Exchange Offer: ಈ ಚೀನೀ ಸ್ಮಾರ್ಟ್​ಫೋನ್ ಕೊಟ್ಟು ಫ್ರೀ ಆಗಿ ಹೊಚ್ಚಹೊಸ 5ಜಿ ಫೋನ್ ಪಡೆಯಿರಿ

Get India’s first 5G smartphone for Free: ಭಾರತದ ಮೊತ್ತಮೊದಲ 5ಜಿ ಸ್ಮಾರ್ಟ್​ಫೋನ್ ಎನ್ನಲಾದ ಲಾವಾ AGNI ಅನ್ನು ಉಚಿತವಾಗಿ ಪಡೆಯುವ ಹೊಸ ವರ್ಷದ ಆಫರ್ ಬಂದಿದೆ. ಅದಕ್ಕೆ ನೀವು ಈ ಹಳೆಯ ಚೀನೀ ಸೆಟ್ ಎಕ್ಸ್​ಚೇಂಜ್ ಮಾಡಬೇಕು ಅಷ್ಟೇ.

ಲಾವಾ ಅಗ್ನಿ 5ಜಿ ಮೊಬೈಲ್

ಲಾವಾ ಅಗ್ನಿ 5ಜಿ ಮೊಬೈಲ್

 • News18
 • Last Updated :
 • Share this:
  ಸೆಕೆಂಡ್ ಹ್ಯಾಂಡ್ ಫೋನ್ ಎಕ್ಸ್​ಚೇಂಜ್ ಮಾಡಿದರೆ ಹೊಚ್ಚಹೊಸ 5ಜಿ ಸೆಟ್ ನಿಮ್ಮದಾಗುತ್ತದೆ. ಭಾರತದ ಸ್ಮಾರ್ಟ್​ಫೋನ್ ಕಂಪನಿ ಲಾವಾ ಮೊಬೈಲ್ಸ್ (Lava Mobiles) ಹೊಸ ವರ್ಷಕ್ಕೆ ಈ ಭರ್ಜರಿ ಆಫರ್ ಮುಂದಿಟ್ಟಿದೆ. ಚೀನೀ ಸ್ಮಾರ್ಟ್​ಫೋನ್​ಗಳ ಭರಾಟೆಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಚೀನಾದ ರಿಯಲ್​ಮಿ (Realme) ಕಂಪನಿಯ ಒಂದು ಬ್ರ್ಯಾಂಡ್​ನ ಸ್ಮಾರ್ಟ್​ಫೋನ್ ಮೊಬೈಲ್ ಅನ್ನು ಎಕ್ಸ್​ಚೇಂಜ್ ಮಾಡಿದರೆ ಭಾರತದ ಮೊತ್ತಮೊದಲ 5G ಫೋನ್ ಉಚಿತವಾಗಿ ಕೊಡಲು ಲಾವಾ ಆಫರ್ ಕೊಟ್ಟಿದೆ.

  ರಿಯಲ್​ಮಿ 8ಎಸ್ (Realme 8s) ಮೊಬೈಲ್ ಅನ್ನು ಎಕ್ಸ್​ಚೇಂಜ್ ಮಾಡಿದರೆ ಮಾತ್ರ ಫ್ರೀ ಆಗಿ ಲಾವಾದ 5G ಸ್ಮಾರ್ಟ್​ಫೋನ್ AGNI ನಿಮ್ಮದಾಗುತ್ತದೆ. ಇದು ಸೀಮಿತ ಆಫರ್. ಲಾವಾ ಮೊಬೈಲ್ಸ್ ಕಂಪನಿಯ ವೆಬ್​ಸೈಟ್​ನಲ್ಲಿ ನೀವು ರಿಜಿಸ್ಟರ್ ಮಾಡಿಕೊಳ್ಳಬಹುದು. ಜನವರಿ 7ರವರೆಗೆ, ಅಂದರೆ ನಾಳೆಯೇ ಇದಕ್ಕೆ ಕೊನೆಯ ದಿನ. ನಿಮ್ಮಲ್ಲಿರುವ ಹಳೆಯ ರಿಯಲ್​ಮಿ 8ಎಸ್ ಮೊಬೈಲ್ ಬದಲಿಗೆ ಲಾವಾದ AGNI ಮೊಬೈಲ್ ಅನ್ನು ಪಡೆಯುವ ಅವಕಾಶ ನಿಮ್ಮದಾಗಬಹುದು.

  ಲಾವಾ ಮೊಬೈಲ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಆಫರ್ ಮುಂದಿಟ್ಟು ಟ್ವೀಟ್ ಮಾಡಿದೆ.

  “ನಿಮ್ಮ ಕಾಯುವಿಕೆ ಇಲ್ಲಿಗೆ ಮುಗಿಯುತ್ತದೆ. ನಿಮ್ಮ Realme 8s ಮೊಬೈಲ್ ಅನ್ನು ಕೊಟ್ಟು ಭಾರತದ ಮೊತ್ತಮೊದಲ 5G ಸ್ಮಾರ್ಟ್​ಫೋನ್ AGNI ಪಡೆಯಿರಿ. ನೊಂದಾಯಿಸಲು ಜನವರಿ 7 ಕೊನೆಯ ದಿನ” ಎಂದು ಲಾವಾ ಮೊಬೈಲ್ಸ್ ಟ್ವೀಟ್ ಮಾಡಿದೆ. ನೊಂದಾಯಿಸಲು ಲಿಂಕ್ ಕೂಡ ಅದರಲ್ಲಿ ಕೊಟ್ಟಿದೆ. #ChooseASide ಅನ್ನೋ ಹ್ಯಾಷ್ ಟ್ಯಾಗ್ ಹಾಕಿ ಭಾರತೀಯ ರಾಷ್ಟ್ರೀಯತೆ ಭಾವನೆಯನ್ನ ಉದ್ದೀಪನಗೊಳಿಸುವ ವಿಡಿಯೋವನ್ನೂ ಟ್ವೀಟ್​ನಲ್ಲಿ ಜೋಡಿಸಿದೆ.


  “ಭಾರತ ನನ್ನ ದೇಶ. ಆದರೆ, ನನ್ನದು ಚೀನೀ ಸ್ಮಾರ್ಟ್​ಫೋನ್. ಇದು ರಿಯಲ್ ಮೀ (ನಿಜಕ್ಕೂ ನಾನೇನಾ?) ನಾ” ಎಂದು ವಿಡಿಯೋದಲ್ಲಿ ತಿಳಿಸಿದೆ.

  ಇದನ್ನೂ ಓದಿ: Smartphone:‌ ಜನವರಿ 10ಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ ಹಾನರ್‌ನ ಪೋಲ್ಡಿಂಗ್ ಸ್ಮಾರ್ಟ್‍ಫೋನ್

  ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಮಂದಿ ಲಾವಾಗೆ ಕೌಂಟರ್ ಕೊಟ್ಟರೆ ಅದಕ್ಕೆ ಲಾವಾ ಕೂಡ ತೀಕ್ಷ್ಣವಾಗಿ ಸ್ಪಂದಿಸಿದೆ.

  “ರಿಯಲ್​ಮಿ ಕಂಪನಿಯ ಸೆಕೆಂಡ್ ಹ್ಯಾಂಡ್ ಫೋನ್ ನಿಮ್ಮ ಹೊಸ ಫೋನ್​ಗೆ ಸಮ ಎಂದು ತೋರಿಸಿದ್ದೀರಿ. ಈ ಮೂಲಕ ರಿಯಲ್​ಮಿಯ ಗುಣಮಟ್ಟ ಎಷ್ಟು ಉತ್ತಮ ಎಂಬುದನ್ನು ಪ್ರಚಾರ ಮಾಡುತ್ತಿದ್ದೀರಿ” ಎಂದು ಒಬ್ಬ ವ್ಯಕ್ತಿ ಟ್ವೀಟ್ ಮೂಲಕ ಕೆಣಕಿದ್ದಾರೆ.


  ಇದಕ್ಕೆ ಪ್ರತಿಕ್ರಿಯಿಸಿದ ಲಾವಾ ಮೊಬೈಲ್ಸ್, “ಜಾಗತಿಕ ಬ್ರ್ಯಾಂಡ್​ಗಳೊಂದಿಗೆ ಭಾರತೀಯ ಬ್ರ್ಯಾಂಡ್​ಗಳು ಸ್ಪರ್ಧಿಸುವ ಮಟ್ಟವನ್ನು ನಾವು ಹೆಚ್ಚಿಸುತ್ತಲೇ ಇದ್ದೇವೆ. ಉತ್ಪನ್ನಗಳಿಗೆ ಮಾತ್ರವಲ್ಲ, ಸೇವೆಯಲ್ಲೂ ನಿಮಗೆ ಉತ್ಕೃಷ್ಟ ಸೇವೆ ನೀಡುವುದು ನಮ್ಮ ಗುರಿ. ಆ ಎರಡು ಫೋನ್​ಗಳ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ” ಎಂದು ಪೋಸ್ಟ್ ಹಾಕಿದೆ.

  ಇದನ್ನೂ ಓದಿ: Xiaomi: ಕೇಂದ್ರ ಸರ್ಕಾರಕ್ಕೆ ಕಸ್ಟಮ್ಸ್‌ ಸುಂಕ ವಂಚಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ ಶಿಯೋಮಿ..!

  ಲಾವಾ ಅಗ್ನಿ 5ಜಿ ಮೊಬೈಲ್​ನಲ್ಲಿ ವಿಶೇಷತೆಗಳು ಇವು:

  ತಂತ್ರಜ್ಞಾನ: 5G
  RAM: 8GB
  ಸ್ಟೋರೇಜ್: 128GB ಇಂಟರ್ನಲ್ ಸ್ಟೋರೇಜ್
  ಸಾಫ್ಟ್​ವೇರ್: ಆಂಡ್ರಾಯ್ಡ್ 11OS
  ಬ್ಯಾಟರಿ: 5000mAh
  ಬೆಲೆ: 20 ಸಾವಿರ ರೂ
  Published by:Vijayasarthy SN
  First published: