Young Entrepreneurs: ಈ ಶ್ರೀಮಂತರ ಮಕ್ಕಳೇ ಮುಂದಿನ ಟಾಪ್​ ಉದ್ಯಮಿಗಳು!

ಯುವ ಉದ್ಯಮಿಗಳು

ಯುವ ಉದ್ಯಮಿಗಳು

ಯುವ ಪೀಳಿಗೆಯ ತಾಜಾ ಆಲೋಚನೆಗಳು, ಕೌಶಲ್ಯಗಳೊಂದಿಗೆ ಅಭಿವೃದ್ಧಿ ಮಾಡುತ್ತಿದ್ದಾರೆ. ಹಾಗಿದ್ರೆ ಅಂಥ ಶ್ರೀಮಂತ ಯುವ ಉದ್ಯಮಿಗಳು (Richest  Young Entrepreneurs) ಯಾರು, ಅವರು ಏನು ಮಾಡುತ್ತಿದ್ದಾರೆ ಅನ್ನೋದನ್ನು ನೋಡೋಣ.

  • Share this:

ನಮಗೆಲ್ಲರಿಗೂ ಅತ್ಯಂತ ಶ್ರೀಮಂತ ಉದ್ಯಮಿಗಳಾದ ಮುಖೇಶ್‌ ಅಂಬಾನಿ (Mukesh Ambani) , ಕುಮಾರ್‌ ಮಂಗಲಂ ಬಿರ್ಲಾ (Kumaram Mangalam Birla), ಅಜೀಂ ಪ್ರೇಮ್‌ಜೀ (Azim Premjee) ಮುಂತಾದವರ ಬಗ್ಗೆ ಗೊತ್ತಿದೆ. ಆದರೆ ಅವರ ಮಕ್ಕಳ (Childrens) ಬಗ್ಗೆ, ಅವರು ಜೀವನದ ಬಗ್ಗೆ ಗೊತ್ತಿರುವುದು ಕಡಿಮೆ. ಆದರೆ ಇದೇ ಶ್ರೀಮಂತ ಕುಡಿಗಳು ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಅಲ್ಲದೇ ತಮ್ಮ ಉದ್ಯಮವನ್ನು ಬೇರೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಯುವ ಪೀಳಿಗೆಯ ತಾಜಾ ಆಲೋಚನೆಗಳು, ಕೌಶಲ್ಯಗಳೊಂದಿಗೆ ಅಭಿವೃದ್ಧಿ ಮಾಡುತ್ತಿದ್ದಾರೆ. ಹಾಗಿದ್ರೆ ಅಂಥ ಶ್ರೀಮಂತ ಯುವ ಉದ್ಯಮಿಗಳು (Richest  Young Entrepreneurs) ಯಾರು, ಅವರು ಏನು ಮಾಡುತ್ತಿದ್ದಾರೆ ಅನ್ನೋದನ್ನು ನೋಡೋಣ.


1.ಅನನ್ಯಾ ಬಿರ್ಲಾ: ಕುಮಾರ್ ಮಂಗಲಂ ಬಿರ್ಲಾ ಅವರ ಹಿರಿಯ ಮಗಳು ಅನನ್ಯಾ ಬಿರ್ಲಾ ಗಾಯಕರಾಗಿದ್ದು, ಸ್ವತಂತ್ರ ಮೈಕ್ರೋಫಿನ್‌ ಸ್ಥಾಪಕರಾಗಿದ್ದಾರೆ. ಅವರು ಆಕ್ಸ್‌ಫರ್ಡ್‌ನಿಂದ ಅರ್ಥಶಾಸ್ತ್ರ ಮತ್ತು ನಿರ್ವಹಣೆಯಲ್ಲಿ ಪದವಿ ಪಡೆದಿದ್ದಾರೆ. ನಂತರ, ಅವರು ತಮ್ಮ ಸಂಗೀತ ವೃತ್ತಿಜೀವನವನ್ನು ಕಿಕ್‌ಸ್ಟಾರ್ಟ್ ಮಾಡಲು ಭಾರತಕ್ಕೆ ಮರಳಿದರು. ಅನನ್ಯಾ, ಈಗಾಗಲೇ ಒಂದು ಇಪಿ ಮತ್ತು ಒಂಬತ್ತು ಸಿಂಗಲ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಅಷ್ಟೆ ಅಲ್ಲ, ಅನನ್ಯಾ ಬಿರ್ಲಾ ಸ್ವತಂತ್ರ ಮೈಕ್ರೋಫಿನ್‌ನ ಸ್ಥಾಪಿಸಿದ್ದು, ಇದು ವ್ಯವಹಾರಗಳನ್ನು ನಡೆಸುವ ಗ್ರಾಮೀಣ ಮಹಿಳೆಯರಿಗೆ ಉಪಕರಣಗಳನ್ನು ಖರೀದಿಸಲು ಸಾಲ ನೀಡುತ್ತದೆ.


2.ಇಶಾ ಅಂಬಾನಿ ಪಿರಾಮಲ್: ಇಶಾ ಅಂಬಾನಿ ಪಿರಮಾಲ್ ರಿಲಯನ್ಸ್ ಜಿಯೋ ಇನ್ಫೋಕಾಮ್ ಮತ್ತು ರಿಲಯನ್ಸ್ ರಿಟೇಲ್‌ನಲ್ಲಿ ನಿರ್ದೇಶಕರಾಗಿದ್ದಾರೆ. ಅವರು ಯೇಲ್ ವಿಶ್ವವಿದ್ಯಾಲಯದಿಂದ ಸೈಕಾಲಜಿ ಹಾಗೂ ಸೌತ್‌ ಏಷಿಯನ್‌ ಸ್ಟಡೀಸ್‌ನಲ್ಲಿ ಪದವಿಗಳಿಸಿದ್ದಾರೆ. McKinsey & Co. Inc ನಲ್ಲಿ ವಿಶ್ಲೇಷಕರಾಗಿ ಕೆಲಸ ಮಾಡಿದ ನಂತರ, ಅವರು ರಿಲಯನ್ಸ್ ಜಿಯೋ ಇನ್ಫೋಕಾಮ್ ಮತ್ತು ರಿಲಯನ್ಸ್ ರಿಟೇಲ್‌ ಸೇರಿದ್ದಾರೆ.


3.ಅಶ್ನಿ ಬಿಯಾನಿ: ಫ್ಯೂಚರ್ ಗ್ರೂಪ್‌ನ ಮಾಲೀಕ ಕಿಶೋರ್ ಬಿಯಾನಿ ಅವರ ಪುತ್ರಿ ಅಶ್ನಿ ಬಿಯಾನಿ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಜವಳಿ ಟೆಕ್ಸ್ಟೈಲ್‌ ಡಿಸೈನಿಂಗ್‌ ಅಧ್ಯಯನ ಮಾಡಿದರು. ನಂತರ ಅವರು ಫ್ಯೂಚರ್ ಗ್ರೂಪ್ ಸೇರಿದರು. ಪ್ರಸ್ತುತ, ಅವರು ಫ್ಯಾಷನ್-ಮೊದಲ ಡಿಟರ್ಜೆಂಟ್ 'ವೂಮ್' ಅನ್ನು ಸಹ ಪ್ರಾರಂಭಿಸಿದ್ದಾರೆ. ಫ್ಯೂಚರ್‌ ಕಸ್ಟಮರ್‌, ಫ್ಯೂಚರ್ ಗ್ರೂಪ್‌ನ ಭಾಗವು ದೊಡ್ಡ ಭಾರತೀಯ ಮತ್ತು ಬಹುರಾಷ್ಟ್ರೀಯ FMCG ಸ್ಪರ್ಧಿಗಳನ್ನು ತೆಗೆದುಕೊಳ್ಳುತ್ತಿದೆ.


ಇದನ್ನೂ ಓದಿ: ಇವರೇ ನೋಡಿ ಭಾರತದ ಶ್ರೀಮಂತ ಉದ್ಯಮಿಗಳ ಸೊಸೆಯಂದಿರು- ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ


4.ಆಕಾಶ್ ಅಂಬಾನಿ: ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯವರ ಹಿರಿಯ ಮಗ ಆಕಾಶ್ ಅಂಬಾನಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಮತ್ತು ರಿಲಯನ್ಸ್ ರಿಟೇಲ್‌ನಲ್ಲಿ ನಿರ್ದೇಶಕರಾಗಿದ್ದಾರೆ. ಅವರು ಬ್ರೌನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ಅವರು ಮುಖ್ಯ ಕಾರ್ಯತಂತ್ರಗಾರರೂ ಆಗಿದ್ದು, ಕಂಪನಿಯ ವ್ಯವಹಾರ ಅಭಿವೃದ್ಧಿಯ ಮುಖ್ಯಸ್ಥರಾಗಿದ್ದಾರೆ.


5.ರಿಷಾದ್ ಪ್ರೇಮ್‌ಜಿ: ಬಿಲಿಯನೇರ್ ಅಜೀಂ ಪ್ರೇಮ್‌ಜಿ ಅವರ ಪುತ್ರ ರಿಷಾದ್ ಪ್ರೇಮ್‌ಜಿ ಅವರು ವಿಪ್ರೋದ ಎಕ್ಸಿಕ್ಯೂಟಿವ್‌ ಚೇರ್‌ಮನ್‌ ಆಗಿದ್ದಾರೆ. 2007 ರಲ್ಲಿ, ಅವರು ವಿಪ್ರೋ ಮುಖ್ಯ ಕಾರ್ಯತಂತ್ರ ಅಧಿಕಾರಿಯಾಗಿ ಸೇರಿದರು. ಅವರ ನಾಯಕತ್ವದಲ್ಲಿ, ವಿಪ್ರೋ ಹಲವಾರು ಟೆಕ್ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಂಡಿದೆ. ಅಲ್ಲದೇ ವಿಪ್ರೋ $100 ಮಿಲಿಯನ್ ಸಾಹಸ ನಿಧಿಯನ್ನು ಭಾರತ ಮತ್ತು ಇತರ ದೇಶಗಳಾದ್ಯಂತ ಅನೇಕ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದೆ.


6.ಆಧಾರ್‌ ಪೂನಾವಲ್ಲಾ: 2011 ರಲ್ಲಿ, ಸೈರಸ್ ಪೂನಾವಲ್ಲಾ ಅವರ ಪುತ್ರ ಆಧಾರ್‌ ಪೂನಾವಲ್ಲಾ ಅವರು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಸಿಇಒ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಇದು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಕಂಪನಿಯಾಗಿದೆ. ಆಧಾರ್‌ ಅವರ ನಾಯಕತ್ವದಲ್ಲಿ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜಾಗತಿಕವಾಗಿ ಲಸಿಕೆಗಳನ್ನು ರಫ್ತು ಮಾಡಲು ಪ್ರಾರಂಭಿಸಿತು. ಅಷ್ಟೆ ಅಲ್ಲ ಅಧಾರ್‌ ಅವರು, ಕಡಿಮೆ ಆದಾಯದ ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳಿಗೆ ಸಾಲವನ್ನು ಒದಗಿಸುವ ಪೂನಾವಲ್ಲ ಫೈನಾನ್ಸ್ ಕೂಡ ಸ್ಥಾಪಿಸಿದ್ದಾರೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು