Train Cancelled: ಪ್ರಯಾಣಿಕರೇ ಗಮನಿಸಿ, ಯಾವ ರೈಲುಗಳ ರದ್ದಾಗಿವೆ? ಇಲ್ಲಿ ಹೀಗೆ ಚೆಕ್ ಮಾಡಿ

ರದ್ದಾದ ರೈಲುಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಲು ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ. ಯಾವ ರೈಲು ರದ್ದಾಗಿದೆ? ನಿಮ್ಮ ಪ್ರಯಾಣದ ರೈಲು ಸಂಚರಿಸಲಿದೆಯೇ? ಇಲ್ಲಿ ಚೆಕ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರಣಗಳಿಂದಾಗಿ ಸುಮಾರು 240 ರೈಲುಗಳನ್ನು ರದ್ದುಗೊಳಿಸಲಾಗಿದೆ (Rail Cancels) ಎಂದು ಭಾರತೀಯ ರೈಲ್ವೇ ಶುಕ್ರವಾರ ಪ್ರಕಟಿಸಿದೆ. ರೈಲ್ವೆಯ ಅಧಿಸೂಚನೆಯ ಪ್ರಕಾರ, ಇಂದು (ಏಪ್ರಿಲ್ 29) ಹೊರಡಬೇಕಿದ್ದ 164 ಪ್ರಯಾಣಿಕ ರೈಲುಗಳನ್ನು (Passenger Trains) ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಇನ್ನುಳಿದ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಅಲ್ಲದೇ ಇನ್ನೂ 650ಕ್ಕೂ ರೈಲುಗಳು ರದ್ದಾಗಲಿವೆ ಎಮದು ತಿಳಿದುಬಂದಿದೆ.  ಕಾಯ್ದಿರಿಸಿದ ಟಿಕೆಟ್‌ಗಳನ್ನು (Booked Rail Ticket) ಹೊಂದಿರುವ ಪ್ರಯಾಣಿಕರಿಗೆ ಯಾವುದೇ ಕಾರಣಕ್ಕೂ ವಸತಿ ಸೌಕರ್ಯವನ್ನು ಒದಗಿಸಲು ರೈಲ್ವೆ ಆಡಳಿತವು ಸಾಧ್ಯವಾಗದಿದ್ದರೆ, ಯಾವುದೇ ರದ್ದತಿ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಭಾರತೀಯ ರೈಲ್ವೆ (Indian Railway) ತಿಳಿಸಿದೆ. ಹೀಗಾಗಿ ಭಾರತದಲ್ಲಿ ಉಂಟಾಗಿರುವ ವಿದ್ಯುತ್ ಕೊರತೆ ಹವಲು ಸಮಸ್ಯೆಗಳನ್ನು ತಂದೊಡ್ಡುತ್ತಿದೆ.

  ರದ್ದಾದ ರೈಲುಗಳ ಟಿಕೆಟ್‌ಗಳನ್ನು ಮರುಪಾವತಿಗಾಗಿ ನಿರ್ದಿಷ್ಟ ಸಮಯದಲ್ಲಿ ಮರು ಪಾವತಿಸಿದರೆ ಅವರಿಗೆ ಸಂಪೂರ್ಣ ಶುಲ್ಕವನ್ನು ಮರುಪಾವತಿಸಲಾಗುವುದು ಎಂಬುದನ್ನು ರೈಲು ಪ್ರಯಾಣಿಕರು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

  ದಾಸ್ತಾನು ಮರು ಪೂರಣಕ್ಕೆ ಪ್ರಯತ್ನ
  ಪೂರ್ಣ ಪ್ರಮಾಣದ ವಿದ್ಯುತ್ ಬಿಕ್ಕಟ್ಟನ್ನು ತಪ್ಪಿಸುವ ಪ್ರಯತ್ನದಲ್ಲಿ ವಿದ್ಯುತ್ ಸ್ಥಾವರಗಳಲ್ಲಿ ಖಾಲಿಯಾಗುತ್ತಿರುವ ದಾಸ್ತಾನುಗಳನ್ನು ಮರುಪೂರಣಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ.

  ಸುಡುವ ಬೇಸಿಗೆಯು ಕಲ್ಲಿದ್ದಲು ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಇದು ದೇಶದ 70% ರಷ್ಟು ವಿದ್ಯುತ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಭಾರತದ ಹಲವಾರು ಭಾಗಗಳು ದೀರ್ಘಾವಧಿಯ ವಿದ್ಯುತ್ ಕೊರತೆಯನ್ನು ಎದುರಿಸುತ್ತಿವೆ. ಆದರೆ ಕೆಲವು ಕೈಗಾರಿಕೆಗಳು ಪಳೆಯುಳಿಕೆ ಇಂಧನದ ಕೊರತೆಯಿಂದಾಗಿ ಉತ್ಪಾದನೆಯನ್ನು ಕಡಿತಗೊಳಿಸುತ್ತಿವೆ. ಇದು ಕೊವಿಡ್ 19ರ ನಂತರ ಮತ್ತೆ ಆರ್ಥಿಕತೆಯ ಪುನರುಜ್ಜೀವನ ನಡೆಯಲು ಒಂದು ರೀತಿಯಲ್ಲಿ ಬೆದರಿಕೆ ಹಾಕುತ್ತಿದೆ.

  ರದ್ದಾದ ರೈಲುಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಲು ಹಂತ-ಹಂತದ ಮಾರ್ಗದರ್ಶಿ ಇಲ್ಲಿದೆ

  ಹಂತ 1: http://enquiry.indianrail.gov.in/mntesಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ. ಅಥವಾ ಇಲ್ಲಿ ಕ್ಲಿಕ್ ಮಾಡಿ

  ಹಂತ 2: ಪರದೆಯ ಮೇಲಿನ ಪ್ಯಾನೆಲ್‌ನಲ್ಲಿ ಅಸಾಧಾರಣ ರೈಲುಗಳನ್ನು ಆಯ್ಕೆಮಾಡಿ

  ಹಂತ 3: ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿ

  ಹಂತ 4: ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು ಸಂಪೂರ್ಣವಾಗಿ ಅಥವಾ ಭಾಗಶಃ ಆಯ್ಕೆಯನ್ನು ಆಯ್ಕೆಮಾಡಿ.

  ಒಂದೇ ಒಂದು ದಿನಕ್ಕೆ ಅಗತ್ಯವಿರುವ ಕಲ್ಲಿದ್ದಲು ಇದೆ!
  ಕೆಲವು ವಿದ್ಯುತ್ ಸ್ಥಾವರಗಳಲ್ಲಿ ಒಂದು ದಿನಕ್ಕೆ ಅಗತ್ಯವಿರುವಷ್ಟು ಮಾತ್ರ ಕಲ್ಲಿದ್ದಲು ದಾಸ್ತಾನು ಉಳಿದಿದೆ ಎಂದು ದೆಹಲಿಯ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಆಸ್ಪತ್ರೆಗಳು ಮತ್ತು ದೆಹಲಿ ಮೆಟ್ರೋದಲ್ಲಿ ವಿದ್ಯುತ್ ಕೊರತೆಯ ಬಗ್ಗೆ ದೆಹಲಿ ಸರ್ಕಾರ ಎಚ್ಚರಿಕೆ ನೀಡಿದ ನಂತರ ಇದು ಬಂದಿದೆ.

  ಇದನ್ನೂ ಓದಿ: B-Khata Holders: ಬೆಂಗಳೂರಿಗರೇ ಗಮನಿಸಿ: ಬಿ-ಖಾತಾ ಆಸ್ತಿ ಹೊಂದಿರುವವರು ಎ-ಖಾತಾಗೆ ಬಡ್ತಿ ಪಡೆಯಿರಿ

  ಇದೇ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ದೆಹಲಿ ಸರ್ಕಾರದ ವಿದ್ಯುತ್ ಖಾತೆ ಸಚಿವ ಸತ್ಯೇಂದರ್ ಜೈನ್, ವಿದ್ಯುತ್‌ಗೆ ಬ್ಯಾಕಪ್ ಇಲ್ಲ. ವಿದ್ಯುತ್ ಸಂಗ್ರಹಿಸಲು ಸಾಧ್ಯವಿಲ್ಲ. ಇದನ್ನು ಪ್ರತಿದಿನ ಉತ್ಪಾದಿಸಲಾಗುತ್ತದೆ. ಕಲ್ಲಿದ್ದಲು ಸಂಗ್ರಹಿಸಲಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ, ಕಲ್ಲಿದ್ದಲು ಸಂಗ್ರಹವು ಸುಮಾರು 21 ದಿನಗಳು ಇರಬೇಕು. ಅನೇಕ ವಿದ್ಯುತ್ ಸ್ಥಾವರಗಳು ಒಂದು ದಿನದ ಕಲ್ಲಿದ್ದಲು ಸಂಗ್ರಹದೊಂದಿಗೆ ಉಳಿದಿವೆ ಎಂದು ಆತಂಕ ವ್ಯಕ್ತಪಡಿಸಿದರು.

  ದಾದ್ರಿ ಮತ್ತು ಉಂಚಹಾರ್ ಸ್ಥಾವರಗಳಲ್ಲಿ ಎಷ್ಟು ಕಲ್ಲಿದ್ದಲು ಉಳಿದಿದೆ ಎಂದು ವರದಿಗಾರರು ಕೇಳಿದಾಗ, ಅವರು ಸುಮಾರು ಒಂದು ದಿನ ಮಾತ್ರ ಸಾಕಾಗುವಷ್ಟು ಎಂದು ಮಾಹಿತಿ ನೀಡಿದರು.

  ಇದನ್ನೂ ಓದಿ: Bank Locker Rules: ಬ್ಯಾಂಕ್ ಲಾಕರ್​ನಲ್ಲಿಟ್ಟ ಬೆಲೆ ಬಾಳುವ ವಸ್ತು ಕಳುವಾದರೆ ಪರಿಹಾರ ಸಿಗುತ್ತದೆಯೇ?

  ವಿದ್ಯುತ್ ಸ್ಥಾವರಗಳು 21 ದಿನಗಳ ಕಲ್ಲಿದ್ದಲು ಸಂಗ್ರಹವನ್ನು ಹೊಂದಿರಬೇಕು. 21 ದಿನಗಳಲ್ಲದಿದ್ದರೂ ಕನಿಷ್ಠ 14 ದಿನಗಳು ಅಥವಾ 7 ದಿನಗಳು ಇರಬೇಕು ಎಂದು ಅವರು ಹೇಳಿದರು. ಒಂದು ದಿನದ ಮೌಲ್ಯದ ಕಲ್ಲಿದ್ದಲು ಸಂಗ್ರಹ ಏನಕ್ಕೂ ಸಾಲದು ಎಂದು ಸಹ ಸತ್ಯೇಂದರ್ ಜೈನ್ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದಾರೆ.
  Published by:guruganesh bhat
  First published: