ಮಾರ್ಚ್ ತಿಂಗಳು (March) ಎಂದರೆ ನೆನಪಾಗೋದೇ ಮಹಿಳಾ ದಿನಾಚರಣೆ (Women's day) . ಮಾರ್ಚ್ 8 ರಂದು ಪ್ರತಿ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇದು ಹೆಣ್ತನವನ್ನು, ಹೆಣ್ಣಿನ (Girl) ಪರಿಶ್ರಮವನ್ನು ನೆನೆಯುವ ದಿನವಾಗಿದೆ. ಇದಕ್ಕಾಗಿ ಮಹಿಳೆಯರಿಗೆ ಗೌರವ ಸಲ್ಲಿಸಿ ಅವರ ಸಾಧನೆಗಳನ್ನು ಆಚರಿಸುವಂಥ ದಿನವಾಗಿದೆ. ಇನ್ನು ಎಲ್ಲ ಮನೆಗಳಲ್ಲಿ ಅಮ್ಮ ಒಂದಿಷ್ಟು ಉಳಿತಾಯ ಮಾಡಿರುತ್ತಾಳೆ. ತಂದೆಯ (Father) ಪ್ಲಾನ್‌ಗಳು ಬೇರೆಯದೇ ಇದ್ದರೂ ತಾಯಿಯಾದವಳು ಒಂದಿಷ್ಟು ಹಣವನ್ನು ಉಳಿತಾಯ ಮಾಡಿರುತ್ತಾಳೆ.
ಅದರಲ್ಲೂ ಈಗಿನ ಶಿಕ್ಷಣವಂತ ಮಹಿಳೆಯರು ಲಾಭದಾಯಕ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನೂ ಅರಿತುಕೊಂಡಿದ್ದಾರೆ. ಹಾಗಾಗಿ ಮಹಿಳೆಯರು ಅತ್ಯುತ್ತಮ ಹೂಡಿಕೆದಾರರು ಎಂದು ಅನೇಕ ಅಧ್ಯಯನಗಳು ಹೇಳುತ್ತವೆ.
ಬಹಳಷ್ಟು ಜನರು ಮಹಿಳಾ ದಿನಕ್ಕೆ ತಮ್ಮ ಜೀವನದ ಪ್ರೀತಿಪಾತ್ರರಿಗೆ ಏನಾದರೂ ಗಿಫ್ಟ್ ನೀಡಬೇಕೆಂದು ಯೋಚಿಸುತ್ತಿರುತ್ತಾರೆ. ಒಂದೇ ದಿನ ಬಾಳಿಕೆ ಬರುವಂಥದ್ದು ಏನಾದರೂ ನೀಡುವ ಬದಲು ಮೌಲ್ಯಯುತವಾದದ್ದನ್ನು ನೀಡಿದರೆ ಆ ಉಡುಗೊರೆಯ ಮೌಲ್ಯವೂ ಹೆಚ್ಚಾಗುತ್ತದೆ.
ಹಾಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಿಮ್ಮ ತಾಯಿ, ಸಹೋದರಿ ಮತ್ತು ಸ್ನೇಹಿತರಿಗೆ ನೀವು ಉಡುಗೊರೆಯಾಗಿ ನೀಡಬಹುದಾದ ಬೆಸ್ಟ್ ಇನ್‌ವೆಸ್ಟ್‌ಮೆಂಟ್ ಪ್ಲಾನ್ ಬಗ್ಗೆ ನಾವು ನಿಮಗೆ ಹೇಳುತ್ತೇವೆ.
1. ಗೋಲ್ಡ್ ಬಾಂಡ್‌ಗಳು (SGB): ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಸರ್ಕಾರದ ಪರವಾಗಿ ಆರ್‌ಬಿಐ ನೀಡುತ್ತದೆ. ಇಲ್ಲಿ ಚಿನ್ನದ ಬಾಂಡ್‌ಗಳು ಭೌತಿಕ ಚಿನ್ನಕ್ಕೆ ಬದಲಿಯಾಗಿರುತ್ತವೆ.
SGBs ಬಾಂಡ್‌ಗಳನ್ನು 999 ಶುದ್ಧತೆಗಳಿಂದ ಸೂಚಿಸಲಾಗುತ್ತದೆ. ಬಾಂಡ್‌ಗಳನ್ನು ಬ್ಯಾಂಕುಗಳು (ಸಣ್ಣ ಹಣಕಾಸು ಬ್ಯಾಂಕ್‌ಗಳು ಮತ್ತು ಪಾವತಿ ಬ್ಯಾಂಕುಗಳನ್ನು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು BSE ಮೂಲಕ ಮಾರಾಟ ಮಾಡಲಾಗುತ್ತದೆ.
ಇದನ್ನೂ ಓದಿ: ಎಲ್ಲಾ ಸ್ಕೀಮ್ಗಳಿಗಿಂತ ಇದು ಬೆಸ್ಟ್, ಮಹಿಳೆಯರಿಗಾಗಿ ಅಂತಾನೇ ಇರೋ ಅದ್ಭುತ ಯೋಜನೆ!
ಬಾಂಡ್‌ನ ಅವಧಿಯು 5 ನೇ ವರ್ಷದ ನಂತರ ನಿರ್ಗಮನ ಆಯ್ಕೆಯೊಂದಿಗೆ 8 ವರ್ಷಗಳ ಅವಧಿಗೆ ಮುಂದಿನ ಬಡ್ಡಿ ಪಾವತಿ ದಿನಾಂಕಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಅಂದಹಾಗೆ ಮೆಚ್ಯೂರಿಟಿ ತನಕ ಸರ್ಕಾರವು ವಾರ್ಷಿಕವಾಗಿ 2.50 ಪ್ರತಿಶತ ಆದಾಯವನ್ನು ನೀಡುತ್ತದೆ.
2. ರಾಷ್ಟ್ರೀಯ ಪಿಂಚಣಿ ಯೋಜನೆ (NPS): ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸರ್ಕಾರದ ಹೂಡಿಕೆ ಮತ್ತು ಪಿಂಚಣಿ ಯೋಜನೆಯಾಗಿದೆ. NPS ನೊಂದಿಗೆ, ನಿವೃತ್ತಿ ಉಳಿತಾಯಕ್ಕೆ ನೀವು ಇಲ್ಲಿ ಹೂಡಿಕೆ ಮಾಡಬಹುದು.
ಅಂದಹಾಗೆ ಎನ್‌ಪಿಎಸ್ ಅಡಿಯಲ್ಲಿ ಒಬ್ಬರು ಶ್ರೇಣಿ 1 ಖಾತೆ ಮತ್ತು ಶ್ರೇಣಿ 2 ಖಾತೆ ಎಂಬ ಎರಡು ರೀತಿಯ ಖಾತೆಗಳನ್ನು ತೆರೆಯಬಹುದು. ಈ ಯೋಜನೆಯು ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಸಾಕಷ್ಟು ನಿವೃತ್ತಿ ಆದಾಯವನ್ನು ಒದಗಿಸುತ್ತದೆ ಎಂದು ಹೇಳಬಹುದು.
3. ಮ್ಯೂಚುವಲ್ ಫಂಡ್‌ಗಳು: ಮ್ಯೂಚುವಲ್ ಹೂಡಿಕೆ ಮಾಡಲು ಸರಳವಾಗಿದ್ದು ವೈವಿಧ್ಯಮಯ ಆಯ್ಕೆಗಳನ್ನು ನೀಡುತ್ತವೆ. ಅಲ್ಲದೇ ಒಬ್ಬರು ಕೇವಲ 100 ರೂಪಾಯಿಗಳಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು.
ಮ್ಯೂಚುವಲ್ ಫಂಡ್‌ಗಳು ವೃತ್ತಿಪರ ನಿಧಿ ನಿರ್ವಹಣೆಯ ಪ್ರಯೋಜನವನ್ನು ನೀಡುತ್ತವೆ. ಆದ್ದರಿಂದ ನೀವು ದೀರ್ಘಾವಧಿಯ ದೃಷ್ಟಿಕೋನದಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.
4. ಗೋಲ್ಡ್ ಎಕ್ಸ್‌ಚೇಂಜ್-ಟ್ರೇಡೆಡ್ ಫಂಡ್‌ಗಳು (ಇಟಿಎಫ್‌ಗಳು): ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು ಯಾವುದೇ ಭೌತಿಕ ರೂಪ ಅಥವಾ ಪ್ರಮಾಣಪತ್ರವಿಲ್ಲದೆ ಚಿನ್ನವನ್ನು ಖರೀದಿಸಿದಂತೆ.
ಇದಕ್ಕಾಗಿ ಹೂಡಿಕೆದಾರರು ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕಾಗುತ್ತದೆ. ಅಲ್ಲದೇ ಡಿಮೆಟಿರಿಯಲೈಸ್ಡ್ ರೂಪದಲ್ಲಿ ಚಿನ್ನದ ಘಟಕಗಳನ್ನು ಹೊಂದಿರಬೇಕು.
ಇದನ್ನೂ ಓದಿ: ಹೋಳಿ ಹಬ್ಬಕ್ಕೆ ಎಸ್ಬಿಐ ಬಂಪರ್ ಆಫರ್, 25 ಸಾವಿರ ರೂಪಾಯಿ ರಿಯಾಯಿತಿ ಪಡೆಯಿರಿ!
ಅಂದಾಗ ಮಾತ್ರ ನೀವು ಇಟಿಎಫ್‌ಗಳನ್ನು ಮಾರುಕಟ್ಟೆ ಬೆಲೆಯಲ್ಲಿ ನಿರಂತರವಾಗಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದಾಗಿದೆ. ನಿಮಗೆ ಬೇಕಾದಾಗ ನೀವು ಚಿನ್ನದ ಇಟಿಎಫ್‌ನಿಂದ ವಾಪಸ್ ಪಡೆಯಬಹುದು. ಇದಕ್ಕೆ ಯಾವುದೇ ಲಾಕ್-ಇನ್ ಅವಧಿ ಇರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ