Post Office PPF Savings: ವರ್ಷಕ್ಕೆ ಬರೀ 500 ಉಳಿಸಿ, ಲಕ್ಷಗಟ್ಟಲೆ ಗಳಿಸಿ, ಪೋಸ್ಟ್ ಆಫೀಸಿನ ಈ ಸ್ಕೀಂ ಬಹಳ ಒಳ್ಳೆಯದು

Save in Post Office Scheme: ವರ್ಷಕ್ಕೆ 500 ರೂಪಾಯಿಗಳಿಂದ ನಿಮ್ಮ ಹೂಡಿಕೆಯನ್ನು ಆರಂಭಿಸಬಹುದು. ನಿಮ್ಮ ಬಳಿ ಹೆಚ್ಚು ಹಣ ಉಳಿದಿದ್ದರೆ ಅಥವಾ ಹೆಚ್ಚು ಹಣವನ್ನು ಉಳಿತಾಯ ಮಾಡುವ ಆಲೋಚನೆ ನಿಮಗಿದ್ದರೆ ಖಂಡಿತಾ ಹೆಚ್ಚು ಹಣವನ್ನು ಈ ಖಾತೆಗೆ ಹಾಕಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  Post Office Savings: ಇಷ್ಟು ವರ್ಷ ದುಡಿದು ಇನ್ನೇನು ನಿವೃತ್ತಿಯ ಅಂಚಿನಲ್ಲಿ ಇರುವ ಅನೇಕರಿಗೆ ಅತ್ಯುತ್ತಮವಾದ ಯೋಜನೆ ಪೋಸ್ಟ್ ಆಫೀಸ್​ ನಲ್ಲಿದೆ. ಎಷ್ಟೇ ಬ್ಯಾಂಕುಗಳು, ಇನ್ಶೂರೆನ್ಸ್ ಕಂಪೆನಿಗಳು ಬಂದು ನಾನಾ ವಿಧವಾದ ಯೋಜನೆಗಳನ್ನು ಹೊರತಂದರೂ ಹಳೆಯ ಪೋಸ್ಟ್ ಆಫೀಸಿನ ಯೋಜನೆಗಳು ಕೊಡುವಷ್ಟು ಬಡ್ಡಿ ಮತ್ತು ಲಾಭವನ್ನು (High Interest in Post Office Scheme) ಅವು ಕೊಡುವುದಿಲ್ಲ. ಹಾಗಾಗಿ ಬೇರೆಲ್ಲದಕ್ಕಿಂತ ಇದೇ ಅತ್ಯುತ್ತಮವಾದ್ದು. ಅದರಲ್ಲೂ ನಿವೃತ್ತಿಯ ನಂತರ ತಮ್ಮ ಉಳಿತಾಯ ಮತ್ತು ಖರ್ಚಿನ (Savings) ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕಾಗುತ್ತದೆ. ಪೆನ್ಶನ್ ಸ್ಕೀಂ ನ್ನು ಹೋಲುವಂತ ಈ ಯೋಜನೆ ಅತ್ಯುತ್ತಮ ರಿಟರ್ನ್ಸ್ (Good returns) ಕೊಡೋದು ಮಾತ್ರವಲ್ಲ, ಟ್ಯಾಕ್ಸ್ ನಿಂದಲೂ ಸಾಕಷ್ಟು ಉಳಿತಾಯ ಕೊಡುತ್ತದೆ. ನಿಯಮಿತವಾಗಿ ಸಂಬಳ (Salaried) ಬರುವ ಕೆಲಸವಾಗಿದ್ದರೆ ಆಗ ನಿಮ್ಮ ಸಂಬಳದಿಂದಲೇ ಈ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳಬಹುದು. ಒಂದು ವೇಳೆ ಸಂಬಳ ಬರದ ಆದಾಯ ಮೂಲ ನಿಮ್ಮದಾಗಿದ್ದರೆ ದೀರ್ಘಕಾಲದ ಉಳಿತಾಯಕ್ಕೆ ಈ ಯೋಜನೆ ಅತ್ಯುತ್ತಮ ಆಯ್ಕೆ ಎನ್ನುವುದರಲ್ಲಿ ಎರಡು ಮಾತಿಲ್ಲ.

  ಅಂದ್ಹಾಗೆ ಈ ಯೋಜನೆಯ ಹೆಸರು ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್. ಭಾರತದ ನಾಗರಿಕನಾದ ಯಾವುದೇ ವ್ಯಕ್ತಿ ಅಂಚೆ ಕಚೇರಿಯಲ್ಲಿ ಈ ಖಾತೆಯನ್ನು ತೆರೆಯಬಹುದು. ಅಷ್ಟೇ ಅಲ್ಲ, 18 ವರ್ಷದೊಳಗಿನ ಮಕ್ಕಳ ಹೆಸರಿನಲ್ಲೂ ಖಾತೆ ತೆರದು ಅದಕ್ಕೆ ಹಿರಿಯರು ಯಾರಾದರೂ ಗಾರ್ಡಿಯನ್ ಆಗಿಯೂ ಖಾತೆಯನ್ನು ಹೊಂದಬಹುದಾಗಿದೆ.

  ಬರೀ 500 ರೂಪಾಯಿಯಿಂದ ಆರಂಭಿಸಿ:

  ವರ್ಷಕ್ಕೆ 500 ರೂಪಾಯಿಗಳಿಂದ ನಿಮ್ಮ ಹೂಡಿಕೆಯನ್ನು ಆರಂಭಿಸಬಹುದು. ನಿಮ್ಮ ಬಳಿ ಹೆಚ್ಚು ಹಣ ಉಳಿದಿದ್ದರೆ ಅಥವಾ ಹೆಚ್ಚು ಹಣವನ್ನು ಉಳಿತಾಯ ಮಾಡುವ ಆಲೋಚನೆ ನಿಮಗಿದ್ದರೆ ಖಂಡಿತಾ ಹೆಚ್ಚು ಹಣವನ್ನು ಈ ಖಾತೆಗೆ ಹಾಕಬಹುದು. ಆದರೆ ಒಂದು ವರ್ಷಕ್ಕೆ ಗರಿಷ್ಠ ಒಂದೂವರೆ ಲಕ್ಷ ರೂಪಾಯಿ ಹಣ ಮಾತ್ರ ಹಾಕಬಹುದಾಗಿದೆ. ಬ್ಯಾಂಕುಗಳಲ್ಲಿ ಇರುವ ಪಿಪಿಎಫ್ ಖಾತೆಯಂತೆಯೇ ಪೋಸ್ಟ್ ಆಫೀಸಿನ ಈ ಖಾತೆಯೂ ಕೆಲಸ ಮಾಡುತ್ತದೆ. ಇದಕ್ಕಿಂತ ಹೆಚ್ಚಾಗಿ ಆದಾಯ ತೆರಿಗೆಯ 80ಸಿ ಅಡಿಯಲ್ಲಿ ಈ ಯೋಜನೆ ಬರುವುದರಿಂದ ತೆರಿಗೆಯಲ್ಲೂ ಉಳಿತಾಯ ಮಾಡುವ ಅವಕಾಶ ಇದರಲ್ಲಿ ಇದೆ.

  ಇದನ್ನೂ ಓದಿ: Post Office Savings: 5 ವರ್ಷಕ್ಕೆ 14 ಲಕ್ಷ ಗ್ಯಾರಂಟಿ, ಅಂಚೆ ಹೂಡಿಕೆಯ ಈ ಸ್ಕೀಂ ಬಗ್ಗೆ ನಿಮಗೆ ಗೊತ್ತಾ?

  ಇಂದಿನ ಲೆಕ್ಕಾಚಾರದ ಪ್ರಕಾರ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಶೇಕಡಾ 7.1ರಷ್ಟು ಬಡ್ಡಿ ಪಡೆಯುತ್ತಾರೆ. ಇದು ವಾರ್ಷಿಕ ಬಡ್ಡಿ ದರವಾಗಿದೆ. ಅಂದರೆ ಪ್ರತೀ ವರ್ಷದ ಕೊನೆಯಲ್ಲಿ ಖಾತೆಗೆ ನೇರವಾಗಿ ಈ ಬಡ್ಡಿ ಹಣ ಡೆಪಾಸಿಟ್ ಆಗುತ್ತದೆ. ಈ ಹೆಚ್ಚಿನ ಬಡ್ಡಿಯ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ ಎನ್ನುವುದು ಮತ್ತೊಂದು ಸಂತಸದ ವಿಚಾರ.

  ಹೆಚ್ಚಿನ ಲಾಭಕ್ಕೆ ಹೀಗೆ ಮಾಡಿ

  ಈ ಖಾತೆಯ ಅತೀ ಹೆಚ್ಚಿನ ಲಾಭ ಪಡೆಯಬೇಕು ಎಂದರೆ ನೀವು ಪೂರ್ಣಾವಧಿವರಗೆ ಕಾಯಬೇಕು. ಅಂದರೆ 15 ವರ್ಷಗಳ ನಂತರ ಇದರ ಒಟ್ಟು ಮೆಚ್ಯುರಿಟಿ ಹಣವನ್ನು ಪಡೆಯಬಹುದು. 15 ವರ್ಷಗಳ ದೀರ್ಘಕಾಲದ ಉಳಿತಾಯ ಯೋಜನೆ ಇದಾಗಿರೋದ್ರಿಂದ ಅದರಿಂದ dಒರೆಯುವ ಉಳಿತಾಯವೂ ಅತ್ಯಂತ ಸಮಾಧಾನಕರವಾಗಿರುತ್ತದೆ ಎನ್ನುವುದು ಈಗಾಗಲೇ ಈ ಯೋಜನೆಯ ಲಾಭ ಪಡೆದಿರುವ ಅನೇಕರ ಅನಿಸಿಕೆ.

  ಉಳಿತಾಯ ಯೋಜನೆಗಳು ಖಂಡಿತಾ ಎಲ್ಲರಿಗೂ ಅವಶ್ಯಕ. ಹೆಚ್ಚು ಹಣ ಹೂಡಿಕೆ ಮಾಡಬೇಕಾದಾಗ ಅನೇಕರಿಗೆ ಅದು ಸಾಧ್ಯವಾಗುವುದಿಲ್ಲ. ಬರುವ ಆದಾಯದಲ್ಲೇ ಸಂಸಾರದ ಖರ್ಚು ವೆಚ್ಚಗಳನ್ನೂ ನೋಡಿಕೊಳ್ಳಬೇಕಾಗಿರುತ್ತದೆ. ಅಂಥಾ ಸಂದರ್ಭದಲ್ಲಿ ಹೆಚ್ಚು ಹಣವನ್ನು ಉಳಿತಾಯ ಮಾಡುವ ಪರಿಸ್ಥಿತಿಯಲ್ಲೇ ಅವರು ಇರುವುದಿಲ್ಲ. ಆದರೂ ಸ್ವಲ್ಪಮಟ್ಟಿಗಿನ ಉಳಿತಾಯ ಖಂಡಿತಾ ಸಾಧ್ಯವಾಗುತ್ತದೆ. ವರ್ಷಕ್ಕೆ ಕನಿಷ್ಠ ಹಣ 500 ರೂಪಾಯಿ ಹೂಡಿಕೆ ಮಾಡುವ ಈ ಯೋಜನೆ ಅನೇಕರಿಗೆ ಉಪಯುಕ್ತ.

  ಇದೇ ರೀತಿ ಪೋಸ್ಟ್ ಆಫೀಸಿನಲ್ಲಿ ಮತ್ತಷ್ಟು ಹಣ ಉಳಿತಾಯದ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ:  ಪೋಸ್ಟ್ ಆಫೀಸ್​ ಉಳಿತಾಯದ ನಾನಾ ಯೋಜನೆಗಳು
  Published by:Soumya KN
  First published: