Post Officeನ ಈ ಯೋಜನೆಯಲ್ಲಿ ಕೇವಲ 94 ರೂ. ಹೂಡಿಕೆ ಮಾಡಿ ₹14 ಲಕ್ಷಗಳನ್ನು ಪಡೆಯಿರಿ

Gram Sumangal Rural Postal Life Insurance Scheme: ನೀವು ಇದರಲ್ಲಿ ಕೇವಲ 95 ರೂ. ಹೂಡಿಕೆ ಮಾಡಿದರೆ, ನೀವು ಸ್ಕೀಮ್ ಅಂತ್ಯದ ವೇಳೆಗೆ 14 ಲಕ್ಷ ರೂಪಾಯಿಯನ್ನು ಪಡೆಯಬಹುದು. ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಯನ್ನು 1995 ರಲ್ಲಿ ಆರಂಭಿಸಲಾಗಿದೆ.

ಪೋಸ್ಟ್​​ ಆಫೀಸ್​​ ಬ್ಯಾಂಕ್​

ಪೋಸ್ಟ್​​ ಆಫೀಸ್​​ ಬ್ಯಾಂಕ್​

  • Share this:
ಹಣ ಹೂಡಿಕೆ ಮಾಡಲು ಸಾಕಷ್ಟು ಯೋಜನೆಗಳಿವೆ. ಆದರೆ ಪೋಸ್ಟ್ ಆಫೀಸ್ ಯೋಜನೆಗಳು(post office schemes) ಸುರಕ್ಷಿತ ಮತ್ತು ಪಕ್ಕಾ ಲಾಭದಾಯಕವಾಗಿರೋದರಿಂದ ನಿಮ್ಮ ಹೂಡಿಕೆ ಮಾಡಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.  ಭವಿಷ್ಯದಲ್ಲಿ ಹೆಚ್ಚಿನ ಪ್ರಯೋಜನಗಳಿಗಾಗಿ ನೀವು ಗ್ರಾಮ ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದೊಂದು ದತ್ತಿ ಯೋಜನೆಯಾಗಿದ್ದು, ಇದು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಹಣವನ್ನು ಹಿಂದಿರುಗಿಸುವ ಜೊತೆಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.

ಕೇವಲ 95 ರೂ. ಹೂಡಿಕೆ

ಈ ಯೋಜನೆಯ ಇನ್ನೊಂದು ವಿಷಯವೆಂದರೆ ನೀವು ಇದರಲ್ಲಿ ಕೇವಲ 95 ರೂ. ಹೂಡಿಕೆ ಮಾಡಿದರೆ, ನೀವು ಸ್ಕೀಮ್ ಅಂತ್ಯದ ವೇಳೆಗೆ 14 ಲಕ್ಷ ರೂಪಾಯಿಯನ್ನು ಪಡೆಯಬಹುದು. ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಯನ್ನು 1995 ರಲ್ಲಿ ಆರಂಭಿಸಲಾಗಿದೆ. ಈ ಯೋಜನೆಯಡಿ ಪೋಸ್ಟ್ ಆಫೀಸ್ 6 ವಿವಿಧ ವಿಮಾ ಯೋಜನೆಗಳನ್ನು ನೀಡುತ್ತದೆ.

ಬೋನಸ್ ಮೊತ್ತವನ್ನು ನೀಡಲಾಗುತ್ತದೆ

ಕಾಲಕಾಲಕ್ಕೆ ಹಣದ ಅಗತ್ಯವಿರುವ ಜನರಿಗೆ ಪಾಲಿಸಿಯು ಪ್ರಯೋಜನವನ್ನು ನೀಡುತ್ತದೆ. ಗ್ರಾಮ ಸುಮಂಗಲ್ ಯೋಜನೆಯಲ್ಲಿ 10 ಲಕ್ಷ ರೂ. ಪಾಲಿಸಿಯನ್ನು ಹೊಂದಿರುವ ವ್ಯಕ್ತಿಯು ಸತ್ತರೆ, ನಾಮಿನಿಗೆ ವಿಮಾ ಮೊತ್ತ ಹಾಗೂ ಬೋನಸ್ ಮೊತ್ತವನ್ನು ನೀಡಲಾಗುತ್ತದೆ.  ಪಾಲಿಸಿಯನ್ನು ಎರಡು ಅವಧಿಗೆ ಪಡೆಯಬಹುದು ಮತ್ತು ಇದು 15 ವರ್ಷ ಮತ್ತು 20 ವರ್ಷಗಳನ್ನು ಒಳಗೊಂಡಿದೆ. ಈ ಪಾಲಿಸಿಗೆ ಕನಿಷ್ಠ ವಯಸ್ಸು 19 ವರ್ಷಗಳು ಆಗಿರಬೇಕು.

ಹಣವನ್ನು ಹಿಂಪಡೆಯಬಹುದು

15 ವರ್ಷಗಳ ಪಾಲಿಸಿಯಲ್ಲಿ 6 ವರ್ಷಗಳ ನಂತರ 20-20%ರಷ್ಟು ಹಣ ಹಿಂಪಡೆಯಬಹುದು. 9 ವರ್ಷಗಳು ಮತ್ತು 12 ವರ್ಷಗಳು ಪೂರ್ಣಗೊಂಡ ನಂತರವೂ ಹಣ ಹಿಂಪಡೆಯಬಹುದು. ಅದೇ ಸಮಯದಲ್ಲಿ ಉಳಿದ 40% ಹಣವನ್ನು ಮುಕ್ತಾಯದ ಮೇಲೆ ಬೋನಸ್ ಸೇರಿಸಿ ನೀಡಲಾಗುತ್ತದೆ. ಅಂತೆಯೇ, 20 ವರ್ಷಗಳ ಪಾಲಿಸಿಯಲ್ಲಿ, 20-20 ಪ್ರತಿಶತದಷ್ಟು ಹಣವು 8 ವರ್ಷಗಳು, 12 ವರ್ಷಗಳು ಮತ್ತು 16 ವರ್ಷಗಳ ಅವಧಿಯ ಮೇಲೆ ಲಭ್ಯವಿದೆ. ಉಳಿದ 40% ಹಣವನ್ನು ಬೋನಸ್ ಜೊತೆಗೆ ಮುಕ್ತಾಯದ ವೇಳೆ ನೀಡಲಾಗುತ್ತದೆ.

ಇದನ್ನೂ ಓದಿ: Post Officeನ ಈ ಯೋಜನೆಯಲ್ಲಿ ಕೇವಲ 100 ರೂಪಾಯಿಯಿಂದ 5 ವರ್ಷದಲ್ಲಿ 20 ಲಕ್ಷ ಗಳಿಸಬಹುದು

ಎಷ್ಟು ಪ್ರೀಮಿಯಂ ಕಟ್ಟಬೇಕು..? 

ಪಾಲಿಸಿಯ ಪ್ರೀಮಿಯಂ ಪ್ರಕಾರ, 25 ವರ್ಷದ ವ್ಯಕ್ತಿಯು ಈ ಪಾಲಿಸಿಯನ್ನು 20 ವರ್ಷಗಳವರೆಗೆ  7 ಲಕ್ಷ ಮೊತ್ತದ ವಿಮಾ ಮೊತ್ತದೊಂದಿಗೆ ತೆಗೆದುಕೊಂಡರೆ, ಆತ ಪ್ರತಿ ತಿಂಗಳು 2,853 ರೂ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಅಂದರೆ ಸುಮಾರು ದಿನನಿತ್ಯ 95 ರೂಪಾಯಿ. ತ್ರೈಮಾಸಿಕ ಪ್ರೀಮಿಯಂ 8,449 ರೂ,  ಅರ್ಧ ವಾರ್ಷಿಕ ಪ್ರೀಮಿಯಂ 16,715 ರೂ. ಮತ್ತು ವಾರ್ಷಿಕ ಪ್ರೀಮಿಯಂ 32,735 ರೂ. ಆಗಿರುತ್ತದೆ.

ಮೆಚ್ಯೂರಿಟಿ ನಂತರ ಎಷ್ಟು ಹಣ ಸಿಗುತ್ತೆ..? 

ಪಾಲಿಸಿಯು 20-20% ದರದಲ್ಲಿ 8, 12 ಮತ್ತು 16 ನೇ ವರ್ಷದಲ್ಲಿ 1.4-1.4 ಲಕ್ಷಗಳನ್ನು ಪಾವತಿಸಲು ಅನುಮತಿಸುತ್ತದೆ. ಅಂತಿಮವಾಗಿ 20 ನೇ ವರ್ಷದಲ್ಲಿ 2.8 ರೂ ಲಕ್ಷ ಮೊತ್ತವೂ ಲಭ್ಯವಿರುತ್ತದೆ. ಪ್ರತಿ ಸಾವಿರಕ್ಕೆ ವಾರ್ಷಿಕ ಬೋನಸ್ 48 ರೂ ಆಗಿದ್ದಾಗ, 7 ಲಕ್ಷದ ವಿಮಾ ಮೊತ್ತದ ವಾರ್ಷಿಕ ಬೋನಸ್ 33,600 ರೂ. ಆಗಿರುತ್ತದೆ. ಸಂಪೂರ್ಣ ಪಾಲಿಸಿ ಅವಧಿಯು 6.72 ಲಕ್ಷ ರೂ ಬೋನಸ್ ನೀಡುತ್ತದೆ. ಪಾಲಿಸಿಯು 20 ವರ್ಷಗಳಲ್ಲಿ ಒಟ್ಟು 13.72 ಲಕ್ಷ ರೂಪಾಯಿ ಆಗಿರುತ್ತದೆ. ಈ ಪೈಕಿ, 4.2 ಲಕ್ಷ ರೂ.ಗಳು ಈಗಾಗಲೇ ಮನಿ ಬ್ಯಾಕ್ ಆಗಿ ಲಭ್ಯವಿರುತ್ತವೆ ಮತ್ತು ಮೆಚ್ಯೂರಿಟಿಯ ನಂತರ 9.52 ಲಕ್ಷಗಳನ್ನು ಒಟ್ಟಿಗೆ ನೀಡಲಾಗುವುದು.
Published by:Kavya V
First published: