Indian Currency: ನಿಮ್ಮ ಬಳಿ ಇರುವ 500 ರೂಪಾಯಿ ನೋಟುಗಳಲ್ಲಿ ಈ ಅಂಶಗಳಿದ್ದರೆ ಅದು ನಕಲಿ ಅಲ್ಲ ಅಸಲಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವ ಉದ್ದೇಶದಿಂದ ಸರ್ಕಾರ ನೋಟು ಅಮಾನ್ಯೀಕರಣ ಮಾಡಿತ್ತೋ ಅದರಲ್ಲಿ ಇನ್ನೂ ಸಹ ಸರ್ಕಾರಕ್ಕೆ ಸಂಪೂರ್ಣ ಯಶಸ್ಸು ಸಿಗಲಿಲ್ಲ ಎನ್ನಬಹುದು.

  • Trending Desk
  • 5-MIN READ
  • Last Updated :
  • Share this:

ನೋಟು ಅಮಾನ್ಯೀಕರಣ ಜಾರಿಗೆ ಬಂದು ಆರು ವರ್ಷ ಕಳೆದರೂ ನಕಲಿ ನೋಟುಗಳ ಹಾವಳಿಗೆ ಮಾತ್ರ ಅಂಕುಶವೇ ಇಲ್ಲದಂತೆ ಚಲಾವಣೆಯಲ್ಲಿವೆ. ನೋಟು ರದ್ದತಿಯ ಹಿಂದಿನ (Hindu) ಸರ್ಕಾರದ ಉದ್ದೇಶಗಳಲ್ಲಿ ನಕಲಿ ನೋಟುಗಳನ್ನು ನಿಯಂತ್ರಿಸುವುದು ಪ್ರಮುಖವಾಗಿತ್ತು. ಆದರೆ ಯಾವ ಉದ್ದೇಶದಿಂದ ಸರ್ಕಾರ ನೋಟು ಅಮಾನ್ಯೀಕರಣ ಮಾಡಿತ್ತೋ ಅದರಲ್ಲಿ ಇನ್ನೂ ಸಹ ಸರ್ಕಾರಕ್ಕೆ ಸಂಪೂರ್ಣ ಯಶಸ್ಸು ಸಿಗಲಿಲ್ಲ ಎನ್ನಬಹುದು. ಕಾರಣ ಇಷ್ಟೇ ಈಗಲೂ ಮಾರುಕಟ್ಟೆಯಲ್ಲಿ ನಕಲಿ ನೋಟುಗಳು (Money) ಚಲಾವಣೆಯಾಗುತ್ತಿವೆ. ಇತ್ತ ನೋಟು ಅಮಾನ್ಯೀಕರಣ ನಿರ್ಧಾರವನ್ನು ಸಹ ಸುಪ್ರೀಂ ಕೋರ್ಟ್ (Supreme Court)‌ ಎತ್ತಿ ಹಿಡಿದಿದೆ. ಕೇಂದ್ರದ ಮೋದಿ ಸರ್ಕಾರದ ನೋಟು ಅಮಾನ್ಯೀಕರಣದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲಾ 58 ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದ್ದು, 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸುವ ಕೇಂದ್ರ ಸರ್ಕಾರದ 2016 ರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.


ಕೋರ್ಟ್ ಹೇಳಿದ್ದೇನು?
ನೋಟು ಅಮಾನ್ಯೀಕರಣಕ್ಕೂ ಮುನ್ನ ಕೇಂದ್ರ ಮತ್ತು ಆರ್‌ಬಿಐ ನಡುವೆ ಸಮಾಲೋಚನೆ ನಡೆದಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನೋಟು ಅಮಾನ್ಯೀಕರಣದ ವಿರುದ್ಧ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದ್ದು, ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದೆ. ಇದು ಕಾರ್ಯಾಂಗದ ಆರ್ಥಿಕ ನೀತಿಯಾಗಿರುವುದರಿಂದ ನಿರ್ಧಾರವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಹೇಳಿದೆ.


ಮಾರುಕಟ್ಟೆಯಲ್ಲಿ ನಕಲಿ ನೋಟುಗಳ ಹಾವಳಿ
ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ನಕಲಿ ನೋಟುಗಳಿಂದ ಮಾತ್ರ ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಕೆಲವು ವರದಿಯ ಪ್ರಕಾರ, ದೇಶದಲ್ಲಿ 500 ಮತ್ತು 2000 ರೂಪಾಯಿಗಳ ನಕಲಿ ನೋಟುಗಳ ಸಂಖ್ಯೆಯಲ್ಲಿ ವ್ಯಾಪಕ ಏರಿಕೆ ಕಂಡುಬಂದಿದೆ ಎಂದು ಹೇಳಿದೆ. ಹೀಗಾಗಿ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಮತ್ತು ನಕಲಿ ನೋಟುಗಳನ್ನು ಗುರುತಿಸಲು ಆರ್‌ಬಿಐ ಕೆಲವು ಮಾರ್ಗಗಳನ್ನು ಸೂಚಿಸಿದೆ.
ಹಾಗಾದರೆ ಹೊಸ 500 ರೂಪಾಯಿ ನೋಟು ಗುರುತಿಸಲು ರಿಸರ್ವ್ ಬ್ಯಾಂಕ್ ನೀಡಿರುವ ಮಾರ್ಗಸೂಚಿಗಳೇನು ಎಂಬುದನ್ನು ನೋಡೋಣ.


ಇದನ್ನೂ ಓದಿ: EPF, PPF, VPF ನಡುವೆ ಇರೋ ವ್ಯತ್ಯಾಸವೇನು? ಯಾವುದರಲ್ಲಿ ಸಿಗುತ್ತೆ ಹೆಚ್ಚಿನ ಲಾಭ?


ನಿಮ್ಮ ಬಳಿ ಇರುವ 500 ರೂಪಾಯಿ ನೋಟುಗಳಲ್ಲಿ ಈ ಅಂಶಗಳಿದ್ದರೆ ಅದು ಪಕ್ಕಾ ನೋಟು
- ಸೂಚಿಸಲಾಗಿರುವ ಸ್ಥಳದಲ್ಲಿ ದೇವನಾಗರಿ ಲಿಪಿಯಲ್ಲಿ 500 ರೂ ಎಂದು ಬರೆಯಲಾಗಿದೆ.
- ನೋಟಿನ ಬಲಭಾಗದ ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರ ಇದೆ.
- ಮಹಾತ್ಮ ಗಾಂಧಿಯವರ ಭಾವಚಿತ್ರದ ಬಲಭಾಗದಲ್ಲಿ ಭರವಸೆಯ ಷರತ್ತು, ಗ್ಯಾರೆಂಟಿ ಷರತ್ತು ಮತ್ತು RBI ಲಾಂಛನದೊಂದಿಗೆ ಗವರ್ನರ್ ಸಹಿ ಇರುತ್ತದೆ.
- ಮಹಾತ್ಮಾ ಗಾಂಧಿಯವರ ಚಿತ್ರ ಮತ್ತು ಎಲೆಕ್ಟ್ರೋಟೈಪ್ ವಾಟರ್‌ಮಾರ್ಕ್ ಸಹ ಗೋಚರಿಸುತ್ತದೆ.
- ನೀವು ನೋಟನ್ನು ನಿಧಾನಕ್ಕೆ ತಿರುಗಿಸಿದರೆ, ಸಿಕ್ಯೋರಿಟಿ ಥ್ರೆಡ್ (ದಾರದ ರಚನೆ) ಹಸಿರು ಬಣ್ಣದಿಂದ ಇಂಡಿಗೊ (ನೀಲಿ) ಬಣ್ಣಕ್ಕೆ ಬದಲಾಗುವುದನ್ನು ನೀವು ಗಮನಿಸಬಹುದು.
- ಬಲಭಾಗದ ಮೂಲೆಯಲ್ಲಿ ಅಶೋಕ ಸ್ಥಂಭವಿದೆ.
- ಮೇಲ್ಭಾಗದಲ್ಲಿ ಎಡಭಾಗ ಮತ್ತು ಕೆಳಭಾಗದಲ್ಲಿ ಬಲಭಾಗದ ಸಂಖ್ಯೆಗಳು ಎಡದಿಂದ ಬಲಕ್ಕೆ ದೊಡ್ಡದಾಗುತ್ತವೆ.
- ಭಾರತ ಮತ್ತು India ಅಕ್ಷರಗಳನ್ನು ನಮೂದಿಸಲಾಗಿದೆ.




500 ರೂಪಾಯಿಯ ನೋಟಿನ ಹಿಂಬಾಗದಲ್ಲಿ ಏನಿದೆ?
- ಎಡಭಾಗದಲ್ಲಿ ನೋಟು ಮುದ್ರಣದ ವರ್ಷವನ್ನು ಬರೆಯಲಾಗಿದೆ.
- ಸ್ವಚ್ಛ ಭಾರತದ ಲೋಗೋವನ್ನು ಘೋಷಣೆಯೊಂದಿಗೆ ಮುದ್ರಿಸಲಾಗಿದೆ.
- ಭಾರತೀಯ ಧ್ವಜದೊಂದಿಗೆ ಕೆಂಪು ಕೋಟೆಯ ಚಿತ್ರ ಮುದ್ರಣವಿದೆ.
- ಕೇಂದ್ರ ಭಾಗದಲ್ಲಿ ಎಲ್ಲಾ ಭಾಷೆಗಳ ಫಲಕವಿದೆ
- ಹಿಂಬದಿಯಲ್ಲೂ ದೇವನಾಗರಿ ಲಿಪಿಯಲ್ಲಿ 500 ಎಂದು ಮುದ್ರಿಸಲಾಗಿದೆ.
ನೋಟಿನ ಗಾತ್ರ
ಮೂಲ 500 ರೂಪಾಯಿ ನೋಟಿನ ಅಧಿಕೃತ ಗಾತ್ರ 66 mm x 150 mm ಆಗಿದೆ.

First published: