Investment Ideas: ವಿದ್ಯಾರ್ಥಿಗಳು ಹೂಡಿಕೆ ಮಾಡಿ ಹಣ ಗಳಿಸಬಹುದು; ಉತ್ತಮ ಆಯ್ಕೆಗಳ ಪಟ್ಟಿ ಇಲ್ಲಿದೆ

ವಿದ್ಯಾರ್ಥಿಗಳು ಕಡಿಮೆ ಹೂಡಿಕೆ ಮೂಲಕ ತಮ್ಮ ಹಣ ವೃದ್ಧಿ ಮಾಡಿಕೊಳ್ಳಬಹುದಾದ ಮತ್ತೊಂದು ಉತ್ತಮ ಮಾರ್ಗವಾಗಿದೆ. ಇದರಲ್ಲಿ ಬ್ಯಾಂಕುಗಳಿಗೆ ಇಂತಿಷ್ಟು ಅವಧಿಯವರೆಗೆ ಇಂತಿಷ್ಟು ಹಣ ಕಮಿಟ್ ಮಾಡುವ ಮೂಲಕ ಹೆಚ್ಚು ಬಡ್ಡಿದರ ನೀಡುವ ಉಳಿತಾಯ ಖಾತೆಗಳನ್ನು ಹೊಂದಬಹುದು. ಅ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಇಂದು ಏನಿದ್ದರೂ ಸ್ಪರ್ಧಾತ್ಮಕ ಜಗತ್ತು(Competitive World) . ವಿದ್ಯಾರ್ಥಿಗಳಂತೂ (Students) ತಮ್ಮ ಭವಿಷ್ಯ (Feutre) ರೂಪಿಸಿಕೊಳ್ಳಲು ಸಾಕಷ್ಟು ಶ್ರಮವಹಿಸಬೇಕಾಗಿರುವುದು ಇಂದಿನ ಅನಿವಾರ್ಯತೆ. ಆದರೆ, ಬೆಳೆಯುತ್ತಿರುವ ತಂತ್ರಜ್ಞಾನ ಹಾಗೂ ಹೆಚ್ಚುತ್ತಿರುವ ವೈವಿಧ್ಯಮಯ ಆದಾಯದ ಮೂಲಗಳು ಇಂದಿನ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶದ ದಾರಿ ತೆರೆದು ಕೊಡುತ್ತಿದೆ ಎಂದರೂ ತಪ್ಪಿಲ್ಲ. ಹೌದು, ಇಂದಿನ ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಮುಂದೆ ತಮ್ಮ ಭವಿಷ್ಯ ಮತ್ತಷ್ಟು ಗಟ್ಟಿಯಾಗುವಂತೆ ಹಾಗೂ ಹಣಕಾಸಿನ ಕೊರತೆ ಕಾಡಿಸದಂತೆ ಇಂದೇ ಹಲವು ಮಾರ್ಗಗಳಲ್ಲಿ ಹೂಡಿಕೆ ಮಾಡುವ ಸೌಭಾಗ್ಯ ಇಂದಿನ ವಿದ್ಯಾರ್ಥಿಗಳಿಗೆ ಸಿಕ್ಕಿದೆ.

ಇದನ್ನೂ ಓದಿ: PM Kisan: ಮೇ 14 ಇಲ್ಲ 15ರಂದು ರೈತರ ಖಾತೆಗಳಿಗೆ ಹಣ ಜಮೆ, ಆದರೆ ಇದನ್ನು ಮಾಡಬೇಕು

ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಹಲವಾರು ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡಿ ತದನಂತರ ಗಟ್ಟಿಯಾದ ಆರ್ಥಿಕ ಭವಿಷ್ಯ ಹಾಗೂ ಉತ್ತಮವಾದ ಜ್ಞಾನವನ್ನು ತಮ್ಮ ಪಾಲಾಗುವಂತೆ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಯಾವೆಲ್ಲ ಮಾರ್ಗಗಳ ಮೂಲಕ ವಿದ್ಯಾರ್ಥಿಗಳು ಹಣ ಹೂಡಿಕೆ ಮಾಡಬಹುದಾಗಿದೆ ಎಂಬುದರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಎಸ್‍ಐಪಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್) : ಇಂದು ಮ್ಯುಚುಯಲ್ ಫಂಡ್ಸ್ ಬಗ್ಗೆ ಯಾರು ತಾನೇ ಕೇಳಿಲ್ಲ ಹೇಳಿ. ಹೌದು, ಈ ಕ್ಷೇತ್ರವು ಹಣ ಹೂಡಿಕೆಗೆ ಒಂದು ಅದ್ಭುತ ಮಾರ್ಗವಾಗಿದೆ. ವ್ಯವಸ್ಥಿತವಾಗಿ ಹಣವನ್ನು ವಿದ್ಯಾರ್ಥಿಯಿದ್ದಾಗಿನಿಂದಲೇ ಹೂಡುತ್ತ ಮುಂದೆ ಭವಿಷ್ಯದಲ್ಲಿ ಅದ್ಭುತ ಆದಾಯ ನಿಮ್ಮದಾಗುವಂತೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಾಗಿರುವಾಗ ಷೇರು ಮಾರುಕಟ್ಟೆ ವ್ಯವಹಾರದ ಬಗ್ಗೆ ಕಡಿಮೆ ಜ್ಞಾನ ಇರುವುದರಿಂದ ಆದಷ್ಟು ವಿದ್ಯಾರ್ಥಿಗಳು ಪರಿಣಿತರಿಂದ ನಡೆಸಲಾಗುತ್ತಿರುವ ಮ್ಯುಚುಯಲ್ ಫಂಡ್ಸ್‌ಗಳಲ್ಲಿ ಹಣ ಹೂಡಬಹುದು. ಇದರಲ್ಲಿ ಹೆಚ್ಚು ಹಣ ಹೂಡಬೇಕೆಂಬ ನಿರ್ಬಂಧವೇನೂ ಇಲ್ಲ. ನಿಮ್ಮ ಖರ್ಚುವೆಚ್ಚಗಳನ್ನು ಲೆಕ್ಕ ಹಾಕಿ ಮಿಕ್ಕ ಹಣವನ್ನು ವ್ಯವಸ್ಥಿತವಾಗಿ ಹೂಡುವ ಮೂಲಕ ನಿಮ್ಮ ಭವಿಷ್ಯವನ್ನು ನೀವೇ ಉತ್ತಮವಾಗಿ ನಿಯಂತ್ರಿಸಬಹುದು. ಮ್ಯುಚುಯಲ್ ಫಂಡ್ಸ್‌ನಲ್ಲಿ ನೀವು ಕನಿಷ್ಠ ತಿಂಗಳಿಗೆ 500 ರೂ. ಹೂಡುವ ಮೂಲಕ ಪ್ರಾರಂಭಿಸಬಹುದು. ಕೆಲವು ಮ್ಯುಚುಯಲ್ ಫಂಡ್‌ಗಳಲ್ಲಿ 100 ರೂ. ಕನಿಷ್ಠವಾಗಿ ಹೂಡಲು ಅವಕಾಶವಿದೆ.

ಬಾಂಡ್‌ಗಳಲ್ಲಿ ಹೂಡಿಕೆ : ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಈ ಬಾಂಡ್‌ಗಳನ್ನು ಹಣ ಸಂಗ್ರಹಿಸಲು ಬಳಸುತ್ತಿರುತ್ತವೆ. ಹಾಗಾಗಿ, ಭಾರತೀಯ ವಿದ್ಯಾರ್ಥಿಗಳಿಗೆ ಇದು ಇನ್ನೊಂದು ಹಣ ಹೂಡಿಕೆಯ ಉತ್ತಮ ಮಾರ್ಗವಾಗಿದೆ. ಸಾಮಾನ್ಯವಾಗಿ ಸರ್ಕಾರವೇ ಪೂರ್ವನಿರ್ಧರಿತ ಬಡ್ಡಿದರಗಳೊಂದಿಗೆ ಬಾಂಡ್‌ಗಳನ್ನು ವಿತರಿಸುತ್ತದೆ. ಆದರೆ ವಿದ್ಯಾರ್ಥಿಗಳಾದ ನೀವು ನಿಶ್ಚಿತ ಅವಧಿಯವರೆಗಿನ ಬಾಂಡ್ ಮೇಲೆ ಹಣ ಹೂಡಿ ಅದು ಮೆಚ್ಯೂರ್ ಆದಾಗ ಉತ್ತಮ ಆದಾಯ ನಿಮ್ಮದಾಗಿಸಿಕೊಳ್ಳಬಹುದು. ಇದರಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿಯ ಎರಡು ಬಾಂಡ್‌ಗಳು ಲಭ್ಯವಿದ್ದು ದೀರ್ಘಾವಧಿಯ ಬಾಂಡ್‌ಗಳು ಹೆಚ್ಚು ಉತ್ತಮ ಆದಾಯಗಳ ಫಲ ನೀಡುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಇದರಲ್ಲಿ ಹಣ ತೊಡಗಿಸುವಿಕೆ ಉತ್ತಮ ಅವಕಾಶ ಎಂದೇ ಹೇಳಬಹುದು.

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ : ಈಗಾಗಲೇ ಕ್ರಿಪ್ಟೋ ಕರೆನ್ಸಿ ಹೂಡಿಕೆ ಸರ್ಕಾರ ಮಾನ್ಯ ಮಾಡಿದೆ. ಇಂದಿನ ವಿದ್ಯಾರ್ಥಿಗಳು ಸಾಕಷ್ಟು ಜ್ಞಾನವಂತರಾಗಿದ್ದು ತಂತ್ರಜ್ಞಾನಾಧಾರಿತ ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಬಹುತೇಕ ತಿಳಿದುಕೊಂಡಿರುತ್ತಾರೆ. ಹಾಗಾಗಿ ಇದೂ ಸಹ ಹೂಡಿಕೆಗೆ ಒಂದು ಉತ್ತಮ ಮಾರ್ಗವಾಗಿದೆ. ಕ್ರಿಪ್ಟೋ ಕರೆನ್ಸಿಯಾದ ಬಿಟ್ ಕಾಯಿನ್‌ ಮೊದಲ ಬಾರಿಗೆ ಬಿಡುಗಡೆಯಾಗಿದ್ದು 2009 ರಲ್ಲಿ. ಆಗ ಇದರ ಮೌಲ್ಯ 0.0001 ಡಾಲರ್‌ಗಳಾಗಿತ್ತು. ಆದರೆ ವರ್ಷಗಳ ಬಳಿಕ ಇದರ ಬೆಲೆ ಹೆಮ್ಮರದಂತೆ ಬೆಳೆದಿದ್ದು ಭವಿಷ್ಯದಲ್ಲಿ ಈ ಕ್ಷೇತ್ರವು ಭರವಸೆಯ ಕ್ಷೇತ್ರವಾಗಿ ರೂಪಗೊಳ್ಳುತ್ತಿದೆ. ಆದರೂ, ಈ ಕ್ಷೇತ್ರದಲ್ಲಿ ಕನಿಷ್ಠ 100 ರೂ. ರಿಂದ ಹೂಡಿಕೆ ಮಾಡಬಹುದು.

ಠೇವಣಿ ಯೋಜನೆ : ಸದ್ಯ ಬಹು ಸಂಖ್ಯೆಯ ವಿದ್ಯಾರ್ಥಿಗಳ ನೆಚ್ಚಿನ ಕ್ಷೇತ್ರ ಇದಾಗಿದೆ. ಕಾರಣ ನಿಮ್ಮ ಹಣದ ಮೇಲೆ ಇದು ಒದಗಿಸುವ ಅತ್ಯದ್ಭುತ ಸುರಕ್ಷತೆ. ಇದರಲ್ಲಿ ಎರಡು ಬಗೆಗಳಿವೆ. ನಿಶ್ಚಿತ ಠೇವಣಿ ಹಾಗೂ ಪುನರಾವರ್ತಿತ ಠೇವಣಿ. ಇವು ಜನಭಾಷೆಯಲ್ಲಿ ಫಿಕ್ಸೆಡ್‌ ಡಿಪಾಸಿಟ್ ಹಾಗೂ ರಿಕರ್‍ರಿಂಗ್ ಡೆಪಾಸಿಟ್ ಎಂದೇ ಜನಪ್ರಿಯವಾಗಿವೆ. ಎಫ್.ಡಿಯಲ್ಲಿ ಪೂರ್ವನಿರ್ಧರಿತ ಬಡ್ಡಿದರವನ್ನು ಒಂದೇ ಕಂತಿನಲ್ಲಿ ಹಣ ಹೂಡುವ ಅವಧಿಗೆ ತಕ್ಕಂತೆ ನಿರ್ಧರಿಸಲಾಗಿರುತ್ತದೆ. ಅವಧಿ ಪೂರ್ಣಗೊಂಡ ನಂತರ ಹೇಳಿದ ಬಡ್ಡಿ ದರಗಳಲ್ಲೇ ಹಣವನ್ನು ನೀಡಲಾಗುತ್ತದೆ. ರಿಕರ್‍ರಿಂಗ್ ಡೆಪಾಸಿಟ್‌ನಲ್ಲಿ ಇಂತಿಷ್ಟು ಅವಧಿಯವರೆಗೆ ಪ್ರತಿ ತಿಂಗಳು ನಿರ್ದಿಷ್ಟ ಹಣದ ಕಂತನ್ನು ಕಟ್ಟುತ್ತಿರಬೇಕಾಗಿದ್ದು ಅವಧಿ ಪೂರ್ಣಗೊಂಡ ನಂತರ ಪೂರ್ವನಿರ್ಧರಿತ ಬಡ್ಡಿದರಗಳ ಲೆಕ್ಕಾಚಾರದಂತೆ ಅಂತಿಮ ಹಣದ ರಾಶಿ ಸಿಗುತ್ತದೆ.

ಷೇರು ಮಾರುಕಟ್ಟೆ : ನೀವು ವಿದ್ಯಾರ್ಥಿಯಿದ್ದಾಗಲೇ ಷೇರು ಮಾರುಕಟ್ಟೆ ವ್ಯವಹರಿಸುವ ರೀತಿಯ ಜ್ಞಾನವನ್ನು ಹೊಂದಿದ್ದರೆ ಹಾಗೂ ಸವಾಲುಗಳನ್ನು ಎದುರಿಸುವ ಶಕ್ತಿ ಸಾಮರ್ಥ್ಯ ನಿಮ್ಮಲ್ಲಿದ್ದರೆ ಅದ್ಭುತ ಆದಾಯಕ್ಕಾಗಿ ಷೇರು ಮಾರುಕಟ್ಟೆಯಲ್ಲೂ ಸಹ ಹಣ ಹೂಡಬಹುದಾಗಿದೆ. ಆದರೆ, ಷೇರು ಮಾರುಕಟ್ಟೆ ಎಂಬುದು ಬಲು ಚಂಚಲವಾಗಿದ್ದು ನಷ್ಟ ಅನುಭವಿಸುವ ಅಪಾಯಗಳ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಎಂಬುದನ್ನು ಮರೆಯದಿರಿ.

ಇದನ್ನೂ ಓದಿ: Akshaya Tritiya Offers: ಅಕ್ಷಯ ತೃತೀಯ ಆಫರ್! ಉಚಿತವಾಗಿ ಚಿನ್ನದ ನಾಣ್ಯ ನಿಮ್ಮದಾಗುತ್ತಾ ನೋಡಿ

ಸಮತೋಲಿತವಾದ ಮ್ಯೂಚುವಲ್ ಫಂಡ್ : ಇದು ಮ್ಯೂಚುವಲ್ ಫಂಡ್ ಹಾಗೂ ಈಕ್ವಿಟಿಗಳ ಮಿಶ್ರಣವಾಗಿದೆ. ಇದರಲ್ಲಿ ನಿಶ್ಚಿತ ದಿನ ಅಂತ್ಯವಾಗುವ ಬಗ್ಗೆ ಮಾಹಿತಿಯಿದ್ದು ಅದನ್ನು ಗಮನದಲ್ಲಿರಿಸಿಕೊಂಡು ನಿಮ್ಮ ಅವಶ್ಯಕತೆಗನುಗುಣವಾಗಿ ಅಲ್ಪ ಅಥವಾ ದೀರ್ಘಾವಧಿಯ ಫಂಡ್‌ಗಳಲ್ಲಿ ಹಣ ತೊಡಗಿಸಬಹುದು. ಇದೂ ಸಹ ಕಾಲಾಂತರದಲ್ಲಿ ನಿಮಗೆ ಉತ್ತಮ ಆದಾಯ ನೀಡುವ ಹೂಡಿಕೆಯ ಮಾರ್ಗವಾಗಿದೆ.

ಹೆಚ್ಚು ಹಣ ನೀಡುವ ಉಳಿತಾಯ ಖಾತೆ ಅಥವಾ ಸರ್ಟಿಫಿಕೇಟ್ ಆಫ್ ಡೆಪಾಸಿಟ್ : ವಿದ್ಯಾರ್ಥಿಗಳು ಕಡಿಮೆ ಹೂಡಿಕೆ ಮೂಲಕ ತಮ್ಮ ಹಣ ವೃದ್ಧಿ ಮಾಡಿಕೊಳ್ಳಬಹುದಾದ ಮತ್ತೊಂದು ಉತ್ತಮ ಮಾರ್ಗವಾಗಿದೆ. ಇದರಲ್ಲಿ ಬ್ಯಾಂಕುಗಳಿಗೆ ಇಂತಿಷ್ಟು ಅವಧಿಯವರೆಗೆ ಇಂತಿಷ್ಟು ಹಣ ಕಮಿಟ್ ಮಾಡುವ ಮೂಲಕ ಹೆಚ್ಚು ಬಡ್ಡಿದರ ನೀಡುವ ಉಳಿತಾಯ ಖಾತೆಗಳನ್ನು ಹೊಂದಬಹುದು. ಅವಧಿಯ ನಂತರ ಮೊದಲೇ ನಿರ್ಧರಿತ ಬಡ್ಡಿದರದಲ್ಲಿ ಹಣ ನಿಮಗೆ ದೊರಕುತ್ತದೆ. ಇದು ಉಳಿತಾಯ ಖಾತೆ ಆಗಿರುವುದರಿಂದ ಯಾವುದೇ ಅವಶ್ಯಕ ಸಂದರ್ಭದಲ್ಲಿ ನೀವು ಹಣ ತೆಗೆಯಲೂ ಸಹ ಇಲ್ಲಿ ಅವಕಾಶವಿದೆ.

ಕಡಿಮೆ ಶುಲ್ಕಗಳ ಬ್ರೋಕರ್ : ಇಂದು ಸ್ಟಾಕ್ ಮಾರುಕಟ್ಟೆಗಳಲ್ಲಿ ಹಣ ಹೂಡಿಕೆ ಉತ್ತಮ ಆದಾಯದ ಮಾರ್ಗವಾಗಿ ಜನಪ್ರಿಯವಾಗುತ್ತಿದೆ. ನಿಮಗೆ ಈ ಕುರಿತು ಹೆಚ್ಚು ಜ್ಞಾನವಿಲ್ಲದಿದ್ದಲ್ಲಿ ಕಡಿಮೆ ಶುಲ್ಕ ತೆಗೆದುಕೊಳ್ಳುವ ಅಥವಾ ಉಚಿತವಾಗಿ ಆದರೆ ವಿಶ್ವಾಸಾರ್ಹತೆ ಹೊಂದಿರುವ ಬ್ರೋಕರ್‌ಗಳ ಮೂಲಕ ನೀವು ಹಣ ಹೂಡಿ ಉತ್ತಮ ಆದಾಯಗಳಿಸಬಹುದು.

ಸಣ್ಣ ಮೊತ್ತದ ಮೇಲೆ ಎಂಐ‍ಎಸ್ : ಅಂದರೆ ಸಣ್ಣ ಮೊತ್ತದ ಹಣದ ಮೇಲೆ ಮಂಥ್ಲಿ ಇನ್ವೆಸ್ಟ್‌ಮೆಂಟ್ ಸ್ಕೀಮ್ ಅನ್ನು ನೀವು ಹೂಡಿಕೆಯ ಮಾರ್ಗವಾಗಿ ಬಳಸಬಹುದು. ಇಲ್ಲಿ ಬ್ರೋಕರ್ ಶುಲ್ಕ ನೀಡುವ ಅವಶ್ಯಕತೆಯಿರುವುದಿಲ್ಲ. ಇದೂ ಸಹ ಮ್ಯುಚುವಲ್ ಫಂಡ್ ಗಳಲ್ಲಿನ ಹೂಡಿಕೆಯಾಗಿದ್ದು ಕಡಿಮೆ ಪ್ರಮಾಣದ ಮೊತ್ತವನ್ನು ನೀವು ಪ್ರತಿ ತಿಂಗಳು ಕಟ್ಟುತ್ತಿರುತ್ತೀರಿ. ಮುಂದೆ ಇದು ನಿಮಗೆ ಉತ್ತಮ ಆದಾಯವನ್ನು ತಂದು ಕೊಡುತ್ತದೆ.

ಇಂಡೆಕ್ಸ್ ಫಂಡ್ : ಹೂಡಿಕೆಯ ಕ್ಷೇತ್ರದಲ್ಲಿ ನೀವು ಹೊಸಬರಾಗಿದ್ದರೆ ಈ ಮಾರ್ಗವು ನಿಮಗೆ ಬಹಳಷ್ಟು ಅನುಕೂಲಕರವಾಗಿರುತ್ತದೆ. ಇದನ್ನು ಷೇರು ಮಾರುಕಟ್ಟೆಯಲ್ಲಿನ ಬಹುತೇಕ ಸುರಕ್ಷಿತ ಹೂಡಿಕೆ ಎಂದೇ ಹೇಳಬಹುದು. ಇಂಡೆಕ್ಸ್ ಫಂಡ್‌ನಲ್ಲಿ ಇಂಡೆಕ್ಸ್ ಸ್ಟಾಕ್‌ನಲ್ಲಿರುವ ಎಲ್ಲ ಷೇರುಗಳನ್ನು ಹೊಂದಿರುತ್ತ?
Published by:Kavya V
First published: