Post Office: ಹೊಸ ವರ್ಷಕ್ಕೆ IPBP ಗ್ರಾಹಕರಿಗೆ ಶಾಕ್, 10,000 ಮೀರಿದ ಠೇವಣಿಗೆ ಶುಲ್ಕ

Post Office Bank: ಇನ್ನು ಮೂಲ ಉಳಿತಾಯ ಖಾತೆಯಲ್ಲಿ ಮಾಡುವ ನಗದು ಠೇವಣಿಗೆ ಯಾವುದೇ ಮೊತ್ತದವರೆಗೂ ಅನಿಯಮಿತವಾಗಿರುತ್ತದೆ. ನಗದು ಹಿಂಪಡೆತವು ನಾಲ್ಕು ಪಾವತಿಗಳವರೆಗೂ ಸ್ವತಂತ್ರವಾಗಿದ್ದು, ಬಳಿಕ ವರ್ಗಾವಣೆ ಮೊತ್ತದ 0 5 ಕನಿಷ್ಠ ಪ್ರತಿ ಪಾವತಿಗೆ 25 ರೂ ನಂತೆ ಶುಲ್ಕ ಬೀಳುತ್ತದೆ

ಅಂಚೆ ಪೇಮೆಂಟ್ಸ್ ಬ್ಯಾಂಕ್

ಅಂಚೆ ಪೇಮೆಂಟ್ಸ್ ಬ್ಯಾಂಕ್

  • Share this:
    ಗ್ರಾಮೀಣ(Rural) ಭಾಗದ ಅಂಚೆ ಕಚೇರಿಗಳನ್ನು(Post Office) ಪುಟ್ಟ ಬ್ಯಾಂಕ್ ಗಳಾಗಿ(Bank) ಪರಿವರ್ತಿಸುವ ಡಿಜಿಟಲ್ ಇಂಡಿಯಾದ(Digital India) ಕನಸು ಭಾರತೀಯ(Indians) ಅಂಚೆಯ ಪೇಮೆಂಟ್ಸ್‌ ಬ್ಯಾಂಕ್  ಮೂಲಕ ಭಾರತದಲ್ಲಿ ಸಾಧ್ಯವಾಗಿದೆ.,ಸರಿ ಸುಮಾರು 34 ಕೋಟಿಗೂ ಅಧಿಕ ಖಾತೆದಾರರನ್ನು ಹೊಂದುವ ಮೂಲಕ ದೇಶದ ಅತಿದೊಡ್ಡ ಡಿಜಿಟಲ್ ಪೇಮೆಂಟ್ ಬ್ಯಾಂಕ್ ಆಗಿರುವ ಭಾರತೀಯ ಅಂಚೆಯ ಪೇಮೆಂಟ್ಸ್‌ ಬ್ಯಾಂಕ್ (ಐಪಿಬಿಪಿ)(India post bank payment) ತನ್ನ ಗ್ರಾಹಕರಿಗೆ ತ್ವರಿತ ಹಾಗೂ ವಿಶ್ವಾಸಾರ್ಹ ಆರ್ಥಿಕ ಸೇವೆಗಳನ್ನು ಒದಗಿಸುತ್ತ ಸಾಕಷ್ಟು ಜನಪ್ರಿಯವಾಗಿದೆ. ಹೀಗಿರುವಾಗಲೇ ಹೊಸ ವರ್ಷದಿಂದ ಐಪಿಬಿಪಿ ತನ್ನ ಸೇವೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗಿದ್ದು ಹೊಸವರ್ಷಕ್ಕೆ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ..

    ಹೊಸವರ್ಷಕ್ಕೆ ಐಪಿಬಿಪಿ ಗ್ರಾಹಕರಿಗೆ ಶಾಕ್

    ಭಾರತೀಯ ಅಂಚೆಯ ಪೇಮೆಂಟ್ಸ್‌ ಬ್ಯಾಂಕ್ ದಿನದಿಂದ ದಿನಕ್ಕೆ ಸಾಕಷ್ಟು ಪ್ರಸಿದ್ಧಿ ಕೇಳುತ್ತಿದ್ದಂತೆ ಮತ್ತು ಗ್ರಾಹಕರು ಹೆಚ್ಚಾಗುತ್ತಿದ್ದಂತೆ, ಎಲ್ಲಾ ಬ್ಯಾಂಕ್ ಗಳಂತೆ ಹೊಸವರ್ಷಕ್ಕೆ ಹಲವಾರು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ.. ಅದು ಹೊಸ ವರ್ಷದ ಆರಂಭದಿಂದ ಅಂದರೆ ಜನವರಿ 1, 2022 ರಿಂದ ಐಪಿಬಿಪಿ ಗ್ರಾಹಕರು ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡಿದಲ್ಲಿ ಶುಲ್ಕ ವಿಧಿಸಲು ಐಪಿಬಿಪಿ ಮುಂದಾಗಿದೆ.

    ಇದನ್ನೂ ಓದಿ: ಅಂಚೆ ಕಚೇರಿಯ ಈ 9 ಯೋಜನೆಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ

    ಐಪಿಬಿಪಿಯಲ್ಲಿ ಮೂರು ರೀತಿಯ ಉಳಿತಾಯ ಖಾತೆ

    ಜನಸಾಮಾನ್ಯರಿಗೆ ಹತ್ತಿರವಾಗಿರುವ ಐಪಿಬಿಪಿಯಲ್ಲಿ ಮೂರು ರೀತಿಯ ಉಳಿತಾಯ ಖಾತೆಗಳು ಇದು ಪ್ರತಿಯೊಂದು ಖಾತೆಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ.. ಆರ್‌ಬಿಐ ನಿರ್ಬಂಧಗಳ ಪ್ರಕಾರ ನೀವು ಒಂದು ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ಉಳಿತಾಯ ಬ್ಯಾಂಕ್‌ ಖಾತೆಯಲ್ಲಿ ಇಡುವಂತಿಲ್ಲ, ಆದರೆ ನೀವು ಅಂಚೆ ಸೇವಾ ಬ್ಯಾಂಕ್‌ ಖಾತೆಯಲ್ಲಿ ಒಂದು ಲಕ್ಷಕ್ಕಿಂತ ಮೀರಿದ ಯಾವುದೇ ಮೊತ್ತವನ್ನು ಇಡಬಹುದಾಗಿದೆ.

    ಉಳಿತಾಯ ಹಾಗೂ ಚಾಲ್ತಿ ಖಾತೆಗಳಲ್ಲಿ 10,000 ರೂ.ಗಳವರೆಗೂ ಅನಿಯಮಿತವಾಗಿ ಠೇವಣಿ ಇಡಬಹುದಾಗಿದೆ. ಇದಾದ ಬಳಿಕ ಖಾತೆಯ 0.5%ನಷ್ಟು, ಕನಿಷ್ಠ 25 ರೂ.ಗೆ ಮಿತಿ ಪಡಿಸಿದಂತೆ ಶುಲ್ಕ ವಿಧಿಸಲಾಗುವುದು. ಇದೇ ರೀತಿ, ಉಳಿತಾಯ ಹಾಗೂ ಚಾಲ್ತಿ ಖಾತೆಗಳಿಂದ ಹಣ ಹಿಂಪಡೆಯುವ ವೇಳೆ ಮಾಸಿಕ ಮಿತಿ 25,000 ರೂ.ಗಳೆಂದು ನಿಗದಿ ಪಡಿಸಲಾಗಿದ್ದು, ಇದಾದ ಬಳಿಕ ನಗದಿನ 0.5%, ವರ್ಗಾವಣೆಯೊಂದರ ಮೇಲೆ ಕನಿಷ್ಠ 25 ರೂ.ನಂತೆ ಚಾರ್ಜ್ ಮಾಡಲಾಗುವುದು. ಸದ್ಯ ಜಿಎಸ್ಟಿ ಹೊರತುಪಡಿಸಿ ಈ ಶುಲ್ಕಗಳು ಜನವರಿ 1 2022 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಇನ್ನು ಈ ಹಿಂದೆ ಈ ಹಿಂದೆ, IPPB ತನ್ನ ಡೋರ್‌ಸ್ಟೆಪ್ ಬ್ಯಾಂಕಿಂಗ್ ದರಗಳನ್ನು ಆಗಸ್ಟ್ 1, 2021 ರಿಂದ ಪ್ರತಿ ಬಳಕೆದಾರರಿಗೆ ಪ್ರತಿ ಬೇಡಿಕೆಗೆ ರೂ 20 ಕ್ಕೆ ಹೆಚ್ಚಿಸಿತು.

    ಇನ್ನು ಮೂಲ ಉಳಿತಾಯ ಖಾತೆಯಲ್ಲಿ ಮಾಡುವ ನಗದು ಠೇವಣಿಗೆ ಯಾವುದೇ ಮೊತ್ತದವರೆಗೂ ಅನಿಯಮಿತವಾಗಿರುತ್ತದೆ. ನಗದು ಹಿಂಪಡೆತವು ನಾಲ್ಕು ಪಾವತಿಗಳವರೆಗೂ ಸ್ವತಂತ್ರವಾಗಿದ್ದು, ಬಳಿಕ ವರ್ಗಾವಣೆ ಮೊತ್ತದ 0.5%, ಕನಿಷ್ಠ ಪ್ರತಿ ಪಾವತಿಗೆ 25 ರೂ.ನಂತೆ ಶುಲ್ಕ ಬೀಳುತ್ತದೆ.

    ಇದನ್ನೂ ಓದಿ: ಕೇವಲ 417ನ ರೂ. ಜಮೆ ಮಾಡಿ ಲಕ್ಷಾಧೀಶರಾಗುವ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ಪ್ರಧಾನಮಂತ್ರಿಯವರ ಕನಸಿನ ಐಪಿಬಿಪಿ ಯೋಜನೆ

    ಇನ್ನು ಭಾರತೀಯ ಅಂಚೆಯ ಪೇಮೆಂಟ್ಸ್‌ ಬ್ಯಾಂಕ್ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದ್ದು ಪ್ರತಿಯೊಂದು ಗ್ರಾಮದಲ್ಲಿ ಪ್ರತಿಯೊಬ್ಬ ಮನೆಯ ಜನರು ಬ್ಯಾಂಕ್ ಖಾತೆಗಳನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಐಪಿಬಿಪಿ ಯೋಜನೆ ಜಾರಿಗೆ ತರಲಾಗಿತ್ತು.. ಇದರ ಮೂಲಕ ದೇಶದ 1.55 ಲಕ್ಷ ಅಂಚೆ ಕಚೇರಿಗಳಿಗೆ ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಲಿಂಕ್ ನ್ನು ಕೇಂದ್ರ ಸರ್ಕಾರ ಮಾಡಿದೆ.. ಇದಾ ಮೂರು ವರ್ಷಗಳಿಂದ ಜಾರಿಯಲ್ಲಿರುವ ಐಪಿಬಿಪಿ ಬ್ಯಾಂಕ್ ಪೇಮೆಂಟ್ ಯೋಜನೆಯು ಇಂದು ಗ್ರಾಮೀಣ ಭಾಗದ ಹಲವಾರು ಜನರ ಪಾಲಿಗೆ ಉಪಯೋಗವಾಗಿದೆ.
    Published by:ranjumbkgowda1 ranjumbkgowda1
    First published: