BikeBot Scam: ಹೂಡಿಕೆದಾರರೇ ಎಚ್ಚರ, 15,000 ಕೋಟಿ ಹಣ ದೋಚಿ ಪರಾರಿಯಾದ ಮಹಿಳಾ ಉದ್ಯಮಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೋಟಾರ್‌ಸೈಕಲ್‌ಗಳ ಮೇಲೆ ಹೂಡಿಕೆ ಮಾಡುವ ಯೋಜನೆಯ ಮೂಲಕ ದೀಪ್ತಿ ಬಾಹಲ್ ಎಂಬ ಕಾಲೇಜು ಪ್ರಿನ್ಸಿಪಾಲ್, ಹೂಡಿಕೆದಾರರ ರೂ 15,000 ಕೋಟಿ ಹಣವನ್ನು ದೋಚಿರುವುದಾಗಿ ಇತ್ತೀಚೆಗೆ ವರದಿಯಾಗಿದೆ.

  • Share this:

ತಂತ್ರಜ್ಞಾನ (Technology) ಪ್ರಗತಿ ಹೊಂದುತ್ತಿರುವಂತೆ ಜನರಿಗೆ ಎಷ್ಟು ಲಾಭವಿದೆಯೋ ಅಷ್ಟೇ ನಷ್ಟವೂ ಇದೆ. ಅಂತೆಯೇ ಕೆಲವೊಂದು ಅಪಾಯಗಳಿಗೂ ಮಾನವ ತುತ್ತಾಗಬೇಕಾದ ಸನ್ನಿವೇಶ ಬಂದೊದಗಿದೆ. ಹೊಸ ಹೊಸ ಇಂಟರ್ನೆಟ್ ಗೇಮ್‌ಗಳಾಗಿರಬಹುದು (Internet Games), ಅಪ್ಲಿಕೇಶನ್ ಆಧಾರಿತ ಹೂಡಿಕೆಗಳಿರಬಹುದು ಇಂತಹವುಗಳಲ್ಲಿ ತೊಡಗಿಸಿಕೊಳ್ಳುವುದಕ್ಕೂ ಮೊದಲು ಸರಿಯಾಗಿ ವಿಚಾರ ವಿಮರ್ಶೆ ಮಾಡಿಕೊಳ್ಳುವುದು ಉತ್ತಮವಾಗಿದೆ. ಇತ್ತೀಚೆಗೆ ಎಲ್ಲಿ ನೋಡಿದ್ರೂ ಹ್ಯಾಕ್ (Hack)​, ಸ್ಕ್ಯಾಮ್​ ಎಂಬ ಸುದ್ದಿಗಳೇ ಬರುತ್ತಿದೆ. ಇದಕ್ಕೆ ಕಾರಣ ಬಳಕೆದಾರರು ಬಳಸುವ ವಿಧಾನಗಳು ಅಂತಾನೇ ಹೇಳ್ಬಹುದು. ಅದಕ್ಕಾಗಿ ಯಾರೇ ಆಗಲಿ ಸ್ಮಾರ್ಟ್​ಫೋನ್ (Smartphone)​​, ಲ್ಯಾಪ್​​ಟಾಪ್​ಗಳಲ್ಲಿ ಹಣಕಾಸಿನ ವ್ಯವಹಾರಗಳನ್ನು ಮಾಡುವಾಗ ಎಚ್ಚರಿಕೆಯಿಂದಿರಬೇಕು.


ರೂ 15,000 ಕೋಟಿ ದೋಚಿ ಪರಾರಿ


ಮೋಟಾರ್‌ಸೈಕಲ್‌ಗಳ ಮೇಲೆ ಹೂಡಿಕೆ ಮಾಡುವ ಯೋಜನೆಯ ಮೂಲಕ ದೀಪ್ತಿ ಬಾಹಲ್ ಎಂಬ ಕಾಲೇಜು ಪ್ರಿನ್ಸಿಪಾಲ್, ಹೂಡಿಕೆದಾರರ ರೂ 15,000 ಕೋಟಿ ಹಣವನ್ನು ದೋಚಿರುವುದಾಗಿ ಇತ್ತೀಚೆಗೆ ವರದಿಯಾಗಿದೆ. ದೀಪ್ತಿ ತಲೆಮರೆಸಿಕೊಂಡಿದ್ದು ದೇಶ ಬಿಟ್ಟು ಪರಾರಿಯಾಗಿರುವ ಸುದ್ದಿ ಕೂಡ ಇದೆ.


ಬೈಕ್​ಬೋಟ್ ಹೆಸರಿನ ಯೋಜನೆಯನ್ನು ದೀಪ್ತಿ ಬಾಹಲ್ ಹೂಡಿಕೆದಾರರಿಗಾಗಿ ಪ್ರಾಯೋಜಿಸಿದ್ದು ಪ್ರತಿಯೊಂದು ಬೈಕ್‌ಗಾಗಿ ರೂ 62,100 ಅನ್ನು ಹೂಡಿಕೆ ಮಾಡಲು ಹೂಡಿಕೆದಾರರಲ್ಲಿ ಕೇಳಲಾಗಿತ್ತು. ಕಂಪನಿ ರೂ 5,175 ಅನ್ನು ಇಎಮ್‌ಐ ರೂಪದಲ್ಲಿ ಪ್ರತಿ ತಿಂಗಳು ಆಫರ್ ಮಾಡಿದ್ದು ಹಾಗೂ ಪ್ರತಿ ಬೈಕ್‌ಗೆ ರೂ 4,590 ರಂತೆ ಬಾಡಿಗೆಯನ್ನು ನಿಯೋಜಿಸಿದೆ. ಅಂತೆಯೇ ಕಂಪನಿಯು ಮಾಸಿಕ ಬಾಡಿಗೆ ಪಾವತಿಯ 5% ವನ್ನು ಪ್ರತಿ ಬೈಕ್‌ಗೆ ಮಾಸಿಕ ಬೋನಸ್‌ನಂತೆ ನೀಡುವ ಭರವಸೆಯನ್ನು ನೀಡಿತ್ತು.


ಇದನ್ನೂ ಓದಿ: ಒಂದೇ ಬಾರಿ ನಿಮ್ಮ ಖಾತೆ ಸೇರುತ್ತೆ 16 ಲಕ್ಷ, ಪೋಸ್ಟ್ ಆಫೀಸ್ ಬಂಪರ್ ಯೋಜನೆ!


ಸರಿಯಾಗಿ ಹೂಡಿಕೆದಾರರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಸಂಸ್ಥೆ


ಹೂಡಿಕೆದಾರರ ವಿಶ್ವಾಸಗಳಿಸುವ ನಿಟ್ಟಿನಲ್ಲಿ ಕಂಪನಿ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ನಟನೆಯನ್ನೂ ಮಾಡಿತು. ಅಂತೆಯೇ ಹೂಡಿಕೆದಾರರ ಹಣ ಕಂಪನಿಯ ಬಳಿ ಸುರಕ್ಷಿತವಾಗಿರುತ್ತದೆ ಹಾಗೂ ಹೂಡಿಕೆಯ ಮರಳಿಸುವಿಕೆ ಕೂಡ ಸುರಕ್ಷಿತ ಎಂಬುದಾಗಿ ಹೂಡಿಕೆದಾರರನ್ನು ನಂಬಿಸಿತು. ಬೈಕ್‌ಬೋಟ್ 2017 ರಲ್ಲಿ ತನ್ನ ಯೋಜನೆಯನ್ನು ಆರಂಭಿಸಿತು ಅಂತೆಯೇ ಒಪ್ಪಂದದ ಅನುಸಾರವಾಗಿ ಹೂಡಿಕೆದಾರರಿಂದ ಹಣ ಸಂಗ್ರಹಿಸಲಾರಂಭಿಸಿತು ಹಾಗೂ 2019 ರವರೆಗೆ ಹೂಡಿಕೆದಾರರಿಗೆ ಹಣವನ್ನು ಹಿಂತಿರುಗಿಸಿತ್ತು.


ಸಾಂಕೇತಿಕ ಚಿತ್ರ


2018 ರಲ್ಲಿ ಕಂಪನಿ ಇ-ಬೈಕ್ ಹೆಸರಿನ ಇನ್ನೊಂದು ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಲ್ಲಿ ನಿಯಮಿತ ಪೆಟ್ರೋಲ್ ಬೈಕ್‌ಗಳಿಗಿಂತ ಹೂಡಿಕೆಯ ಮೊತ್ತ ದುಪ್ಪಟ್ಟಾಗಿತ್ತು. 2019 ರಲ್ಲಿ ಹೆಚ್ಚಿನ ಹೂಡಿಕೆದಾರರು ಈ ಹಿಂದೆ ಭರವಸೆ ನೀಡಿದ ಮೊತ್ತ ತಲುಪಿತ್ತಲ್ಲವೆಂದು ಪೊಲೀಸರಿಗೆ ದೂರು ನೀಡಲಾರಂಭಿಸಿದರು ಈ ರೀತಿ ಹೂಡಿಕೆದಾರರಿಗೆ ತಾವು ಮೋಸ ಹೋಗಿರುವುದರ ಅರಿವು ಗಮನಕ್ಕೆ ಬಂದಿತು.


ತಲೆಮರೆಸಿಕೊಂಡಿರುವ ದೀಪ್ತಿ ಎಲ್ಲಿದ್ದಾರೆ


ಪ್ರಮುಖ ಆರೋಪಿಗಳಾಗಿರುವ ಜಿಐಪಿಎಲ್, ಸಂಜಯ್ ಭಾಟಿ ಮತ್ತು ಇತರರ ವಿರುದ್ಧ ದಾದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಿವಿಧ ಎಫ್‌ಐಆರ್‌ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಹಗರಣದ ಹಣ-ಲಾಂಡರಿಂಗ್ ತನಿಖೆಯನ್ನು ಪ್ರಾರಂಭಿಸಿತು. ಭಾಟಿ 2019 ರಲ್ಲಿ ಸೂರಜ್‌ಪುರದ ಸ್ಥಳೀಯ ನ್ಯಾಯಾಲಯದ ಮುಂದೆ ಶರಣಾದರು. ಆದರೆ ದೀಪ್ತಿ ಪರಾರಿಯಾಗಿದ್ದಾರೆ.


ಈ ಕುರಿತು ಪ್ರಕರಣದ ತನಿಖೆ ನಡೆಸುತ್ತಿರುವ ಮೀರತ್ ಆರ್ಥಿಕ ಅಪರಾಧಗಳ ವಿಭಾಗವು, ತಿಳಿಸಿರುವಂತೆ ದೇಶಾದ್ಯಂತ 250 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಲಕ್ಷಗಟ್ಟಲೆ ಜನರಿಗೆ ಸುಮಾರು 4,500 ಕೋಟಿ ರೂಪಾಯಿಗಳನ್ನು ವಂಚಿಸಲಾಗಿದೆ ಎಂದು ಅಂದಾಜಿಸಿದೆ. 40ರ ಹರೆಯದ ದೀಪ್ತಿ, 2019ರಲ್ಲಿ ಹಗರಣದ ಮೊದಲ ಪ್ರಕರಣಗಳು ದಾಖಲಾದಾಗಿನಿಂದ ತಲೆಮರೆಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆಕೆ ದೇಶದಿಂದ ಪಲಾಯನ ಮಾಡಿರಬಹುದು ಎಂದು ಸುದ್ದಿಪತ್ರಿಕೆಗಳು ವರದಿ ಮಾಡಿವೆ.




ಹೂಡಿಕೆದಾರರ ಹಣ ಎಲ್ಲಿದೆ?


ಈ ಪ್ರಕರಣದಲ್ಲಿ ಇಡಿ 103 ಕೋಟಿ ರೂ.ಗೂ ಹೆಚ್ಚು ಚರ ಮತ್ತು ಸ್ಥಿರ ಆಸ್ತಿಯನ್ನು ಜಪ್ತಿ ಮಾಡಿತ್ತು. ದೀಪ್ತಿ ಮತ್ತು ಆಕೆಯ ಪತಿ ಇಂತಹುದೇ ಸಾಕಷ್ಟು ಪಂಗನಾಮ ಹಾಕುವ ಕಂಪನಿಗಳನ್ನು ಆರಂಭಿಸಿದ್ದು, ಹೂಡಿಕೆದಾರರಿಗೆ ಚಳ್ಳೆಹಣ್ಣು ತಿನ್ನಿಸುವುದೇ ಇವರ ಕಾಯಕ ಎಂಬುದು ತನಿಖೆಗಳಿಂದ ತಿಳಿದು ಬಂದಿದೆ.


ಒಂದೊಂದು ಹೊಸ ಯೋಜನೆಗಳನ್ನು ಆರಂಭಿಸಿ ಹೂಡಿಕೆದಾರರಿಂದ ಹಣ ದೋಚುವ ದಂಪತಿಗಳು ಒಂದು ಯೋಜನೆಯಲ್ಲಿನ ಹೂಡಿಕೆದಾರರಿಗೆ ಹಣ ನೀಡಲು ಮತ್ತೊಂದು ಯೋಜನೆ, ಇನ್ನೊಬ್ಬರಿಗೆ ಹಣ ನೀಡಲು ಮತ್ತೊಂದು ಯೋಜನೆ ಹೀಗೆ ಹೂಡಿಕೆದಾರರನ್ನು ಯಾಮಾರಿಸಿ ಅವರನ್ನು ಲೂಟಿ ಮಾಡಿರುವುದು ತಿಳಿದುಬಂದಿದೆ.

top videos
    First published: