Red Sandal: ರಕ್ತಚಂದನ ಬೆಳೆಯಿಂದ ಲಕ್ಷ ಲಕ್ಷ ಸಂಪಾದನೆ, ನೀವೂ ಬೆಳೆಯಬಹುದು ನೋಡಿ!

ಭಾರತದಲ್ಲಿ ರಕ್ತ ಚಂದನ ಬೆಳೆಸುವವರಿದ್ದಾರೆ. ವಿಶ್ವದಾದ್ಯಂತ ಕೆಂಪು ಚಂದನಕ್ಕೆ ಅತ್ಯಧಿಕ ಬೇಡಿಕೆಯು ಇದೆ. ಕೆಂಪು ಚಂದನ ಬೆಳೆಯ ಬಗ್ಗೆ ನಿಮಗರಿಯದ ಅಚ್ಚರಿಯ ವಿಚಾರಗಳಿಲ್ಲಿವೆ.

ಕೆಂಪು ಚಂದನ

ಕೆಂಪು ಚಂದನ

 • Share this:
ಪುಷ್ಪಾ ಸಿನಿಮಾ  ನೋಡಿ ರಕ್ತ ಚಂದನ (Red Sandal) ವ್ಯವಹಾರದ ಬಗ್ಗೆ ನೀವೂ ತಿಳಿದುಕೊಂಡಿರಬಹುದು. ರಕ್ತ ಚಂದನ ನೋಡಿದಷ್ಟು ಸಿಂಪಲ್ ಅಲ್ಲ. ಅದರ ಮಾರ್ಕೆಟ್ ತುಂಬಾ ದೊಡ್ಡದು. ಹಾಗಾಗಿ ಇದಕ್ಕೆ ಬೇಡಿಕೆ (Demand) ಕಡಿಮೆಯಾಗುತ್ತೆ ಎನ್ನುವ ಭಯವಿಲ್ಲ. ಭಾರತದಾದ್ಯಂತ ಬೆಳೆಯಲು ಸಾಧ್ಯವಿರೋ ರಕ್ತ ಚಂದನ ಮರಗಳ ನಿಕ್ಷೇಪ ಕಾಡುಗಳಲ್ಲಿತ್ತು. ಆದರೆ ಸ್ಮಗ್ಲರ್ (Smugglers) ಕಾಟ, ಕಳ್ಳರು ಇದನ್ನು ಮನಸೋ ಇಚ್ಚೇ ಕಡಿದು ಮಾರಾಟ ಮಾಡಿದ್ದರು. ಈಗಲೂ ರಕ್ತ ಚಂದನ ಬೆಳೆದು ಮಾರಾಟ ಮಾಡಿ ಇದರ ಬ್ಯುಸಿನೆಸ್ ಮಾಡಬಹುದು. ಯಾಕೆಂದರೆ ರಕ್ತ ಚಂದನಕ್ಕೆ ಇಂದೂ ಒಳ್ಳೆಯ ಬೇಡಿಕೆ ಇದೆ. ಕೆಂಬಣ್ಣದ ರಕ್ತ ಚಂದನ ಚಿಕ್ಕ ಪೀಸ್ ಸಿಕ್ಕಿದರೂ ಸಾಕು, ಸೌಂದರ್ಯ, ತ್ವಚೆ ಹೀಗೆ ಬಹಳಷ್ಟು ವಿಧಗಳಲ್ಲಿ ಜನರು ಇದನ್ನು ಬಳಸುತ್ತಾರೆ.

ಭಾರತದಲ್ಲಿ ರಕ್ತ ಚಂದನ ಬೆಳೆಸುವವರಿದ್ದಾರೆ. ವಿಶ್ವದಾದ್ಯಂತ (Worldwide) ಕೆಂಪು ಚಂದನಕ್ಕೆ ಅತ್ಯಧಿಕ ಬೇಡಿಕೆಯು ಇದೆ. ಕೆಂಪು ಚಂದನ ಬೆಳೆಯ ಬಗ್ಗೆ ನಿಮಗರಿಯದ ಅಚ್ಚರಿಯ ವಿಚಾರಗಳಿಲ್ಲಿವೆ,

ಕೆಂಪು ಚಂದನ ಅಥವಾ ರಕ್ತ ಚಂದನ ಎಂದರೇನು ?

ಭಾರತದಲ್ಲಿ ಪೂರ್ವ ಘಟ್ಟಗಳಲ್ಲಿ ಬೆಳೆಯುವ ಅಪರೂಪದ ಅತಿ ದುಬಾರಿ (Costly) ಜಾತಿಯ ಮರವೇ ರಕ್ತ ಚಂದನ ಅಥವಾ ರೆಡ್​ ಸ್ಯಾಂಡಲ್. ಅಲ್ಮುಗ, ಸೌಂಡರ್​ವುಡ್, ರೆಡ್ ಸ್ಯಾಂಡಲ್, ರೆಡ್ ಸ್ಯಾಂಡಲ್​ವುಡ್, ರಕ್ತ ಚಂದನ, ರೆಡ್ ಚಂದನ ಎಂದು ಬಹಳಷ್ಟು ಹೆದರುಗಳಿಂದ ಕರೆಯಲ್ಪಡುತ್ತದೆ.

ಕೆಂಪು ಚಂದನದ ಪ್ರಮುಖ ಗುಣಗಳಿವು:

 • ಕೆಂಪು ಶ್ರೀಗಂಧ ಚಿಕ್ಕ ಜಾತಿಯ ಮರ. 5-8 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಆದರೆ ಇದರ ಬಣ್ಣವೇ ಇದರ ಹೆಚ್ಚುಗಾರಿಕೆ. ಕಡುಕೆಂಪು ಬಣ್ಣವೇ (Color)ಇದರ ಆಕರ್ಷಣೆ.

 • ಪೂರ್ವ ಏಷ್ಯಾದ ರಾಷ್ಟ್ರಗಳಲ್ಲಿ (Asian Countries) ಹಾಗೂ ಅಂತಾರಾಷ್ಟ್ರೀಯವಾಗಿ ಕೆಂಪು ಚಂದನಕ್ಕೆ ಭಾರೀ ಬೇಡಿಕೆ ಇದೆ.

 • ಇದು ತನ್ನ ಲೆಕ್ಸಿಕಲ್ ಗುಣಗಳಿಂದಾಗಿ ಹೆಚ್ಚು ಬೇಡಿಕೆಯಲ್ಲಿದೆ. ಲೆಕ್ಸಿಕಲ್ ಅಂಶಗಳಿರುವ ಮರಗಳನ್ನು ಸಂಗೀತ ಪೀಠೋಪಕರಣಗಳನ್ನು (Musical Instruments) ತಯಾರಿಸಲು ಬಳಸಲಾಗುತ್ತದೆ.

 • ಸುಗಂಧ ದ್ರವ್ಯ, ಔಷಧ, ಸೌಂದರ್ಯ ವರ್ಧಕಗಳಲ್ಲಿಯೂ ಕೆಂಪು ಚಂದನವನ್ನು ಯಥೇಚ್ಛವಾಗಿ ಬಳಸುತ್ತಾರೆ.

 • ಇದನ್ನು ಮುಖ್ಯವಾಗಿ ಕೆತ್ತನೆ, ಪೀಠೋಪಕರಣಗಳನ್ನು ಮಾಡಲು, ಅಲಂಕಾರಿಕ ಕಂಬಗಳಿಗಾಗಿ ಮನೆಯ ಆಂತರಿಕ ವಿನ್ಯಾಸದಲ್ಲಿ ಬಳಸಲಾಗುತ್ತದೆ.


ಕೆಂಪು ಚಂದನದ ವಿಶೇಷತೆಗಳೇನು ?

ಕೆಂಪು ಚಂದನ ಎಂಬ ಅಮೂಲ್ಯ ವಾಣಿಜ್ಯ ಬೆಳೆ (Commercial Crop) ಭಾರತದಲ್ಲಿ ಹಿಂದಿನಿಂದಲೂ ಇದ್ದರೂ ಆದರೆ ಈ ಮರಗಳ ಬೇಡಿಕೆ ಬಗ್ಗೆ ಭಾರತೀಯರಿಗಿದ್ದ ಅರಿವು ಕಡಿಮೆ. ಕಾಡಿನಲ್ಲಿದ್ದ ಈ ದುಬಾರಿ ಮರಗಳು ಕಳ್ಳರ, ಸ್ಮಗ್ಲರ್​ಗಳ ತಿಜೋರಿ ತುಂಬಿತು. ಇವುಗಳನ್ನು ಬೆಳೆಯಾಗಿ ಬೆಳೆಸುವಾಗ ಬಹಳಷ್ಟು ಕಾಳಜಿ ಅಗತ್ಯ. ಭಾರತದಲ್ಲಿ ಇದು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಮಾತ್ರ ಕಂಡು ಬರುತ್ತದೆ.

ಇದನ್ನೂ ಓದಿ: Pushpa ಸಿನಿಮಾ ಮಾದರಿಯಲ್ಲಿ ರಕ್ತ ಚಂದನ ಸಾಗಾಟ: ಖತರ್ನಾಕ್ ಕಳ್ಳನ ಬಂಧನ

ಕೆಂಪು ಚಂದನದ ಕೃಷಿ ಕುರಿತು ಕೆಲವು ಕುತೂಹಲಕಾರಿ ವಿಷಯಗಳು:

 • ಕೆಂಪು ಚಂದನ ಬೆಳೆಯಲು ಬೆಣಚುಕಲ್ಲು ಮಣ್ಣು(Soil) ಸೂಕ್ತವಾಗಿದೆ.

 • ಇದು ಶುಷ್ಕ ಬಿಸಿ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ.

 • ಭಾರತದಲ್ಲಿ ಎಲ್ಲಿ ಬೇಕಾದರೂ ಕೆಂಪು ಚಂದನವನ್ನು ಬೆಳೆಸಬಹುದು.

 • ಇದರ ಪ್ರತಿ ಗಿಡವನ್ನೂ 10 x 10 ಅಡಿ ಅಂತರದಲ್ಲಿ ನೆಡಬಹುದು.

 • ಪ್ರತಿ ಮರವು 10 ವರ್ಷಗಳವರೆಗೆ 500 ಕೆಜಿ ಕೆಂಪು ಚಂದನವನ್ನು ನೀಡುತ್ತದೆ.

 • ಮೊದಲ ಎರಡು ವರ್ಷಗಳ ಕಾಲ ಕೆಂಪು ಚಂದನವನ್ನು ಕಳೆ ಮುಕ್ತ ವಾತಾವರಣದಲ್ಲಿ ನೆಡಬೇಕು.

 • ಭೂಮಿಯನ್ನು ಆಗಾಗ್ಗೆ ಅಗೆತ ಮಾಡಿ 4 ಮೀ x 4 ಮೀ ದೂರದಲ್ಲಿ 45 ಸೆಂ.ಮೀ x 45 ಸೆಂ.ಮೀ x 45 ಸೆಂ.ಮೀ ರಂಧ್ರಗಳನ್ನು ಅಗೆಯಲಾಗುತ್ತದೆ.

 • ಕೆಂಪು ಚಂದನವನ್ನು ಬಿತ್ತಲು ಮೇ ನಿಂದ ಜೂನ್ ವರೆಗೆ ಸೂಕ್ತ ಸಮಯ.

 • ಕೆಂಪು ಚಂದನ ನೆಟ್ಟ ತಕ್ಷಣ ನೀರುಣಿಸಲಾಗುತ್ತದೆ. ನಂತರ ಹವಾಮಾನ ಪರಿಸ್ಥಿತಿಗಳಿಗೆ.

 • ಅನುಗುಣವಾಗಿ 10-15 ದಿನಗಳ ಮಧ್ಯಂತರದಲ್ಲಿ ನೀರಾವರಿ ನೀಡಬಹುದು.

 • ಎಪ್ರಿಲ್ ನಿಂದ ಮೇ ವರೆಗೆ ಕೆಂಪು ಚಂದನದ ಎಲೆಗಳನ್ನು ಹುಳುಗಳು ತಿಂದು ಬೆಳೆಗಳನ್ನು ಹಾನಿಗೊಳಿಸುತ್ತವೆ. ಆದ್ದರಿಂದ ಮಾನೋಕ್ರೋಟೋಫಾಸ್ ಅನ್ನು ವಾರಕ್ಕೆ ಎರಡು ಬಾರಿ ಸಿಂಪಡಿಸುವ ಮೂಲಕ ಇದನ್ನು ತಡೆಯಬಹುದು.

 • ಈ ಕೆಂಪು ಶ್ರೀಗಂಧದ ಜಾತಿಯ ಬೆಳವಣಿಗೆಯು ತುಂಬಾ ನಿಧಾನ. ಸರಿಯಾದ ಮರ ದಪ್ಪಗಾಗಲು ದಶಕಗಳೇ ಬೇಕಾಗುತ್ತವೆ.

 • ಇದು 150 ರಿಂದ 175 ಸೆಂ.ಮೀ ಎತ್ತರಕ್ಕೆ ಬೆಳೆಯುವ ಮರ ಒಂದೇ ಕಾಂಡದೊಂದಿಗೆ 9 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ.

 • 3 ವರ್ಷಗಳಲ್ಲಿ ಇದು 6 ಮೀಟರ್ ಉದ್ದವಾಗಲ್ಲದು. ಈ ಮರವು ಹಿಮವನ್ನು ಸಹಿಸುವುದಿಲ್ಲ. ಕೆಂಪು ಚಂದನವು ಚೀನಾದಲ್ಲಿ ಐತಿಹಾಸಿಕವಾಗಿ ಮೌಲ್ಯಯುತವಾಗಿದೆ. ಕೆಂಪು ಚಂದನವು ಮುಖ್ಯವಾಗಿ ಬೆಲೆಬಾಳುವ ಮರಗಳಲ್ಲಿ ಒಂದಾಗಿದೆ.


ಇದನ್ನೂ ಓದಿ: ಇದೇನಾ ಅಲ್ಲು ಅರ್ಜುನ್​ ‘ಪುಷ್ಪಾ‘ ಸಿನಿಮಾದ ಕಥೆ!?

ರಕ್ತ ಚಂದನ ಪ್ರಮುಖ ಬಳಕೆ:

ಕೆಂಪು ಚಂದನವು ಒಂದು ಮರದ ಕಾಂಡದ ಮಧ್ಯಭಾಗದಲ್ಲಿರುವ ತಿರುಳನ್ನು (ಹಾರ್ಟ್‌ವುಡ್) ಔಷಧಿಯಾಗಿ ಬಳಸಲಾಗುತ್ತದೆ. ಕೆಂಪು ಚಂದನವನ್ನು ಜೀರ್ಣಾಂಗವ್ಯೂಹದ ಸಮಸ್ಯೆಗಳು, ಕೆಮ್ಮಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ರಕ್ತ ಶುದ್ಧೀಕರಣಕ್ಕಾಗಿ ತಯಾರಿಕೆಯಲ್ಲಿ, ಕೆಂಪು ಚಂದನವನ್ನು ಆಲ್ಕೊಹಾಲ್ಯುಕ್ತ ಪಾನೀಯಗಳಲ್ಲಿ ಸುವಾಸನೆಯಾಗಿ ಬಳಸಲಾಗುತ್ತದೆ. ಸಂಗೀತ ಉಪಕರಣಗಳ ತಯಾರಿಯಲ್ಲಿಯೂ ಇದನ್ನು ಬಳಸಲಾಗುತ್ತದೆ.
Published by:Divya D
First published: