• Home
  • »
  • News
  • »
  • business
  • »
  • Meta: ಕೆಲಸಕ್ಕೆ ಸೇರಿದ 2 ದಿನಕ್ಕೆ ವಜಾ! ಈ ಖುಷಿಗೆ ಭಾರತದಿಂದ ಕೆನಡಾಗೆ ಶಿಫ್ಟ್ ಆದವನ ಸ್ಥಿತಿ ಯಾರಿಗೂ ಬೇಡ!

Meta: ಕೆಲಸಕ್ಕೆ ಸೇರಿದ 2 ದಿನಕ್ಕೆ ವಜಾ! ಈ ಖುಷಿಗೆ ಭಾರತದಿಂದ ಕೆನಡಾಗೆ ಶಿಫ್ಟ್ ಆದವನ ಸ್ಥಿತಿ ಯಾರಿಗೂ ಬೇಡ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉದ್ಯೋಗ ಕಳೆದುಕೊಂಡಿರುವ ಮೆಟಾ ಉದ್ಯೋಗಿಗಳ ಪೈಕಿ ಭಾರತೀಯ (Inidan) ರೊಬ್ಬರು ಮೆಟಾಗೆ ಸೇರಿದ ಬರೇ ಎರಡು ದಿನದಲ್ಲಿ ಕೆಲಸದಿಂದ ವಜಾಗೊಂಡಿದ್ದಾರೆ.

  • Share this:

ಟ್ವಿಟರ್ (Twitter) ನಂತರ ಟೆಕ್ ಉದ್ಯಮದಲ್ಲೇ ಅತ್ಯಂತ ಕೆಟ್ಟ ವಜಾಗೊಳಿಸುವಿಕೆ ಎಂಬ ಕಪ್ಪುಚುಕ್ಕೆಗೆ ಗುರಿಯಾಗಿರುವ ಮಾರ್ಕ್ ಜುಕರ್‌ಬರ್ಗ್ (Mark Zuckerberg) ನೇತೃತ್ವದ ಮೆಟಾ ಸಂಸ್ಥೆ (Meta Company) ಯು 11,000 ಕ್ಕೂ ಹೆಚ್ಚು ಉದ್ಯೋಗಿ (Employees) ಗಳನ್ನು ಒಂದೇ ಬಾರಿಗೆ ತೆಗೆದುಹಾಕಿದೆ. ಉದ್ಯೋಗ ಕಳೆದುಕೊಂಡಿರುವ ಮೆಟಾ ಉದ್ಯೋಗಿಗಳ ಪೈಕಿ ಭಾರತೀಯ (Inidan) ರೊಬ್ಬರು ಮೆಟಾಗೆ ಸೇರಿದ ಬರೇ ಎರಡು ದಿನದಲ್ಲಿ ಕೆಲಸದಿಂದ ವಜಾಗೊಂಡಿದ್ದು, ಉದ್ಯೋಗ ನಿಮಿತ್ತ ಭಾರತದಿಂದ ಕೆನಡಾ (Canada) ಕ್ಕೆ ಸ್ಥಳಾಂತರಗೊಂಡಿದ್ದರು.


ಕೆಲಸಕ್ಕೆ ಸೇರಿದ ಎರಡೇ ದಿನಕ್ಕೆ ವಜಾ!


ಹಿಮಾಂಶು ವಿ ಹೆಸರಿನ ಮೆಟಾದ ಮಾಜಿ ಉದ್ಯೋಗಿ, ಮೆಟಾದಲ್ಲಿನ ತಮ್ಮ ಹೊಸ ಉದ್ಯೋಗಕ್ಕಾಗಿ ಇದೀಗ ತಾನೇ ಭಾರತದಿಂದ ಕೆನಡಾಕ್ಕೆ ಸ್ಥಳಾಂತರಗೊಂಡಿದ್ದರು. ಇದೀಗ ಲಿಂಕ್ಡ್‌ಇನ್ ಖಾತೆಯಲ್ಲಿ ತಮ್ಮ ದಯನೀಯ ಹಾಗೂ ಹತಾಶ ಸ್ಥಿತಿಯನ್ನು ಬಹಿರಂಗಪಡಿಸಿರುವ ಹಿಮಾಂಶು, ಐಐಟಿ ಖಾರಗ್‌ಪುರ್ ವಿದ್ಯಾಲಯದ ಪದವೀಧರರಾಗಿದ್ದಾರೆ ಹಾಗೂ ಗಿಟ್‌ಹಬ್, ಅಡೋಬ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಉನ್ನತ ಮಟ್ಟದ ಬ್ರ್ಯಾಂಡ್‌ಗಳಲ್ಲಿ ಉದ್ಯೋಗ ನಿರ್ವಹಿಸಿದ ವೃತ್ತಿಪರರು ಎಂದೆನಿಸಿದ್ದಾರೆ.


ಮೆಟಾ ಸೇರಲು ಕೆನಡಾಗೆ ಬಂದಿದ್ದ ಹಿಮಾಂಶು


ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿರುವ ಹಿಮಾಂಶು, ಮೆಟಾ ಸಂಸ್ಥೆಗೆ ಸೇರಲು ಭಾರತದಿಂದ ಕೆನಡಾಗೆ ಸ್ಥಳಾಂತರಗೊಂಡಿದ್ದು ಮೆಟಾಗೆ ಸೇರಿದ 2 ದಿನಗಳ ನಂತರ ವಜಾಗೊಂಡಿರುವೆ. ಮೆಟಾದೊಂದಿಗೆ ನನ್ನ ಪ್ರಯಾಣ ಇಲ್ಲಿಗೆ ಕೊನೆಗೊಂಡಿದೆ. ನನ್ನಂತೆಯೇ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ನನ್ನ ವಿಶಾದವಿದೆ. ಮುಂದಿನ ಹಂತದ ಬಗ್ಗೆ ತನಗೇನೂ ಯೋಚನೆ ಇಲ್ಲ ಎಂದು ಹೇಳಿರುವ ಹಿಮಾಂಶು, ಸಾಫ್ಟ್‌ವೇರ್ ಇಂಜಿನಿಯರ್‌ ಹುದ್ದೆಯ ಕುರಿತು ಬೇರೆಲ್ಲಾದರೂ ಉದ್ಯೋಗವಕಾಶಗಳಿದ್ದರೆ ತಿಳಿಸಿ ಎಂದು ಲಿಂಕ್ಡ್‌ಇನ್ ಬಳಕೆದಾರರಲ್ಲಿ ವಿನಂತಿಸಿಕೊಂಡಿದ್ದಾರೆ.


ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಹಿಮಾಂಶು


ನಿಜವಾಗಿ ಹೇಳಬೇಕೆಂದರೆ ನನಗೆ ಮುಂದೇನು ಮಾಡಬೇಕೆಂದು ತೋಚುತ್ತಿಲ್ಲ. ಸಾಫ್ಟ್‌ವೇರ್ ಇಂಜಿನಿಯರ್ (ಕೆನಡಾ ಅಥವಾ ಭಾರತ) ಹುದ್ದೆ ಇಲ್ಲವೇ ನೇಮಕಾತಿ ಬಗ್ಗೆ ಯಾರಿಗಾದರೂ ತಿಳಿದಿದ್ದರೆ ನನಗೆ ತಿಳಿಸಿ ಎಂದು ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ. ಹಿಮಾಂಶು ಅವರ ಪೋಸ್ಟ್‌ಗೆ ಹೆಚ್ಚಿನವರು ಕಾಮೆಂಟ್‌ ಮಾಡಿದ್ದಾರೆ ಹಾಗೂ ಅವರಿಗೆ ಸಮಾಧಾನಕರವಾಗಿ ಮಾತನಾಡಿದ್ದಾರೆ. ಇನ್ನು ಕೆಲವರು ಅವರಿಗೆ ಉದ್ಯೋಗವಕಾಶಗಳ ವಿವರವನ್ನು ನೀಡಿದ್ದು, ಇನ್ನು ಕೆಲವರು ಸಾಫ್ಟ್‌ವೇರ್ ಇಂಇನಿಯರ್‌ಗಳನ್ನು ನೇಮಿಸಿಕೊಳ್ಳುವ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: TATA Nexon 85 ಸಾವಿರ ಕಿಮೀ ಓಡೋಕೆ ಖರ್ಚಾಗಿದ್ದೆಷ್ಟು? ಇದಕ್ಕೆ ಹೇಳೋದು ಎಲೆಕ್ಟ್ರಿಕ್​ ಕಾರ್​ ಬೆಸ್ಟ್​ ಅಂತ!


ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸುವ ಸಮಯದಲ್ಲಾದರೂ ಕಂಪನಿ ವಜಾಗೊಳಿಸುವ ಮಾಹಿತಿಯ ಕುರಿತು ಈ ಹಿಂದೆಯೇ ತಿಳಿಸಬೇಕಿತ್ತು ಎಂದು ಒಬ್ಬ ಬಳಕೆದಾರರು ಬರೆದುಕೊಂಡಿದ್ದರೆ, ನಾನು ನಿಮ್ಮಂತೆಯೇ ವಜಾಗೊಂಡ ಪ್ರಕ್ರಿಯೆಯಿಂದ ನೊಂದಿರುವವನಾಗಿದ್ದು, ಯಾರಾದರೂ ನಮಗೆ ಖಂಡಿತ ಸಹಾಯ ಮಾಡುತ್ತಾರೆ ಧನಾತ್ಮಕವಾಗಿರಿ ಒಳ್ಳೆಯದಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.


ಅತ್ಯಂತ ದೊಡ್ಡ ವಜಾಗೊಳಿಸುವಿಕೆ


ಸೆಪ್ಟೆಂಬರ್ 2022 ರ ಅಂತ್ಯದ ವೇಳೆಗೆ ಮೆಟಾ 87,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಂಸ್ಥೆಯಲ್ಲಿರುವುದಾಗಿ ವರದಿ ಮಾಡಿದೆ. ಕಂಪನಿಯ ಅಧಿಕಾರಿಗಳು ಈ ವಾರದಿಂದ ಪ್ರಾರಂಭವಾಗುವ ಅನಿವಾರ್ಯವಲ್ಲದ ಪ್ರಯಾಣವನ್ನು ರದ್ದುಗೊಳಿಸುವಂತೆ ಈಗಾಗಲೇ ಉದ್ಯೋಗಿಗಳಿಗೆ ತಿಳಿಸಿದ್ದರು ಎಂಬುದಾಗಿ ವರದಿಯಾಗಿದೆ.ಯೋಜಿತ ವಜಾಗೊಳಿಸುವಿಕೆ ಕಂಪನಿಯ 18 ವರ್ಷಗಳ ಇತಿಹಾಸದಲ್ಲೇ ಸಂಭವಿಸಿರುವ ಅತ್ಯಂತ ದೊಡ್ಡ ಮಟ್ಟದ ಉದ್ಯೋಗಿ ಕಡಿತ ಎಂದೆನಿಸಿದೆ.


ಸಂಸ್ಥೆಯ ಗಳಿಕೆಯು ಫಲಪ್ರದವಾಗಿಲ್ಲ ಹಾಗೂ ನಿರಾಶದಾಯಕವಾಗಿದೆ ಮತ್ತು ಆದಾಯದಲ್ಲಿ ಕುಸಿತ ಸಂಭವಿಸಿರುವ ಪರಿಣಾಮದಿಂದ ವೆಚ್ಚವನ್ನು ತಗ್ಗಿಸಲು 11,000 ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ ಎಂದು ಫೇಸ್‌ಬುಕ್‌ನ ಪೋಷಕ ಕಂಪನಿ ಮೆಟಾ ಪ್ರಕಟಿಸಿದೆ.


ಮಾರ್ಕ್ ಜುಕರ್​ಬರ್ಗ್ ಹೇಳಿದ್ದೇನು?


ಬೃಹತ್ ಉದ್ಯೋಗಿ ವಜಾಗೊಳಿಸುವಿಕೆಯ ನಂತರ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ್ದು, ಮೆಟಾ ಇತಿಹಾಸದಲ್ಲಿಯೇ ನಡೆಸಿದ ಅತ್ಯಂತ ಕಷ್ಟಕರವಾದ ಬದಲಾವಣೆಯ ಕುರಿತು ನಾನು ಹಂಚಿಕೊಳ್ಳುತ್ತಿದ್ದೇನೆ. ತಂಡದ ಗಾತ್ರವನ್ನು 13% ಕ್ಕಿಂತ ಕಡಿಮೆ ಮಾಡಲು ನಿರ್ಧರಿಸಿದ್ದು, 11000 ಕ್ಕಿಂತಲೂ ಹೆಚ್ಚಿನ ಪ್ರತಿಭಾವಂತರಿಗೆ ಕಂಪನಿ ಬಿಟ್ಟು ಹೋಗಲು ಅವಕಾಶ ನೀಡಿದ್ದೇನೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಈ ಸ್ಪೀಡ್​ನಲ್ಲಿ ನಿಮ್ಮ ಬೈಕ್​ ಓಡಿಸಿದ್ರೆ ಬೆಸ್ಟ್​ ಮೈಲೇಜ್​ ಬರುತ್ತಂತೆ, ಟ್ರೈ ಮಾಡಿ ನೋಡಿ!


ಬೇರ್ಪಡಿಕೆಯ ಭಾಗವಾಗಿ ಉದ್ಯೋಗಿಗಳು ಹೆಚ್ಚುವರಿ ಎರಡು ವಾರಗಳೊಂದಿಗೆ 16 ವಾರಗಳ ಮೂಲ ವೇತನವನ್ನು ಪಡೆಯುತ್ತಾರೆ. ಆರು ತಿಂಗಳ ಆರೋಗ್ಯ ಸೇವೆಯ ವೆಚ್ಚವನ್ನು ಉದ್ಯೋಗಿಗಳು ಹೊಂದಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

Published by:ವಾಸುದೇವ್ ಎಂ
First published: