Biofuels: ದೊಡ್ಡ ದೊಡ್ಡ ಕಂಪನಿಗಳಿಗೆ ಜೈವಿಕ ಇಂಧನ ಪೂರೈಕೆ, ಇದ್ರಿಂದಲೇ ಕೋಟಿ ಕೋಟಿ ಆದಾಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೊಡ್ಡ ಕಾರ್ಪೊರೇಟ್‌ ಕಂಪನಿಗಳಿಗೆ ಜೈವಿಕ ಇಂಧನವನ್ನು ಖರೀದಿಸಲು ಸಹಾಯ ಮಾಡುವ ಸಲುವಾಗಿ ವಾಣಿಜ್ಯೋದ್ಯಮಿ ಕಿಶನ್ ಕರುಣಾಕರನ್ ಮೇ 2020 ರಲ್ಲಿ, ಜೈವಿಕ ಡೀಸೆಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದರು.

  • Trending Desk
  • 4-MIN READ
  • Last Updated :
  • Share this:

ಜೈವಿಕ ಇಂಧನಗಳನ್ನು (Biofuels) ದೊಡ್ಡ ದೊಡ್ಡ ಕಾರ್ಪೋರೇಟ್‌ ಕಂಪನಿಗಳಿಗೆ (Coroproate Company) ಆನ್‌ಲೈನ್‌ (Online) ಮೂಲಕ ಮಾರಾಟ ಮಾಡುವ ಮತ್ತು ಜೈವಿಕ ಇಂಧನವನ್ನು ಖರೀದಿಸಲು ಸಹಾಯ ಮಾಡುವ ಮೂಲಕ ಎಂಬಿಎ ಪಧವೀಧರ (MBA Graduate) ಅಮೋಘವಾದ ಸಾಧನೆ ಮಾಡಿದ್ದಲ್ಲದೇ ಕೋಟಿ ಕೋಟಿ ಆದಾಯ (Crore Income) ಗಳಿಸುತ್ತಿದ್ದಾರೆ. ಪರಿಸರ ಮಾಲಿನ್ಯ ತಡೆಗಟ್ಟಲು, ಜಾಗತಿಕ ತಾಪಮಾನ ನಿಯಂತ್ರಿಸುವಲ್ಲಿ ಮಹತ್ತರ ಪಾತ್ರ ವಹಿಸುವ ಮತ್ತು ಅಂತರ್ಜಲ ಪುನಶ್ಚೇತನಕ್ಕೆ ಸಹಕಾರಿಯಾಗಿರುವ, ಹೀಗೆ ಹಲವು ಪ್ರಯೋಜನ ಹೊಂದಿರುವ ಈ ಜೈವಿಕ ಇಂಧನದ ಬಳಕೆಗೆ ಒತ್ತು ನೀಡಿ ಮತ್ತು ಅದನ್ನು ಸುಲಭವಾಗಿ ಖರೀದಿ ಮಾಡಲು ಕಿಶನ್‌ ತಮ್ಮ ವೇದಿಕೆಯ ಮೂಲಕ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.


ಎಂಬಿಎ ಪದವಿದರನಿಗೆ ಅಬ್ದುಲ್ ಕಲಾಂ ಅವರೇ ಪ್ರೇರಣೆ!


ದೊಡ್ಡ ಕಾರ್ಪೊರೇಟ್‌ ಕಂಪನಿಗಳಿಗೆ ಜೈವಿಕ ಇಂಧನವನ್ನು ಖರೀದಿಸಲು ಸಹಾಯ ಮಾಡುವ ಸಲುವಾಗಿ ವಾಣಿಜ್ಯೋದ್ಯಮಿ ಕಿಶನ್ ಕರುಣಾಕರನ್ ಮೇ 2020 ರಲ್ಲಿ, ಜೈವಿಕ ಡೀಸೆಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದರು.


ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದಿರುವ ಕಿಶನ್‌ ಅವರು ಈ ಪರಿಕಲ್ಪನೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಕಿಶನ್‌ ಅವರ ಈ ಸಾಧನೆಗೆ ಅವರಿಗೆ ದೊಡ್ಡ ಸ್ಪೂರ್ತಿಯೇ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ.


ಜೈವಿಕ ಇಂಧನಗಳ ಬಗ್ಗೆ ಜಾಗೃತಿ ಮೂಡಿಸಲು ಕಿಶನ್‌ ಹರಸಾಹಸ


ಪ್ರಸ್ತುತ ಜನರಿಗೆ ಜೈವಿಕ ಇಂಧನಗಳ ಬಗ್ಗೆ ತಿಳಿದಿದೆಯಾದರೂ, ಕೆಲವು ವರ್ಷಗಳ ಹಿಂದೆ, ಜನರಿಗೆ ಜೈವಿಕ ಇಂಧನಗಳ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ ಮತ್ತು ಬಳಕೆಗೆ ಬಗ್ಗೆಯೂ ಅನುಮಾನವಿತ್ತು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸ್ವಂತ ಹಣವನ್ನೂ ಹೂಡಿಕೆ ಮಾಡಿ, ಹಲವಾರು ಕಂಪನಿಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಕಿಶನ್‌ ಭೇಟಿ ನೀಡಿದರು ಹಾಗೂ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದರು.


ಅಡುಗೆ ಎಣ್ಣೆಯನ್ನು ಬಯೋ ಡೀಸೆಲ್‌ ಆಗಿ ಪರಿವರ್ತಿಸುವ ಪರಿಕಲ್ಪನೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದ ಕಿಶನ್‌, ಮನೆ, ಬೇಕರಿ, ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಬಳಸಿದ ಅಡುಗೆ ಎಣ್ಣೆಯಿಂದ ಬಯೋ ಡೀಸೆಲ್‌ ಉತ್ಪಾದಿಸಲು ಒತ್ತು ನೀಡುತ್ತಿದ್ದರು.


ಜೈವಿಕ ಇಂಧನ ಎಂದರೇನು?


ಮೊದಲಿಗೆ ಇಲ್ಲಿ ಜೈವಿಕ ಇಂಧನ ಎಂದರೆ ಸಸ್ಯ ಬೀಜಗಳು, ಕೃಷಿತ್ಯಾಜ್ಯ, ಪ್ರಾಣಿಗಳ ಕೊಬ್ಬು, ಆಮ್ಲಜನಕ ರಹಿತ ಜೀರ್ಣಕ್ರಿಯೆ ಮೊದಲಾದವುಗಳಿಂದ ಪಡೆದ ಇಂಧನವಾಗಿದೆ. ಜೈವಿಕ ಇಂಧನಗಳು ಸುಸ್ಥಿರ ಇಂಧನ ವ್ಯವಸ್ಥೆಯನ್ನು ಒದಗಿಸುವ, ನವೀಕರಿಸಬಹುದಾದ, ಪರಿಸರ ಸ್ನೇಹಿ ಮತ್ತು ಸ್ಥಳೀಯ ಕಚ್ಚಾ ವಸ್ತುಗಳನ್ನು ಬಳಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.


ಜಾಗತಿಕವಾಗಿ, ಇಂದು ಬಳಕೆಯಲ್ಲಿರುವ ಜೈವಿಕ ಇಂಧನಗಳ ಸಾಮಾನ್ಯ ವಿಧಗಳೆಂದರೆ ಬಯೋಇಥೆನಾಲ್ (ರಸ್ತೆ ಸಾರಿಗೆ ವಾಹನಗಳಿಗೆ ಪೆಟ್ರೋಲ್ ಬದಲಿಯಾಗಿ ಬಳಸಲಾಗುತ್ತದೆ), ಜೈವಿಕ ಡೀಸೆಲ್ (ಪ್ರಾಣಿಗಳ ಕೊಬ್ಬುಗಳು, ಸಸ್ಯಜನ್ಯ ಎಣ್ಣೆಗಳು ಮತ್ತು UCO ಗಳನ್ನು ಬಳಸಿ ಉತ್ಪಾದಿಸಲಾಗುತ್ತದೆ), ಜೈವಿಕ ಅನಿಲ (ಆಹಾರ ಅಥವಾ ಪ್ರಾಣಿ ತ್ಯಾಜ್ಯವನ್ನು ಬಳಸಿ ಉತ್ಪಾದಿಸಲಾಗುತ್ತದೆ) ಮತ್ತು ಬಯೋಬ್ಯುಟನಾಲ್ (ತ್ಯಾಜ್ಯ ಜೀವರಾಶಿ ಫೀಡ್‌ಸ್ಟಾಕ್‌ಗಳಿಂದ ಉತ್ಪತ್ತಿಯಾಗುವ ನವೀಕರಿಸಬಹುದಾದ ಇಂಧನ).


ಭಾರತದಲ್ಲಿ ಜೈವಿಕ ಇಂಧನ ಉದ್ಯಮ


ಭಾರತದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಜೈವಿಕ ಇಂಧನವನ್ನು ಬಳಸಲಾಗುತ್ತಿದೆ. ಇದರ ವ್ಯಾಪಕ ಅಳವಡಿಕೆಗೆ ಹಲವು ಅಡೆತಡೆಗಳಿದ್ದರೂ, ಈ ಉದ್ಯಮದ ಬೆಳವಣಿಗೆ ಮಾತ್ರ ಉತ್ತಮವಾಗಿದೆ.


ಸ್ಟ್ಯಾಟಿಸ್ಟಾ ಪ್ರಕಾರ, ಭಾರತದ ಜೈವಿಕ ಡೀಸೆಲ್ ಉತ್ಪಾದನೆಯು 2013 ರಲ್ಲಿ ಸುಮಾರು 132 ಮಿಲಿಯನ್ ಲೀಟರ್‌ಗಳಿಂದ 2022 ರಲ್ಲಿ 185 ಮಿಲಿಯನ್‌ಗೆ ಏರಿಕೆ ಕಂಡಿದೆ. ಜೊತೆಗೆ ಎಥೆನಾಲ್ ಉತ್ಪಾದನೆಯು 2014-15 ರಲ್ಲಿ 680 ಮಿಲಿಯನ್ ಲೀಟರ್‌ಗಳಿಂದ 2022 ರಲ್ಲಿ 9,230 ಮಿಲಿಯನ್ ಲೀಟರ್‌ಗಳಿಗೆ ಏರಿದೆ.


Buyofuel ಉತ್ಪನ್ನ ಘಟಕವು ಹೇಗೆ ಸಹಕಾರಿಯಾಗಿದೆ?


ಕಿಶನ್‌ ಅವರ Buyofuel ಉತ್ಪನ್ನ ಘಟಕವು ಖರೀದಿದಾರರು ಅವರ ಪ್ಲಾಟ್‌ಫಾರ್ಮ್‌ನಲ್ಲಿ ಅಸ್ತಿತ್ವದಲ್ಲಿರುವ ಪಟ್ಟಿಗಳನ್ನು ವೀಕ್ಷಿಸಬಹುದು ಮತ್ತು ಅವರು ಉತ್ತಮ ವ್ಯವಹಾರವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬೆಲೆ, ಪರಿಮಾಣ, ವಿತರಣಾ ಸಮಯ ಮತ್ತು ಇತರ ಅಂಶಗಳ ಆಧಾರದ ಮೇಲೆ ತಮ್ಮ ಖರೀದಿಯನ್ನು ಮಾಡಬಹುದಾಗಿದೆ.ಹಲವು ಕಂಪನಿಗಳಿಗೆ ಪೂರೈಕೆ


ಶೇಷಶಾಯಿ ಪೇಪರ್ ಮತ್ತು ಬೋರ್ಡ್, ಟಿವಿಎಸ್ ಗ್ರೂಪ್, ಥರ್ಮ್ಯಾಕ್ಸ್, ಐಟಿಸಿ, ಅಲ್ಟ್ರಾಟೆಕ್ ಸಿಮೆಂಟ್, ದಾಲ್ಮಿಯಾ ಗ್ರೂಪ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮುಂತಾದ ಕಂಪನಿಗಳಿಗೆ ಜೈವಿಕ ಇಂಧನ ಅವಶ್ಯಕತೆಗಳನ್ನು ಬಯೋಫ್ಯುಯಲ್ ಪೂರೈಸುತ್ತದೆ.

Published by:ವಾಸುದೇವ್ ಎಂ
First published: