Rent House: ಮನೆ ಖರೀದಿಗಿಂತ ಬಾಡಿಗೆ ನೀಡೋದೆ ಬೆಸ್ಟ್ ಅಂತೆ! ಹಣಕಾಸು ತಜ್ಞರ ಸಲಹೆಗೆ ಪರ-ವಿರೋಧ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವರು ಯಾರಪ್ಪಾ ಪ್ರತಿ ತಿಂಗಳ ಮನೆ ಬಾಡಿಗೆ (House Rent) ಕಟ್ತಾರೆ, ಸುಮ್ಮನೇ ನಮ್ಮದೇ ಮನೆ ಖರೀದಿ, ಕಟ್ಟೋದು ಉತ್ತಮ ಎಂದರೆ, ಕೆಲವರು ಮನೆ ಮೇಲಿನ ಹೂಡಿಕೆಗಿಂತ ಬಾಡಿಗೆ ಕಟ್ಟೋದೇ ಲೇಸು ಎಂದಿದ್ದಾರೆ.

  • Share this:

ಮನೆ, (Home) ಮೂಲಭೂತ ಅವಶ್ಯತೆಗಳಲ್ಲಿ ಇದು ಒಂದು. ಪ್ರಸ್ತುತ ಮನೆ ವಿಚಾರವಾಗಿ ಮತ್ತು ಅದರ ಮೇಲಿನ ಹೂಡಿಕೆ (Investment) ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲವರು ಯಾರಪ್ಪಾ ಪ್ರತಿ ತಿಂಗಳ ಮನೆ ಬಾಡಿಗೆ (House Rent) ಕಟ್ತಾರೆ, ಸುಮ್ಮನೇ ನಮ್ಮದೇ ಮನೆ ಖರೀದಿ, ಕಟ್ಟೋದು ಉತ್ತಮ ಎಂದರೆ, ಕೆಲವರು ಮನೆ ಮೇಲಿನ ಹೂಡಿಕೆಗಿಂತ ಬಾಡಿಗೆ ಕಟ್ಟೋದೇ ಲೇಸು ಎಂದಿದ್ದಾರೆ. ಹೀಗೆ ಮನೆ ಮೇಲೆ ಹೂಡಿಕೆ ಅನ್ನೋದು ಈಗ ಸಾಕಷ್ಟು ಚರ್ಚೆಯಲ್ಲಿರುವ ವಿಚಾರ. ಕೆಲವರಂತೂ ಮನೆ ಕಟ್ಟಿದರೆ ಎಲ್ಲಾ ಮುಗಿಯಿತು ಅಂದು ಕೊಳ್ಳುತ್ತಾರೆ. ಆದರೆ ಅನೇಕ ಆರ್ಥಿಕ ಪರಿಣಿತರು (Financial Experts) ಮಾತ್ರ ಇದೊಂದು ಅಪ್ರಯೋಜಕ ಹೂಡಿಕೆ, ಜಾಗಗಳ ಮೇಲೆ ನಿಮ್ಮ ಹಣ ಹೂಡಿ ಆದರೆ ಮನೆ ಕಟ್ಟೋದರ ಮೇಲೆ ಮಾತ್ರ ಹಣ ಹಾಕಬೇಡಿ ಎನ್ನುತ್ತಿದ್ದಾರೆ.


ಈ ಮನೆ ವಿಚಾರ ಬಂದರೆ ಖರೀದಿ ಮತ್ತು ಬಾಡಿಗೆಯಲ್ಲಿ ಯಾವುದು ಉತ್ತಮವಾದುದು ಎಂಬ ಚರ್ಚೆ ಎಲ್ಲರಲ್ಲೂ ಇದೆ.


ವೈರಲ್‌ ಆಯ್ತು ಹಣಕಾಸು ತಜ್ಞರ‌ ಸರಣಿ ಟ್ವೀಟ್


ಹೀಗೆ ಖರೀದಿಗಿಂತ ಬಾಡಿಗೆ ಮನೆಯಲ್ಲಿರುವುದೇ ಆರ್ಥಿಕವಾಗಿ ಉತ್ತಮ ಎಂದು ಟ್ವಿಟರ್‌ನಲ್ಲಿ ಶರಣ್‌ ಹೆಗಡೆ ಎಂಬ ಹಣಕಾಸು ತಜ್ಞರು ವಿವರಿಸಿದ್ದಾರೆ. ಸದ್ಯ ಇವರು ನೀಡಿರುವ ವಿಶ್ಲೇಷಣೆಗೆ ನೆಟ್ಟಿಗರು ತಲೆ ಅಲ್ಲಾಡಿಸಿದರೆ, ಇನ್ನೂ ಕೆಲ ಬಳಕೆದಾರು ಇದೊಂದು ನಿಷ್ಪ್ರಯೋಜಕ ಸಲಹೆ ಎಂದಿದ್ದಾರೆ.


ಟ್ವಿಟರ್‌ನಲ್ಲಿ, ಹಣಕಾಸು ಪ್ರಭಾವಿ ಶರಣ್ ಹೆಗ್ಡೆ ತಾವು ಏಕೆ ಮನೆ ಖರೀದಿಸದೇ ಫ್ಲಾಟ್‌ನಲ್ಲಿ ₹ 1.5 ಲಕ್ಷ ಬಾಡಿಗೆ ಕೊಟ್ಟು ಇದ್ದೇನೆ ಎಂಬುವುದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡುವ ಮೂಲಕ ವಿವರಿಸಿದ್ದಾರೆ.


ಫ್ಲಾಟ್‌ ಮೇಲೆ ಹೂಡಿಕೆ ಮಾಡಿದರೆ ಲಾಭ ಇಲ್ಲ!


ಮೊದಲ ಟ್ವೀಟ್‌ನಲ್ಲಿ ₹ 7 ಕೋಟಿಯ ಫ್ಲಾಟ್‌ಗೆ ₹ 1.5 ಲಕ್ಷ ಬಾಡಿಗೆ ನೀಡುವುದಾಗಿ ಹೇಳಿದ ಅವರು ಬಾಡಿಗೆ ಮನೆ ಉತ್ತಮ ಎಂದಿದ್ದಾರೆ. ಮನೆ ಕೊಳ್ಳುವ ಹಣದಲ್ಲಿ 12% ಬಡ್ಡಿ ಸಿಗುವ ನಿಫ್ಟಿ 50 ಇಂಡೆಕ್ಸ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಮುಂದಿನ 20 ವರ್ಷಗಳಲ್ಲಿ ನನಗೆ ₹ 48 ಕೋಟಿ ಸಿಗುತ್ತದೆ.


ಇದನ್ನೂ ಓದಿ: 


ಆದರೆ ಫ್ಲಾಟ್‌ ಅನ್ನು ಮುಂಬರುವ ವರ್ಷಗಳಲ್ಲಿ ಮಾರಿದರೆ ನನಗೆ ₹ 27 ಕೋಟಿ ಸಿಗಬಹುದು. ಜೊತೆಗೆ 7 ಕೋಟಿಯ ಫ್ಲಾಟ್ ಅನ್ನು ಖರೀದಿಸಲು ತಿಂಗಳಿಗೆ ರೂ 5 ಲಕ್ಷಗಳ ಇಎಂಐ ವೆಚ್ಚವಾಗುತ್ತದೆ. ಹೀಗಾಗಿ ಮನೆ ಬಾಡಿಗೆಗೆ ತೆಗದುಕೊಳ್ಳುವುದು ಸೂಕ್ತ ಎಂದಿದ್ದಾರೆ.


ಇತರೆ ವೆಚ್ಚ!


ಮನೆಯನ್ನು ಖರೀದಿಸುವುದು ಇಎಂಐ ವೆಚ್ಚಗಳೊಂದಿಗೆ ಮಾತ್ರವಲ್ಲದೆ ನೋಂದಾವಣೆ, ಬ್ರೋಕರೇಜ್, ತೆರಿಗೆಗಳು ಇತ್ಯಾದಿಗಳೊಂದಿಗೆ ಬರುತ್ತದೆ. ಮನೆಯನ್ನು ಖರೀದಿಸುವುದು ಎಂದರೆ ಆರ್ಥಿಕವಾಗಿ ನಾವು ಲಾಕ್‌ ಆದಂತೆ ಮತ್ತು ಕಿರಿಕಿರಿಗಳನ್ನು ಎದುರಿಸಬೇಕು ಎಂದಿದ್ದಾರೆ.


ನಿಮ್ಮದು ಲಕ್ಸುರಿ ಮನೆ ಕಟ್ಟುವ ಕನಸು ಆಗಿದ್ದರೆ ಅಂಹತ ಮನೆಯನ್ನು ನಿಭಾಯಿಸಲು ಸಹ ಅಷ್ಟೇ ವೆಚ್ಚವಾಗುತ್ತದೆ. ಮನೆಯನ್ನು ಭಾರೀ ಹಣದ ಜೊತೆ ಹೂಡಿಕೆ ಮಾಡಿ ಕಟ್ಟಿದ್ದಲ್ಲದೇ ಅದರ ನಿರ್ವಹಣೆಗೆ ಅಂತಾ ಮತ್ತೆ ಹಣ ಇಡಬೇಕು. ಇದರಿಂದ ಬಾಡಿಗೆ ಕಟ್ಟೋದೆ ಉತ್ತಮ ಎಂದಿದ್ದಾರೆ.



ಅಸಮಾನವಾದ ಆಸ್ತಿ ಹಂಚಿಕೆ


ನಾನು ಇಂದು ₹ 7 ಕೋಟಿ ಮೌಲ್ಯದ ಮನೆಯನ್ನು ಖರೀದಿಸಿದರೆ, ನನ್ನ ಹೆಚ್ಚಿನ ನಿವ್ವಳ ಮೌಲ್ಯವನ್ನು ಫ್ಲಾಟ್‌ನಲ್ಲಿ ಹಂಚಿಕೆ ಮಾಡಲಾಗುತ್ತದೆ. ಬಂಡವಾಳದ ಆಯ್ಕೆಯಲ್ಲಿ ಫ್ಲಾಟ್‌ ಮೇಲಿನ ವೆಚ್ಚ ಜನಪ್ರಿಯವಾಗಿಲ್ಲ ಎಂದಿದಿದ್ದಾರೆ ಶರಣ್ ಹೆಗಡೆ.

ಬೇಕೆಂದಲ್ಲಿ ಹೋಗುವ ಸ್ವಾತಂತ್ರ್ಯ


ಬಾಡಿಗೆ ಮನೆಯಲ್ಲಿದ್ದರೆ ನಾವು ಯಾವ ಕೆಲಸಕ್ಕೆ ಎಲ್ಲಿಗೆ ಬೇಕಾದರೂ ಹೋಗಬಹುದು. ಮುಂಬೈ, ಗೋವಾ, ಬೆಂಗಳೂರು ಎಲ್ಲಿ ಕೆಲಸ ಸಿಕ್ಕರೂ ಬಾಡಿಕೆ ಮನೆ ಖಾಲಿ ಮಾಡಿ ಹೋಗಬಹುದು ಎಂದಿದ್ದಾರೆ.
ನೆಟ್ಟಿಗರಿಂದ ಟೀಕೆ


ಆದರೆ ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರು ಮನೆ ಬಾಡಿಗೆ ವರ್ಷ ಒಂದೇ ರೀತಿ ಇರುವುದಿಲ್ಲ. ಪ್ರತಿ ವರ್ಷ ಐದರಿಂದ ಹತ್ತು ಪರ್ಸೆಂಟ್‌ ಹೆಚ್ಚಾಗುತ್ತದೆ. ಇದು ನಿಜಕ್ಕೂ ಹೂಡಿಕೆ ಅಲ್ಲ ಎಂದಿದ್ದಾರೆ. ತಿಂಗಳಿಗೆ ಲಕ್ಷಗಟ್ಟಲೆ ಬಾಡಿಗೆ ಕಟ್ಟುವುದು ಆರ್ಥಿಕವಾಗಿ ಬುದ್ಧಿವಂತಿಕೆಯ ನಿರ್ಧಾರವೂ ಅಲ್ಲ ಅಂತಾ ಶರಣ್‌ ಹೆಗಡೆ ಅವರ ಸಲಹೆಗಳನ್ನು ಟೀಕಿಸಿದ್ದಾರೆ.

top videos
    First published: