Narayana Murthy: ಇನ್ಫೋಸಿಸ್‌ ನಾರಾಯಣಮೂರ್ತಿ ಕಲಿತ 9 ಜೀವನ ಪಾಠಗಳಿವು!

ನಾರಾಯಣ ಮೂರ್ತಿ

ನಾರಾಯಣ ಮೂರ್ತಿ

ನಾರಾಯಣಮೂರ್ತಿಯವರು ಇನ್ಪೊಸಿಸ್‌ಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳ ಕುರಿತು ತಮ್ಮ ಪತ್ನಿ ಜೊತೆ ಚರ್ಚಿಸಬಾರದು ಎಂದು ತಮಗೆ ತಾವೇ ಒಂದು ನಿಯಮ ಹಾಕಿಕೊಂಡಿದ್ದಾರೆ.

  • Share this:

ಸಮಾಜದಲ್ಲಿ ಇಂದು ಗೆಲುವು ಕಾಣುತ್ತಿರುವ ಜನರು ಈ ಹಿಂದೆ ಸಮಾಜದಲ್ಲಿ ಅನೇಕ ಅವಮಾನಗಳನ್ನು ಎದುರಿಸಿ, ಪರಿಶ್ರಮದಿಂದಲೇ ಉನ್ನತ ಸ್ಥಾನಮಾನವನ್ನು (High status) ಪಡೆದಿರುತ್ತಾರೆ ಎಂದು ಹೇಳಬಹುದು. ಅದರಲ್ಲಿ ನಮ್ಮ‌ ದೇಶದಲ್ಲಿ ಪ್ರಮುಖವಾಗಿ ನಿಲ್ಲುವರು ಇನ್ಫೋಸಿಸ್‌ ಒಡೆಯ ಎನ್ ಆರ್ ನಾರಾಯಣ ಮೂರ್ತಿ ಆಗಿದ್ದಾರೆ (NR Narayana Murthy, Owner of Infosys). ಇವರು 1981 ರಲ್ಲಿ ಇನ್ಫೋಸಿಸ್ ಆರಂಭಿಸಿದಾಗ ಆ ಕಂಪನಿಯ ಶೇರ್‌ NSE -2.63 % ಇತ್ತು ಹಾಗೆಯೇ ಇದರ ಆರು ಇತರ ಸಹ-ಸಂಸ್ಥಾಪಕರು, ಉದ್ಯಮಿಗಳು ಭಾರತದಲ್ಲಿ ಹೆಸರುವಾಸಿಯಾಗಿರಲಿಲ್ಲ. ಹಾಗಾದರೆ ಇವರು ಭಾರತದಲ್ಲಿ (India) ಐಟಿ ಕ್ರಾಂತಿಕಾರಿಗಳಾಗಿಹೇಗೆ ಹೊರಹೊಮ್ಮಿದರು? ಇತ್ತೀಚೆಗೆ ಪ್ರಕಟವಾದ 'ಸ್ಟಾರ್ಟ್‌ಅಪ್ ಕಂಪಾಸ್' (Startup Compass) ಪುಸ್ತಕದ ಮುನ್ನುಡಿಯಲ್ಲಿ, 75 ವರ್ಷದ ಬಿಲಿಯನೇರ್ ನಾರಾಯಣಮೂರ್ತಿ ತಮ್ಮ  ಉದ್ಯಮದ ಯಶಸ್ಸಿನ ಮಂತ್ರವನ್ನು ಹಂಚಿಕೊಂಡಿದ್ದಾರೆ. 


ಉದ್ಯಮಕ್ಕೆ ಬಂದ ಆರಂಭಿಕ ದಿನಗಳಲ್ಲಿ ಒಬ್ಬ ಉದ್ಯಮಿಯಾಗಿ ಕಲಿತ ಪಾಠಗಳನ್ನು  ಹಂಚಿಕೊಂಡಿದ್ದಾರೆ. ಹಾಗೆಯೇ ತಮ್ಮ ಬಿಡುವಿನ ಸಮಯದಲ್ಲಿ ಆರ್ಥಿಕತೆಗೆ ಸಂಬಂಧಿಸಿದ ಪಾಠಗಳನ್ನು ತೆಗೆದುಕೊಳ್ಳುವುದನ್ನು ಅವರು ಯಾವಾಗಲೂ ಆಯ್ಕೆ ಮಾಡುತ್ತಾರೆ ಮತ್ತು ಈ ಇನ್ಪೊಸಿಸ್‌ಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳ ಕುರಿತು ತಮ್ಮ ಪತ್ನಿ ಜೊತೆ ಚರ್ಚಿಸಬಾರದು ಎಂದು ತಮಗೆ ತಾವೇ ಒಂದು ನಿಯಮ ಹಾಕಿಕೊಂಡಿದ್ದಾರೆ.


ನಾರಾಯಣ ಮೂರ್ತಿಯವರಿಂದ ಉದ್ಯಮಿಗಳಿಗೆ ಒಂಬತ್ತು ಪಾಠಗಳು ಇಲ್ಲಿವೆ:


1) ಮೌಲ್ಯಗಳನ್ನು ದೈನಂದಿನ ಜೀವನದಲ್ಲಿ ಅಭ್ಯಾಸ ಮಾಡುವ ಮಹತ್ವ
ನಾರಾಯಣಮೂರ್ತಿ ಮತ್ತು ಇನ್ಫೋಸಿಸ್ ತಂಡ ಕಲಿತ ಮೊದಲ ಮತ್ತು ಮುಖ್ಯ ಪಾಠವೆಂದರೆ -ಮೌಲ್ಯಗಳನ್ನು ವ್ಯಕ್ತಪಡಿಸುವ ಮತ್ತು ಅವುಗಳನ್ನು ದೈನಂದಿನ ಜೀವನದಲ್ಲಿ ಅಭ್ಯಾಸ ಮಾಡುವ ಮಹತ್ವದ ಪಾಠ ಹೇಳುತ್ತಾರೆ. ಮೌಲ್ಯಗಳು ವಾಣಿಜ್ಯೋದ್ಯಮಿಗಳ ನಿರ್ಧಾರದ ಆಧಾರ ಸ್ತಂಭಗಳು. ನಮ್ಮ ವೈಯಕ್ತಿಕ ಆಸಕ್ತಿಗಿಂತ ಕಂಪನಿಯ ಹಿತಾಸಕ್ತಿಯನ್ನು ನೋಡಿಕೊಳ್ಳುವುದು ನಮ್ಮ ಮೌಲ್ಯ ವ್ಯವಸ್ಥೆಯ ಮೊದಲ ಮತ್ತು ಪ್ರಮುಖ ಸಿದ್ಧಾಂತವಾಗಿದೆ ಎಂದು ಹೇಳಿದ್ದಾರೆ.


2) ಆರಂಭಿಕ ದಿನಗಳಲ್ಲಿ ಸೋಲುಗಳು ಬರುವುದು ಸಾಮಾನ್ಯ
ಉದ್ಯಮದಲ್ಲಿ ಆರಂಭಿಕ ದಿನಗಳಲ್ಲಿ ಸೋಲುಗಳು ಬರುವುದು ಸಾಮಾನ್ಯ ಅವುಗಳನ್ನು ಮುಕ್ತ ಹೃದಯದಿಂದ ಒಪ್ಪಿಕೊಂಡು, ಅವುಗಳಲ್ಲಿ ಆದ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಹೆಜ್ಜೆಯನ್ನು ಎಚ್ಚರಿಕೆಯಿಂದ ಇರಿಸಬೇಕು. ಮಾರ್ಕೆಟ್‌ನಲ್ಲಿ ಈಗ ಯಾವ ಟ್ರೆಂಡ್‌ ನಡೆಯುತ್ತಿದೆ ಎಂಬುದರ ಕಡೆ ಕೂಡ ಗಮನವಿಟ್ಟಿರಬೇಕು.


ಇದನ್ನೂ ಓದಿ: Job Seeker's Mindset: ಹೊಸದಾಗಿ ಉದ್ಯೋಗ ಹುಡುಕುತ್ತಿರುವವರ ಮೈಂಡ್ಸೆಟ್ ಹೇಗಿರಬೇಕು?


3) ತನ್ನ ಕೆಲಸವನ್ನು ಆಗಾಗ ಚೆಕ್‌ ಮಾಡಿಕೊಳ್ಳುತ್ತಿರಬೇಕು.
ನಾನು ಮಾಡುತ್ತಿರುವ ಕೆಲಸ ನನ್ನ ಮತ್ತು ಕಂಪನಿಯ ಹಿತಾಸಕ್ತಿಯನ್ನು ಕಾಪಾಡುತ್ತಿದೆಯೇ ಎಂಬ ಪ್ರಶ್ನೆ ಕೇಳಿಕೊಳ್ಳುತ್ತಿರಬೇಕು. ನಾನು ಆರಂಭಿಸದ Softronics ಉತ್ತಮ ದೇಶೀಯ ಮಾರುಕಟ್ಟೆಯನ್ನು ಹೊಂದಿರಲಿಲ್ಲ, ಹಾಗೂ ನಾನು ಅದನ್ನು ಮರುಸ್ಥಾಪಿಸಲು ವೇಗವಾಗಿ ಕಾರ್ಯ ನಿರ್ವಹಿಸಲಿಲ್ಲ. ಹಾಗಾಗಿ ಅದನ್ನು ಕೇವಲ 9 ತಿಂಗಳಲ್ಲಿ ಅದನ್ನು ಮುಚ್ಚಿದೆ ಎಂದು ತಮ್ಮ ಹಳೆಯ ದಿನಗಳನ್ನು ಹಂಚಿಕೊಂಡರು.


4) ಅದೃಷ್ಟವು ಹೇಗೆ ತನ್ನ‌ ಪ್ರಭಾವ ಬೀರಬಲ್ಲದು?
ಇದಕ್ಕೆ ನಾನೇ ಉದಾಹರಣೆ. ಏಕೆಂದರೆ ನನ್ನ ಅನೇಕ ಸ್ನೇಹಿತರು ನನಗಿಂತ ಜಾಣರಾಗಿದ್ದರು, ನನಗಿಂತ ಉತ್ತಮವಾದ ಉದ್ಯಮ ಐಡಿಯಾಗಳನ್ನು ಹೊಂದಿದ್ದರು. ಆದರೆ ಅವರು ಅನೀರಿಕ್ಷಿತವಾಗಿ ಬಂದ ಸವಾಲುಗಳಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳದೇ ಸೋಲಿನ ದಾರಿಯಲ್ಲಿ ನಡೆದರು. ಆದರೆ ನಾನು ಆ ದೇವರ ಕೃಪೆಯಿಂದ ಕಷ್ಟದ ಪರಿಸ್ಥಿತಿಯಲ್ಲಿ ಉತ್ತಮ ನಿರ್ಧಾರ ಮಾಡಿ ಗೆಲುವು ಸಾಧಿಸಿದೆ ಎಂದು ಹೇಳಿದರು.


5) ಗ್ರಾಹಕರನ್ನು ನಮ್ಮತ್ತ ಸೆಳೆಯಬೇಕು
ಇಂದು ಮಾರ್ಕೆಟ್‌ ಸ್ಪರ್ಧೆಯು ಒಂದು ಅತ್ಯುತ್ತಮ ನಿರ್ವಹಣೆ ಶಾಲೆ ಎಂದು ದಿವಂಗತ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಹೇಳಿರುವ ಪ್ರಕಾರ ಮಾರ್ಕೆಟ್‌ ಸ್ಪರ್ಧೆಯು ನಮಗೆ ಹೇಗೆ ಗ್ರಾಹಕರನ್ನು ನಮ್ಮತ್ತ ಸೆಳೆಯುವ ಆಗೆ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತದೆ ಎಂದು ಹೇಳಿದ್ದಾರೆ.


6) ನಿಮ್ಮಲ್ಲಿ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು
ನಿಮ್ಮಲ್ಲಿ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಈ ವಾಣಿಜ್ಯೋದ್ಯಮದಲ್ಲಿ ತುಂಬಾ ಮುಖ್ಯ. ಯಾರ ಜೊತೆ ಹೇಗೆ ಮಾತಾಡಬೇಕು, ಯಾರನ್ನು ಹೇಗೆ ನಿಭಾಯಿಸಬೇಕು, ಯಾರಿಗೆ ಯಾವ ಕೆಲಸ ನೀಡಿದರೆ ಅವರು ಅದನ್ನು ಉತ್ತಮವಾಗಿ ಮಾಡಿ ಮುಗಿಸುವವರು ಎಂಬ ವಿಷಯಗಳ ಕುರಿತು ಸ್ಪಷ್ಟ ಅರಿವು ಉದ್ಯಮಿಗಳಾದ ನಮಗೆ ಇರಬೇಕಾದುದು ಅವಶ್ಯ ಎಂದು ಹೇಳಿದ್ದಾರೆ.


7) ಕಚೇರಿಯಲ್ಲಿನ ಸಮಸ್ಯೆಯ ಬಗ್ಗೆ ಮನೆಯವರೊಂದಿಗೆ ಚರ್ಚಿಸಬಾರದು
ಕಚೇರಿಯಲ್ಲಿನ ಸಮಸ್ಯೆಯ ಬಗ್ಗೆ ನಮ್ಮ ಸಹ-ಸಂಸ್ಥಾಪಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಆ ವಿಷಯಗಳನ್ನು ನಮ್ಮಲ್ಲಿ ಯಾರು ತಮ್ಮ-ತಮ್ಮ ನಮ್ಮ ಪತಿ ಅಥವಾ ಪತ್ನಿಗಳೊಡನೆ ಚರ್ಚಿಸಬಾರದು ಎಂದು ನಿರ್ಧರಿಸಿದೆವು ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೆವೆ. ಇದಕ್ಕೆ. ಕಾರಣ ತುಂಬಾ ಸರಳ ಅದೆನೆಂದರೆ ನಮ್ಮ ಸಂಗಾತಿಗಳು ಸಮಸ್ಯೆಯನ್ನು ಪ್ರತ್ಯೇಕವಾಗಿ ನೋಡಬಹುದು ಮತ್ತು ಇದು ಇನ್ನು ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕಬಹುದು ಎಂದು ಹೇಳಿದ್ದಾರೆ.


8) ಕಂಪನಿ ಕೆಲಸಗಳ ಬಗ್ಗೆ ಎಲ್ಲರಿಂದಲೂ ಅಭಿಪ್ರಾಯ ಸಂಗ್ರಹಿಸುವುದು ಉತ್ತಮ 
ಒಂದು ಕಂಪನಿಯಲ್ಲಿ ಒಂದು ಸಮಯಕ್ಕೆ ಒಬ್ಬನೇ ನಾಯಕನಿರಬೇಕಾದುದು ಇಲ್ಲಿ ಅಗತ್ಯ ಕ್ರಮವಾಗಿದೆ. ಅನೇಕ ನಾಯಕರು ಒಂದೇ ಸಮಯಕ್ಕೆ ಅಧಿಕಾರದಲ್ಲಿದ್ದಾಗ ಅಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಕೆಲಸಗಳು ಮುಂದೆ ಸಾಗುವುದಿಲ್ಲ. ಇದರ ಬದಲಾಗಿ ಒಬ್ಬ ನಾಯಕನಿದ್ದು, ಕಂಪನಿ ಕೆಲಸಗಳ ಬಗ್ಗೆ ಎಲ್ಲರಿಂದಲೂ ಅಭಿಪ್ರಾಯ ಸಂಗ್ರಹಿಸಿ, ಉತ್ತಮವಾದ ಆಯ್ಕೆ ಮಾಡಿಕೊಳ್ಳಬಹುದು ಇದು ನನ್ನ 8 ನೇ ಪಾಠ ಎಂದು ಹೇಳಿದರು.


9) ಸಾಮರ್ಥ್ಯ ಮತ್ತು ಉತ್ತಮ ಮೌಲ್ಯ ವ್ಯವಸ್ಥೆಯು ಯಶಸ್ವಿ ಜ್ಞಾನ
ಮೂರ್ತಿಯವರು ಕಲಿತ 9 ನೇ ಮತ್ತು ಕೊನೆಯ ಪಾಠವು ಸಾಮರ್ಥ್ಯ ಮತ್ತು ಉತ್ತಮ ಮೌಲ್ಯ ವ್ಯವಸ್ಥೆಯು ಯಶಸ್ವಿ ಜ್ಞಾನ ಕಂಪನಿಯ ಅತ್ಯಗತ್ಯ ಅಂಶಗಳಾಗಿವೆ ಮತ್ತು ಅದು 'ಬುದ್ಧಿಶಕ್ತಿಯಿಂದ ನಡೆಸಲ್ಪಡುತ್ತದೆ, ಮೌಲ್ಯಗಳಿಂದ ನಡೆಸಲ್ಪಡುತ್ತದೆ' ಎಂಬುದು ಇನ್ಫೋಸಿಸ್‌ನ ಟ್ಯಾಗ್‌ಲೈನ್‌ ಆಗಿದೆ.


ಇದನ್ನೂ ಓದಿ: Business Idea: ಈ ಬ್ಯುಸಿನೆಸ್​ ನಿಮ್ಗೆಲ್ಲಾ ಗೊತ್ತಿರೋದೇ! ಮನೆಯಲ್ಲೇ ಶುರು ಮಾಡಿ ಅಸಲು ಬಿಟ್ಟು 40 ಸಾವಿರ ಗಳಿಸಿ

top videos


    ಈ ಕಂಪನಿ ಕಟ್ಟುವುದಕ್ಕೆ ನಾವು ಬಹಳಷ್ಟು ಶ್ರಮ ಪಟ್ಟಿದ್ದೇವೆ. ಅದಕ್ಕೆ ಇಂದು ಸಂಸ್ಥಾಪಕ ತಂಡದ ಆರು ಸದಸ್ಯರಲ್ಲಿ ಪ್ರತಿಯೊಬ್ಬರನ್ನು ಬಿಲಿಯನೇರ್‌ಗಳನ್ನಾಗಿ ಮಾಡಿದೆ. ಈ ತಂಡದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಏಳನೆಯವರು, ಅಶೋಕ್ ಅರೋರಾ, 1989 ರಲ್ಲಿ US ನಲ್ಲಿ ನೆಲೆಸಲು ನಮ್ಮನ್ನು ಬಿಟ್ಟು ಹೋದರು ಆದರೂ ತೊಂದರೆಯಿಲ್ಲ. ಅವರಿಗೆ ಶುಭ ಹಾರೈಸುತ್ತೇನೆ ಎಂದು ಮೂರ್ತಿ ಪುಸ್ತಕದಲ್ಲಿ ಬರೆದಿದ್ದಾರೆ. (ಐಐಎಂಎಯ ಪದವೀಧರರಾದ ಉಜ್ವಲ್ ಕಲ್ರಾ ಮತ್ತು ಶೋಭಿತ್ ಶುಭಂಕರ್ ಬರೆದಿರುವ ಪುಸ್ತಕ ‘ಸ್ಟಾರ್ಟಪ್ ಕಂಪಾಸ್’ ನ ಮುನ್ನುಡಿಯಲ್ಲಿ ನಾರಾಯಣ ಮೂರ್ತಿಯವರು ಈ 9 ಪಾಠಗಳ ಕುರಿತು ಬರೆದಿದ್ದಾರೆ.

    First published: