Business Startup: ಅಮೆರಿಕದಲ್ಲಿ ವಾರಾಣಸಿ ಸಹೋದರರ ಜೋಡಿಯ ಸ್ಟಾರ್ಟಪ್! ಈ ಸಂಸ್ಥೆಯ ಫೋಕಸ್ ಏನು ಗೊತ್ತೆ?

ಅನಿಲ್ ಮತ್ತು ಸುನಿಲ್ ಸಹೋದರರಿಬ್ಬರೂ ಈಗ ಅಮೆರಿಕದಲ್ಲಿ ತಮ್ಮದೆ ಆದ ಮೀಟರ್ ಇಂಕ್ ಎಂಬ ಹೆಸರಿನ ಸ್ಟಾರ್ಟಪ್ ಹೊಂದಿದ್ದಾರೆ. ಕಿರೀಯ ವಯಸ್ಸಿನಲ್ಲೇ ಈ ಇಬ್ಬರೂ ಸಹೋದರರು ಯಶಸ್ಸಿನ ಹಾದಿಯಲ್ಲಿ ದಾಪುಗಾಲನ್ನೇ ಇಟ್ಟಿದ್ದಾರೆಂದರೂ ತಪ್ಪಾಗಲಾರದು.

ಅನೀಲ್ ಮತ್ತು ಸುನೀಲ್

ಅನೀಲ್ ಮತ್ತು ಸುನೀಲ್

  • Share this:
ಅನಿಲ್ (Anil) ಮತ್ತು ಸುನಿಲ್ (Sunil) ಸಹೋದರರಿಬ್ಬರೂ ಈಗ ಅಮೆರಿಕದಲ್ಲಿ (America) ತಮ್ಮದೆ ಆದ ಮೀಟರ್ ಇಂಕ್ (Meter Ink) ಎಂಬ ಹೆಸರಿನ ಸ್ಟಾರ್ಟಪ್ (Startup) ಹೊಂದಿದ್ದಾರೆ. ಕಿರೀಯ ವಯಸ್ಸಿನಲ್ಲೇ ಈ ಇಬ್ಬರೂ ಸಹೋದರರು ಯಶಸ್ಸಿನ ಹಾದಿಯಲ್ಲಿ ದಾಪುಗಾಲನ್ನೇ ಇಟ್ಟಿದ್ದಾರೆಂದರೂ ತಪ್ಪಾಗಲಾರದು. ಈ ಸಹೋದರರು ಕೇವಲ 12 ಹಾಗೂ 14 ವರ್ಷದವರಾಗಿದ್ದಾಗ ಕುಟುಂಬದೊಡನೆ ಅಮೆರಿಕದ ವರ್ಜಿನಿಯಾಗೆ ಹೋಗಿ ನೆಲೆಸಬೇಕಾಯಿತು. ಮುಂದೆ ತಮ್ಮ ಶಿಕ್ಷಣವನ್ನು (Education) ಆ ಇಬ್ಬರು ಸಹೋದರರು ಅಮೆರಿಕದಲ್ಲೇ ಪೂರ್ಣಗೊಳಿಸಿದರು. ಅನಿಲ್ ಮತ್ತು ಸುನಿಲ್ ಕಲಿಯುತ್ತಿರುವಾಗಲೇ ತಮ್ಮ ಪ್ರತಿಭೆಯನ್ನು ತೋರಿಸಿದ್ದರು. ಜಾರ್ಜ್ ಮೇಸನ್ ಕಾಲೇಜಿನಲ್ಲಿ ಓದುವಾಗ ಬಯೋಕೆಮಿಸ್ಟ್ರಿಯಿಂದ ಹಿಡಿದು ಕಂಪ್ಯೂಟರ್ ಎಂಜಿನಿಯರಿಂಗ್ ವರೆಗಿನ (Computer Engineering) ಎಲ್ಲ ವಿಷಯಗಳಲ್ಲೂ ತಮ್ಮ ಅಭಿರುಚಿಯಿರುವುದನ್ನು ಅನಾವರಣಗೊಳಿಸಿದ್ದರು.

ಅವರ ಪ್ರತಿಭೆ ಯಾವ ಮಟ್ಟಿಗೆ ಇತ್ತೆಂದರೆ ಒಂದೊಮ್ಮೆ ಅವರ ತಮ್ಮ ಎಕ್ಸ್ ಬಾಕ್ಸ್ ಅನ್ನು ಹ್ಯಾಕ್ ಮಾಡಿದ್ದರು, ಗ್ರಾಹಕರಿಗಾಗಿ ವೈಯಕ್ತೀಕರಿಸಿದಂತಹ ಕಂಪ್ಯೂಟರ್ ಗಳನ್ನು ನಿರ್ಮಿಸಿ ಮಾರಾಟ ಮಾಡಿದ್ದರು.

ಏನಿದು ಮೀಟರ್ ಇಂಕ್

ಇಷ್ಟೊಂದು ಅದ್ಭುತ ಪ್ರತಿಭೆ ಹೊಂದಿದ್ದ ಈ ಜೋಡಿ ಮನಸ್ಸು ಮಾಡಿದ್ದರೆ ಇಂದಿನ ಯುಗದ ಕ್ರಿಪ್ಟೋಕರೆನ್ಸಿ ಕ್ಷೇತ್ರದಲ್ಲಿ ನಿರಾಯಾಸವಾಗಿ ಸಾಧನೆ ಮಾಡಬಹುದಾಗಿತ್ತು ಎಂದೆನಿಸದೆ ಇರಲಾರದು. ಆದರೆ, ಅದರ ಬದಲು ಈ ಜೋಡಿ ಮನಸ್ಸು ಮಾಡಿದ್ದು ಕಚೇರಿಗಳಲ್ಲಿ ಅತಿ ವೇಗದ ಇಂಟರ್ನೇಟ್ ಸೇವೆ ಒದಗಿಸುವ ಕುರಿತು ಎಂದರೆ ನೀವು ನಂಬಲೇಬೇಕು. ಹೌದು, ಥ್ರಿಲ್ ನೀಡುವಂತಹ ವೇಗದ ಇಂಟರ್ನೆಟ್ ಸೇವೆ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಈ ಜೋಡಿ ಪ್ರಾರಂಭಿಸಿದ ಸ್ಟಾರ್ಟಪ್ ಮೀಟರ್ ಇಂಕ್.

ಅತ್ಯುತ್ತಮ ಗುಣಮಟ್ಟದ ನೆಟ್ವರ್ಕಿಂಗ್ ಸಾಧನ

ಹಾಗೇ ನೋಡಿದರೆ, ಈ ಸಹೋದರರ ಜೋಡಿ ತಮ್ಮ ಪದವಿ ಶಿಕ್ಷಣ ಮುಗಿಸುವ ಹಂತದಲ್ಲಿದ್ದಾಗಲೇ ತಮ್ಮ ಬಳಿ 50 ಉದ್ಯೋಗಿಗಳನ್ನೂ ಹಾಗೂ ನೂರು ಗ್ರಾಹಕರನ್ನೂ ಹೊಂದಿತ್ತು. ಅವರ ಮುಖ್ಯ ಕೆಲಸ ಅತ್ಯುತ್ತಮ ಗುಣಮಟ್ಟದ ನೆಟ್ವರ್ಕಿಂಗ್ ಸಾಧನಗಳನ್ನು ಕಚೇರಿಗಳಿಗೆ ಒದಗಿಸುವುದಾಗಿತ್ತು.

ಈ ಹಂತದಲ್ಲೇ ಅವರು ಕಂಡ ಕನಸೆಂದರೆ ಈ ನೆಟ್ವರ್ಕಿಂಗ್ ಸಾಫ್ಟ್ವೇರ್ ಕ್ಷೇತ್ರವನ್ನು ಸಂಪೂರ್ಣವಾಗಿ ಮತ್ತೊಮ್ಮೆ ವ್ಯಾಖ್ಯಾನಿಸುವುದು. ಸದ್ಯ ಮೀಟರ್ ಇಂಕ್ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಅನೀಲ್ ಹೇಳುತ್ತಾರೆ, "ಈ ಇಂಟರ್ನೆಟ್ ಸೇವೆ ಎಂಬುದು ನಾವು ಇಂದು ನೋಡುತ್ತಿರುವ ವಿದ್ಯುತ್ ಹಾಗೂ ಟೆಲಿಫೋನ್ ಸೇವೆಗಳಂತೆಯೇ ಇರಬೇಕು" ಎಂದು.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

ನೆಟ್ವರ್ಕಿಂಗ್ ಎಂಬುದು ಯಾವುದೇ ಕಂಪನಿಗೆ ಅಷ್ಟೊಂದು ಸುಲಭದ ಕೆಲಸವಲ್ಲ. ಇದು ಬಲು ಸಂಕೀರ್ಣತೆಯಿಂದ ಕೂಡಿರುತ್ತದೆ. ಕಂಪನಿ ಅದಕ್ಕಾಗಿ ಕೆಲವು ಸಾಧನಗಳನ್ನು ಕೊಂಡು ತದನಂತರ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇಂಟರ್ನೆಟ್ ಸೇವಾದಾತರ ಸೇವೆ ಪಡೆಯುವ ಮೂಲಕ ತಮ್ಮ ಕಂಪನಿಯ ನೆಟ್ವರ್ಕಿಂಗ್ ಮೂಲಸೌಕರ್ಯವನ್ನು ನಿರ್ವಹಿಸಬೇಕಾಗುತ್ತದೆ. ಇದು ಮುಂಚೆಯಿಂದಲೂ ಇದೇ ರೀತಿ ನಡೆದುಕೊಂಡು ಬಂದಿದ್ದು ಮಿಕ್ಕ ಉಳಿದ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣಬಹುದಾಗಿದೆ.

ಇದನ್ನೂ ಓದಿ:  Shark Tank India: ಶಾರ್ಕ್ ಟ್ಯಾಂಕ್ ಇಂಡಿಯಾದಿಂದ ಸ್ಟಾರ್ಟ್​ಅಪ್​ಗಳ ಆದಾಯದಲ್ಲಿ ಹೆಚ್ಚಳ! ಈ ಅದ್ಭುತ ಸಾಧ್ಯವಾಗಿದ್ದು ಹೇಗೆ?

ಹಾಗಾಗಿ ಇದಕ್ಕೆಂದೇ ಮೀಟರ್ ಇಂಕ್ ತನ್ನದೆ ಆದ ಪರಿಣಾಮಾತ್ಮಕ ಪರಿಹಾರ ಸೂತ್ರವನ್ನು ಕಂಡುಹಿಡಿದುಕೊಂಡಿದೆ. ಮೀಟರ್, ಯಾವುದೇ ಒಂದು ಕಚೇರಿಗೆ ಅದರ ಫ್ಲೋರ್ ಪ್ಲ್ಯಾನ್ ಗೆ ಅನುಗುಣವಾಗಿ ಅದಕ್ಕೆ ಬೇಕಾಗಿರುವ ಇಂಟರ್ನೆಟ್ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಲೆಕ್ಕಹಾಕಿ ತದನಂತರ ತನ್ನ ಜೊತೆ ಒಪ್ಪಂದದಲ್ಲಿರುವ ಇಂಟರ್ನೆಟ್ ಸೇವಾದಾತರ ಸೇವೆ ಪಡೆದು ಕಚೇರಿಗೆ ಇಂಟರ್ನೆಟ್ ಸೇವೆ ಒದಗಿಸುವಲ್ಲಿ ನಿರತವಾಗಿದೆ.

ಇದಕ್ಕಾಗಿ ಮೀಟರ್ ಇಂಟರ್ನೆಟ್ ಸೇವೆ ಬೇಕಾದ ಕಚೇರಿಯ ಪ್ರತಿ ಚ.ಅಡಿಗೆ ಮಾಸಿಕ ಇಂತಿಷ್ಟು ಎಂದು ಶುಲ್ಕ ತೆಗೆದುಕೊಳ್ಳುತ್ತದೆ. ಇದರಿಂದ ಇಂಟರ್ನೆಟ್ ಬೇಕಾದ ಕಚೇರಿಯು ಮಿಕ್ಕೆಲ್ಲ ಗೊಂದಲಗಳ ಬಗ್ಗೆ ತಲೆ ಕೆಡಸಿಕೊಳ್ಳದೆ ಮಾಸಿಕ ಇಂತಿಷ್ಟು ಶುಲ್ಕ ಮಾತ್ರಕೊಟ್ಟು ಅದ್ಭುತವಾದ ಇಂಟರ್ನೆಟ್ ಸೇವೆ ಪಡೆಯಬಹುದು.

50 ಮಿಲಿಯನ್ ಡಾಲರ್ ಫಂಡ್ ಸಂಗ್ರಹಿಸುವಲ್ಲಿ ಸಫಲ

ಮೀಟರ್ ಇಂಕ್ ಸಂಸ್ಥೆಯ ಈ ಮಾದರಿ ಪರಿಕಲ್ಪನೆಗೆ ಈಗಾಗಲೇ ಆರ್ಥಿಕ ಬ್ಯಾಕಪ್ ಸಿಗುತ್ತಿದ್ದು ಅಮೆರಿಕದ ಕೆಲ ಪ್ರತಿಷ್ಠಿತ ಕಂಪನಿಗಳು ಇದಕ್ಕಾಗಿ ಹಣ ಹೂಡಿದ್ದು ಈಗಾಗಲೇ ಮೀಟರ್ ಇಂಕ್, 50 ಮಿಲಿಯನ್ ಡಾಲರ್ ಫಂಡ್ ಸಂಗ್ರಹಿಸುವಲ್ಲಿ ಸಫಲವಾಗಿದೆ.

ಈಗಾಗಲೇ ಮೀಟರ್ ಇಂಕ್ ಸೇವೆ ಪಡೆಯುತ್ತಿರುವ ದೊಡ್ಡ ಸಾಫ್ಟವೇರ್ ಕಂಪನಿಯ ಬುಸಿನೆಸ್ ಮುಖ್ಯಸ್ಥರೊಬ್ಬರು ಈ ರೀತಿ ಹೇಳುತ್ತಾರೆ, "ಸಾಮಾನ್ಯವಾಗಿ ನಮ್ಮ ಕಂಪನಿಯ ನಟ್ವರ್ಕಿಂಗ್ ವಯವಸ್ಥೆಯನ್ನು ನಾವೇ ನೋಡಿಕೊಳ್ಳುತ್ತೇವೆ. ಒಂದೊಮ್ಮೆ ಮೀಟರ್ ಇಂಕ್ ಅವರ ಪ್ರಸ್ತಾವನೆ ನಮಗೆ ನಿರ್ಧಾರ ತೆಗೆದುಕೊಳ್ಳಲು ಗೊಂದಲ ಅಥವಾ ಆತಂಕದ ಸ್ಥಿತಿ ತಂದೊಡ್ಡಿತ್ತು.

ಆದರೆ, ನಾವು ನಮ್ಮ ಕಚೇರಿಯನ್ನು ವಿಸ್ತರಿಸಿದ ಮೇಲೆ ನನಗೆ ನೆಟ್ವರ್ಕಿಂಗ್ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕಾಗಿತ್ತು ಹಾಗೂ ನನಗೆ ಬೇರೆ ಇತರೆ ಮುಖ್ಯ ಕೆಲಸವಿದ್ದುದರಿಂದ ಹಾಗೂ ನಾನೇ ಮತ್ತೆ ನೆಟ್ವರ್ಕಿಂಗ್ ಬಗ್ಗೆ ಗಮನಹರಿಸುವುದು ಆಸಕ್ತಿದಾಯಕವಿಲ್ಲದ ಕಾರಣ ಮೀಟರ್ ಇಂಕ್ ಸೇವೆ ಪಡೆಯಬೇಕಾಯಿತು" ಎನ್ನುತ್ತಾರೆ.

ಚೈನಾಗೆ ಭೇಟಿ ನೀಡಿ ನಟ್ವರ್ಕಿಂಗ್ ಉಪಕರಣಗಳ ಅಭಿವೃದ್ಧಿಯಲ್ಲಿ ನಿರತರಾದ ಸಹೋದರರು

ಇದಕ್ಕೂ ಮೊದಲು ಈ ವಾರಾಣಸಿ ಸಹೋದರರು 2014 ರಲ್ಲಿ ಚೈನಾಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ತಯಾರಕರೊಂದಿಗೆ ಕೈಜೋಡಿಸಿ ತಮಗೆ ಬೇಕಾದ ರೀತಿಯಲ್ಲಿ ನಟ್ವರ್ಕಿಂಗ್ ಉಪಕರಣಗಳ ಅಭಿವೃದ್ಧಿಯಲ್ಲಿ ನಿರತರಾಗಿದ್ದರು. ಒಂದೊಮ್ಮೆ ಅವರು ತಮಗೆ ಬೇಕಾದ ರೀತಿಯ ವೈಶಿಷ್ಠ್ಯವುಳ್ಳ ಸಾಧನಗಳನ್ನು ಪಡೆದ ಮೇಲೆ 2016 ರಲ್ಲಿ ಅಮೆರಿಕಕ್ಕೆ ಮರಳಿ ತಮ್ಮ ಕೆಲಸವಾದ ನೆಟ್ವರ್ಕಿಂಗ್ ಸೇವೆ ನೀಡುವುದನ್ನು ಮೊದಲಿಗೆ ಸ್ಟಾರ್ಟಪ್ ಗಳೊಂದಿಗೆ ಆರಂಭಿಸಿದರು.

ಇದನ್ನೂ ಓದಿ: Cars24 Employees: ಬರೋಬ್ಬರಿ 600 ಉದ್ಯೋಗಿಗಳಿಗೆ ನಡೀರಿ ಮನೆಗೆ ಎಂದು ಶಾಕ್ ನೀಡಿದ ಸ್ಟಾರ್ಟ್ಅಪ್!

ಏಕೆಂದರೆ, ಇಂತಹ ಸೇವೆಗಳನ್ನು ಈಗಾಗಲೇ ಅಭಿವೃದ್ಧಿಯಾಗಿರುವ ಕಂಪನಿಗಳಿಗಿಂತ ಸ್ಟಾರ್ಟಪ್ ಗಳಿಗೆ ನೀಡುವುದು ಸುಲಭವಾಗಿರುತ್ತದೆ. ಹೀಗೆ ವಾರಾಣಸಿ ಸಹೋದರರು ತಮ್ಮ ಪಥದಲ್ಲಿ ನಿರಂತರವಾಗಿ ಸಾಗುತ್ತಿದ್ದು ತಮ್ಮ ಕನಸನ್ನು ಆದಷ್ಟು ಬೇಗನೆ ನನಸು ಮಾಡಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ.
Published by:Ashwini Prabhu
First published: