• Home
  • »
  • News
  • »
  • business
  • »
  • Dream 11: ಟ್ವಿಟರ್​​​, ಮೆಟಾದಿಂದ ಕೆಲಸ ಕಳೆದುಕೊಂಡವರಿಗೆ ಬಿಗ್ ಆಫರ್​! ಇದಕ್ಕೆ ಹೇಳೋದು ಭಾರತೀಯರ ಮನಸ್ಸು ದೊಡ್ಡದು ಅಂತ!

Dream 11: ಟ್ವಿಟರ್​​​, ಮೆಟಾದಿಂದ ಕೆಲಸ ಕಳೆದುಕೊಂಡವರಿಗೆ ಬಿಗ್ ಆಫರ್​! ಇದಕ್ಕೆ ಹೇಳೋದು ಭಾರತೀಯರ ಮನಸ್ಸು ದೊಡ್ಡದು ಅಂತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟ್ವಿಟರ್ (Twitter) ನಂತಹ ಉನ್ನತ ಟೆಕ್ ಕಂಪನಿ (Tech Company) ಗಳು ಇತ್ತೀಚೆಗೆ ಸುಮಾರು 3,800 ಉದ್ಯೋಗಿಗಳನ್ನು ತಮ್ಮ ಕಂಪನಿಯಲ್ಲಿನ ವೆಚ್ಚಗಳನ್ನು ಉಳಿಸಲು ಕೆಲಸದಿಂದ ತೆಗೆದು ಹಾಕಿವೆ.

  • Share this:

ಕಳೆದ ಕೆಲವು ತಿಂಗಳುಗಳಲ್ಲಿ, ಬಹಳಷ್ಟು ದೊಡ್ಡ ದೊಡ್ಡ ಐಟಿ ಕಂಪನಿ (IT Company) ಗಳು ತಮ್ಮ ತಮ್ಮ ಕಂಪನಿಗಳಲ್ಲಿ ಉದ್ಯೋಗ ಕಡಿತ (Job Cut) ವನ್ನು ಘೋಷಿಸಿವೆ ಮತ್ತು ಆರ್ಥಿಕ ಹಿಂಜರಿತವು ಬರುತ್ತಿದೆ ಎಂಬ ಒಂದು ಆತಂಕದಿಂದ ಮತ್ತು ಅದನ್ನು ಎದುರಿಸಲು ಕಂಪನಿಗಳು ಎರಡನೇ ಯೋಚನೆ ಮಾಡದೆ ಅನೇಕ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದಾರೆ. ಟ್ವಿಟರ್ (Twitter) ನಂತಹ ಉನ್ನತ ಟೆಕ್ ಕಂಪನಿ (Tech Company) ಗಳು ಇತ್ತೀಚೆಗೆ ಸುಮಾರು 3,800 ಉದ್ಯೋಗಿಗಳನ್ನು ತಮ್ಮ ಕಂಪನಿಯಲ್ಲಿನ ವೆಚ್ಚಗಳನ್ನು ಉಳಿಸಲು ಕೆಲಸದಿಂದ ತೆಗೆದು ಹಾಕಿವೆ.


ಇನ್ನೂ ಫೇಸ್‌ಬುಕ್ ನ ಮಾತೃಸಂಸ್ಥೆಯಾದ ಮೆಟಾ ಕಂಪನಿ ಕೂಡ ಕೆಲವು ದಿನಗಳ ಹಿಂದಷ್ಟೇ 11,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಬಹುತೇಕ ಪ್ರತಿ ವಾರ, ಪ್ರಮುಖ ಟೆಕ್ ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಘೋಷಿಸುತ್ತಲೇ ಇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಯುಎಸ್​ನಲ್ಲಿರುವವರಿಗೆ ಕೆಲಸದ ಅನಿವಾರ್ಯ!


ಈಗಾಗಲೇ ತಮ್ಮ ಕೆಲಸವನ್ನು ಕಳೆದುಕೊಂಡ ಬಹಳಷ್ಟು ಜನರು ಹೊಸ ಉದ್ಯೋಗವನ್ನು ಹುಡುಕಲು ಕಷ್ಟಪಡುತ್ತಿದ್ದರೆ, ಹೆಚ್ಚು ಪ್ರಭಾವಿತ ಉದ್ಯೋಗಿಗಳು ಎಚ್1ಬಿ ವೀಸಾಗಳನ್ನು ಹೊಂದಿದ್ದಾರೆ ಮತ್ತು ಇವರಲ್ಲಿ ಅನೇಕ ಭಾರತೀಯರು ಸಹ ಸೇರಿದ್ದಾರೆ. ಅಂತಹವರು ಯುಎಸ್ ನಲ್ಲಿಯೇ ವಾಸಿಸುವುದನ್ನು ಹಾಗೆ ಮುಂದುವರೆಸುವುದಾದರೆ 60 ದಿನಗಳ ಒಳಗೆ ಉದ್ಯೋಗವನ್ನು ಕಂಡುಕೊಳ್ಳಬೇಕು.


ಒಂದು ವೇಳೆ ಅವರು ಕೆಲಸವನ್ನು ಪಡೆಯಲು ವಿಫಲರಾದರೆ, ಅವರು ಭಾರತಕ್ಕೆ ಹಿಂತಿರುಗಬೇಕಾಗುತ್ತದೆ. ಎಂತಹ ಪರಿಸ್ಥಿತಿಯಲ್ಲಿ ಉದ್ಯೋಗಿಗಳು ಇದ್ದಾರೆ ಅಂತ ಅನೇಕ ದೊಡ್ಡ ದೊಡ್ಡ ಕಂಪನಿಗಳಿಗೆ ಗೊತ್ತಿದ್ದರೂ ಸಹ ಯಾರೂ ಇವರ ಸಹಾಯಕ್ಕೆ ಇನ್ನೂ ಮುಂದೆ ಬಂದಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಷಯ.


ಸಹಾಯಕ್ಕೆ ಬಂದಿದ್ದಾರೆ ಭಾರತೀಯ ಸಿಇಒ!


ಇದೀಗ ಪರಿಸ್ಥಿತಿಯನ್ನು ಅವಲೋಕಿಸಿ ಡ್ರೀಮ್ 11 ನ ಸಿಇಒ ಮತ್ತು ಸಹ-ಸಂಸ್ಥಾಪಕರಾಗಿರುವ ಹರ್ಷ್ ಜೈನ್, ಭಾರತೀಯರು ತಮ್ಮ ತಾಯ್ನಾಡಿಗೆ ಮರಳಬೇಕು ಮತ್ತು ಅವರು ಬೆಳೆಯಲು ಸಹಾಯ ಮಾಡಲು ಭಾರತೀಯ ಟೆಕ್ ಕಂಪನಿಗಳೊಂದಿಗೆ ಕೆಲಸ ಮಾಡಬೇಕು ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾರೆ.


Dream 11 ಸಿಇಓ ಹರ್ಷ್ ಜೈನ್


ಡ್ರೀಮ್​ 11ಗೆ ಬರುವಂತೆ ಆಹ್ವಾನ!


"ಎಲ್ಲಾ ಕೆಲಸಗಳನ್ನು ಕಳೆದುಕೊಂಡ ಉದ್ಯೋಗಿಗಳು ಯುಎಸ್ ನಲ್ಲಿ ಇದ್ದಿರೋ, ಮುಂದಿನ ದಶಕದಲ್ಲಿ ನಮ್ಮ ಹೈಪರ್-ಬೆಳವಣಿಗೆಯ ಸಾಮರ್ಥ್ಯವನ್ನು ಅರಿತುಕೊಳ್ಳಲು ಭಾರತೀಯ ಟೆಕ್ ಗೆ ಸಹಾಯ ಮಾಡಲು ಭಾರತೀಯರಿಗೆ ಸ್ವದೇಶಕ್ಕೆ ಮರಳಲು (ವಿಶೇಷವಾಗಿ ವೀಸಾ ಸಮಸ್ಯೆಗಳನ್ನು ಹೊಂದಿರುವವರು) ನೆನಪಿಸಲು ದಯವಿಟ್ಟು ಈ ಸಂದೇಶವನ್ನು ಹರಡಿ" ಎಂದು ಜೈನ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಮಕ್ಕಳು ಚಿಕ್ಕವಯಸ್ಸಿನಲ್ಲಿದ್ದಾಗಲೇ ದುಡ್ಡಿನ ಬಗ್ಗೆ ಹೀಗೆ ಹೇಳಿಕೊಡಿ, ದೊಡ್ಡವರಾದ ಮೇಲೆ ಸಮಸ್ಯೆಯಾಗಲ್ಲ!


ಅವರು ಬಹಿರಂಗವಾಗಿಯೇ ಪ್ರಭಾವಿತ ಉದ್ಯೋಗಿಗಳಿಗೆ ಉದ್ಯೋಗಗಳನ್ನು ನೀಡುತ್ತಿದ್ದಾರೆ, ತಮ್ಮ ಕಂಪನಿಯು ಯಾವಾಗಲೂ "ಉತ್ತಮ ಪ್ರತಿಭೆಗಳ ಹುಡುಕಾಟದಲ್ಲಿದೆ, ವಿಶೇಷವಾಗಿ ವಿನ್ಯಾಸ, ಉತ್ಪನ್ನ ಮತ್ತು ಟೆಕ್ ನಲ್ಲಿ ನಾಯಕತ್ವದ ಅನುಭವ ಇದ್ದವರಿಗೆ" ಎಂದು ಹೇಳಿದರು. ಜೈನ್ ಅವರು ಈಗಾಗಲೇ ತಮ್ಮ ಉದ್ಯೋಗಗಳನ್ನು ಕಳೆದುಕೊಂಡವರಿಗೆ ಉದ್ಯೋಗ ಭದ್ರತೆಯ ಸ್ವಲ್ಪ ಪ್ರಜ್ಞೆಯನ್ನು ನೀಡಲು ಮತ್ತು ಜನರನ್ನು ಆಕರ್ಷಿಸಲು ತಮ್ಮ ಕಂಪನಿಯ ಆರ್ಥಿಕ ಸ್ಥಿತಿಯ ಬಗ್ಗೆ ಸ್ವಲ್ಪ ಹೇಳಿಕೊಂಡಿದ್ದಾರೆ ನೋಡಿ.


ಈ ಸಿಇಒ ತಮ್ಮ ಕಂಪನಿಯ ಬಗ್ಗೆ ಹೇಳಿದ್ದೇನು?


ಸಾಕಷ್ಟು ಟೆಕ್ ಕಂಪನಿಗಳು ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟವನ್ನು ಸರಿದೂಗಿಸಿಕೊಳ್ಳಲು ಮತ್ತು ನಿಭಾಯಿಸಲು ಹೆಣಗಾಡುತ್ತಿದ್ದು, ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದರೆ, ಜೈನ್ ಅವರು "ಡ್ರೀಮ್ ಸ್ಪೋರ್ಟ್ಸ್ ನಲ್ಲಿ ನಾವು ಲಾಭದಾಯಕವಾಗಿದ್ದೇವೆ, 150 ಮಿಲಿಯನ್ ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ 8 ಬಿಲಿಯನ್ ಮೌಲ್ಯದ ಕಂಪನಿಯಾಗಿದ್ದು, ತುಂಬಾನೇ ಲಾಭದಾಯಕವಾಗಿದೆ" ಎಂದು ಹೇಳುವ ಮೂಲಕ ತಮ್ಮ ಕಂಪನಿಯ ಬಗ್ಗೆ ಹೆಮ್ಮೆಪಟ್ಟರು.


Dream 11 ಸಿಇಓ ಹರ್ಷ್ ಜೈನ್


ಇದನ್ನೂ ಓದಿ: ಅಮೆಜಾನ್ ಪೇ ಬ್ಯಾಲೆನ್ಸ್​​ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಹೀಗೆ ಮಾಡಿ


ಮೆಟಾದಂತಹ ಕೆಲವು ದೊಡ್ಡ ಟೆಕ್ ಕಂಪನಿಗಳು ಸ್ಥೂಲ ಆರ್ಥಿಕ ಪರಿಸರವನ್ನು ದೂಷಿಸಿವೆ ಮತ್ತು ಜಾಹೀರಾತು ಆದಾಯದಲ್ಲಿ ಕುಸಿತವು ಕೆಲಸದಿಂದ ತೆಗೆದುಹಾಕಲು ಒಂದು ಕಾರಣವಾಗಿದೆ.

First published: