Husband Wife: ಗಂಡನಿಗಿಂತ ಹೆಂಡತಿಗೇ ಹೆಚ್ಚು ಆದಾಯ! ಕರ್ನಾಟಕದ ಮಹಿಳೆಯರು ಯಾವ ಸ್ಥಾನದಲ್ಲಿದ್ದಾರೆ ನೋಡಿ
NFHS Survey: ತಮ್ಮ ಗಂಡಂದಿರಿಗೆ ಸರಿಸಮಾನವಾಗಿ ಅಥವಾ ಅದಕ್ಕಿಂತ ಹೆಚ್ಚು ಆದಾಯ ಗಳಿಸುವ ಉದ್ಯೋಗಸ್ಥ ಮಹಿಳೆಯರು ಯಾವ ರಾಜ್ಯದಲ್ಲಿ ಹೆಚ್ಚಿದ್ದಾರೆ? ಯಾವ ರಾಜ್ಯದ ಮಹಿಳೆಯರು ತಮ್ಮ ಗಂಡಂದಿರಿಗಿಂತ ಹೆಚ್ಚು ಆದಾಯ ಗಳಿಸುತ್ತಾರೆ ಎಂಬ ಮಾಹಿತಿ ಇಲ್ಲಿದೆ.
ಆದಾಯ ಅಥವಾ ಸಂಬಳ ಅಂತ ಬಂದರೆ ಯಾರ ಕಿವಿ ನೆಟ್ಟಗಾಗಲ್ಲ ಹೇಳಿ? ಉದ್ಯೋಗಸ್ಥರ, ವಿವಿಧ ಸಂಸ್ಥೆ-ಕಂಪನಿಗಳಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟಿರಬಹುದು ಅಂತ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ಗಂಡ ಹೆಂಡತಿ ಇಬ್ಬರೂ ದುಡಿಯುವವರಾದರಂತೂ ಕೇಳುವುದೇ ಬೇಡ, ಗಂಡನಿಗೆ ಎಷ್ಟು ಸಂಬಳ ಬರಬಹುದು? ಹೆಂಡತಿಗೆ ಎಷ್ಟು ಸಂಬಳ (Women Earning More Than Husband) ಬರಬಹುದು? ಹೆಂಡತಿಯೇ ದೊಡ್ಡ ಹುದ್ದೆಯಲ್ಲಿ ಇದ್ದಾಳಂತೆ... ಅವಳಿಗೇ ಹೆಚ್ಚು ಸಂಬಳ ಬರಬಹುದು? ಎಂಬ ಮಾತುಕತೆಗಳೂ ನೆರೆಹೊರೆಯಲ್ಲಿ, ನೆಂಟರಲ್ಲಿ ಆಗುತ್ತಲೇ ಇರುತ್ತದೆ. ಇಷ್ಟೆಲ್ಲಾ ಏಕೆ ಹೇಳುತ್ತಿರುವುದು ಅಂದರೆ, ದುಡಿಯುವ ಗಂಡ ಹೆಂಡತಿಯರ ಸಂಬಳದ (Husband Wife Salary) ಕುರಿತು ಒಂದು ಆಸಕ್ತಿಕರ ಮಾಹಿತಿ ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ (National Family Health Survey) ಬೆಳಕಿಗೆ ಬಂದಿದೆ.
ಗಂಡನಿಗಿಂತ ಹೆಂಡತಿಯೇ ಹೆಚ್ಚು ದುಡಿಯುವ, ಆದಾಯ ಗಳಿಸುವ ಕುರಿತು ಈ ಸಮೀಕ್ಷೆಯಲ್ಲಿ ಕುತೂಹಲಕರ ಮಾಹಿತಿಯಿದೆ.
ದೇಶದ ಶೇಕಡಾ 39.90 ಮಹಿಳೆಯರಿಗೆ ಗಂಡಂದಿರಿಗಿಂತ ಹೆಚ್ಚು ಆದಾಯ ತಮ್ಮ ಗಂಡಂದಿರಿಗೆ ಸರಿಸಮಾನವಾಗಿ ಅಥವಾ ಅದಕ್ಕಿಂತ ಹೆಚ್ಚು ಆದಾಯ ಗಳಿಸುವ ಉದ್ಯೋಗಸ್ಥ ಮಹಿಳೆಯರು ಯಾವ ರಾಜ್ಯದಲ್ಲಿ ಹೆಚ್ಚಿದ್ದಾರೆ? ಯಾವ ರಾಜ್ಯದ ಮಹಿಳೆಯರು ತಮ್ಮ ಗಂಡಂದಿರಿಗಿಂತ ಹೆಚ್ಚು ಆದಾಯ ಗಳಿಸುತ್ತಾರೆ ಎಂಬ ಮಾಹಿತಿ ಇಲ್ಲಿದೆ. ದೇಶದ ಶೇಕಡಾ 39.90 ಮಹಿಳೆಯರು ತಮ್ಮ ಗಂಡಂದಿರಿಗೆ ಸರಿ ಸಮಾನವಾಗಿ ಅಥವಾ ಅದಕ್ಕಿಂತಲೂ ಹೆಚ್ಚು ಆದಾಯ ಗಳಿಸುತ್ತಾರೆ ಎಂದು ಈ ಸಮೀಕ್ಷೆ ತಿಳಿಸಿದೆ.
ಗುಜರಾತ್ ಮೊದಲ ಸ್ಥಾನದಲ್ಲಿ ಭಾರತದ ದೇಶಗಳಲ್ಲಿ ಗಂಡಂದಿರಿಗಿಂತ ಹೆಚ್ಚು ಆದಾಯ ಗಳಿಸುವ ರಾಜ್ಯಗಳ ಪೈಕಿ ಗುಜರಾತ್ನ ಮಹಿಳೆಯರು ಮೊದಲ ಸ್ಥಾನದಲ್ಲಿದ್ದಾರೆ. ಗುಜರಾತ್ನ ಶೇಕಡಾ 53.2ರಷ್ಟು ಮಹಿಳೆಯರು ತಮ್ಮ ಗಂಡಂದಿರಿಗೆ ಸರಿಸಮನಾದ ಆದಾಯ ಅಥವಾ ಅದಕ್ಕಿಂತಲೂ ಹೆಚ್ಚು ಆದಾಯ ಗಳಿಸುತ್ತಾರೆ.
ಕರ್ನಾಟಕದ ಮಹಿಳೆಯರ ಸಾಧನೆಯೇನೂ ಕಡಿಮೆಯಿಲ್ಲ! ಇನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ನಮ್ಮ ಕರ್ನಾಟಕ ರಾಜ್ಯದ ಮಹಿಳೆಯರ ಸಾಧನೆಯನ್ನು ಗಮನಿಸುವುದಾದರೆ, ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಕರ್ನಾಟಕದ ಶೇಕಡಾ 36.6 ರಷ್ಟು ಮಹಿಳೆಯರು ತಮ್ಮ ಗಂಡಂದಿರಿಗೆ ಸಮಾನ ಅಥವಾ ಗಂಡಂದಿರ ಆದಾಯಕ್ಕಿಂತ ಹೆಚ್ಚು ಆದಾಯ ಗಳಿಸುವುದಾಗಿ ತಿಳಿಸಿದ್ದಾರೆ. ದೇಶದ ಕೇಂದ್ರಾಡಳಿತ ಪ್ರದೇಶ ಮತ್ತು ಎಲ್ಲ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಸ್ಥಾನ 25ನೇಯದ್ದಾಗಿದೆ.
ಗುಜರಾತ್ಗಿಂತ ಒಂದು ಹೆಜ್ಜೆ ಮುಂದಿದೆ ಈ ಕೇಂದ್ರಾಡಳಿತ ಪ್ರದೇಶ! ಕೇಂದ್ರಾಡಳಿತ ಪ್ರದೇಶಗಳನ್ನೂ ಒಗ್ಗೂಡಿಸಿ ನೋಡುವುದಾದರೆ ದಾದ್ರಾ ನಗರ್ ಹವೇಲಿ ದಿಯು ಮತ್ತು ದಮನ್ ಗುಜರಾತ್ಗಿಂತ ಒಂದು ಹೆಜ್ಜೆ ಮುಂದಿದೆ. ಈ ಕೇಂದ್ರಾಡಳಿತ ಪ್ರದೇಶದ 59.9 ರಷ್ಟು ಮಹಿಳೆಯರು ತಮ್ಮ ಗಂಡಂದಿರನ್ನು ಆದಾಯದಲ್ಲಿ ಮೀರಿಸಿದ್ದಾರೆ. ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಚಂಡಿಘಡ, ಮೂರನೇ ಸ್ಥಾನದಲ್ಲಿ ಛತ್ತೀಸ್ಗಢ ರಾಜ್ಯಗಳಿವೆ.
2015-16 ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಈ ಸಂಖ್ಯೆಯು 43.5% ರಷ್ಟಿತ್ತು. ಈಸಲದ ಸಮೀಕ್ಷೆಯಲ್ಲಿ ಈ ಅಂಕಿ ಅಂಶ ಗಮನಾರ್ಹವಾಗಿ ಹೆಚ್ಚಾಗಿದೆ. 2019 ರಲ್ಲಿ ನಡೆಸಿದ ಸಮೀಕ್ಷೆಯು ಗುಜರಾತ್ನಲ್ಲಿ 33,343 ಮಹಿಳೆಯರು ಸೇರಿದಂತೆ 29,368 ಕುಟುಂಬಗಳನ್ನು ಒಳಗೊಂಡಿತ್ತು. ಸಮೀಕ್ಷೆಯಲ್ಲಿ ಭಾಗವಹಿಸಿದ ವಿವಾಹಿತ ಮಹಿಳೆಯರಲ್ಲಿ 38.2% ರಷ್ಟು ಜನರು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದರು. 78.6% ಜನರು ಕೆಲಸಕ್ಕೆ ಪ್ರತಿಯಾಗಿ ಹಣವನ್ನು ಪಡೆದರೆ ಇತರರು ಸಂಭಾವನೆ ಪಡೆದಿದ್ದಾಗಿ ಎಂದು ಹೇಳಿದ್ದರು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ