ತಾಯಂದಿರು ತಮ್ಮ ಶಿಶುಗಳು ಅಥವಾ ಚಿಕ್ಕ ಮಕ್ಕಳ ಜೊತೆಗೆ ರೈಲುಗಳಲ್ಲಿ ಪ್ರಯಾಣಿಸುವಾಗ ಅನುಕೂಲವಾಗುವಂತೆ ಭಾರತೀಯ ರೈಲ್ವೆಯು ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಭಾರತೀಯ ರೈಲ್ವೆಯ (Indian Railways) ಕೆಲವು ಆಯ್ದ ರೈಲುಗಳಲ್ಲಿ ಮಡಚಬಹುದಾದ 'ಬೇಬಿ ಬರ್ತ್' (Baby Berth) ವಿಶಿಷ್ಟ ಸೌಲಭ್ಯವನ್ನು ಪರಿಚಯಿಸಿದೆ. ಈ ಸೌಲಭ್ಯವನ್ನು ತಾಯಂದಿರ ದಿನದ (Mother's Day) ಸಂದರ್ಭದಲ್ಲೇ ಪ್ರಯಾಣಿಕರ ಅನುಕೂಲತೆಗಾಗಿ ಪರಿಚಯಿಸಲಾಗಿದ್ದು ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಹೊಸ ಸೌಲಭ್ಯವು ಉತ್ತರ ರೈಲ್ವೆಯ ಲಕ್ನೋ ಮತ್ತು ದೆಹಲಿ ವಿಭಾಗಗಳ ನಡುವಿನ ಸಹಯೋಗದ ಪ್ರಯತ್ನವಾಗಿದೆ. ಈ ರೈಲು ವಿಭಾಗಗಳ ನಡುವೆ ಪ್ರಾಯೋಗಿಕ ಆಧಾರದ ಮೇಲೆ ಈ ಬೇಬಿ ಬರ್ತ್ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.
ಪ್ರಸ್ತುತ ಈ ಮಾದರಿಯನ್ನು ಲಕ್ನೋ ಮೇಲ್ 12230 ರ AC ಮೂರು ಹಂತದ ಕೋಚ್ನಲ್ಲಿ 12 ಮತ್ತು 60 ಬರ್ತ್ಗಳಲ್ಲಿ ಮಾತ್ರ ಪರಿಚಯಿಸಲಾಗಿದೆ. ಇದು ಪ್ರಯಾಣದ ಸಮಯದಲ್ಲಿ ತಾಯಂದಿರು ತಮ್ಮ ಮಕ್ಕಳೊಂದಿಗೆ ಹೆಚ್ಚು ಆರಾಮದಾಯಕವಾಗಿ ಮಲಗಲು ಸಹಾಯ ಮಾಡುತ್ತದೆ.
Happy Mother's Day.
A baby berth has been introduced in Coach no 194129/ B4, berth no 12 & 60 in Lucknow Mail, to facilitate mothers traveling with their baby. Fitted baby seat is foldable about hinge and is secured with a stopper. @AshwiniVaishnaw@RailMinIndia@GM_NRlypic.twitter.com/w5xZFJYoy1
ಪ್ರಾಯೋಗಿಕವಾಗಿ ಹಲವು ರೀತಿ ಸಹಾಯ ಉತ್ತರ ರೈಲ್ವೆಯು ಟ್ವಿಟರ್ನಲ್ಲಿ ಕೆಲವು ಚಿತ್ರಗಳನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಅಮ್ಮಂದಿರ ದಿನದಂದು, ನಾರ್ತನ್ ರೈಲ್ವೆಯ ಲಕ್ನೋ ದಿವ್ನ್ ಕೋಚ್ ನಂ.194129/B4, ಬರ್ತ್ ಸಂಖ್ಯೆ 12 ಮತ್ತು 60 ರಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಬೇಬಿ ಬರ್ತ್ ಅನ್ನು ಪರಿಚಯಿಸಲಾಗಿದೆ. ಇದು ತಾಯಂದಿರು ತಮ್ಮ ಮಕ್ಕಳೊಂದಿಗೆ ಪ್ರಯಾಣಿಸಲು ಅನುಕೂಲವಾಗುತ್ತದೆ. ಅಳವಡಿಸಲಾಗಿರುವ ಮಗುವಿನ ಆಸನವು ಮಡಚಬಹುದಾದ ಮತ್ತು ಸ್ಟಾಪರ್ನೊಂದಿಗೆ ಸುರಕ್ಷಿತವಾಗಿದೆ.
ಇಂಜಿನಿಯರ್ಗಳಿಗೆ ಬಂತು ಹೊಸ ಆಲೋಚನೆ ರೈಲ್ವೇ ಮಂಡಳಿಯ ಸಭೆಯಲ್ಲಿ ಇಂಜಿನಿಯರ್ ತಂಡದಿಂದ ಶಿಶುಗಳಿಗೆ ವಿಶೇಷ ಬರ್ತ್ಗಳೊಂದಿಗೆ ರೈಲುಗಳನ್ನು ಸಜ್ಜುಗೊಳಿಸುವ ಆಲೋಚನೆ ಬಂದಿತ್ತು ಎಂದು ಲಕ್ನೋ ವಿಭಾಗದ ರೈಲ್ವೆ ವ್ಯವಸ್ಥಾಪಕ ಸುರೇಶ್ ಕುಮಾರ್ ಸಪ್ರಾ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.
ರೈಲ್ವೆ ಮಂಡಳಿಯ ಇತ್ತೀಚಿನ ಪರಿಶೀಲನಾ ಸಭೆಯಲ್ಲಿ ಮಹಾರಾಷ್ಟ್ರ ಮೂಲದ ಇಂಜಿನಿಯರ್ ನಿತಿನ್ ಡಿಯೋರ್ ಅವರು ತಮ್ಮ ಶಿಶುಗಳೊಂದಿಗೆ ಪ್ರಯಾಣಿಸುವಾಗ ತಾಯಂದರಿಗೆ ಅನುಕೂಲ ಆಗುವಂತಹ ವೈಶಿಷ್ಟ್ಯವನ್ನು ರಚಿಸುವ ಕಲ್ಪನೆಯನ್ನು ಪರಿಚಯಿಸಲಾಗಿತ್ತು.
ಇನ್ನೂ ಬುಕ್ ಮಾಡೋ ಅವಕಾಶ ಓಪನ್ ಆಗಿಲ್ಲ ಈ ಕಲ್ಪನೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಬೇಬಿ ಬರ್ತ್ ರೂಪದಲ್ಲಿ ಆಕಾರ ನೀಡಲಾಗಿದೆ ಎಂದು ಅವರು ಹೇಳಿದರು. ಇನ್ನೂ ಪ್ರಯಾಣಿಕರಿಗೆ ಇನ್ನೂ ವಿಶೇಷ ಬರ್ತ್ಗಳಿಗಾಗಿ ಬುಕ್ ಮಾಡುವ ಅನುಕೂಲ ಕಲ್ಪಿಸಲಾಗಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಈ ಸೀಟ್ಗಳನ್ನು ಬುಕ್ ಮಾಡುವ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.
ರೈಲ್ವೆಯ ಆಯ್ದ ಕೆಳ ಬರ್ತ್ನಲ್ಲಿ ನಿಗದಿಪಡಿಸಿದ ಪ್ರಯಾಣಿಕರೊಂದಿಗೆ ಸೀಟನ್ನು ವಿನಿಮಯ ಮಾಡಿಕೊಳ್ಳಲು ಆನ್-ಬೋರ್ಡ್ ರೈಲು ಟಿಕೆಟ್ ಪರೀಕ್ಷಕರನ್ನು ಸಂಪರ್ಕಿಸಬಹುದು. ಅವರು ಈ ಸೌಲಭ್ಯವನ್ನು ಕಲ್ಪಿಸಿಕೊಡುತ್ತಾರೆ ಎಂದು ಮಾಹಿತಿ ಲಭ್ಯವಾಗಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ