• Home
  • »
  • News
  • »
  • business
  • »
  • UPI, Rupay Cards: ಇನ್ಮುಂದೆ ಫ್ರಾನ್ಸ್ ದೇಶವೂ ಸ್ವೀಕರಿಸುತ್ತೆ ಭಾರತದ ರುಪೇ ಮತ್ತು ಯುಪಿಐ ಕಾರ್ಡ್

UPI, Rupay Cards: ಇನ್ಮುಂದೆ ಫ್ರಾನ್ಸ್ ದೇಶವೂ ಸ್ವೀಕರಿಸುತ್ತೆ ಭಾರತದ ರುಪೇ ಮತ್ತು ಯುಪಿಐ ಕಾರ್ಡ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಡಿಜಿಟಲ್ ಇಂಡಿಯಾದ ಪ್ರಭಾವ ಹಾಗೂ ಪ್ರಗತಿ ಈಗ ಸಾಕಷ್ಟು ವಿಸ್ತಾರವಾಗಿ ಚಾಚುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ದೇಶೀಯವಾಗಿ ನಿರ್ಮಿತವಾದ ಭಾರತದ ರುಪೇ ಹಾಗೂ ಯುಪಿಐ ಕಾರ್ಡುಗಳು ಭಾರತದಾಚೆಯೂ ತಮ್ಮ ಕಾರ್ಯನಿರ್ವಹಣೆಗೆ ಈಗ ಸಜ್ಜಾಗುತ್ತಿವೆ ಎನ್ನಬಹುದಾಗಿದೆ.

  • Share this:

ಡಿಜಿಟಲ್ ಇಂಡಿಯಾದ (Digital India) ಪ್ರಭಾವ ಹಾಗೂ ಪ್ರಗತಿ ಈಗ ಸಾಕಷ್ಟು ವಿಸ್ತಾರವಾಗಿ ಚಾಚುತ್ತಿದೆ ಎಂದರೆ ತಪ್ಪಾಗುವುದಿಲ್ಲ. ದೇಶೀಯವಾಗಿ ನಿರ್ಮಿತವಾದ ಭಾರತದ ರುಪೇ (Indian Rupay) ಹಾಗೂ ಯುಪಿಐ ಕಾರ್ಡುಗಳು (UPI Cards) ಭಾರತದಾಚೆಯೂ ತಮ್ಮ ಕಾರ್ಯನಿರ್ವಹಣೆಗೆ ಈಗ ಸಜ್ಜಾಗುತ್ತಿವೆ ಎನ್ನಬಹುದಾಗಿದೆ. ಫ್ರಾನ್ಸ್ (France) ದೇಶದಲ್ಲಿರುವ ಭಾರತೀಯ ರಾಯಭಾರಿಯಾಗಿರುವ ಜಾವೆದ್ ಅಶ್ರಫ್ ಅವರು ಜೂನ್ 16, ಗುರುವಾರದಂದು ಭಾರತದ ಎನ್‍ಪಿಸಿಐ ಅಭಿವೃದ್ಧಿಪಡಿಸಿರುವ ಯುಪಿಐ ಮತ್ತು ರುಪೇ ಕಾರ್ಡುಗಳನ್ನು ಫ್ರಾನ್ಸ್ ದೇಶದಲ್ಲೂ ಬಳಸಲು ಒಪ್ಪಿಗೆ ನೀಡಲಾಗುವುದೆಂದು ಹೇಳಿದ್ದಾರೆ. ಇದಕ್ಕೂ ಮುಂಚೆ ಭಾರತವು ಫ್ರಾನ್ಸ್ ದೇಶದಲ್ಲಿ ಯುಪಿಐ ಪರಿಚಯಿಸುವುದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗೆ ಚಾಲನೆ ನೀಡಿತ್ತು.


ಅದರ ಅನ್ವಯವಾಗಿ ಭಾರತದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹಾಗೂ ಫ್ರಾನ್ಸ್ ದೇಶದ ಇಂಟರ್ನ್ಯಾಷನಲ್ ಆಂಡ್ ಲಿರಾ ನೆಟ್ವರ್ಕ್ ಇವೆರಡರ ಮಧ್ಯೆ ಈಗಾಗಲೇ ತಿಳುವಳಿಕೆ ಪತ್ರವೊಂದರ ಮೇಲೆ ಸಹಿ ಹಾಕಲಾಗಿದೆ.


ಸಿಂಗಾಪೂರದಲ್ಲಿ ಭಾರತದ ಯುಪಿಐ ಮತ್ತು ರುಪೇ ಕಾರ್ಡ್ ಸ್ವೀಕಾರ
ಈ ಸಂದರ್ಭದಲ್ಲಿ ಎ‍ಎನ್‍ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅಶ್ರಫ್ ಅವರು, "ನಾನು ಈ ಹಿಂದೆ ಸಿಂಗಾಪೂರದಲ್ಲಿ ಭಾರತೀಯ ರಾಯಭಾರಿಯಾಗಿದ್ದಾಗ ಅಲ್ಲಿ ನಮ್ಮ ದೇಶದ ಭೀಮ್ ಕ್ಯೂಆರ್ ಹಾಗೂ ಯುಪಿಐ ಕಾರ್ಡುಗಳನ್ನು ಬಳಸುವಂತಾಗಲು ಪ್ರಯತ್ನಿಸಿದ್ದೆ. ಅದು ಯಶಸ್ವಿಯಾಗಿದ್ದು ಈಗ ಅಲ್ಲಿ ಸಾಕಷ್ಟು ವ್ಯಾಪಾರಿಗಳು ಭಾರತದ ಯುಪಿಐ ಮತ್ತು ರುಪೇ ಕಾರ್ಡುಗಳನ್ನು ಸ್ವೀಕರಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.


ಫ್ರಾನ್ಸ್‌ನಲ್ಲಿಯೂ ಯುಪಿಐ ಮತ್ತು ರುಪೇ ಕಾರ್ಡ್‌ಗಳನ್ನು ಪ್ರಾರಂಭಿಸಲು ಪ್ರಯತ್ನ
ಮುಂದುವರೆಯುತ್ತ ಅವರು, "ನಾವು ಇದನ್ನು ಯುರೋಪಿನಲ್ಲೂ ಮಾಡಬಹುದು ಎಂದು ಬಲವಾಗಿ ನಂಬುತ್ತೇನೆ. ನಾವು ಫ್ರಾನ್ಸ್‌ನಲ್ಲಿ ಶೀಘ್ರದಲ್ಲೇ ಯುಪಿಐ ಮತ್ತು ರುಪೇ ಕಾರ್ಡ್‌ಗಳನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಇದನ್ನು ಕೇಂದ್ರ ಬ್ಯಾಂಕ್, ನಿಯಂತ್ರಕ ಮತ್ತು ಫ್ರಾನ್ಸ್‌ನಲ್ಲಿರುವ ಕಂಪನಿಗಳೊಂದಿಗೆ ಚರ್ಚಿಸಬೇಕಾಗಿದೆ. ಫ್ರಾನ್ಸ್‌ನಲ್ಲಿ ಡಿಜಿಟಲ್ ಪಾವತಿಯ ಬಳಕೆ ತುಂಬಾ ಕಡಿಮೆಯಾಗಿದೆ. ಆದರೆ ಇದು ಏಕೀಕೃತ ಮತ್ತು ತಡೆರಹಿತವಾಗಿರಬೇಕು, ಏಕೆಂದರೆ ಡಿಜಿಟಲ್ ಪಾವತಿ ಅಂತಹ ಅಂಶವು ಸದ್ಯ ಇಲ್ಲಿ ಭಾರತದಲ್ಲಿರುವಂತೆ ದಕ್ಷತೆಗೆ ಹೋಲಿಸಿದರೆ ಕೊರತೆಯನ್ನು ಹೊಂದಿದೆ" ಎಂದು ಅಶ್ರಫ್ ಏಜೆನ್ಸಿಗೆ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ರಾಯಭಾರಿಯವರು ಡಿಜಿಟಲ್ ಪಾವತಿ ಯಾವ ರೀತಿ ಫ್ರಾನ್ಸ್ ದೇಶಕ್ಕೆ ವರದಾನವಾಗಬಲ್ಲುದು ಎಂಬುದನ್ನು ತಿಳಿಸಿಕೊಡಲು ತಮ್ಮೊಂದಿಗೆ ನಡೆದ ಒಂದು ಅನುಭವನ್ನು ಹಂಚಿಕೊಂಡರು. ಅವರು ಹೇಳಿದಂತೆ ಒಮ್ಮೆ ಅವರು ವೈದ್ಯರ ಬಳಿ ಸಲಹೆಗೆಂದು ಹೋಗಿದ್ದರು. ಸಮಾಲೋಚನೆ ನಡೆದ ಬಳಿಕ ರಾಯಭಾರಿಯವರ ಬಳಿ ಹಣ ಪಾವತಿಸಲು ಆ ಸಂದರ್ಭದಲ್ಲಿ ನಗದು ಇರಲಿಲ್ಲ. ಆದರೆ ವೈದ್ಯರು ಅವರಿಗೆ ನಗದು ಅಥವಾ ಚೆಕ್ ಮೂಲಕವೇ ಪಾವತಿಸಲು ಕೇಳಿದರು. ಹಾಗಾಗಿ ಅವರು ಹಣವನ್ನು ವೈದ್ಯರಿಗೆ ಪಾವತಿಸಲು ಸನಿಹದಲ್ಲಿರುವ ಎಟಿಎಂ ಕೇಂದ್ರವೊಂದನ್ನು ಹುಡುಕಬೇಕಾಯಿತು. ಹೀಗೆ ತಮ್ಮ ಅನುಭವವನ್ನು ಹೇಳಿಕೊಂಡ ಅವರು ಯುಪಿಐ ಫ್ರಾನ್ಸ್‌ಗೆ ಬಂದರೆ ಫ್ರಾನ್ಸ್‌ನ ಜನರಿಗೆ ಪ್ರಯೋಜನವಾಗುತ್ತದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ:  Credit Card: ಕ್ರೆಡಿಟ್ ಕಾರ್ಡ್​ನ ಹೇಗೆ ಬಳಸಬಾರದು? ಈ ಲೆಕ್ಕಾಚಾರಗಳನ್ನು ಕಲಿಯಿರಿ!


ಈ ಸೌಲಭ್ಯವನ್ನು ಖಂಡಿತ ಫ್ರಾನ್ಸ್‌ ಜನರು ಸ್ವೀಕರಿಸುತ್ತಾರೆ. ನಿಯಂತ್ರಕರು, ಬ್ಯಾಂಕ್‌ಗಳು ಮತ್ತು ಕಂಪನಿಗಳು ಅದನ್ನು ಸ್ವೀಕರಿಸುತ್ತವೆ. ನಾವು ಇದನ್ನು ಬ್ಯಾಂಕ್ ಆಫ್ ಫ್ರಾನ್ಸ್‌ನಲ್ಲಿ ಜಾರಿಗೊಳಿಸಿದರೆ, ನಾವು ಅದನ್ನು ಯುರೋಪಿಯನ್ ಯೂನಿಯನ್‌ಗೆ ತಳ್ಳಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅಶ್ರಫ್ ತಿಳಿಸಿದ್ದಾರೆ.


ಆದಾಗ್ಯೂ, ರಾಯಭಾರಿ ಹೇಳುತ್ತಾರೆ, "ನಾವು ಮೊದಲು ಫ್ರಾನ್ಸ್‌ನೊಂದಿಗೆ ಪ್ರಾರಂಭಿಸಬೇಕು. ಬಿಎನ್‍ಪಿ ಪರಿಬಾಸ್, ಸೊಸೈಟಿ ಜನರಲ್, ಮುಂತಾದ ಕೆಲವು ಬ್ಯಾಂಕುಗಳು ಭಾರತದಲ್ಲಿ ಅಸ್ತಿತ್ವವನ್ನು ಹೊಂದಿವೆ ಮತ್ತು ಅವರಿಗೆ ಯುಪಿಐನ ಯಶಸ್ಸಿನ ಕಥೆ ತಿಳಿದಿದೆ ಎಂದು ಹೇಳಿದ್ದಾರೆ.


ಡಿಜಿಟಲ್ ತಂತ್ರಜ್ಞಾನ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಭಾರತ
ಭಾರತವು ಡಿಜಿಟಲ್ ತಂತ್ರಜ್ಞಾನ ಜಗತ್ತಿನಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿರುವ ಅಶ್ರಫ್, "ಭಾರತವು ಪರಿಹಾರದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ ಅದಕ್ಕೆ ಪೂರಕವಾದ ಉತ್ಪನ್ನಗಳನ್ನೂ ಸಹ ಹೊರತಂದಿದೆ. ನಾವು ಭಾರತದ ಉತ್ಪನ್ನದಲ್ಲಿ ತಯಾರಿಸಿದ ವಂದೇ ಭಾರತ್ ರೈಲಿನ ಬಗ್ಗೆ ಮಾತನಾಡಿದರೆ, ಖಂಡಿತವಾಗಿಯೂ ಅದನ್ನು ನಾವು 5-6 ವರ್ಷಗಳ ಒಳಗಿನ ಅವಧಿಯಲ್ಲೇ ಯುರೋಪಿನಲ್ಲೂ ಸಹ ನೋಡುತ್ತೇವೆ ಎಂದು ನನಗೆ ಖಾತ್ರಿಯಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಏತನ್ಮಧ್ಯೆ, ಯುರೋಪಿನ ಅತಿದೊಡ್ಡ ಸ್ಟಾರ್ಟ್-ಅಪ್ ಕಾನ್ಫರೆನ್ಸ್ Viva ಟೆಕ್ನಾಲಜಿ 2022 ಈವೆಂಟ್ ಭಾರತವನ್ನು "ವರ್ಷದ ದೇಶ" ಎಂದು ಗುರುತಿಸಿದೆ. ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಡಿಜಿಟಲ್ ತಂತ್ರಜ್ಞಾನವನ್ನು 21 ನೇ ಶತಮಾನದಲ್ಲಿ ಕಾರ್ಯತಂತ್ರದ ಪಾಲುದಾರಿಕೆಯ ಕೇಂದ್ರ ಸ್ತಂಭವನ್ನಾಗಿ ಮಾಡಿದ್ದಾರೆ ಎಂದು ರಾಯಭಾರಿ ಈ ಸಂದರ್ಭದಲ್ಲಿ ಹೇಳಿದ್ದಾರೆನ್ನಲಾಗಿದೆ.


ಕ್ಯಾಪ್ ಗೆಮಿನಿ ಸಂಸ್ಥೆಯ ಚರ್ಪರ್ಸನ್ ಆಗಿರುವ ಪೌಲ್ ಹರ್ಮೆಲಿನ್ ಹೇಳುವ ಹಾಗೆ, ಭಾರತ ತನ್ನಲ್ಲಿರುವ ಆರ್ಥಿಕತೆ, ಶೈಕ್ಷಣಿಕತೆ, ಹಾಗೂ ಯುವ ಜನಸಂಖ್ಯೆಯಿಂದಾಗಿ ಹೊಸ ಹೊಸ ತಂತ್ರಜ್ಞಾನದೊಂದಿಗೆ ತಮ್ಮ ಕೈಚಳಕ ಹೆಚ್ಚಾಗಿ ತೋರಿಸಲು ಸಮರ್ಥವಾಗಿರುವುದರಿಂದ ಫ್ರಾನ್ಸ್ ನಂತಹ ದೇಶದಲ್ಲಿ ಭಾರತಕ್ಕೆ ಉತ್ತಮವಾದ ಸ್ಥಾನವನ್ನೇ ನಿರೀಕ್ಷೆ ಮಾಡಬಹುದು.


ಭಾರತದ ಬಗ್ಗೆ ರಾಬರ್ಟೋ ಬಲ್ಜಾರೆಟ್ಟಿ ಹೇಳಿದ್ದೇನು?
ಇನ್ನು ಫ್ರಾನ್ಸ್ ದೇಶಕ್ಕೆ ಸ್ವಿಟ್ಜರ್ಲ್ಯಾಂಡ್ ದೇಶದ ರಾಯಭಾರಿಯಾಗಿರುವ ರಾಬರ್ಟೋ ಬಲ್ಜಾರೆಟ್ಟಿ ಅವರ ಭಾರತದ ಬಗೆಗಿನ ಅಭಿಪ್ರಾಯ ಸಾಕಷ್ಟು ಹಿರಿದಾಗಿದೆ. ವಿವಾಟೆಕ್ 2022ರಲ್ಲಿ ಭಾಗಿಯಾಗಿದ್ದ ಅವರು ಭಾರತ ಹಾಗೂ ಸ್ವಿಟ್ಜರ್ಲ್ಯಾಂಡ್ ಒಟ್ಟಾಗಿ ಜಾಣ್ಮೆಯನ್ನು ಹೊತ್ತು ತರಲಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ:  UPI Money Transfer: ಮೊಬೈಲ್​ನಿಂದ ಹಣ ವರ್ಗಾಯಿಸೋದು ಸುಲಭ, ಆದ್ರೆ ಒಂದು ದಿನದಲ್ಲಿ ಎಷ್ಟು ಹಣವನ್ನು ಕಳುಹಿಸಬಹುದು ಎಂದು ತಿಳಿಯಿರಿ


ನಾವು ಎಲ್ಲರಿಗೂ ಅನುಕೂಲವಾಗುವಂಥವುಗಳನ್ನು ನಿರ್ಮಿಸುತ್ತಿರಬೇಕು. ಇಲ್ಲಿ ನಾನು ಭಾರತೀಯ ವೇದಿಕೆ ಗಮನಿಸಿದಾಗ ಅದು ಅದ್ಭುತವಾಗಿದೆ ಎಂದೆನಿಸಿತು. ಭಾರತೀಯ ನವೋದ್ಯಮಗಳು ನಾವೀನ್ಯತೆಯುಳ್ಳ ಅದ್ಭುತ ಪರಿಕಲ್ಪನೆಗಳನ್ನು ಹೊಂದಿದ್ದು ಜನರ ಕಲ್ಯಾಣಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಮರ್ಥವಾಗಿವೆ. ನಾವೆಲ್ಲರೂ ಒಬ್ಬರಿಗೊಬ್ಬರು ಸಹಕಾರ ನೀಡುತ್ತ ಮುಂದುವರೆದು ಬಾಳುವುದೇ ಒಂದು ಮಾರ್ಗವಾಗಿದೆ ಹೊರತು ಬೇರೇನೂ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Published by:Ashwini Prabhu
First published: