Business Tips: ತುಳಸಿ ಕೃಷಿಯಿಂದ ತಿಂಗಳಿಗೆ ಲಕ್ಷಗಟ್ಟಲೆ ಆದಾಯ! ಈ ಉದ್ಯೋಗ ಸಖತ್​ ಈಸಿ ಕೂಡ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಷ್ಟೆಲ್ಲಾ ಪ್ರಯೋಜನ ಇರುವ ತುಳಸಿ ವಾಣಿಜ್ಯವಾಗಿಯೂ ಲಾಭದಾಯಕವಾಗಿದೆ. ತುಳಸಿ ಕೃಷಿ ರೈತರಿಗೆ ಆದಾಯ ತಂದು ಕೊಡುತ್ತದೆ.

  • Share this:

ತುಳಸಿ ಗಿಡ ಹಿಂದೂ ಧರ್ಮದಲ್ಲಿ (Hindu Religon) ಪೂಜನೀಯ ಸ್ಥಾನ ಪಡೆಯುವುದರ ಜೊತೆಗೆ ಆರೋಗ್ಯ ದೃಷ್ಟಿಯಿಂದಲೂ ಈ ಗಿಡ ಎತ್ತಿದ ಕೈ. ಮನೆಯಲ್ಲಿ ಒಂದಾದರೂ ತುಳಸಿ ಗಿಡ ಇರಬೇಕು ಎಂಬ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ತುಳುಸಿ ಗಿಡ ಪಾಸಿಟಿವ್‌ನೆಸ್‌ ಅನ್ನು ಸೆಳೆಯುತ್ತದೆ, ಸಮೃದ್ಧಿ, ಸಂಪತ್ತನ್ನು ಆಕರ್ಷಿಸುತ್ತದೆ ಎಂಬುದರ ಜೊತೆ ಜೊತೆಯೇ ಇದರಲ್ಲಿ ಲಕ್ಷ್ಮಿನಾರಾಯಣರು (Lakshmi Narayana) ನೆಲೆಸಿದ್ದಾರೆ ಎಂಬ ಕಾರಣಕ್ಕೆ ಹಿಂದೂಗಳು ಈ ಗಿಡವನ್ನು ಮನೆಯಲ್ಲಿ ನೆಡುತ್ತಾರೆ. ಜೊತೆಗೆ ತುಳುಸಿ ಆರೋಗ್ಯದ ಸಲುವಾಗಿ ಬಹಳ ಪ್ರಾಮುಖ್ಯತೆ ಪಡೆದಿದೆ. ಕೆಮ್ಮು ನಿವಾರಣೆ, ರೋಗ ನಿರೋಧಕ (Immunity) ಶಕ್ತಿ, ಚರ್ಮದ ಆರೈಕೆಯಲ್ಲೂ ಇದನ್ನು ಬಳಸಲಾಗುತ್ತದೆ.


ಆದಾಯ ತರುವ ತುಳಸಿ ಕೃಷಿ
ಇಷ್ಟೆಲ್ಲಾ ಪ್ರಯೋಜನ ಇರುವ ತುಳಸಿ ವಾಣಿಜ್ಯವಾಗಿಯೂ ಲಾಭದಾಯಕವಾಗಿದೆ. ತುಳಸಿ ಕೃಷಿ ರೈತರಿಗೆ ಆದಾಯ ತಂದು ಕೊಡುತ್ತದೆ.
ವಾಣಿಜ್ಯಿಕ ತುಳಸಿ ಕೃಷಿ, ಕ್ರಮೇಣ ವಿಶ್ವದ ಅತ್ಯಂತ ಲಾಭದಾಯಕ ವ್ಯಾಪಾರ ಉದ್ಯಮಗಳಲ್ಲಿ ಒಂದಾಗಿದೆ, ವಿಶೇಷವಾಗಿ ಭಾರತದಲ್ಲಿ. ತುಳಸಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ್ದು, ಅದರ ಕೃಷಿಯಿಂದ ಲಕ್ಷ ಲಕ್ಷ ಆದಾಯ ಗಳಿಸಬಹುದಾಗಿದೆ.


15 ಸಾವಿರ ರೂ. ಹೂಡಿಕೆ ಮಾಡಿದರೆ ಸಾಕು ಲಕ್ಷ ಲಕ್ಷ ಎಣಿಸಬಹುದು
ಹೌದು, ಸುಮಾರು 15,000 ರೂ ಹೂಡಿಕೆಯನ್ನು ತುಳಸಿ ಕೃಷಿಯಲ್ಲಿ ಮಾಡಿದರೆ ಬರೋಬ್ಬರಿ 3,00,000 ರೂ.ವರೆಗೆ ಆದಾಯ ಗಳಿಸಬಹುದಾಗಿದೆ. ಬೆಳೆ ಕೂಡ ಮೂರು ತಿಂಗಳಿಗೆ ಕಟಾವಿಗೆ ಬರುತ್ತದೆ.


ರಾಜೇಶ್ ವರ್ಮಾ ಎಂಬ ರೈತ ತುಳಸಿ ಕೃಷಿ ಮಾಡಿದ್ದು, ಅದರ ಅನುಭವವನ್ನು ಹಂಚಿಕೊಂಡಿದ್ದಾರೆ ನೋಡಿ.
ಬಾರಾಬಂಕಿಯ ತೆಹಸಿಲ್ ಫತೇಪುರ್ ಜಿಲ್ಲೆಯ ಬಂಭನ್‌ಪುರವಾದ ಕೃಷಿಕ ರಾಜೇಶ್‌, ತುಳಸಿ ಕೃಷಿ ಆರಂಭಿಸಿ ಇಂದು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಸಾಂಪ್ರಾದಾಯಿಕ ಶೈಲಿಯಲ್ಲಿ ಮೊದಲಿಗೆ ಕೃಷಿ ಆರಂಭಿಸಿದ ರಾಜೇಶ್‌ಗೆ ಮೊದಲು ಬೆಳೆ ಕೈಹಿಡಿಯಲಿಲ್ಲ.


ಇದನ್ನೂ ಓದಿ: ಈ ಬೆಳೆ ಬೆಳೆದರೆ ರೈತರಿಗೆ ದುಡ್ಡೋ ದುಡ್ಡು! ಒಂದು ಎಕರೆಗೆ 60 ರಿಂದ 70 ಲಕ್ಷ ಆದಾಯ!


ನಂತರ ಇವರು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಸ್‌ನಿಂದ ತುಳಸಿ ಕೃಷಿಯ ಬಗ್ಗೆ ತಿಳಿದುಕೊಂಡರು. ಸುಮಾರು 4ರಿಂದ 5,000 ಹೂಡಿಕೆ ಮಾಡಿ ತುಳಸಿ ತೋಟ ಮಾಡಿದರೆ, ಇದು 40-50,000 ರೂ ಲಾಭವನ್ನು ಪಡೆಯಬಹುದು ಎನ್ನುತ್ತಾರೆ ರಾಜೇಶ್. ಇವರು ತಮ್ಮ ಜಮೀನಿನಲ್ಲಿ ಸುಮಾರು ಎರಡು ಲಕ್ಷವನ್ನು ತುಳಸಿ ಕೃಷಿಯಿಂದ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ತುಳಸಿ ಕೃಷಿ ವ್ಯವಹಾರದ ಪ್ರಯೋಜನಗಳು
* ತುಳಸಿ ಉತ್ಪನ್ನಗಳ ಔಷಧೀಯ ಗುಣಗಳಿಂದಾಗಿ ಮಾರುಕಟ್ಟೆಯಲ್ಲಿ ಗಮನಾರ್ಹ ಬೇಡಿಕೆಯಿದೆ. ಹೀಗಾಗಿ ಕೃಷಿಯು ಲಾಭದಾಯಕ ವ್ಯವಹಾರವಾಗಿದೆ.
* ನಾಟಿ ಮತ್ತು ಇತರ ಕೃಷಿ ವೆಚ್ಚಗಳು ತುಲನಾತ್ಮಕವಾಗಿ ಕಡಿಮೆ, ಇದ್ದು ಕೃಷಿಯು ಸುಲಭದ ಕೆಲಸವಾಗಿದೆ.


* ಹೂಡಿಕೆಯು ಸಹ ಕಡಿಮೆಯಾಗಿದ್ದು, ನೀವು ಹೂಡಿಕೆ ಮಾಡಿದ ಹಣವನ್ನು ಅಲ್ಪಾವಧಿಯಲ್ಲಿ ಮರಳಿ ಪಡೆಯಬಹುದು.
* ತುಳಸಿ ಕೃಷಿಯು ಬಹಳ ಲಾಭದಾಯಕವಾಗಿದೆ ಏಕೆಂದರೆ ತುಳಸಿ ಬೆಳೆ ಎರಡು ಪ್ರಮುಖ ಉತ್ಪನ್ನಗಳನ್ನು ನೀಡುತ್ತದೆ: ಮೊದಲನೆಯದು, ಬೀಜಗಳು ಮತ್ತು ಇತರ ಎಲೆಗಳು. ಈ ಎರಡರಿಂದಲೂ ರೈತರು ಲಾಭ ಪಡೆಯಬಹುದಾಗಿದೆ.


ಇದನ್ನೂ ಓದಿ: ಪೇಟದ ಬಣ್ಣಕ್ಕೆ ತಕ್ಕಂತೆ ರೋಲ್ಸ್ ರಾಯ್ಸ್ ಕಾರು ಬದಲಾಯಿಸ್ತಾರೆ‌ ಈ ಉದ್ಯಮಿ!


ಇನ್ನೂ ಕೃಷಿ ಮಾಡುವಾಗ ರೈತರು, ತುಳಸಿ ವ್ಯಾಪಾರಕ್ಕಾಗಿ ಹವಾಮಾನದ ಅವಶ್ಯಕತೆಗಳು, ನರ್ಸರಿ ಬೆಳೆಸುವ ಪ್ರಕ್ರಿಯೆ, ಭೂಮಿ ತಯಾರಿಕೆ ಮತ್ತು ಇತರ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ತುಳಸಿ ಬೇಸಾಯದಲ್ಲಿ ಬಳಸಬೇಕಾದ ಕೀಟನಾಶಕಗಳು, ಕೊಯ್ಲು ಪ್ರಕ್ರಿಯೆ ಮತ್ತು ಈ ಸಸ್ಯದ ಕೊಯ್ಲಿನ ನಂತರದ ನಿರ್ವಹಣೆಯ ಬಗ್ಗೆಯೂ ಅವರಿಗೆ ಗೊತ್ತಿರಬೇಕು. ತುಳಸಿಯಲ್ಲಿ ಶ್ಯಾಮ ಮತ್ತು ರಾಮ ತುಳಸಿ ಎಂಬ ಪ್ರಬೇಧಗಳಿದ್ದು. ವಾಣಿಜ್ಯ ಕೃಷಿ ಉದ್ದೇಶಗಳಿಗಾಗಿ ರಾಮ ತುಳಸಿ ಅತ್ಯುತ್ತಮ ತಳಿ ಎನ್ನಲಾಗಿದೆ.
ತುಳಸಿ ನೆಟ್ಟರೆ ಮನೆಯಲ್ಲಿ ಲಕ್ಷ್ಮಿ ನೆಲೆಸ್ತಾಳೋ ಇಲ್ಲವೋ ಗೊತ್ತಿಲ್ಲ ಆದರೆ ತುಳಸಿ ಕೃಷಿ ಮಾತ್ರ ಕೈತುಂಬಾ ಆದಾಯ ತಂದುಕೊಡುತ್ತದೆ. ಕೃಷಿ ಬಗ್ಗೆ ಆಸಕ್ತಿ ಇರುವವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.

First published: