Jar App: ಪ್ರತಿದಿನ ನಿಮ್ಮ ಕೈಲಾದಷ್ಟು ಹಣ ಕಟ್ಟಿ, ಕೊನೆಯಲ್ಲಿ ಚಿನ್ನ ನಿಮ್ಮ ಮನೆಗೇ ಕಳಿಸಿಕೊಡ್ತಾರೆ!

ಇಂದು ಹೊಸ ಉಳಿತಾಯ ಯೋಜನೆಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದು ತುಂಬಾ ಸುಲಭ. ನಿಮ್ಮ ಕೈಲಾದಷ್ಟು ಹಣ (Money) ಕಟ್ಟಿ, ಕೊನೆಯಲ್ಲಿ ಚಿನ್ನ (Gold) ವನ್ನು ಪಡೆಯಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದುಡ್ಡು (Money), ಹಣ, ಕಾಸು, ಪೈಸಾ, ಇದನ್ನು ಕಂಡರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹಣ ಎಂದರೆ ಹೆಣ ಕೂಡ ಎದ್ದು ಕೂರುತ್ತೆ ಅಂತಾರೆ. ದುಡ್ಡು ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಆದರೆ ಯಾವತ್ತೂ ಒಳ್ಳೆಯ ದಾರಿ (Good Way) ಯಲ್ಲಿ ಮಾಡಿದ ಹಣವೇ ಕೊನೆವರೆಗೂ ಇರುತ್ತೆ.  ಹಣ ಮಾಡುವುದು ಎಷ್ಟು ಮುಖ್ಯನೋ, ಅದನ್ನು ಸೇವ್​ (Money Save) ಮಾಡುವುದು ಕೂಡ ಅಷ್ಟೇ ಮುಖ್ಯ, ಹಣ ಉಳಿಸಲು ನೂರಾರು ದಾರಿಗಳಿವೆ. ಬ್ಯಾಂಕ್​ (Bank) ನಲ್ಲಿ ಸೇವ್​ ಮಾಡಬಹುದು. ಇಲ್ಲ ಅಂದರೆ ಸರ್ಕಾರ (Government) , ಹಾಗೂ ಅಂಚೆ ಕಚೇರಿ (Post Office) ಯ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿ ಹಣ ಉಳಿತಾಯ (Savings) ಮಾಡಬಹುದು. ಆದರೆ, ಇಂದು ಹೊಸ ಉಳಿತಾಯ ಯೋಜನೆಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದು ತುಂಬಾ ಸುಲಭ. ನಿಮ್ಮ ಕೈಲಾದಷ್ಟು ಹಣ (Money) ಕಟ್ಟಿ, ಕೊನೆಯಲ್ಲಿ ಚಿನ್ನ (Gold) ವನ್ನು ಪಡೆಯಬಹುದು.

ಜಾರ್​ ಆ್ಯಪ್​ನಲ್ಲಿ ಹಣ ಹೂಡಿಕೆ ಮಾಡಿ!

ಜಾರ್​ ಆ್ಯಪ್​ ಇದೊಂದು ಹೊಸ ರೀತಿಯಲ್ಲಿ ಹಣ ಉಳಿತಾಯ ಮಾಡಲು ತುಂಬಾ ಉಪಯೋಗವಾದ ಆ್ಯಪ್​. ಡಿಜಿಟಲ್ ಗೋಲ್ಡ್​​ ಆ್ಯಪ್​ ಎಂದರೆ ತಪ್ಪಾಗಲ್ಲ. ಈ ಜಾರ್ ಆ್ಯಪ್​ನಲ್ಲಿ ನೀವು ನಿಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಹಣವನ್ನು ಪತ್ರಿನಿತ್ಯ ಕಟ್ಟುತ್ತಾ ಹೋಗುಬೇಕು. ನಿಮಗೆ ಸಾಕು ಅನ್ನಿಸಿದಾಗ, ಅಥವಾ ಇಂತಿಷ್ಟು ವರ್ಷ ಸೇವಿಂಗ್ಸ್ ಮಾಡಿದ ಬಳಿಕ ಆ ಹಣವನ್ನು ಮರಳಿ ಪಡೆಯಬಹುದು. ಇಷ್ಟೇ ಆಗಿದ್ದರೆ ಇದು ಕೂಡ ಸಾಮಾನ್ಯ ಉಳಿತಾಯದ ರೀತಿ ಆಗುತ್ತಿತ್ತು. ಇಲ್ಲೇ ಇರೋದು ನೋಡಿ ಟ್ವಿಸ್ಟ್. ಕೊನೆಯಲ್ಲಿ ನೀವೂ ನಿಮಗೆ ದುಡ್ಡು ಬೇಕೋ ಅಥವಾ ಗೋಲ್ಡ್​ ಬೇಕೋ ಎಂಬುದನ್ನು ಡಿಸೈಡ್​ ಮಾಡಿಕೊಳ್ಳಬಹುದು.

ಚಿನ್ನ ಬೇಕೋ? ದುಡ್ಡು ಬೇಕೋ? ನೀವೇ ಡಿಸೈಡ್ ಮಾಡಿ!

ಹೌದು, ಈ ಜಾರ್​ ಆ್ಯಪ್​ನ ವಿಶೇಷತನೆ ಇದು. ನೀವು ಕಟ್ಟುವ ಹಣವನ್ನು ಕೊನೆಯಲ್ಲಿ ಹಣದ ರೂಪದಲ್ಲೂ ಪಡೆಯಬಹುದು. ಅಥವಾ ಗೋಲ್ಡ್​ ಕೂಡ ಪಡೆಯಬಹುದು. ಹೇಗಪ್ಪಾ ಇದು ಸಾಧ್ಯ? ಎಂದು ಕೇಳಿದರೆ, ಉದಾಹರಣೆ ಸಮೇತ ಇಲ್ಲಿ ಮಾಹಿತಿ ಇದೆ ನೋಡಿ. ಪ್ರತಿದಿನ ನೀವು 100 ರೂಪಾಯಿ ಅನ್ನು ಈ ಜಾರ್​ ಆ್ಯಪ್​ನಲ್ಲಿ ಕಟ್ಟುತ್ತಿದ್ದರಾ ಅಂದುಕೊಳ್ಳಿ.  ಒಂದು ವರ್ಷಕ್ಕೆ 3 ಲಕ್ಷ 60 ಸಾವಿರ ಚಿಲ್ಲರೆಯಾಗುತ್ತೆ ಅಂದುಕೊಳ್ಳಿ. ನಿಮಗೆ ನಿಮ್ಮ ಸೇವಿಂಗ್ಸ್​​ ವಾಪಸ್​​ ಬೇಕು ಅಂದ್ರೆ, ಅಂದಿನ ದಿನ ಇರುವ ಗೋಲ್ಡ್​ ಪ್ರೈಸ್​ಗೆ ಅನುಗುಣವಾಗಿ ಗೋಲ್ಡ್​ ಬೇಕೋ, ದುಡ್ಡೇ ವಾಪಸ್​ ಬೇಕು ಅಂದರೂ ಸಿಗುತ್ತೆ.

ಇದನ್ನೂ ಓದಿ: ನಿಮಗೆ ತಿಂಗಳಿಗೆ 5,000 ಪಿಂಚಣಿ ಬೇಕಾದರೆ ಈ ಯೋಜನೆಗೆ ಸೇರಿಕೊಳ್ಳಿ!

ಈ ಆ್ಯಪ್​ನಲ್ಲಿ ರಿಜಿಸ್ಟರ್​ ಮಾಡುವುದು ಹೇಗೆ!

- ಮೊದಲಿಗೆ ಗೂಗಲ್​ ಪ್ಲೇ ಸ್ಟೋರ್​​ನಲ್ಲಿ ಜಾರ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಿ

- ನಿಮ್ಮ ಮೊಬೈಲ್​ ಸಂಖ್ಯೆಯನ್ನು ನಮೂದಿಸಿ

- ನಂತರ ನಿಮ್ಮ ಮೊಬೈಲ್​ಗೆ ಬಂದ ಒಟಿಪಿಯನ್ನು ಅಲ್ಲಿ ನಮೂದಿಸಿ

- ನಿಮ್ಮ ದಾಖಲೆಗಳನ್ನು ನೀಡಿದರೆ ಮಾತ್ರ ರಿಜಿಸ್ಟರ್​ ಮಾಡಲು ಸಾಧ್ಯ

- ನಿಮ್ಮ ಫೋನ್​ ಪೇ, ಗೂಗಲ್​ ಪೇಯನ್ನು ಆ್ಯಪ್​ಗೆ ಅಟ್ಯಾಚ್​ ಮಾಡಿ

- ಪ್ರತಿ ದಿನ ನೀವೇಷ್ಟು ಹಣವನನ್ನು ಇನ್ವೆಸ್ಟ್​ ಮಾಡುತ್ತೀರಿ ಎಂಬುದನ್ನು ನಮೂದಿಸಿ

ಇದನ್ನೂ ಓದಿ: ಇವತ್ತು ಈ ರಾಶಿಯವರಿಗೆ ಬಂಪರ್​ ಲಾಟರಿ! ಬೇಡ ಬೇಡ ಅಂದ್ರೂ ಅದೃಷ್ಟ ಲಕ್ಷ್ಮಿ ಒದ್ಕೊಂಡು ಬರ್ತಾಳೆ

- ಪ್ರತಿ ದಿನ ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಹಣ ಕಟ್​ ಆಗುತ್ತದೆ.

ಈ ರೀತಿ ಪ್ರತಿದಿನ ಹಣ ನಿಮ್ಮ ಖಾತೆಯಿಂದ ಕಟ್​ ಆಗುತ್ತದೆ. ನಿಮಗೆ ಸಾಕು ಎನಿಸಿದಾಗಲೂ ಈ ಹಣವನ್ನು ವಿತ್​ ಡ್ರಾ ಮಾಡಿಕೊಳ್ಳಬಹುದು. ಇಲ್ಲ ಅಷ್ಟು ಹಣಕ್ಕೆ ನೀವು ಎಷ್ಟು ಗೋಲ್ಡ್​ ಬರುತ್ತೋ ಅದನ್ನು ಕೂಡ ಆಯ್ಕೆ ಮಾಡಿಕೊಳ್ಳಬುದು. ಒಂದು ವೇಳೆ ನಿಮಗೆ ಗೋಲ್ಡ್​ ಬೇಕಾದಲ್ಲಿ 24 ಕ್ಯಾರೆಟ್​ ಗೋಲ್ಡ್​ ಕಾಯಿನ್​ ಅಥವಾ ಗೋಲ್ಡ್ ಬಾರ್​ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಇನ್ಯಾಕೆ ತಡ ಬೇಗ ಬೇಗ ಜಾರ್​ ಆ್ಯಪ್​ ಡೌನ್​ಲೌಡಿ ಮಾಡಿಕೊಂಡು ಇನ್ವೆಸ್ಟ್​ ಮಾಡಬಹದು.

( ಇದು ಕೇವಲ ಮಾಹಿತಿಯನ್ನು ಒದಗಿಸುವ ಲೇಖನವಾಗಿದೆ. ಎಲ್ಲೇ ಹೂಡಿಕೆ ಮಾಡುವ ಮುನ್ನ ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಮಾಡಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಸ್​ 18 ಕನ್ನಡ ಜವಾಬ್ದಾರನಾಗುವುದಿಲ್ಲ.)
Published by:Vasudeva M
First published: