• Home
  • »
  • News
  • »
  • business
  • »
  • T20 World Cup: ವಿದೇಶಿ ಕ್ರಿಕೆಟ್‌ ಅಂಗಳದಲ್ಲಿ ದೇಸಿ ಹಾಲಿನ ಸ್ವಾದ! ಐರ್ಲೆಂಡ್ ಕ್ರಿಕೆಟ್ ಟೀಂಗೆ ಪ್ರಾಯೋಜಕತ್ವ ನೀಡಿದ ಅಮುಲ್​

T20 World Cup: ವಿದೇಶಿ ಕ್ರಿಕೆಟ್‌ ಅಂಗಳದಲ್ಲಿ ದೇಸಿ ಹಾಲಿನ ಸ್ವಾದ! ಐರ್ಲೆಂಡ್ ಕ್ರಿಕೆಟ್ ಟೀಂಗೆ ಪ್ರಾಯೋಜಕತ್ವ ನೀಡಿದ ಅಮುಲ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Ireland-Amul: ಐರ್ಲೆಂಡ್​ ತಂಡಕ್ಕೆ ಅಮುಲ್​ ಪ್ರಾಯೋಜಿಸುತ್ತಿದೆ. ಟೀಂ ಇಂಡಿಯಾ ಬಿಟ್ಟು ಐರ್ಲೆಂಡ್​ ತಂಡದ ಬೆನ್ನಿಗೆ ಅಮುಲ್​ ನಿಂತಿದೆ.

  • Share this:

ಐಸಿಸಿ ಪುರುಷರ ಟಿ20 ವಿಶ್ವಕಪ್ (T-2-0 World cup) 2022 ಆಸ್ಟ್ರೇಲಿಯಾ (Australia) ದಲ್ಲಿ ಅಕ್ಟೋಬರ್ 16 ರಿಂದ ಆರಂಭವಾಗಿದೆ. ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ 29 ದಿನಗಳ ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ಅದರಲ್ಲೂ ಇದೇ ಭಾನುವಾರ ಹೈವೋಲ್ಟೇಜ್​ ಪಂದ್ಯ (High Voltage) ಕೂಡ ನಡೆಯಲಿದ್ದು, ಕ್ರಿಕೆಟ್ (Cricket)​ ಅಭಿಮಾನಿಗಳು ಕಾತುರರಾಗಿದ್ದಾರೆ. ಇಂಡಿಯಾ ವರ್ಸಸ್​ ಪಾಕ್​ (IND vs PAK) ಪಂದ್ಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಟೀಮ್​ ಇಂಡಿಯಾ (Team India) ಆಟಗಾರರು ಕದನಕ್ಕೆ ರೆಡಿಯಾಗಿದ್ದಾರೆ.


ಈ ಬಾರಿ ಕೇವಲ ಟೀಂ ಇಂಡಿಯಾ ವಿಚಾರವಾಗಿ ಅಲ್ಲದೇ ವಿಶ್ವಕಪ್​ನಲ್ಲಿ ಭಾರತ ಹೆಚ್ಚು ಸುದ್ದಿಯಾಗುತ್ತಿದೆ. ಅದಕ್ಕೂ ಕಾರಣವಿದೆ. ಭಾರತ, ವಿದೇಶಗಳಲ್ಲೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಅಮುಲ್ ಹೆಸರು ಕೂಡ ಮೈದಾನದಲ್ಲಿ ರಾರಾಜಿಸುತ್ತಿದೆ. ಅದ್ಯಾಕೆ ಅಂತೀರಾ? ಮುಂದೆ ನೋಡಿ.


ಐರ್ಲೆಂಡ್​ ತಂಡಕ್ಕೆ ಅಮುಲ್​ ಪ್ರಾಯೋಜಿತ!


ಹೌದು, ಐರ್ಲೆಂಡ್​ ತಂಡಕ್ಕೆ ಅಮುಲ್​ ಪ್ರಾಯೋಜಿಸುತ್ತಿದೆ. ಟೀಂ ಇಂಡಿಯಾ ಬಿಟ್ಟು ಐರ್ಲೆಂಡ್​ ತಂಡದ ಬೆನ್ನಿಗೆ ಅಮುಲ್​ ನಿಂತಿದೆ. ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (GCMMF), ಅಮುಲ್ ಎಂಬ ಬ್ರಾಂಡ್ ಹೆಸರಿನಲ್ಲಿ ಪರಿಚಿತವಾಗಿದೆ. ಇದು ಭಾರತದ ಅತಿದೊಡ್ಡ ಆಹಾರ ಉತ್ಪನ್ನ ಮಾರುಕಟ್ಟೆ ಸಹಕಾರಿಯಾಗಿದೆ. ಇದರ ವಾರ್ಷಿಕ ವಹಿವಾಟು 8 ಬಿಲಿಯನ್ ಯುಎಸ್ ಡಾಲರ್.


ಭಾರತದಲ್ಲಿ ಅಮುಲ್‌ನ ವ್ಯವಹಾರವು 79 ಮಾರಾಟ ಕಚೇರಿಗಳು, 10,000 ಡೀಲರ್‌ಗಳು ಮತ್ತು ಸರಿಸುಮಾರು 10 ಲಕ್ಷ ಚಿಲ್ಲರೆ ವ್ಯಾಪಾರಿಗಳಿದ್ದಾರೆ. ಮುಖ್ಯವಾಗಿ ಹಾಲು, ಹಾಲಿನ ಉತ್ಪನ್ನಗಳು, ಆರೋಗ್ಯ ಪಾನೀಯಗಳು, ಪನ್ನೀರ್​, ತುಪ್ಪ, ಬೆಣ್ಣೆ, ಐಸ್ ಕ್ರೀಮ್ ಇತ್ಯಾದಿಗಳನ್ನು ಮಾರಾಟ ಮಾಡುವ ಅಮುಲ್, ಭಾರತದಿಂದ ಡೈರಿ ಉತ್ಪನ್ನಗಳನ್ನು ರಫ್ತು ಮಾಡುವ ದೊಡ್ಡ ಸಂಸ್ಥೆಯಾಗಿದೆ.


ಗ್ರೌಂಡ್​ನಲ್ಲಿ ರಾರಾಜಿಸುತ್ತಿದೆ ಅಮುಲ್!


ಮುಖ್ಯವಾಗಿ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅಮುಲ್ ಐರ್ಲೆಂಡ್ ತಂಡವನ್ನು ಪ್ರಾಯೋಜಿಸುತ್ತಿದೆ. ಆಗ ಐರಿಶ್ ತಂಡ ಸ್ಕಾಟ್ಲೆಂಡ್ ವಿರುದ್ಧ ಸ್ಫೋಟಕ ಕ್ರಿಕೆಟ್ ಆಡಿದ್ದು, ದೊಡ್ಡ ಸ್ಕೋರ್ ಹೊರತಾಗಿಯೂ ಸ್ಕಾಟಿಷ್ ತಂಡವನ್ನು ಸೋಲಿಸಿದ್ದು ಮುಖ್ಯವಾಗಿದೆ.


ಇದನ್ನೂ ಓದಿ: ಚಹಾ ಸ್ಟಾರ್ಟ್ಅಪ್ ಶುರುಮಾಡಿದ ಬಿಟೆಕ್ ವಿದ್ಯಾರ್ಥಿನಿ! ಈ ವೈರಲ್ ವಿಡಿಯೋ ಯುವಕರಿಗೆ ಸ್ಪೂರ್ತಿ


ಅಖಾಡದಲ್ಲಿ ಸದ್ದು ಮಾಡ್ತಿರೋ ಐರ್ಲೆಂಡ್​!


ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ 29 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಈ ಬಾರಿ 16 ತಂಡಗಳು ಭಾಗವಹಿಸುತ್ತಿವೆ. ಇವರಲ್ಲಿ ಎಂಟು ಮಂದಿ ಈಗಾಗಲೇ ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಿದ್ದಾರೆ. ಅವರು ಮೊದಲ ಸುತ್ತಿನಿಂದ ಇತರ ನಾಲ್ಕು ತಂಡಗಳೊಂದಿಗೆ ಸೇರಿಕೊಳ್ಳುತ್ತಾರೆ. 1ನೇ ಸುತ್ತಿನಲ್ಲಿ ಒಟ್ಟು 8 ತಂಡಗಳಿವೆ. ಐರ್ಲೆಂಡ್ ಸೇರಿದಂತೆ, ಇಲ್ಲಿಯವರೆಗೆ ಒಟ್ಟು 2 ಪಂದ್ಯಗಳನ್ನು ಆಡಿರುವ ಇವರು 1ರಲ್ಲಿ ಗೆದ್ದು ಮತ್ತೊಂದರಲ್ಲಿ ಸೋತಿದ್ದಾರೆ.


ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ದಾಖಲಿಸಿದ ನಂತರ ಐರ್ಲೆಂಡ್ ಸೂಪರ್ 12 ರಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ. ಇದರೊಂದಿಗೆ ಅಮುಲ್‌ನ ಈ ಹೂಡಿಕೆಯಿಂದ ಕಂಪನಿಯೂ ಲಾಭ ಪಡೆಯುತ್ತಿದೆ.


ಇದನ್ನೂ ಓದಿ: ಕಾಸ್ಮೆಟಿಕ್ಸ್​​ ಚಿಕಿತ್ಸೆಗೂ ಇನ್ಶೂರೆನ್ಸ್​ ಕ್ಲೈಮ್ ಆಗುತ್ತಾ? ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ


ವಿಶ್ವಕಪ್​ನ ನೀವು ಈ ಚಾನೆಲ್​ಗಳಲ್ಲಿ ನೋಡ್ಬಹುದು!


ಆಸ್ಟ್ರೇಲಿಯಾದಲ್ಲಿ ನಡೆಯುವ ICC ಪುರುಷರ T20 ವಿಶ್ವಕಪ್‌ನ ಪ್ರಮುಖ ಪ್ರಸಾರಕರಲ್ಲಿ ಸ್ಟಾರ್ ನೆಟ್‌ವರ್ಕ್, ಸ್ಕೈ ಸ್ಪೋರ್ಟ್ಸ್, ಫಾಕ್ಸ್ ಸ್ಪೋರ್ಟ್ಸ್, ESPN, PTV ಮತ್ತು ಟೈಮ್ಸ್ ಇಂಟರ್ನೆಟ್ ಸೇರಿವೆ. ಸ್ಟಾರ್ ನೆಟ್‌ವರ್ಕ್ ಭಾರತ, ನೇಪಾಳ, ಭೂತಾನ್, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನ ದೂರದರ್ಶನ ಹಕ್ಕುಗಳನ್ನು ಹೊಂದಿದೆ, ಆದರೆ PTV ಮತ್ತು ARY ಡಿಜಿಟಲ್ ನೆಟ್‌ವರ್ಕ್ ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಪ್ರಸಾರ ಮಾಡುತ್ತವೆ. ಇನ್ನೂ ಹಾಟ್​ಸ್ಟಾರ್​ನಲ್ಲೂ ನೀವು ವಿಶ್ವಕಪ್​ ಪಂದ್ಯಗಳನ್ನು ನೋಡಬಹುದು.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು