ಎಲ್ಐಸಿ (LIC ) ತನ್ನ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ಜೀವ ವಿಮಾ ಯೋಜನೆಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಹಾಗೆಯೇ ಇತ್ತೀಚೆಗೆ ಒಂದು ಹೊಚ್ಚಹೊಸ ವಿಮಾ ಯೋಜನೆಯನ್ನು LIC ಪರಿಚಯಿಸಿದೆ. ಆ ಪಾಲಿಸಿಯ ಹೆಸರು ಧನ್ ವರ್ಷ (Dhan Varsha) ಯೋಜನೆ. ಈ LIC ಯೋಜನೆಯಲ್ಲಿ 10 ಲಕ್ಷಗಳನ್ನು ಹೂಡಿಕೆ ಮಾಡಿ 10 ಪಟ್ಟು ಲಾಭವನ್ನು ಪಡೆಯಬಹುದಾಗಿದೆ. ಹೌದು, LIC ಈ ಹೊಸ ಯೋಜನೆಯ ವಿಶಿಷ್ಟವಾಗಿದೆ. ಏಕೆಂದರೆ ಇದು ಪಾವತಿಸಿದ ಪ್ರೀಮಿಯಂಗಳ ಮೊತ್ತಕ್ಕಿಂತ 10 ಪಟ್ಟು ಹೆಚ್ಚಿನ ಮೊತ್ತವನ್ನು ನಿಮಗೆ ನೀಡುತ್ತದೆ. ಈ ಪಾಲಿಸಿಗಾಗಿ ಹೂಡಿಕೆದಾರರು ಒಂದೇ ಪ್ರೀಮಿಯಂನಲ್ಲಿ ಠೇವಣಿ ಇಟ್ಟರೆ ಸಾಕು. ಅದರ ವಿಮಾ ಮೊತ್ತವು 10 ಪಟ್ಟು ಹೆಚ್ಚಾಗಿರುತ್ತದೆ.
ಏನಿದು ಧನ್ ವರ್ಷ ಯೋಜನೆ?
ಸದ್ಯ ಆಫ್ ಲೈನ್ ನಲ್ಲಿ ಮಾತ್ರ ಲಭ್ಯವಿರುವ LIC ಯ ಧನ್ ವರ್ಷ ಯೋಜನೆಯು ವೈಯಕ್ತಿಕ ವಿಮಾ ಯೋಜನೆಯಾಗಿದೆ. ಇದು ನಿಮ್ಮಲ್ಲಿ ಉಳಿತಾಯವನ್ನು ಉತ್ತೇಜಿಸುತ್ತದೆ. ಈ ಮಧ್ಯೆ ಪಾಲಿಸಿದಾರನು ಮೆಚ್ಯೂರಿಟಿಯ ಮೊದಲು ಮರಣ ಹೊಂದಿದರೆ, ಅವನ ಕುಟುಂಬವು ವಿಮೆಯ ಎರಡರಷ್ಟು ಮೊತ್ತವನ್ನು ಪಡೆಯುತ್ತದೆ. LIC ಯ ಧನ್ ವರ್ಷ ಯೋಜನೆಯಲ್ಲಿ 2 ಆಯ್ಕೆಗಳಿವೆ. ಅವುಗಳು ಯಾವವು ಅನ್ನೋದನ್ನು ನೋಡೋದಾದ್ರೆ,
ಮೊದಲ ಆಯ್ಕೆ: ಧನ್ ವರ್ಷ ಯೋಜನೆಯು ಹೂಡಿಕೆ ಮಾಡಿದ ಪ್ರೀಮಿಯಂನ 1.25 ಪಟ್ಟು ಲಾಭವನ್ನು ನಿಮಗೆ ನೀಡುತ್ತದೆ. ನೀವು ಒಂದೇ ಪ್ರೀಮಿಯಂನಲ್ಲಿ 10 ಲಕ್ಷ ರೂಪಾಯಿ ಪಾವತಿಸಿದ್ದು, ಮೆಚ್ಯುರಿಟಿಗೂ ಮುನ್ನ ಮರಣ ಹೊಂದಿದರೆ ಆ ಕುಟುಂಬ ವಿಮಾ ಮೊತ್ತವಾಗಿ 12.5 ಲಕ್ಷ ರೂಗಳ ಖಾತರಿ ಬೋನಸ್ ಪಡೆಯುತ್ತದೆ.
ಎರಡನೆಯ ಆಯ್ಕೆ: ಇದರಲ್ಲಿ ಹೂಡಿಕೆದಾರರು 10 ಪಟ್ಟು ಅಪಾಯದ ರಕ್ಷಣೆಯನ್ನು ಪಡೆಯುತ್ತಾರೆ. ವಿಮಾ ರಕ್ಷಣೆಯನ್ನು ಖರೀದಿಸಿದ ನಂತರ ವ್ಯಕ್ತಿ ಮರಣಹೊಂದಿದರೆ ಈ ಸಂದರ್ಭದಲ್ಲಿ 10 ಪಟ್ಟು ಮರುಪಾವತಿಯನ್ನು ನೀಡಲಾಗುತ್ತದೆ.
ಇನ್ನು ನೀವೇನಾದರೂ ಇದರಲ್ಲಿ 10 ಲಕ್ಷ ಹೂಡಿಕೆ ಮಾಡಿದರೆ 1 ಕೋಟಿ ರೂ ಬೋನಸ್ ಪಡೆಯುತ್ತೀರಿ. ನಿಮ್ಮ ಅಗತ್ಯತೆಗಳನ್ನು ಅರಿತು ನೀವು ಯಾವುದನ್ನಾದರೂ ಆಯ್ಕೆ ಮಾಡಬಹುದು.
ಧನ್ ವರ್ಷ ಯೋಜನೆಯ ಬಗ್ಗೆ ಇತರ ವಿವರಗಳು:
1. ಈ ಧನ್ ವರ್ಷ ವಿಮೆಯನ್ನು ಆಫ್ಲೈನ್ನಲ್ಲಿ ಮಾತ್ರ ಖರೀದಿಸಬಹುದು.
2. ನೀವು ಅದನ್ನು 10 ಅಥವಾ 15 ವರ್ಷಗಳ ಅವಧಿಗೆ ಖರೀದಿಸಬಹುದು.
3. ನೀವು 15 ವರ್ಷಗಳ ಅವಧಿಯನ್ನು ಪಾಲಿಸಿ ಖರೀದಿಸಲು ಕನಿಷ್ಠ 3 ವರ್ಷ ವಯಸ್ಸಾಗಿರಬೇಕು. ಹಾಗೆಯೇ 10 ವರ್ಷದ ವಿಮೆ ಪಡೆಯಲು ಕನಿಷ್ಠ 8 ವರ್ಷ ವಯಸ್ಸಾಗಿರಬೇಕು.
ಇದನ್ನೂ ಓದಿ: PF Withdrawal: ಪಿಎಫ್ ಗ್ರಾಹಕರಿಗೆ ಬಿಗ್ ರಿಲೀಫ್, ಇವು ಇಪಿಎಫ್ಒ ಹೊಸ ನಿಯಮಗಳು!
4. ವಿಮೆಯನ್ನು ಖರೀದಿಸಲು ಮೊದಲ ಆಯ್ಕೆಯ ಗರಿಷ್ಠ ವಯಸ್ಸು 60 ವರ್ಷ. ಆದರೆ 10 ಪಟ್ಟು ಆದಾಯವನ್ನು ಹೊಂದಿರುವ ಪಾಲಿಸಿಗೆ ಗರಿಷ್ಠ ವಯಸ್ಸು 40 ವರ್ಷಗಳು.
5. 10 ಪಟ್ಟು ಮರು ಆದಾಯದೊಂದಿಗೆ 15-ವರ್ಷದ ಕವರೇಜ್ ಅನ್ನು 35 ನೇ ವಯಸ್ಸಿನಲ್ಲಿ ಮಾತ್ರ ಖರೀದಿಸಬಹುದು.
6. ಈ ಪಾಲಿಸಿಯ ಅಡಿಯಲ್ಲಿ ನೀವು ಸಾಲ ಮತ್ತು ವಿಮೆ ಎರಡನ್ನೂ ಹಿಂದಿರುಗಿಸುವ ಆಯ್ಕೆಯನ್ನು ಹೊಂದಿರುತ್ತೀರಿ.
7. ಪಾಲಿಸಿಯ ನಾಮಿನಿಯು ಹಣವನ್ನು ಕಂತುಗಳಲ್ಲಿ ಸ್ವೀಕರಿಸುವ ಆಯ್ಕೆಯನ್ನೂ ಹೊಂದಿರುತ್ತಾರೆ.
ಒಟ್ಟಾರೆ, LIC ಯ ಅನೇಕ ಯೋಜನೆಗಳಂತೆ ಧನ್ ವರ್ಷ ಯೋಜನೆ ಕೂಡ ಅನುಕೂಲಕಾರಿಯಾಗಿದ್ದು, ನಿಮ್ಮ ಅಗತ್ಯತೆ ಹಾಗೂ ಯೋಜನೆಯ ಅನುಕೂಲ - ಅನಾನುಕೂಗಳನ್ನು ಗಮನದಲ್ಲಿಟ್ಟುಕೊಂಡು ನೀವು ವಿಮೆಯನ್ನು ಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ