜನೆಯನ್ನು ಹೊಂದಿದ್ದರೆ, IRCTCಪ್ರವಾಸ ಪ್ಯಾಕೇಜ್ ನಿಮಗೆ ಉತ್ತಮವಾಗಿದೆ. ನೀವು ಪ್ರೇಮಿಗಳ ದಿನದಂದು ವಿದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿದ್ದರೆ, ನೀವು ಕಡಿಮೆ ಹಣದಲ್ಲಿ ಈ ಪ್ರವಾಸವನ್ನು ಮಾಡಬಹುದು.
IRCTC ಯ ವಿಶೇಷ ಪ್ಯಾಕೇಜ್ಗಳು ಪ್ರಸ್ತುತ ಲಭ್ಯವಿದೆ. ಈ ಪ್ಯಾಕೇಜ್ ಅಡಿಯಲ್ಲಿ ನೀವು ಬ್ಯಾಂಕಾಕ್ ಮತ್ತು ಪಟ್ಟಾಯಕ್ಕೆ ಭೇಟಿ ನೀಡಬಹುದು. ಭಾರತೀಯ ರೈಲ್ವೆ ಪ್ರವಾಸೋದ್ಯಮ ನಿಗಮವು 11 ಫೆಬ್ರವರಿ 2023 ರಿಂದ ಈ ಪ್ಯಾಕೇಜ್ ಅನ್ನು ಪ್ರಾರಂಭಿಸಿದೆ. ನೀವು ಪ್ರೇಮಿಗಳ ದಿನವನ್ನು ಸ್ಪೆಷಲ್ ಆಗಿ ಆಚರಿಸಲು ಇಷ್ಟಪಟ್ಟರೇ ಇದನ್ನು ನೀವು ಬುಕ್ ಮಾಡಬಹುದು.
5 ರಾತ್ರಿ 6 ಹಗಲಿನ ಪ್ಯಾಕೇಜ್!
IRCTC ನೀಡುವ ಈ ಪ್ಯಾಕೇಜ್ 5 ರಾತ್ರಿಗಳು ಮತ್ತು 6 ಹಗಲುಗಳಾಗಿರುತ್ತದೆ. ಈ ಪ್ಯಾಕೇಜ್ ಅಡಿಯಲ್ಲಿ ನೀವು ಬ್ಯಾಂಕಾಕ್, ಪಟ್ಟಾಯ ಮತ್ತು ಥೈಲ್ಯಾಂಡ್ಗೆ ಭೇಟಿ ನೀಡಬಹುದು. ಈ ಪ್ಯಾಕೇಜ್ನಲ್ಲಿ ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೋಗಬಹುದು. ನೀವು ಬ್ಯಾಂಕಾಕ್ನ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡಬಹುದು. ನೀವು ಬೀಚ್ ಅನ್ನು ಸಹ ಆನಂದಿಸಬಹುದು.
ಫೆಬ್ರವರಿ 11 ರಿಂದ ಪ್ರಯಾಣ ಆರಂಭ!
ಈ ಪ್ಯಾಕೇಜ್ ಅಡಿಯಲ್ಲಿ IRCTC ನಿಮಗೆ ಬೆಂಗಳೂರಿನಿಂದ ಥೈಲ್ಯಾಂಡ್ ವಿಮಾನ ಟಿಕೆಟ್ಗಳನ್ನು ಬುಕ್ ಮಾಡುತ್ತದೆ. ಇಲ್ಲಿಂದ ನಿಮ್ಮನ್ನು ವಿವಿಧ ಸ್ಥಳಗಳಿಗೆ ದೃಶ್ಯವೀಕ್ಷಣೆಗೆ ಕರೆದೊಯ್ಯಲಾಗುತ್ತದೆ. ಫೆಬ್ರವರಿ 11 ರಿಂದ ಈ ಪ್ರಯಾಣ ಆರಂಭವಾಗಲಿದೆ. ಎಕಾನಮಿ ಕ್ಲಾಸ್ನಲ್ಲಿ ಟಿಕೆಟ್ಗಳನ್ನು ಬುಕ್ ಮಾಡಲಾಗುತ್ತದೆ. ಈ ಟೂರ್ ಪ್ಯಾಕೇಜ್ನಲ್ಲಿ ಉಳಿದುಕೊಳ್ಳುವುದು ಎಂದರೆ ಹೋಟೆಲ್, ಆಹಾರ, ವಿಮಾನ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗುವುದು. ಆದಾಗ್ಯೂ, ನಿಮ್ಮ ಶಾಪಿಂಗ್ ವೆಚ್ಚವನ್ನು ನೀವು ಭರಿಸಬೇಕಾಗುತ್ತದೆ. ಇದು ಈ ಪ್ಯಾಕೇಜ್ನಲ್ಲಿ ಬರುವುದಿಲ್ಲ.
ಇದನ್ನೂ ಓದಿ: ತೆರಿಗೆ ಉಳಿಸಲು ಬಯಸುವಿರಾ? ಹಾಗಾದರೆ ಈ ಭತ್ಯೆಗಳ ಬಗ್ಗೆ ತಿಳಿದುಕೊಳ್ಳಿ
ಈ ಟೂರ್ ಪ್ಯಾಕೇಜ್ ಅಡಿಯಲ್ಲಿ ನೀವು ಪ್ರಯಾಣಿಸಿದರೆ, ನೀವು ಪ್ರತಿ ಪ್ರಯಾಣಿಕರಿಗೆ 54,364 ರೂಪಾಯಿ. ಮತ್ತೊಂದೆಡೆ, ಇಬ್ಬರಿಗೆ ಟಿಕೆಟ್ ಕಾಯ್ದಿರಿಸಲು ಪ್ರತಿ ವ್ಯಕ್ತಿಗೆ 48,300 ರೂಪಾಯಿ. ಮೂರು ಜನರಿಗೆ ತಲಾ 48,300 ರೂಪಾಯಿ. IRCTC ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ನೀವು ಈ ಪ್ಯಾಕೇಜ್ ಅಡಿಯಲ್ಲಿ ಫ್ಲೈಟ್ಗಳನ್ನು ಬುಕ್ ಮಾಡಬಹುದು.
ಈ ಸೌಲಭ್ಯಗಳು ದೊರೆಯಲಿವೆ
ಈ IRCTC ಟೂರ್ ಪ್ಯಾಕೇಜ್ ಅಡಿಯಲ್ಲಿ, ಪ್ರಯಾಣಿಕರಿಗೆ ಉಪಹಾರ, ಹೋಟೆಲ್ ವಾಸ್ತವ್ಯ, ಮಧ್ಯಾಹ್ನ ಮತ್ತು ರಾತ್ರಿಯ ಊಟ, ಪ್ರವಾಸಿ ಸ್ಥಳಗಳನ್ನು ನೋಡಲು ವಾಹನ ಮತ್ತು ನಂತರ ಮಾರ್ಗದರ್ಶನ ನೀಡಲಾಗುತ್ತದೆ.
ಇನ್ನೂ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಿಬ್ಬಂದಿಗಳು ಸದಾ ಜೊತೆಯಲ್ಲೇ ಇರುತ್ತಾರೆ. ಕೇವಲ ಕಪಲ್ ಅಷ್ಟೇ ಅಲ್ಲದೇ ಪಟ್ಟಾಯ ನೋಡಬೇಕೆಂದುಕೊಂಡಿರುವವರು ಕೂಡ ಪ್ಲ್ಯಾನ್ ಮಾಡಿಕೊಂಡು ಹೋಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ