Workforce Stop: ಕೆಲಸ ಹುಡುಕೋದನ್ನೇ ನಿಲ್ಲಿಸ್ತಿದ್ದಾರೆ ಭಾರತೀಯರು! ಏನಪ್ಪಾ ವಿಷ್ಯ ಇದು?

ಉದ್ಯೋಗ ಕ್ಷೇತ್ರದಿಂದ ಸುಮಾರು 21 ಮಿಲಿಯನ್ ಜನರು ಕಣ್ಮರೆಯಾಗಿದ್ದು, ಅರ್ಹ ಜನಸಂಖ್ಯೆಯ ಕೇವಲ ಶೇಕಡಾ 9ರಷ್ಟು ಜನರು ಮಾತ್ರ ಕೆಲಸ ಮಾಡುತ್ತಿದ್ದಾರೆ ಅಥವಾ ಕೆಲಸದ ಹುಡುಕಾಟದಲ್ಲಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲಸ ಹುಡುಕುವುದನ್ನು ನಿಲ್ಲಿಸಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಈಗ ಉದ್ಯೋಗ ಸೃಷ್ಟಿ (India's Job Creation) ಸಮಸ್ಯೆಯು ಒಂದು ದೊಡ್ಡ ಬೆದರಿಕೆಯಾಗಿ ಬದಲಾಗುತ್ತಿದೆ. ಮುಂಬೈನ ಖಾಸಗಿ ಸಂಶೋಧನಾ ಸಂಸ್ಥೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈವೇಟ್ (Centre for Monitoring Indian Economy Pvt) ನೀಡಿರುವ ಅಂಕಿ ಅಂಶಗಳ ಪ್ರಕಾರ, ತಮಗೆ ಸೂಕ್ತವಾದ ಕೆಲಸವನ್ನು (Searching For Jobs)  ಹುಡುಕುವಲ್ಲಿ ವಿಫಲವಾದ ಲಕ್ಷಾಂತರ ಭಾರತೀಯರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು (Womens) ಕಾರ್ಮಿಕ ವಲಯದಿಂದ ಸಂಪೂರ್ಣವಾಗಿ ಹೊರ ನಡೆಯುತ್ತಿದ್ದಾರೆ. ಅಂದರೆ ಕೆಲಸ ಹುಡುಕೋದನ್ನೇ ನಿಲ್ಲಿಸಿದ್ದಾರೆ.

2017 ರಿಂದ 2022 ರ ನಡುವೆ ಒಟ್ಟಾರೆ ಕಾರ್ಮಿಕ ಭಾಗವಹಿಸುವಿಕೆಯ ದರವು ಶೇಕಡಾ 46 ರಿಂದ ಶೇಕಡಾ 40 ಕ್ಕೆ ಇಳಿದಿದೆ. ಅದರಲ್ಲೂ ಮಹಿಳೆಯರ ವಿಷಯದಲ್ಲಿ ಈ ಡೇಟಾ ಇನ್ನೂ ಗಮನಾರ್ಹವಾಗಿದೆ.

ಅರ್ಧಕ್ಕಿಂತಲೂ ಹೆಚ್ಚಿನ ಮಂದಿಗೆ ಉದ್ಯೋಗ ಬೇಡ
ಉದ್ಯೋಗ ಕ್ಷೇತ್ರದಿಂದ ಸುಮಾರು 21 ಮಿಲಿಯನ್ ಜನರು ಕಣ್ಮರೆಯಾಗಿದ್ದು, ಅರ್ಹ ಜನಸಂಖ್ಯೆಯ ಕೇವಲ ಶೇಕಡಾ 9ರಷ್ಟು ಜನರು ಮಾತ್ರ ಕೆಲಸ ಮಾಡುತ್ತಿದ್ದಾರೆ ಅಥವಾ ಕೆಲಸದ ಹುಡುಕಾಟದಲ್ಲಿದ್ದಾರೆ. ಸಿಎಂಐಇ ಪ್ರಕಾರ, ಕಾನೂನು ಬದ್ಧವಾಗಿ ಕೆಲಸ ಮಾಡುವ ಅರ್ಹತೆಯುಳ್ಳ ವಯಸ್ಸಿನ 900 ಮಿಲಿಯನ್ ಭಾರತೀಯರಲ್ಲಿ, ಅರ್ಧಕ್ಕಿಂತಲೂ ಹೆಚ್ಚಿನ ಮಂದಿಗೆ ಉದ್ಯೋಗ ಬೇಡವಾಗಿದೆ.

ಅರ್ಥ ಶಾಸ್ತ್ರಜ್ಞರು ಹೇಳುವುದೇನು?
ಬೆಂಗಳೂರಿನ ಸೊಸೈಟಿ ಜನರಲ್ ಜಿಎಸ್‍ಸಿ ಪ್ರೈವೇಟ್‍ನ ಅರ್ಥ ಶಾಸ್ತ್ರಜ್ಞ ಕುನಾಲ್ ಕುಂದು ಅವರು ಹೇಳುವ ಪ್ರಕಾರ, “ಭಾರತವು ತನ್ನ ಯುವ ಜನತೆಯು ನೀಡುವ ಲಾಭಾಂಶವನ್ನು ಪಡೆಯುವ ಸಾಧ್ಯತೆ ಇಲ್ಲ ಎಂಬುದನ್ನು ಹೆಚ್ಚಿನ ಪ್ರಮಾಣದಲ್ಲಿರುವ ನಿರುತ್ಸಾಹಕ್ಕೆ ಒಳಗಾದ ಕಾರ್ಮಿಕರ ವರ್ಗವು ಸೂಚಿಸುತ್ತಿದೆ. ಭಾರತವು ಮಧ್ಯಮ-ಆದಾಯದ ಬಲೆಯಲ್ಲಿಯೇ ಉಳಿಯುತ್ತದೆ. ಕೆ- ಆಕೃತಿಯ ಬೆಳವಣಿಗೆಯ ಮಾರ್ಗ ಅಸಮಾನತೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ.”

ಅನಿಶ್ಚಿತ ಫಲಿತಾಂಶಕ್ಕೆ ಕಾರಣ ಏನು?
15 ರಿಂದ 64 ವರ್ಷ ನಡುವಿನ ವಯಸ್ಸಿನ ಜನಸಂಖ್ಯೆಯ ಸುಮಾರು ಮೂರನೇ ಎರಡಷ್ಟು ಮಂದಿಯಲ್ಲಿ, ಸಣ್ಣ ದುಡಿಮೆಯನ್ನು ಮೀರಿದ ಯಾವುದಕ್ಕೂ ಸ್ಪರ್ಧೆಯು ಅತಿಯಾಗಿರುತ್ತದೆ. ಸರಕಾರದಲ್ಲಿನ ಸ್ಥಿರ ಸ್ಥಾನಗಳಿಗೆ ಎಂದಿನಂತೆ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗುತ್ತವೆ ಮತ್ತು ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪ್ರಾಯೋಗಿಕವಾಗಿ ಒಂದು ಅನಿಶ್ಚಿತ ಫಲಿತಾಂಶವನ್ನು ಹೊಂದಿರುತ್ತದೆ.

ವಾರ್ಷಿಕ ಶೇಕಡಾ 8 ರಿಂದ 8.5 ರಷ್ಟು ಜಿಡಿಪಿ ಬೆಳವಣಿಗೆ ಆಗಲಿದೆಯೇ?
ಮ್ಯಾಕಿನ್ಸೆ ಗ್ಲೋಬಲ್ ಸಂಸ್ಥೆಯ 2020 ರ ವರದಿಯೊಂದರ ಪ್ರಕಾರ ಭಾರತವು 2030 ರ ಒಳಗೆ ಕನಿಷ್ಟ 90 ಮಿಲಿಯನ್ ಹೊಸ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ. ಅದು ಸಾಧ್ಯವಾಗಬೇಕಿದ್ದರೆ, ವಾರ್ಷಿಕ ಶೇಕಡಾ 8 ರಿಂದ 8.5 ರಷ್ಟು ಜಿಡಿಪಿ ಬೆಳವಣಿಗೆ ಕೂಡ ಅತ್ಯಗತ್ಯ.

ಹೀಗೊಂದು ಚಿಂತೆ ಇದೆ
ಭಾರತ ತನ್ನ ಆರ್ಥಿಕತೆಯನ್ನು ಉದಾರೀಕರಣಗೊಳಿಸುವಲ್ಲಿ ಮಹತ್ತರವಾದ ಕ್ರಮಗಳನ್ನು ಕೈಗೊಂಡಿದ್ದರೂ, ದೇಶದ ಅವಲಂಬನೆ ಅನುಪಾತವು ಶೀಘ್ರದಲ್ಲೇ ಏರಲಿದೆ. ಭಾರತೀಯರಿಗೆ ವಯಸ್ಸಾಗಬಹುದೇ ಹೊರತು, ಅವರು ಶ್ರೀಮಂತರಾಗುವುದಿಲ್ಲ ಎಂಬುವುದು ನಮ್ಮ ಅರ್ಥ ಶಾಸ್ತ್ರಜ್ಞರ ಅಭಿಪ್ರಾಯ ಮಾತ್ರವಲ್ಲ ಚಿಂತೆಯೂ ಕೂಡ.

ಕರೆನ್ಸಿ ನೋಟುಗಳನ್ನು ನಿಷೇಧದ ಪರಿಣಾಮ?
2016 ರಲ್ಲಿ ಸರಕಾರ ಕೆಲವು ಕರೆನ್ಸಿ ನೋಟುಗಳನ್ನು ನಿಷೇಧಿಸಿದ ಬಳಿಕ ಆರ್ಥಿಕತೆ ದಿಕ್ಕಾಪಾಲಾಯಿತು. ಅದೇ ಸಮಯದಲ್ಲಿ ರಾಷ್ಟ್ರ ವ್ಯಾಪಿ ಜಾರಿಗೆ ಬಂದ ಮಾರಾಟ ತೆರಿಗೆಯ ನಿಯಮ ಕೂಡ ಮತ್ತೊಂದು ಸವಾಲಾಗಿ ಪರಿಣಮಿಸಿತು. ಭಾರತವು ಅನೌಪಚಾರಿಕ ಆರ್ಥಿಕತೆಯಿಂದ ಔಪಚಾರಿಕ ಆರ್ಥಿಕತೆಯೆಡೆಗಿನ ಪರಿವರ್ತನೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಹೆಣಗಾಡಿತು.

ಇದನ್ನೂ ಓದಿ: Palm Oil: ತಾಳೆ ಎಣ್ಣೆ ಸಿಗದಿದ್ರೆ ಸಾಬೂನು, ಶಾಂಪೂ ಖರೀದಿ ಮಾಡೋದೇ ಕಷ್ಟ! ಅರೇ, ಹೀಗೇಕೆ?

ನಿರುದ್ಯೋಗಿ ಭಾರತೀಯರು ಎಂದರೆ ಸಾಮಾನ್ಯವಾಗಿ ವಿದ್ಯಾರ್ಥಿಗಳು ಅಥವಾ ಗೃಹಿಣಿಯರು. ಅವರಲ್ಲಿ ಹೆಚ್ಚಿನವರು ಬಾಡಿಗೆ ಆದಾಯ, ಮನೆಯ ಹಿರಿಯ ಸದಸ್ಯರ ಪಿಂಚಣಿ ಇತ್ಯಾದಿಗಳಿಂದ ಜೀವನ ನಡೆಸುತ್ತಾರೆ. ಮಹಿಳೆಯರು ದೇಶದ ಜನಸಂಖ್ಯೆಯ ಶೇಕಡಾ 49 ರಷ್ಟು ಪ್ರಾತಿನಿಧ್ಯ ಹೊಂದಿದ್ದರೂ, ಆರ್ಥಿಕ ಉತ್ಪಾದನೆಯಲ್ಲಿ ಅವರ ಪಾಲು ಕೇವಲ ಶೇಕಡಾ 18 ರಷ್ಟು ಮಾತ್ರ.

ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸರಿಪಡಿಸಲು ಸರಕಾರ ಹಲವು ರೀತಿಯ ಪ್ರಯತ್ನಗಳನ್ನು ಮಾಡಿದೆ. ಮಹಿಳೆಯ ವಿವಾಹದ ಕನಿಷ್ಟ ವಯೋಮಿತಿಯನ್ನು 18 ರಿಂದ 21 ವರ್ಷಕ್ಕೆ ಏರಿಸುವ ಯೋಜನೆಯ ಘೋಷಣೆಯನ್ನು ಮಾಡಿರುವುದು ಕೂಡ ಅಂತಹ ಪ್ರಯತ್ನಗಳಲ್ಲಿ ಒಂದು.

ಇದನ್ನೂ ಓದಿ: SBI Alert: ಬ್ಯಾಂಕ್ ಅಕೌಂಟ್ ಇರೋ ಎಲ್ಲರಿಗೂ ಇದು ಎಚ್ಚರಿಕೆ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ವರದಿ ಒಂದರ ಪ್ರಕಾರ ಉನ್ನತ ಶಿಕ್ಷಣ ಪಡೆಯಲು ಮತ್ತು ವೃತ್ತಿಜೀವನವನ್ನು ಮುಂದುವರೆಸಲು ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವ ಮೂಲಕ ವೃತ್ತಿ ಕ್ಷೇತ್ರದಲ್ಲಿ ಉದ್ಯೋಗಿಗಳ ಭಾಗವಹಿಸುವಿಕೆಯನ್ನು ಸುಧಾರಿಸಬಹುದು.
Published by:guruganesh bhat
First published: