Indonesia Palm Oil: ತಾಳೆ ಎಣ್ಣೆ ರಫ್ತು ನಿಷೇಧ ಹಿಂತೆಗೆದುಕೊಂಡ ಇಂಡೋನೇಷ್ಯಾ; ಇನ್ನಾದರೂ ಎಣ್ಣೆ ಬೆಲೆ ಕಡಿಮೆ ಆಗಬಹುದೇ?

ಆಹಾರದಲ್ಲಿ ಅಥವಾ ಜೈವಿಕ ಇಂಧನಕ್ಕಾಗಿ ಸಸ್ಯಜನ್ಯ ಎಣ್ಣೆಯನ್ನು ಬಳಸುವುದನ್ನು ಆಯ್ಕೆ ಮಾಡಲು ಸರ್ಕಾರಗಳ ಮೇಲೆ ಒತ್ತಡವೂ ಬಿದ್ದಿತ್ತು.

ತಾಳೆ (ಸಾಂಕೇತಿಕ ಚಿತ್ರ)

ತಾಳೆ (ಸಾಂಕೇತಿಕ ಚಿತ್ರ)

  • Share this:
    ಜಕಾರ್ತಾ: ಇಂಡೋನೇಷ್ಯಾದ ದೇಶೀಯ ಅಡುಗೆ ತೈಲ ಪೂರೈಕೆ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ. ಹೀಗಾಗಿ ಮೇ 23 ಸೋಮವಾರದಿಂದ ತಾಳೆ ಎಣ್ಣೆ ರಫ್ತು ನಿಷೇಧವನ್ನು ತೆಗೆದುಹಾಕಲಿದ್ದೇವೆ (Left Palm Oil Ban) ಎಂದು ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ (Indonesian President Joko Widodo) ಗುರುವಾರ ತಿಳಿಸಿದ್ದಾರೆ. ತಾಳೆ ಎಣ್ಣೆ ಉದ್ಯಮದಲ್ಲಿ 17 ಮಿಲಿಯನ್ ಕಾರ್ಮಿಕರ ಕಲ್ಯಾಣವನ್ನು ಸರ್ಕಾರ ಪರಿಗಣಿಸಿದ್ದು ಬೃಹತ್ ಅಡುಗೆ ಎಣ್ಣೆಯ ಬೆಲೆ (Oil Price) ಇನ್ನಷ್ಟು ಹೆಚ್ಚುವ ಮುನ್ನವೇ ತಾಳೆಎಣ್ಣೆ ರಫ್ತು ನಿಷೇಧವನ್ನು ತೆಗೆದುಹಾಕುವುದಾಗಿ ಅವರು ತಿಳಿಸಿದ್ದಾರೆ. ಈಮೂಲಕ ಭಾರತದಲ್ಲೂ ತಾಳೆ ಎಣ್ಣೆ ಬೆಲೆ ಕಡಿಮೆ ಆಗುವ ಲಕ್ಷಣ ಕಾಣಿಸುತ್ತಿದೆ.

    ಇಂಡೋನೇಷ್ಯಾವು ಜಾಗತಿಕ ತಾಳೆ ಎಣ್ಣೆಯ ಅರ್ಧಕ್ಕಿಂತ ಹೆಚ್ಚು ಪೂರೈಕೆಯನ್ನು ಹೊಂದಿದೆ. ಕಳೆದ ತಿಂಗಳು ವಿಶ್ವದ ಅಗ್ರ ಪಾಮ್ ಎಣ್ಣೆ ಉತ್ಪಾದಕ ಇಂಡೋನೇಷ್ಯಾ, ಜಾಗತಿಕ ಆಹಾರ ಉದ್ಯಮದ ಮೇಲೆ ಪರಿಣಾಮ ಬೀರಬಹುದಾದ ತಾಳೆ ಎಣ್ಣೆ ರಫ್ತು ನಿಷೇಧ ಕ್ರಮ ಕೈಗೊಂಡಿತ್ತು.

    ಆಘಾತಕಾರಿ ಕ್ರಮ ಎಂದೇ ಉದ್ಯಮ ವಲಯದಲ್ಲಿ ವಿಶ್ಲೇಷಣೆಗೆ
    ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಸಸ್ಯಜನ್ಯ ಎಣ್ಣೆಯ ರಫ್ತುಗಳನ್ನು ನಿಷೇಧಿಸುವ ಯೋಜನೆಗಳನ್ನು ಘೋಷಿಸಿತ್ತು. ಇದು ಹಣದುಬ್ಬರವನ್ನು ಮತ್ತಷ್ಟು ಉಲ್ಬಣಗೊಳಿಸಬಹುದಾದ ಆಘಾತಕಾರಿ ಕ್ರಮ ಎಂದೇ ಉದ್ಯಮ ವಲಯದಲ್ಲಿ ವಿಶ್ಲೇಷಣೆಗೆ ಒಳಗಾಗಿತ್ತು. ಅಲ್ಲದೇ, ತಾಳೆ ಎಣ್ಣೆ ಬೆಲೆ ಗಗನಮುಖಿಯಾಗಿತ್ತು.

    ಜೈವಿಕ ಇಂಧನಕ್ಕಾಗಿ ಸಸ್ಯಜನ್ಯ ಎಣ್ಣೆಯನ್ನು ಬಳಸಲು ಒತ್ತಡ!
    ಕೇಕ್‌ಗಳಿಂದ ಹಿಡಿದು ಸೌಂದರ್ಯವರ್ಧಕಗಳವರೆಗಿನ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಅಡುಗೆ ಎಣ್ಣೆ ಮತ್ತು ಅದರ ಕಚ್ಚಾ ವಸ್ತುಗಳ ಸಾಗಣೆಯನ್ನು ಸ್ಥಗಿತಗೊಳಿಸುವುದರಿಂದ ಜಾಗತಿಕವಾಗಿ ಪ್ಯಾಕೇಜ್ ಮಾಡಿದ ಆಹಾರ ಉತ್ಪಾದಕರಿಗೆ ವೆಚ್ಚವನ್ನು ಹೆಚ್ಚಳವಾಗಬಹುದು. ಆಹಾರದಲ್ಲಿ ಅಥವಾ ಜೈವಿಕ ಇಂಧನಕ್ಕಾಗಿ ಸಸ್ಯಜನ್ಯ ಎಣ್ಣೆಯನ್ನು ಬಳಸುವುದನ್ನು ಆಯ್ಕೆ ಮಾಡಲು ಸರ್ಕಾರಗಳ ಮೇಲೆ ಒತ್ತಡವೂ ಬಿದ್ದಿತ್ತು.

    ಇದನ್ನೂ ಓದಿ: Cars24 Employees: ಬರೋಬ್ಬರಿ 600 ಉದ್ಯೋಗಿಗಳಿಗೆ ನಡೀರಿ ಮನೆಗೆ ಎಂದು ಶಾಕ್ ನೀಡಿದ ಸ್ಟಾರ್ಟ್ಅಪ್!

    ಪ್ರಮುಖ ಆಹಾರ ಉತ್ಪಾದಕ ದೇಶವಾದ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರ ಜಾಗತಿಕ ಆಹಾರ ಹಣದುಬ್ಬರವು ದಾಖಲೆಯ ಎತ್ತರಕ್ಕೆ ಏರಿತ್ತು. ಇದರ ನಂತರವೇ ಇಂಡೊನೇಷ್ಯಾ ತಾಳೆ ಎಣ್ಣೆ ರಫ್ತು ನಿಷೇಧ ಮಾಡಿತ್ತು. ಆದರೆ ಇದೀಗ ರಫ್ತು ನಿಷೇಧ ವಾಪಸ್ ತೆಗೆದುಕೊಂಡಿರುವ ಇಂಡೋನೆಷ್ಯಾ ಎಲ್ಲರ ಮನೆಯಲ್ಲೂ ಆಹಾರ ಉತ್ಪನ್ನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತಾನು ಬಯಸಿದ್ದೇನೆ ಎಂದು ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ವೀಡಿಯೊ ಪ್ರಸಾರದಲ್ಲಿ ಹೇಳಿದರು.

    ಇದನ್ನೂ ಓದಿ: Home Loan Interest Rates: ಮನೆ ಕಟ್ಟಲು ಸಾಲ ಬೇಕೇ? ವಿವಿಧ ಬ್ಯಾಂಕ್​ಗಳ ಬಡ್ಡಿದರ ಚೆಕ್ ಮಾಡಿ

    ನಾನು ತಾಳೆ ಎಣ್ಣೆ ರಫ್ತು ನಿಷೇಧ ನೀತಿಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತೇನೆ. ಅಲ್ಲದೇ ಈಕುರಿತು ಮೌಲ್ಯಮಾಪನ ಮಾಡುತ್ತೇನೆ ಆದ್ದರಿಂದ ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಲಭ್ಯತೆ ಹೇರಳವಾಗಿ ಮತ್ತು ಕೈಗೆಟುಕುವ ದರದಲ್ಲಿ ಆಗುತ್ತದೆ ಎಂದು ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ವೀಡಿಯೊ ಪ್ರಸಾರದಲ್ಲಿ  ಮಾಹಿತಿ ನೀಡಿದ್ದಾರೆ.

    ವಿದೇಶಕ್ಕೆ ಶೇ. 80ರಷ್ಟು ತೈಲ ರಫ್ತು!
    ಇಂಡೋನೇಷ್ಯಾ ವಿಶ್ವದ ಅತಿದೊಡ್ಡ ತಾಳೆ ಎಣ್ಣೆಯ ಉತ್ಪಾದಕ ಮತ್ತು ರಫ್ತುದಾರನಾಗಿದ್ದು, ದೇಶದಲ್ಲಿ ಉತ್ಪಾದನೆಯು ದೇಶೀಯ ಬೇಡಿಕೆಯನ್ನು ಮೀರಿಸುತ್ತದೆ. ಇನ್ನು ಅಲ್ಲಿನ ಸರ್ಕಾರಗಳ ನಿಯಮಗಳ ಪ್ರಕಾರ ಉತ್ಪಾದನೆಯ ಶೇ. 20 ರಷ್ಟು ಮಾತ್ರ ದೇಶದಲ್ಲಿ ಉಳಿಯುತ್ತದೆ. ಉಳಿದ ಶೇ. 80 ರಷ್ಟು ತೈಲವನ್ನು ರಫ್ತು ಮಾಡಬಹುದಾಗಿದೆ.
    Published by:guruganesh bhat
    First published: