IPL: ಜಗತ್ತಿನ ಎರಡನೇ ದುಬಾರಿ ಲೀಗ್ ಆಗುವತ್ತ ಐಪಿಎಲ್! ಪ್ರತಿ ಪಂದ್ಯದ ಪ್ರಾಫಿಟ್​ 100 ಕೋಟಿ ಆಗುತ್ತಂತೆ

ಮುಂದಿನ ಐಪಿಎಲ್​ ಸೀಸನ್​ಗಳ ಬಗ್ಗೆ ಹೊಸ ಹೊಸ ಚರ್ಚೆಗಳು ಶುರುವಾಗಿದೆ. 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ (IPL Media Rights Auction) ಕೆಲವೇ ದಿನಗಳು ಬಾಕಿ ಇದೆ. ಇದೀಗ ಟೂರ್ನಿಯು  ವಿಶ್ವದ 2ನೇ ಅತಿ ದುಬಾರಿ ಕ್ರೀಡಾ ಲೀಗ್‌ ಆಗಲಿದೆ ಎಂದು ಹೇಳಲಾಗತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
20-20 ಪಂದ್ಯಗಳು ಅಂದರೆ ನಮ್ಮ ಕ್ರೀಡಾಭಿಮಾನಿಗಳಿಗೆ ಪಂಚ ಪ್ರಾಣ. ಅದರಲ್ಲೂ ಐಪಿಎಲ್(IPL)​ ಬಂತು ಅಂದರೆ ಸಾಕು ಅದು ಹಬ್ಬ.. ಪಂದ್ಯ ನಡೆಯುವ  ಅಷ್ಟು ದಿನಗಳನ್ನೂ ಹಬ್ಬದಂತೆ ಆಚರಿಸುತ್ತಾರೆ. ಬೇರೆ ಪಂದ್ಯಗಳು ಇದ್ದ ದಿನ ಹುಮ್ಮಸ್ಸು ಕಡಿಮೆ ಇದ್ದರು ಇರಬಹುದು. ಆದರೆ, ಆರ್​ಸಿಬಿ ಪಂದ್ಯ(RCB Match) ಇತ್ತು ಅಂದರೆ ಅಲ್ಲಿ ಸಂತೋಷ, ಸಂಭ್ರಮ ಮನೆ ಮಾಡಿರುತ್ತೆ. ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) 15ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಐಪಿಎಲ್​ಗೆ ಎಂಟ್ರಿಯಾಗಿದ್ದ ಗುಜರಾತ್​ ಟೈಟನ್ಸ್ (Gujarat Champions​ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಇದೀಗ ಮುಂದಿನ ಐಪಿಎಲ್​ ಸೀಸನ್​ಗಳ ಬಗ್ಗೆ ಹೊಸ ಹೊಸ ಚರ್ಚೆಗಳು ಶುರುವಾಗಿದೆ. 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ (IPL Media Rights Auction) ಕೆಲವೇ ದಿನಗಳು ಬಾಕಿ ಇದೆ. ಇದೀಗ ಟೂರ್ನಿಯು  ವಿಶ್ವದ 2ನೇ ಅತಿ ದುಬಾರಿ ಕ್ರೀಡಾ ಲೀಗ್‌ ಆಗಲಿದೆ ಎಂದು ಹೇಳಲಾಗತ್ತಿದೆ.

ಐಪಿಎಲ್ ಮಾಧ್ಯಮ ಹಕ್ಕು ಪಡೆಯಲು  ಪೈಪೋಟಿ!

ಐಪಿಎಲ್​ ಕೇವಲ ಮನರೋಂಜನೆ ಅಷ್ಟೇ ಅಲ್ಲ ಜೊತೆಗೆ ಹಣದ ಹೊಳೆಯನ್ನು ಹರಿಸುತ್ತೆ. ಕಳೆದ ಎರಡು ಸೀಸನ್​ಗಳಲ್ಲಿ ಕೊರೋನಾ ಕಾರಣದಿಂದ ಹಣದ ಹೊಳೆಯ ಮಟ್ಟ ಕಡಿಮೆಯಾಗಿತ್ತು. ಇದೀಗ ಜಗತ್ತನ್ನೇ ಕಾಡಿದ್ದ ಕೊರೋನಾ ಮುಂದಿನ ವರ್ಷ ಸಂಪೂರ್ಣ ಮಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಇತ್ತ  2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ (IPL Media Rights Auction) ಕೆಲವೇ ದಿನಗಳು ಬಾಕಿ ಇದೆ. ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರುಪಾಯಿ ದಾಟುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದಾರೆ.

ಜಗತ್ತಿನ ಎರಡನೇ ದುಬಾರಿ ಲೀಗ್ ಆಗುವತ್ತ ಐಪಿಎಲ್

ಈಗಷ್ಟೇ ಐಪಿಎಲ್​ ಸೀಸನ್​ 15 ಮುಗಿದಿದೆ. ಆದರೆ, ಈಗಿನಿಂದಲೇ ಮುಂದಿನ ಸೀಸನ್​ಗಳ ಮಾಧ್ಯಮ ಪ್ರಸಾರ ಹಕ್ಕು ಪಡೆಯಲು ಹಲವು ದೈತ್ಯ ಸಂಸ್ಥೆಗಳು ನಾ ಮುಂದು ತಾ ಮುಂದು ಅಂತ ಸಜ್ಜಾಗಿವೆ.  2018-2022ರ ಅವಧಿಗೆ 16,348 ಕೋಟಿ ರು.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ (Star India), ಪ್ರತಿ ಪಂದ್ಯಕ್ಕೆ 54.5 ಕೋಟಿ ರು. ಪಾವತಿಸಿತ್ತು. ಮುಂದಿನ 5 ವರ್ಷಗಳಿಗೆ (BCCI) 32,890 ಕೋಟಿ ರು. ಮೂಲಬೆಲೆ ನಿಗದಿ ಮಾಡಿದ್ದು, ಇದರ ಪ್ರಕಾರ ಪ್ರತಿ ಪಂದ್ಯದ ಟೀವಿ ಹಕ್ಕು 49 ಕೋಟಿ ರುಪಾಯಿ, ಮತ್ತು ಪ್ರತಿ ಪಂದ್ಯದ ಡಿಜಿಟೆಲ್‌ ಹಕ್ಕು 33 ಕೋಟಿ ರುಪಾಯಿ ಇದೆ.

ಇದನ್ನೂ ಓದಿ: 2023ರಲ್ಲಿ IOC Session ನಿರ್ವಹಿಸುವ ಹೊಣೆ ಭಾರತದ ಹೆಗಲಿಗೆ! ಇಲ್ಲಿದೆ ಸಂಪೂರ್ಣ ಮಾಹಿತಿ

ಒಂದು ಪಂದ್ಯದಿಂದ 100 ಕೋಟಿ ಲಾಭದ ನಿರೀಕ್ಷೆ!

ಟಿವಿ ಪ್ರಸಾರದ ಹಕ್ಕು ಮೂಲಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿಗೆ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಇದೆ. ಡಿಜಿಟಲ್‌ ಹಕ್ಕು ಇನ್ನೂ ಹೆಚ್ಚಿಗೆ ಮೊತ್ತಕ್ಕೆ ಹರಾಜಾಗಲಿದೆ ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115ರಿಂದ 120 ಕೋಟಿ ರು. ಆಗಬಹುದು ಎಂದು ಹೇಳಲಾಗುತ್ತಿದೆ. ಕಳೆದ ಸೀಸನ್​ಗಳನ್ನು ಡಸ್ನಿ ಪ್ಲಸ್​ ಹಾಟ್​ಸ್ಟಾರ್​ ಡಿಜಿಟಲ್​ ಹಕ್ಕು ಪಡೆದುಕೊಂಡಿತ್ತು. ಹೀಗಾಗಿ ಇವರೇ ಮತ್ತೆ ಐಪಿಎಲ್​ ಮಾಧ್ಯಮ ಪ್ರಸಾರದ ಹಕ್ಕನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: IND vs PAK Match- ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯ

ವರ್ಷಕ್ಕೆ 2 ಬಾರಿ ನಡೆಯುತ್ತಾ ಐಪಿಎಲ್​?

ಕಳೆದ ಕೆಲ ದಿನಗಳ ಹಿಂದೆ ರವಿಶಾಸ್ತ್ರಿ ವರ್ಷಕ್ಕೆ ಎರಡು ಬಾರಿ ಐಪಿಎಲ್​ ನಡೆಸುವ ಬಗ್ಗೆ ಹೇಳಿಕೆ ನೀಡಿದ್ದರು. ಇದು ನಿಜವಾದ ಕ್ರಿಕೆಟ್​ನ ಭವಿಷ್ಯ ಎಂದು ಅವರು ಹೇಳಿದ್ದರು. ಅವರು ಹೇಳಿದಂತೆ ನಡೆಯುವ ಸಾಧ್ಯತೆ ಕೂಡ ಹೆಚ್ಚಿದೆ.
Published by:Vasudeva M
First published: