2020ರಲ್ಲಿ ಹಿರಿಯ ಪ್ರಯಾಣಿಕರಿಗೆ (Senior Traveler) ನೀಡಲಾಗುತ್ತಿದ್ದ, ಟಿಕೆಟ್ ದರದಲ್ಲಿನ (Ticket Rate) ವಿನಾಯ್ತಿ ರದ್ದುಗೊಳಿಸಿದ ನಂತರ ರೈಲ್ವೆ ಇಲಾಖೆಯ (Indian Railways) ಬೊಕ್ಕಸಕ್ಕೆ ಆದಾಯ ಹರಿದು ಬಂದಿದೆ. ಕೊರೋನ (Covid-19) ವೈರಸ್ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ಹಲವಾರು ಸೇವೆಗಳು ತಾತ್ಕಾಲಿಕವಾಗಿ ರದ್ದಾಗುವ ಮೂಲಕ ದೇಶದ ಆರ್ಥಿಕತೆಯಲ್ಲಿ ಏರು ಪೇರು ಉಂಟಾಗಿತ್ತು. ಈ ಸಂದರ್ಭದಲ್ಲಿ ಕೆಲವು ವಿನಾಯಿತಿಗಳು, ಉಚಿತ ಸೌಲಭ್ಯಗಳನ್ನು (Free Facility) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅವುಗಳಲ್ಲಿ ಹಿರಿಯ ನಾಗರಿಕರಿಗೆ (Senior Citizen) ರೈಲ್ವೆ ಇಲಾಖೆ ನೀಡುತ್ತಿದ್ದ ಟಿಕೆಟ್ ವಿನಾಯಿತಿ ಸಹ ಒಂದಾಗಿದೆ.
2020ರಲ್ಲಿ ಹಿರಿಯ ಪ್ರಯಾಣಿಕರಿಗೆ ನೀಡಲಾಗುತ್ತಿದ್ದ, ಟಿಕೆಟ್ ದರದಲ್ಲಿನ ವಿನಾಯಿತಿ ರದ್ದುಗೊಳಿಸಲಾಗಿತ್ತು. ಮಾರ್ಚ್ 2020 ರಿಂದ ಎರಡು ವರ್ಷಗಳಲ್ಲಿ ಹಿರಿಯ ನಾಗರಿಕ ಪ್ರಯಾಣಿಕರಿಗೆ ನೀಡಿದ್ದ ಟಿಕೆಟ್ ದರದಲ್ಲಿನ ವಿನಾಯ್ತಿಯನ್ನು ರದ್ದುಗೊಳಿಸಿದ ನಂತರ ರೈಲ್ವೇಯು 1,500 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೆಚ್ಚುವರಿ ಆದಾಯವನ್ನು ಗಳಿಸಿದೆ ಎಂದು ಆರ್ಟಿಐ ಒಂದರ ಮೂಲಕ ತಿಳಿದುಬಂದಿದೆ.
7.31 ಕೋಟಿ ಹಿರಿಯ ನಾಗರಿಕರು!
ಮಧ್ಯಪ್ರದೇಶ ಮೂಲದ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ ಮಾಹಿತಿ ಹಕ್ಕು ಪ್ರಶ್ನೆಗೆ ರೈಲ್ವೇ ಇಲಾಖೆ ಉತ್ತರಿಸಿ, ಮಾರ್ಚ್ 20, 2020 ಮತ್ತು ಮಾರ್ಚ್ 31, 2022ರ ನಡುವೆ ರೈಲ್ವೆಯು 7.31 ಕೋಟಿ ಹಿರಿಯ ನಾಗರಿಕ ಪ್ರಯಾಣಿಕರಿಗೆ ರಿಯಾಯಿತಿಯನ್ನು ನೀಡಿಲ್ಲ ಎಂದು ಹೇಳಿದೆ.
ಅಂಕಿ ಅಂಶ ಎಷ್ಟು?
ಇವರಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 4.46 ಕೋಟಿ ಪುರುಷರು, 58 ವರ್ಷ ಮೇಲ್ಪಟ್ಟ 2.84 ಕೋಟಿ ಮಹಿಳೆಯರು ಮತ್ತು 8,310 ಟ್ರಾನ್ಸ್ಜೆಂಡರ್ಗಳು ಸೇರಿದ್ದಾರೆ. ಈ ಅವಧಿಯಲ್ಲಿ ಹಿರಿಯ ನಾಗರಿಕ ಪ್ರಯಾಣಿಕರಿಂದ ಒಟ್ಟು ಆದಾಯವು 3,464 ಕೋಟಿ ರೂ. ಅನ್ನು ರೈಲ್ವೆ ಇಲಾಖೆ ತನ್ನದಾಗಿಸಿಕೊಂಡಿದೆ. ಆರ್ಟಿಐ ಪ್ರತಿಕ್ರಿಯೆಯ ಪ್ರಕಾರ, ರಿಯಾಯಿತಿಯನ್ನು ಅಮಾನತುಗೊಳಿಸಿದ್ದರಿಂದ ಗಳಿಸಿದ ಹೆಚ್ಚುವರಿ ಆದಾಯವು 1,500 ಕೋಟಿ ರೂ.ಆಗಿದೆ.
ಮಹಿಳಾ ಹಿರಿಯ ನಾಗರಿಕ ಪ್ರಯಾಣಿಕರು ಶೇಕಡಾ 50ರಷ್ಟು ರಿಯಾಯಿತಿ
ಹಿರಿಯ ನಾಗರಿಕರ ಒಟ್ಟಾರೆ ಆದಾಯಕ್ಕೆ ಲಿಂಗವಾರು ವಿಂಗಡಣೆಗೆ ಸಂಬಂಧಿಸಿದಂತೆ, ಆರ್ಟಿಐ ವರದಿಯಲ್ಲಿ ಪುರುಷ ಪ್ರಯಾಣಿಕರಿಂದ 2,082 ಕೋಟಿ ರೂ., ಮಹಿಳಾ ಪ್ರಯಾಣಿಕರಿಂದ 1,381 ಕೋಟಿ ರೂ. ಮತ್ತು ಟ್ರಾನ್ಸ್ಜೆಂಡರ್ಗಳಿಂದ 45.58 ಲಕ್ಷ ರೂ ಗಳಿಸಿದೆ.
ಈ ಹಿಂದಿನ ನಿಯಮದ ಪ್ರಕಾರ ಮಹಿಳಾ ಹಿರಿಯ ನಾಗರಿಕ ಪ್ರಯಾಣಿಕರು ಶೇಕಡಾ 50ರಷ್ಟು ರಿಯಾಯಿತಿಗೆ ಅರ್ಹರಾಗಿದ್ದರೆ, ಪುರುಷ ಮತ್ತು ಟ್ರಾನ್ಸ್ಜೆಂಡರ್ಗಳು ಎಲ್ಲಾ ವರ್ಗಗಳಲ್ಲಿ 40 ಶೇಕಡಾವನ್ನು ಪಡೆಯಬಹುದಾಗಿತ್ತು. ರಿಯಾಯಿತಿಯನ್ನು ಪಡೆಯಲು ಮಹಿಳೆಗೆ ಕನಿಷ್ಠ ವಯಸ್ಸಿನ ಮಿತಿ 58 ಆಗಿದ್ದರೆ, ಪುರುಷನಿಗೆ ಇದು 60 ಆಗಿತ್ತು.
ಮಾರ್ಚ್ 2020ರಿಂದ ವಿನಾಯ್ತಿ ರದ್ದು
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ಲಾಕ್ಡೌನ್ ಹೇರಲಾಗಿತ್ತು. ಇದಕ್ಕೂ ಮುನ್ನ, ರೈಲು ಪ್ರಯಾಣ ದರದಲ್ಲಿ ನೀಡಲಾಗಿದ್ದ ವಿನಾಯಿತಿಯನ್ನು ಮಾರ್ಚ್ 2020 ರಿಂದ ಮುಂದಿನ ಆದೇಶದವರೆಗೆ ಹಿಂಪಡೆಯಲಾಯಿತು. ಕೊರೋನ ವೈರಸ್ ಸಾಂಕ್ರಾಮಿಕ ರೋಗದ ನಂತರ ಮಾರ್ಚ್ 2020ರಿಂದ ತಡೆಹಿಡಿಯಲಾದ ರಿಯಾಯಿತಿಗಳನ್ನು ಇಂದಿಗೂ ಅಮಾನತುಗೊಳಿಸಲಾಗಿದೆ, ಹಿರಿಯ ಅಧಿಕಾರಿಗಳು ಅವುಗಳನ್ನು ಮುಂದುವರೆಸಲಾಗುವುದು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: GST Rates: ಶೇ 28ರ ಜಿಎಸ್ಟಿ ಪಟ್ಟಿಗೆ ಇನ್ನಷ್ಟು ವಸ್ತುಗಳು ಸೇರಿಸಿ! ಸಚಿವರಿಂದಲೇ ಬೇಡಿಕೆ
2020ರ ಬಹುಪಾಲು ಮತ್ತು 2021ರ ಭಾಗಗಳಲ್ಲಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆಯಾದರೂ, ಸೇವೆಗಳು ಸಾಮಾನ್ಯವಾದಂತೆ ರಿಯಾಯಿತಿಗಳ ಬೇಡಿಕೆಗೆ ಒತ್ತಾಯಿಸಲಾಯಿತು. ಜುಲೈ 2016 ರಲ್ಲಿ, ರೈಲ್ವೇಯು ವಯಸ್ಸಾದವರಿಗೆ ರಿಯಾಯಿತಿಯನ್ನು ಐಚ್ಛಿಕಗೊಳಿಸಿತು. ವಿವಿಧ ರೀತಿಯ ಪ್ರಯಾಣಿಕರಿಗೆ ನೀಡುತ್ತಿರುವ ಸುಮಾರು 53 ವಿಧದ ರಿಯಾಯಿತಿಗಳಿಂದಾಗಿ ರೈಲ್ವೇಯು ಪ್ರತಿ ವರ್ಷ ಸುಮಾರು 2,000 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ಭರಿಸುತ್ತಿತ್ತು.
ಇದನ್ನೂ ಓದಿ: Multibagger Stock: 1 ಲಕ್ಷ ಹೂಡಿಕೆಗೆ 18 ಕೋಟಿ ಲಾಭ! ಇದೆಂತಾ ಹಣದ ಮಾಯೆ?
ಹಿರಿಯ ನಾಗರಿಕರ ರಿಯಾಯಿತಿಯು ರಾಷ್ಟ್ರೀಯ ರವಾನೆದಾರರು ನೀಡಿದ ಒಟ್ಟು ರಿಯಾಯಿತಿಯ ಶೇಕಡಾ 80ರಷ್ಟಿದೆ. ಈ ಹಿಂದೆ, ಹಿರಿಯ ನಾಗರಿಕರ ರಿಯಾಯಿತಿಗಳನ್ನು ಬಿಟ್ಟುಕೊಡಲು ಜನರನ್ನು ಉತ್ತೇಜಿಸಲು ರೈಲ್ವೆ ಪ್ರಯತ್ನಿಸಿತ್ತು, ಆದರೆ ಅದು ಯಶಸ್ವಿಯಾಗಿರಲಿಲ್ಲ. 2019 ರಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯ ಪ್ರಕಾರ, ಹಿರಿಯ ನಾಗರಿಕ ಪ್ರಯಾಣಿಕರಿಂದ 'ಗಿವ್ ಇಟ್ ಅಪ್' ಯೋಜನೆಗೆ ಪ್ರತಿಕ್ರಿಯೆ ಹೆಚ್ಚು ಉತ್ತೇಜನಕಾರಿಯಾಗಿಲ್ಲ ಎಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ