IndiGo Airlines: ಅಮಾನವೀಯವಾಗಿ ವರ್ತಿಸಿದ ಇಂಡಿಗೋ ಏರ್​ಲೈನ್ಸ್​ಗೆ 5 ಲಕ್ಷ ದಂಡ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆ ಪೋಷಕರ ಮಗು ವಿಮಾನ ಯಾನ ಮಾಡಲು ಅವಕಾಶ ನೀಡಿದ್ದರೆ ಯಾವುದೇ ಸಮಸ್ಯೆ ಉದ್ಭವ ಆಗುತ್ತಿರಲಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

  • Share this:

ದೆಹಲಿ: ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಸಾಮರ್ಥ್ಯವುಳ್ಳ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ಇಂಡಿಗೋ ವಿಮಾನಯಾನ ಸಂಸ್ಥೆಗೆ (IndiGo) 5 ಲಕ್ಷ ರೂಪಾಯಿ ದಂಡ (Fine To IndiGo) ವಿಧಿಸಲಾಗಿದೆ ಎಂದು ವಿಮಾನಯಾನ ನಿಯಂತ್ರಕ ಸಂಸ್ಥೆ (DGCA ) ಶನಿವಾರ ತಿಳಿಸಿದೆ. ಇಂಡಿಗೋ ಮೇ 9 ರಂದು ವಿಶೇಷ ಚೇತನ ಬಾಲಕನಿಗೆ (Specially abled child) ರಾಂಚಿ-ಹೈದರಾಬಾದ್ ವಿಮಾನವನ್ನು ಹತ್ತಲು ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿತ್ತು. ಬಾಲಕ ವಿಮಾನ ಹತ್ತುವ ಮುನ್ನ ಭಯಗೊಂಡಿದ್ದ. ಹೀಗಾಗಿ ವಿಮಾನ ಪ್ರಯಾಣಕ್ಕೆ ವಿಶೇಷ ಚೇತನ ಬಾಲಕನಿಗೆ ನಿರ್ಬಂಧ ವಿಧಿಸಿದ್ದೇವೆ ಎಂದು ಇಂಡಿಗೋ ತಿಳಿಸಿತ್ತು. ಹೀಗಾಗಿ ಬಾಲಕನ ಪೋಷಕರು ಸಹ ತಮ್ಮ ಮಗನನ್ನು ಬಿಟ್ಟು ವಿಮಾನಯಾನ ಮಾಡಲಿಲ್ಲ.


ಈಘಟನೆ ಕುರಿತು ತನಿಖೆ ನಡೆಸಲು ಡಿಜಿಸಿಎ ಮೇ 9ರಂದು ಮೂವರು ಸದಸ್ಯರ ತಂಡವನ್ನು ರಚಿಸಿತ್ತು. "ಇಂಡಿಗೋ ಗ್ರೌಂಡ್ ಸ್ಟಾಪ್​ ವಿಶೇಷ ಚೇತನ ಮಗುವನ್ನು ನಿರ್ವಹಿಸುವಾಗ ತಪ್ಪು ಮಾಡಿದ್ದಾರೆ. ಸರಳವಾಗಿ ಪರಿಹರಿಸಬಹುದಾಗಿದ್ದ ಸಂದರ್ಭವನ್ನು ವಿಮಾನ ಪ್ರಯಾಣ ನಿರ್ಬಂಧಿಸಿ ಉಲ್ಬಣಗೊಳಿಸಲಾಗಿದೆ ಎಂಬುದನ್ನು ಗಮನಿಸಲಾಗಿದೆ" ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಹೇಳಿಕೆ ತಿಳಿಸಿದೆ.


ಸಹನಾಭೂತಿಯಿಂದ ವರ್ತಿಸಬೇಕಿತ್ತು
ಹಲವು ಪರಿಸ್ಥಿತಿಗಳಲ್ಲಿ ಹೆಚ್ಚು ಸಹಾನುಭೂತಿಯಾಗಿ ವರ್ತನೆ ತೋರುವುದು ಪರಿಸ್ಥಿತಿಯನ್ನು ಶಾಂತಗೊಳಿಸುತ್ತದೆ. ಸುಗಮವಾಗಿ ಕೆಲಸ ನಡೆಸಲು ಸಹಾಯ ಮಾಡುತ್ತದೆ. ಆ ಪೋಷಕರ ಮಗು ವಿಮಾನ ಯಾನ ಮಾಡಲು ಅವಕಾಶ ನೀಡಿದ್ದರೆ ಯಾವುದೇ ಸಮಸ್ಯೆ ಉದ್ಭವ ಆಗುತ್ತಿರಲಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.


ಸಿಬ್ಬಂದಿ ವಿಫಲರಾಗಿದ್ದಾರೆ
ವಿಶೇಷ ಸನ್ನಿವೇಶಗಳು ಅಸಾಧಾರಣ ಪ್ರತಿಕ್ರಿಯೆಗಳಿಗೆ ಅರ್ಹವಾಗಿವೆ. ಆದರೆ ಏರ್‌ಲೈನ್‌ನ ಸಿಬ್ಬಂದಿ ಈ ಸಂದರ್ಭವನ್ನು ನಿಭಾಯಿಸಲು ವಿಫಲರಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ನಾಗರಿಕ ವಿಮಾನಯಾನ ಅಗತ್ಯ ಮನೋಭಾವದಂತೆ ವರ್ತಿಸದೇ ಲೋಪ ಎಸಗಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ತನ್ನ ವರದಿಯಲ್ಲಿ ತಿಳಿಸಿದೆ.


ಇದನ್ನೂ ಓದಿ: Donkey Milk Business: ಕತ್ತೆ ಹಾಲಿನಿಂದ ಕೋಟ್ಯಾಧಿಪತಿ ಆದ ಯುವಕ! ಕತ್ತೆ ಎಂದು ಮೂದಲಿಸುವ ಮುನ್ನ ಎಚ್ಚರ


ಇದನ್ನು ಗಮನದಲ್ಲಿಟ್ಟುಕೊಂಡು, DGCA ಯಲ್ಲಿನ ಸಕ್ಷಮ ಪ್ರಾಧಿಕಾರವು ಸಂಬಂಧಿತ ಏರ್‌ಕ್ರಾಫ್ಟ್ ನಿಯಮಗಳ ನಿಬಂಧನೆಗಳ ಅಡಿಯಲ್ಲಿ ಏರ್‌ಲೈನ್‌ಗೆ 5 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲು ನಿರ್ಧರಿಸಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ತನ್ನ ವರದಿಯಲ್ಲಿ  ಉಲ್ಲೇಖಿಸಿದೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಹ ಈ ಘಟನೆಯನ್ನು ಟೀಕಿಸಿದ್ದರು.


ಇಂಡಿಗೋ ವಿಮಾನ ಯಾನ ಸಂಸ್ಥೆಯು ವಿಶೇಷ ಚೇತನ ಮಗುವಿನ ಪ್ರಯಾಣ ಮಾಡಲು ಅವಕಾಶ ನೀಡದ್ದರ ಬಗ್ಗೆ ಹಲವರು ಟೀಕೆ ವ್ಯಕ್ತಪಡಿಸಿದ್ದರು. ಇಂಡಿಗೋ ವಿಶೇಷ ಚೇತನ ಮಗುವನ್ನು ಇನ್ನಷ್ಟು ಮಾನವೀಯತೆಯಿಂದ ನಡೆಸಿಕೊಳ್ಳಬೇಕಿತ್ತು. ಮಗುವಿಗೆ ವಿಮಾನ ಪ್ರಯಾಣ ಮಾಡಲಯ ಅನುವು ಮಾಡಿಕೊಡಬೇಕಿತ್ತು ಎಂದು ಟ್ವಿಟರ್ ಸೇರಿದಂತೆ ಹಲವೆಡೆ ಅಭಿಪ್ರಾಯ ವ್ಯಕ್ತವಾಗಿತ್ತು.

top videos
    First published: