ಫಿಕ್ಸೆಡ್ ಡಿಪಾಸಿಟ್ ಸರ್ಟಿಫಿಕೇಟ್ (Fixed deposit Certificate) ಎಂಬುದು CIF ಸಂಖ್ಯೆ, ಠೇವಣಿ ದಿನಾಂಕ, ಠೇವಣಿ ಖಾತೆ ಸಂಖ್ಯೆ, ಠೇವಣಿದಾರರ ಹೆಸರು, ಠೇವಣಿ ಮೊತ್ತ, ಅವಧಿ, ಠೇವಣಿಯ ಅಂತಿಮ ದಿನಾಂಕ, ಬಡ್ಡಿ ಮುಂತಾದ ಪೂರ್ಣ ವಿವರಗಳಿರುವ ಮುದ್ರಿತ ಪ್ರಮಾಣಪತ್ರವಾಗಿದೆ (FDR) ಈ ಪ್ರಮಾಣ ಪತ್ರವು ತೆರಿಗೆ ಉಳಿಸುವ ಸ್ಥಿರ ಠೇವಣಿ (Deposit) ಎಂದೆನಿಸಿದ್ದು, 1961 ರ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತವನ್ನು ನೀಡುವ ಒಂದು ರೀತಿಯ ಸ್ಥಿರ ಠೇವಣಿ ಖಾತೆಯಾಗಿದೆ. ಯಾವುದೇ ಹೂಡಿಕೆದಾರರು ತೆರಿಗೆ ಉಳಿಸುವ ಸ್ಥಿರ ಠೇವಣಿ ಖಾತೆಯಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ (Tax) ಕಡಿತವನ್ನು ಪಡೆಯಬಹುದಾಗಿದೆ.
ಸರ್ಟಿಫಿಕೇಟ್ ಕಳೆದುಹೋದಲ್ಲಿ ತೆರಿಗೆ ಅನ್ವಯವಾಗುವುದಿಲ್ಲವೇ?
ಫಿಕ್ಸೆಡ್ ಡಿಪಾಸಿಟ್ ಸರ್ಟಿಫಿಕೇಟ್ (ಸ್ಥಿರ ಠೇವಣಿ ಪ್ರಮಾಣಪತ್ರ) ಎಲ್ಲಿಯಾದರೂ ಕಳೆದುಕೊಂಡಲ್ಲಿ ಅದರ ಬಡ್ಡಿಯ ಮೇಲಿನ ಆದಾಯ ತೆರಿಗೆಯನ್ನು ಪಾವತಿಸಬೇಕೇ ಬೇಡವೇ ಎಂಬುದು ನಿಮ್ಮ ಯೋಚನೆಯಾಗಿದ್ದರೆ ಈ ಲೇಖನ ಅದಕ್ಕೆ ಉತ್ತರವಾಗಿದೆ.
ಪ್ರಮಾಣಪತ್ರ ಕಳೆದು ಹೋದ ಸಂದರ್ಭದಲ್ಲಿ ನಕಲಿ ಪ್ರಮಾಣಪತ್ರವನ್ನು ಪಡೆದುಕೊಂಡು ಹೆಚ್ಚುವರಿ ತೆರಿಗೆ ಕಡಿತವನ್ನು ತಪ್ಪಿಸಿಕೊಳ್ಳಬಹುದು ಎಂಬುದಾಗಿ ನಾವು ಸಲಹೆ ನೀಡುತ್ತೇವೆ.
ತೆರಿಗೆ ಮೇಲ್ಮನವಿ ಮಂಡಳಿಯ ತೀರ್ಪು
ದೆಹಲಿ ಪೀಠದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ಇದೇ ರೀತಿಯ ಘಟನೆಗೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ್ದು ಸಿಂಗಾಪುರ್ ಸಂಸ್ಥೆಯೊಂದು ಫಿಕ್ಸೆಡ್ ಡಿಪಾಸಿಟ್‌ನ ಮೂರು ಪ್ರಮಾಣ ಪತ್ರಗಳನ್ನು ಕಳೆದುಕೊಂಡಿದ್ದರಿಂದ ಸಂಸ್ಥೆ ಫಿಕ್ಸೆಡ್ ಡಿಪಾಸಿಟ್‌ಗಳಲ್ಲಿ ಬಡ್ಡಿಯನ್ನು ಘೋಷಿಸಿರಲಿಲ್ಲ.
ಆದ್ದರಿಂದ ತೆರಿಗೆ ಅಧಿಕಾರಿಯು ಬಡ್ಡಿಯ ಮೇಲಿನ ಆದಾಯಕ್ಕೆ ತೆರಿಗೆ ವಿಧಿಸಲು ಅರ್ಹರು ಎಂಬುದಾಗಿ ತೆರಿಗೆ ಮೇಲ್ಮನವಿ ಮಂಡಳಿ ತೀರ್ಪಿತ್ತಿದೆ.
ಇದನ್ನೂ ಓದಿ: Business: ಬೆಲ್ಲದ ಸಾಹಸೋದ್ಯಮಕ್ಕಿಳಿದ ಪಂಜಾಬ್ ಹುಡುಗಿ, ́ಜಾಗರ್ ಕೇನ್́ ಬ್ರಾಂಡ್‌ನಿಂದ ವರ್ಷಕ್ಕೆ 2 ಕೋಟಿ ವಹಿವಾಟು!
ತೆರಿಗೆ ಪಾವತಿಸುವ ತೆರಿಗೆದಾರರು ಕೂಡ ITAT ನಿರ್ಧರಿಸಿದ ಆದಾಯ ಬಡ್ಡಿಯ ಮೇಲಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 26AS ಫಾರ್ಮ್ ಹಾಗೂ ವಾರ್ಷಿಕ ಸ್ಟೇಟ್‌ಮೆಂಟ್ ಮಾಹಿತಿಯು ತೆರಿಗೆದಾರರ ಸರಿಯಾದ ಆದಾಯದ ವರದಿಯನ್ನು ಸುಗಮಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ಪ್ರಕರಣದ ಹಿನ್ನಲೆ ಏನು?
ಈ ಪ್ರಕರಣದಲ್ಲಿ ತೆರಿಗೆ ಅಧಿಕಾರಿಗಳು ಗಮನಿಸಿರುವಂತೆ ಫಾರ್ಮ್ 26AS ಪ್ರಕಾರ ತೆರಿಗೆದಾರರು ಕೆನರಾ ಬ್ಯಾಂಕ್‌ನಿಂದ ಆದಾಯ ಬಡ್ಡಿ ರೂ 71.5 ಲಕ್ಷವನ್ನು ಸ್ವೀಕರಿಸಿದ್ದಾರೆ ಎಂದು ತಿಳಿಸಿದೆ. ಕೇವಲ ರೂ 62.9 ಲಕ್ಷ ಬಡ್ಡಿಯನ್ನು ಮಾತ್ರವೇ ಐಟಿ ರಿಟರ್ನ್ ಸಮಯದಲ್ಲಿ ಘೋಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕಾರವಾಗಿ ಐಟಿ ಅಧಿಕಾರಿಗಳು ಪತ್ತೆಹಚ್ಚಿರುವಂತೆ ರೂ 8.6 ಲಕ್ಷ ವ್ಯತ್ಯಾಸ ಕಂಡುಬಂದಿದ್ದು ಇದನ್ನು ತೆರಿಗೆಯುಕ್ತ ಆದಾಯ ಎಂದೇ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.
ITAT ಗೆ ಕಂಪನಿಯು ಸಂಬಂಧಿತ ಫಿಕ್ಸೆಡ್ ಡಿಪಾಸಿಟ್ ಪ್ರಮಾಣಪತ್ರವನ್ನು ಕಳೆದುಕೊಂಡಿದೆ ಎಂದು ತಿಳಿಸಿದೆ. ಈ ಎಲ್ಲಾ ಹೂಡಿಕೆಗಳು ಬಂಡವಾಳ ಹೂಡಿಕೆಗಳಾಗಿದ್ದು, ಇದೇ ರೀತಿ ಲಿಖಿತವಾಗಿ ಕೂಡ ಬರೆಯಲಾಗಿದೆ. ಹಾಗಾಗಿ ಯಾವುದೇ ಆದಾಯವನ್ನು ಗಳಿಸುವ ಪ್ರಶ್ನೆ ಇಲ್ಲಿಲ್ಲ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಫಿಕ್ಸೆಡ್ ಡಿಪಾಸಿಟ್ ಪ್ರಮಾಣಪತ್ರಕ್ಕಾಗಿ ಅರ್ಜಿಸಲ್ಲಿಕೆ
ITAT ಪೀಠವು ಈ ಪ್ರಕರಣವನ್ನು ತರ್ಕಬದ್ಧವಲ್ಲದ್ದು ಎಂಬುದಾಗಿ ಕಂಡುಕೊಂಡಿದ್ದು ಸ್ವೀಕಾರಾರ್ಹವಲ್ಲ ಎಂಬುದನ್ನು ತಿಳಿಯಪಡಿಸಿದೆ. ಫಾರ್ಮ್ 26AS ಕೆನರಾ ಬ್ಯಾಂಕ್‌ನಲ್ಲಿನ ಫಿಕ್ಸೆಡ್ ಡಿಪಾಸಿಟ್ ಅನ್ನು ಬಹಿರಂಗಪಡಿಸಿದೆ ಹಾಗೂ ಬಡ್ಡಿಯ ಮೇಲಿನ ಆದಾಯಕ್ಕೆ ಅನುಗುಣವಾಗಿ ತೆರಿಗೆಯನ್ನು ಕಡಿತಗೊಳಿಸಲಾಗಿದೆ.
ಈ ಸಮಯದಲ್ಲಿ ಕಂಪನಿಯು ನಕಲಿ ಫಿಕ್ಸೆಡ್ ಡಿಪಾಸಿಟ್ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿತ್ತು ಆದರೆ ಸಂಸ್ಥೆ ಈ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂಬುದಾಗಿ ITAT ಕಂಡುಕೊಂಡಿದೆ. ಹಾಗಾಗಿ ಐಟಿ ಅಧಿಕಾರಿ ಮಾಡಿರುವ ಹೆಚ್ಚುವರಿ ತೆರಿಗೆಯುಕ್ತ ಪಾವತಿ ಸೂಕ್ತವಾಗಿದೆ ಎಂದು ಪೀಠ ತೀರ್ಪಿತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ