Post Office Savings: ಈ ಸ್ಕೀಂನಲ್ಲಿ 25,000 ರೂ. ಹೂಡಿಕೆ ಮಾಡಿ ಮತ್ತು 21 ಲಕ್ಷ ಹಣ ಗಳಿಸಿ

Post Office Saving Tips: ಬಿಟ್​ಕಾಯಿನ್​, ಡಾಜಿಕಾಯಿನ್​ ಮತ್ತಿತರ ಕ್ರಿಪ್ಟೋ ಕರೆನ್ಸಿಗಳ ಆರ್ಭಟದ ನಡುವೆಯೂ ಪೋಸ್ಟ್​ ಆಫಿಸ್​ ಹೂಡಿಕೆ ಮತ್ತು ಉಳಿತಾಯ ಯೋಜನೆಗಳ ಬಗ್ಗೆ ಜನರಿಗೆ ನಂಬಿಕೆ ಹೋಗಿಲ್ಲ. ಅದಕ್ಕೆ ಮೂಲ ಕಾರಣ, ಖಾಸಗಿ ಕಂಪೆನಿಗಳು ದಿವಾಳಿಯಾಗಬಹುದು, ಜನರಿಗೆ ಮೋಸ ಮಾಡಬಹುದು. ಆದರೆ ಪೋಸ್ಟ್​ ಆಫೀಸ್​ ಸರ್ಕಾರದ ಒಡೆತನದಲ್ಲಿರುವುದರಿಂದ, ಮೋಸ ಹೋಗುವುದು ಸಾಧ್ಯವೇ ಇಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಣ ಹೂಡಿಕೆ ಮಾಡುವಾಗ, ಹೂಡಿಕೆದಾರರು ಭದ್ರತೆ ಮತ್ತು ಉತ್ತಮ ಲಾಭ ಇವೆರಡು ವಿಚಾರಗಳನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಈ ಎರಡಕ್ಕೂ ಖಾತರಿ ನೀಡುವಂತಹ ಅಂಚೆ ಇಲಾಖೆಯು ಅನೇಕ ಉಳಿತಾಯ ಯೋಜನೆಗಳನ್ನು ಹೊಂದಿದೆ. ಅದೆಷ್ಟೇ ಖಾಸಗಿ ಹೂಡಿಕೆ ಕಂಪೆನಿಗಳು, ಉಳಿತಾಯ ಯೋಜನೆಗಳು, ಖಾಸಗಿ ಬ್ಯಾಂಕ್​ಗಳಲ್ಲಿ ಎಫ್​ಡಿ ಬಡ್ಡಿ, ಮತ್ತಿತರ ಸ್ಕೀಮ್​ಗಳು ಬಂದರೂ ಒಂದಿಷ್ಟು ಜನ ಮಾತ್ರ ದಶಕಗಳಿಂದ ನಂಬಿಕೊಂಡು ಬಂದಿರುವುದು ಪೋಸ್ಟ್​ ಆಫೀಸ್​ ಸ್ಕೀಮ್​ಗಳನ್ನು. ಬಿಟ್​ಕಾಯಿನ್​, ಡಾಜಿಕಾಯಿನ್​ ಮತ್ತಿತರ ಕ್ರಿಪ್ಟೋ ಕರೆನ್ಸಿಗಳ ಆರ್ಭಟದ ನಡುವೆಯೂ ಪೋಸ್ಟ್​ ಆಫಿಸ್​ ಹೂಡಿಕೆ ಮತ್ತು ಉಳಿತಾಯ ಯೋಜನೆಗಳ ಬಗ್ಗೆ ಜನರಿಗೆ ನಂಬಿಕೆ ಹೋಗಿಲ್ಲ. ಅದಕ್ಕೆ ಮೂಲ ಕಾರಣ, ಖಾಸಗಿ ಕಂಪೆನಿಗಳು ದಿವಾಳಿಯಾಗಬಹುದು, ಜನರಿಗೆ ಮೋಸ ಮಾಡಬಹುದು. ಆದರೆ ಪೋಸ್ಟ್​ ಆಫೀಸ್​ ಸರ್ಕಾರದ ಒಡೆತನದಲ್ಲಿರುವುದರಿಂದ, ಮೋಸ ಹೋಗುವುದು ಸಾಧ್ಯವೇ ಇಲ್ಲ. 

    ಈ ಪೈಕಿ ಇಂಡಿಯಾ ಪೋಸ್ಟ್ ನೀಡುವ ಇಂತಹ ಒಂದು ಯೋಜನೆ ಎಂದರೆ ಅದು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC).ಈ ಸ್ಕೀಂ ಬಗ್ಗೆ ವಿವರವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಈ ಮೂಲಕ ನೀವು ಹೆಚ್ಚಿನ ಹಣ ಗಳಿಸುವ ಜತೆಗೆ ತೆರಿಗೆಯನ್ನೂ ಉಳಿಸಬಹುದಾಗಿದೆ. ಹೀಗೆ ಎರಡು ಪ್ರಯೋಜನಗಳನ್ನು ನೀಡುತ್ತದೆ ಅಂಚೆ ಕಚೇರಿಯ ಈ ಉಳಿತಾಯ ಯೋಜನೆ.

    ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Saving Certificate):

    ನೀವು ಅನೇಕ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ (ಎಫ್‌ಡಿ - Fixed Deposit) ದರಗಳಿಗಿಂತ ಹೆಚ್ಚಿನ ಬಡ್ಡಿಯನ್ನು ಈ ಸ್ಕೀಂನಡಿ ಪಡೆಯಬಹುದು. ಅಂಚೆ ಕಚೇರಿಯ NSC ಯೋಜನೆ ಪ್ರಸ್ತುತ 6.8% ಬಡ್ಡಿದರ ನೀಡುತ್ತಿದೆ. ನೀವು NSCಯಲ್ಲಿ ಹೂಡಿಕೆ ಮಾಡುವ ಹಣವು ವಾರ್ಷಿಕವಾಗಿ ಬಡ್ಡಿಯನ್ನು ಸೇರಿಸುವುದನ್ನು ಮುಂದುವರಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ, ಆದರೆ, ಆ ಹಣವನ್ನು ಸ್ಕಿಂನ ಮೆಚ್ಯೂರಿಟಿ (Post Office Scheme Maturity Period) ಅವಧಿ ಮುಗಿದ ಬಳಿಕ ಪಾವತಿಸಲಾಗುತ್ತದೆ.

    ಇದನ್ನೂ ಓದಿ: Post Office Scheme: ಫೋಸ್ಟ್ ಆಫೀಸ್​​ನಲ್ಲಿ ಕೇವಲ 100 ರೂ. ಹೂಡಿಕೆ ಮಾಡಿ 5 ವರ್ಷದಲ್ಲಿ ₹20 ಲಕ್ಷ ಗಳಿಸಿ

    NSC ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳು. ಆದರೆ, ನೀವು ಬಯಸಿದಲ್ಲಿ ಅವಧಿ ಮುಕ್ತಾಯದ ನಂತರ ಇನ್ನೊಂದು 5 ವರ್ಷಗಳವರೆಗೆ ನಿಮ್ಮ ಹೂಡಿಕೆಯನ್ನು ಹೆಚ್ಚಿಸಬಹುದು. ನೀವು NSCಯಲ್ಲಿ ಕನಿಷ್ಠ 100 ರೂ. ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ ಅಂದರೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಸ್ಕೀಂನಡಿ ಇದು ಕನಿಷ್ಠ ಹೂಡಿಕೆಯ ಮೊತ್ತ. ಆದರೆ, ಈ ಸ್ಕೀಂನಡಿ ಯಾವುದೇ ಗರಿಷ್ಠ ಹೂಡಿಕೆಯ ಮಿತಿ ಇಲ್ಲ.

    ಇದನ್ನೂ ಓದಿ: Post Office Savings: 5 ವರ್ಷಕ್ಕೆ 14 ಲಕ್ಷ ಗ್ಯಾರಂಟಿ, ಅಂಚೆ ಹೂಡಿಕೆಯ ಈ ಸ್ಕೀಂ ಬಗ್ಗೆ ನಿಮಗೆ ಗೊತ್ತಾ? 

    NSC ನಿಮ್ಮ ಹಣ ಹೆಚ್ಚಿಸುವುದಲ್ಲದೆ, ತೆರಿಗೆಯನ್ನೂ ಉಳಿಸುವ ಆಯ್ಕೆಯಾಗಿದೆ. ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 80 ಸಿ ಅಡಿಯಲ್ಲಿ, NSC ಹೂಡಿಕೆದಾರರು ವಾರ್ಷಿಕ 1.5 ಲಕ್ಷ ರೂ. ವರೆಗಿನ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಪಡೆಯುತ್ತಾರೆ. ನೀವು 100, 500, 1000, 5000 ಮತ್ತು 10,000 ರೂ ಮೌಲ್ಯದ NSC ಪಡೆಯಬಹುದು. ನಿಮಗೆ ಬೇಕಾದಷ್ಟು ಪ್ರಮಾಣಪತ್ರಗಳನ್ನು ವಿವಿಧ ಬೆಲೆಯಲ್ಲಿ ಖರೀದಿಸುವ ಮೂಲಕ ನೀವು NSCಯಲ್ಲಿ ಹೂಡಿಕೆ ಮಾಡಬಹುದು.

    5 ವರ್ಷಗಳಲ್ಲಿ 6 ಲಕ್ಷ ರೂ. ಬಡ್ಡಿ ಗಳಿಸಿ..!

    ಹೂಡಿಕೆದಾರರು ಎನ್ಎಸ್‌ಸಿಯಲ್ಲಿ 15 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಹೂಡಿಕೆದಾರರು 5 ವರ್ಷಗಳಲ್ಲಿ 6.8% ಬಡ್ಡಿದರದಲ್ಲಿ , 20.85 ಲಕ್ಷ ರೂ. ಅಂದರೆ 5 ವರ್ಷಗಳಲ್ಲಿ ಸುಮಾರು 6 ಲಕ್ಷ ರೂ ಬಡ್ಡಿ ಪಡೆಯಬಹುದಾಗಿದೆ. ಈ ಹಿನ್ನೆಲೆ ನೀವು ಒಂದು ತಿಂಗಳಿಗೆ 25 ಸಾವಿರ ರೂ. ಹೂಡಿಕೆ ಮಾಡಿದರೆ 5 ವರ್ಷಗಳಲ್ಲಿ 15 ಲಕ್ಷ ರೂ. ಹೂಡಿಕೆ ಮಾಡಿದಂತಾಗುತ್ತದೆ. ಇದರಿಂದ ನೀವು 21 ಲಕ್ಷ ರೂ. ವರೆಗೆ ಹಣ ಗಳಿಸಬಹುದಾಗಿದೆ.
    Published by:Sharath Sharma Kalagaru
    First published: