Unicorns of India: ಭಾರತದಲ್ಲಿ ಅತ್ಯಧಿಕ ಉದ್ಯೋಗ ಸೃಷ್ಟಿಸಿದ ಕಂಪನಿಗಳಿವು!
ಜಗತ್ತಿನ ಎರಡನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ಹಾಗೂ ನಿರುದ್ಯೋಗದ ಸಮಸ್ಯೆಯೊಂದಿಗೆ ಹೋರಾಡುತ್ತಿರುವ ಭಾರತದಂತಹ ದೇಶಕ್ಕೆ ಯುನಿಕಾರ್ನುಗಳು ಒಂದು ಅದ್ಭುತ ಪರಿಹಾರವೆಂದರೂ ತಪ್ಪಾಗಲಾರದು.
ಈಗ ತಂತ್ರಜ್ಞಾನ ಸಾಕಷ್ಟು ಪ್ರಭಾವಶಾಲಿಯಾಗುತ್ತಿದೆ. ತಂತ್ರಜ್ಞಾನದಲ್ಲಿ ಇಂದು ಹಲವು ಶಕ್ತಿಶಾಲಿ ವೈಶಿಷ್ಠ್ಯಗಳನ್ನು ಕಾಣಬಹುದಾಗಿದ್ದು ಹಲವು ಅನನ್ಯ ಅಥವಾ ಇನ್ನೊವೇಟಿವ್ ಆಲೋಚನೆಗಳ (Innovative Ideas) ತಳಹದಿಯಲ್ಲಿ ಹಲವು ಸ್ಟಾರ್ಟಪ್ಗಳು (Startup) ಹುಟ್ಟಿಕೊಳ್ಳುತ್ತಿವೆ. ಒಂದು ಬಿಲಿಯನ್ ಯುಎಸ್ ಡಾಲರ್ (US Dollar) ಮೌಲ್ಯದ ವ್ಯಾಪಾರ-ವಹಿವಾಟುಗಳುಳ್ಳ ಯುನಿಕಾರ್ನ್ ಗಳು (Unicorn) ಈ ಹಿಂದೆ ದೊಡ್ಡ ಅಥವಾ ಅತ್ಯಂತ ಮುಂದುವರೆದ ರಾಷ್ಟ್ರಗಳಲ್ಲೇ ಹೆಚ್ಚು ಸೃಷ್ಟಿಯಾಗುತ್ತವೆ ಎಂಬ ಕಲ್ಪನೆಯಿತ್ತು. ಆದರೆ ಇಂದು ಭಾರತ (Indian Startups) ಪ್ರಗತಿ ಹಾಗೂ ಅಭಿವೃದ್ಧಿಗಳ ವಿಷಯದಲ್ಲಿ ಹಿಂದೆಂದಿಗಿಂತಲೂ ವೇಗವಾದ ಗತಿಯಲ್ಲಿ ಬೆಳೆಯುತ್ತಿದೆ. ಅದಕ್ಕೆ ಜ್ವಲಂತ ಸಾಕ್ಷಿಯೆಂದರೆ ಕಳೆದ ಕೆಲ ಸಮಯಗಳಿಂದ ಭಾರತದಂತಹ ರಾಷ್ಟ್ರದಲ್ಲಿ ಹೆಚ್ಚು ಹೆಚ್ಚು ಯುನಿಕಾರ್ನ್ ಸಂಸ್ಥೆಗಳು (Indian Unicorns) ಹುಟ್ಟುತ್ತಿರುವುದಾಗಿದೆ. ಈಗಾಗಲೇ ಭಾರತದಲ್ಲಿ ನೂರು ಯುನಿಕಾರ್ನ್ಗಳಿದ್ದು ಮುಂಬರುವ ಸಮಯದಲ್ಲಿ ಈ ಸಂಖ್ಯೆ ಮತ್ತಷ್ಟು ಏರಲಿದೆ ಎನ್ನಲಾಗಿದೆ.
ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ದೇಶ
ಯುನಿಕಾರ್ನ್ಗಳಿಂದ ದೇಶದ ಆರ್ಥಿಕತೆಗೆ ಹೆಚ್ಚಿನ ಮೆರುಗು ಬರುವುದಲ್ಲದೆ ಇವುಗಳಿಂದ ಲಕ್ಷಾಂತರ ಸಂಖ್ಯೆಗಳಲ್ಲಿ ಉದ್ಯೋಗಗಳೂ ಸಹ ಸೃಷ್ಟಿಯಾಗುತ್ತವೆ. ಜಗತ್ತಿನ ಎರಡನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ಹಾಗೂ ನಿರುದ್ಯೋಗದ ಸಮಸ್ಯೆಯೊಂದಿಗೆ ಹೋರಾಡುತ್ತಿರುವ ಭಾರತದಂತಹ ದೇಶಕ್ಕೆ ಯುನಿಕಾರ್ನುಗಳು ಒಂದು ಅದ್ಭುತ ಪರಿಹಾರವೆಂದರೂ ತಪ್ಪಾಗಲಾರದು.
ಯಾವ ಅಂಶಗಳಿಂದ ಸಾಧ್ಯವಾಯ್ತು? ಪ್ರಸ್ತುತ ಲಕ್ಷಾಂತರ ಜನರಿಗೆ ಉದ್ಯೋಗಗಳನ್ನು ನೀಡುವುದಕ್ಕಾಗಿ ಭಾರತವು ತನ್ನ 100 ಯುನಿಕಾರ್ನ್ಗಳಿಗೆ ಶಕ್ತಿ ಸಂಚಲನವನ್ನು ಹೆಚ್ಚಿಸಿವೆ. ಮೂಲಭೂತ ಸೌಕರ್ಯಗಳ ಬೆಳವಣಿಗೆಗಳು ಅದರಲ್ಲೂ ವಿಶೇಷವಾಗಿ, ಕಡಿಮೆ-ವೆಚ್ಚದ ಡೇಟಾ ಮತ್ತು ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (UPI) - ಇದನ್ನು ಸಾಧ್ಯವಾಗಿಸುವಲ್ಲಿ ವಹಿಸಿದ ಪಾತ್ರವನ್ನು ಗುರುತಿಸುವುದು ಮುಖ್ಯವಾಗಿದೆ.
ಭಾರತದ ಯುನಿಕಾರ್ನ್ಗಳ ವಿವರ ಇನ್ನು ಅಂಕಿ-ಅಂಶಗಳ ವಿಚಾರಕ್ಕೆ ಬಂದರೆ, ಭಾರತದ 100 ಯುನಿಕಾರ್ನ್ಗಳು ಇಲ್ಲಿಯವರೆಗೆ ಸರಾಸರಿ 3,489 ಪೂರ್ಣ ಸಮಯದ ಉದ್ಯೋಗಗಳನ್ನು ಸೃಷ್ಟಿಸಿವೆ ಎನ್ನಲಾಗಿದೆ. 1,000 ಉದ್ಯೋಗಗಳ ಸೃಷ್ಟಿಯ ಶ್ರೇಣಿಯಲ್ಲಿ ನೂರು ಯುನಿಕಾರ್ನುಗಳ ಪೈಕಿ 34 ಯುನಿಕಾರ್ನ್ಗಳು 100 ರಿಂದ 854 ರವರೆಗೆ ಉದ್ಯೋಗಗಳನ್ನು ಸೃಷ್ಟಿಸಿವೆ. ಇನ್ನುಳಿದಂತೆ 66 ಯುನಿಕಾರ್ನುಗಳು ಒಟ್ಟು 2.84 ಮಿಲಿಯನ್ ಉದ್ಯೋಗಗಳಲ್ಲಿ 2.83 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಕಂಡುಬಂದಿದೆ. ಈ
66 ಯುನಿಕಾರ್ನ್ಗಳಲ್ಲಿ, ಮೊದಲ ಅಗ್ರ 10 ಯುನಿಕಾರ್ನ್ಗಳು ಚಾಲ್ತಿಯಲ್ಲಿರುವ 2.58 ಮಿಲಿಯನ್ ಉದ್ಯೋಗಗಳ ಪೈಕಿ ಸಿಂಹಪಾಲನ್ನು ಹೊಂದಿವೆ ಎನ್ನಲಾಗಿದೆ ಅಂದರೆ ಒಟ್ಟಾರೆ ಉದ್ಯೋಗಗಳ ಪ್ರಮಾಣದ ಒಟ್ಟು 90.5 ಪ್ರತಿಶತವನ್ನು ಹೊಂದಿವೆ ಎಂದು ತಿಳಿದುಬಂದಿದೆ.
ಉದ್ಯೋಗ ಸೃಷ್ಟಿಯ ಅಗ್ರ 5 ಯುನಿಕಾರ್ನ್ ಯುನಿಕಾರ್ನ್ ಆಗಿರುವ ಓಲಾ ಸಂಸ್ಥೆಯು ಕಳೆದ ಕೆಲ ಸಮಯದಲ್ಲಿ ಭಾರಿ ಪ್ರಗತಿ ಸಾಧಿಸಿದ್ದು ಅದು ತನ್ನ ಒಟ್ಟಾರೆ ಕಾರ್ಯಾಚರಣೆಯ ವ್ಯವಸ್ಥೆಯಲ್ಲಿ 1.5 ಮಿಲಿಯನ್ ಚಾಲಕರು ಮತ್ತು ಅದರ ಸಿಬ್ಬಂದಿಗಳಾಗಿ 12,000 ಉದ್ಯೋಗಿಗಳನ್ನು ಹೊಂದಿದೆ. ಈ ಮೂಲಕ ಅದು ಈವರೆಗೆ ರಚಿತವಾಗಿರುವ ಒಟ್ಟು ಉದ್ಯೋಗಗಳ ಪೈಕಿ 53 ಪ್ರತಿಶತವನ್ನು ಹೊಂದಿದೆ.
ಇದರ ನಂತರ ಜೊಮಾಟೊ ತನ್ನ ಸ್ಥಾನ ಪಡೆದುಕೊಂಡಿದೆ. ಇದು 3.5 ಲಕ್ಷ ವಿತರಣಾ ಪಾಲುದಾರರನ್ನು ಮತ್ತು 4,259 ಉದ್ಯೋಗಿಗಳನ್ನು ಹೊಂದಿದೆ. ಈ ಮೂಲಕ ಜೊಮಾಟೊ ಒಟ್ಟು ಉದ್ಯೋಗ ಸೃಷ್ಟಿಯ 12.4 ಪ್ರತಿಶತವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗಿದೆ.
ಫ್ಲಿಫ್ಕಾರ್ಟ್, ಸ್ವಿಗ್ಗಿ ಎಷ್ಟನೇ ಸ್ಥಾನ ಪಡೆದಿವೆ? ತದನಂತರದ ಸ್ಥಾನ ಫ್ಲಿಫ್ಕಾರ್ಟ್ ಪಡೆದಿದ್ದು ಇದು 7.85 ಪ್ರತಿಶತದಷ್ಟು ಉದ್ಯೋಗಗಳ ಸೃಷ್ಟಿಯ ಪಾಲನ್ನು ಹೊಂದಿದ್ದರೆ ಆನಂತರ ಬರುವ ಸ್ವಿಗ್ಗಿ 7.19 ಪ್ರತಿಶತದಷ್ಟು ತನ್ನ ಪಾಲನ್ನು ಹೊಂದಿದೆ ಎನ್ನಲಾಗಿದೆ. ಈ ಟೇಬಲ್ ನಲ್ಲಿ ಅಗ್ರ ಐದು ಸ್ಥಾನಗಳ ಪೈಕಿ ಕೊನೆಯದಾಗಿ ದೆಹಲಿ ಸ್ಥಾನ ಪಡೆದಿದ್ದು ಇದು 3.10 ಪ್ರತಿಶತದಷ್ಟು ಉದ್ಯೋಗ ಸೃಷ್ಟಿ ಪಾಲನ್ನು ತನ್ನದಾಗಿಸಿಕೊಂಡಿದೆ. ಒಟ್ಟಾರೆಯಾಗಿ ಈ ಮೇಲಿನ ಐದು ಯುನಿಕಾರ್ನುಗಳು ಹೆಚ್ಚು ಉದ್ಯೋಗ ಸೃಷ್ಟಿಯ ಅಗ್ರ 5 ಯುನಿಕಾರ್ನ್ಗಳಾಗಿ ಗುರುತಿಸಿಕೊಂಡಿವೆ.
ಆದರೆ ಈ ಎಲ್ಲ ಯುನಿಕಾರ್ನ್ಗಳು ಈ ಮಟ್ಟದ ಯಶಸ್ಸನ್ನು ಸಾಧಿಸಲು ಸಹಾಯ ಮಾಡಿರುವ ಹಲವು ಪ್ರಮುಖ ಅಂಶಗಳ ಪೈಕಿ ಪಿಎಂ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರದ ಮೆದುಳಿನ ಕೂಸು ಎನ್ನಲಾದ ಹಾಗೂ 2016 ರ ಉಡಾವಣೆಗೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಎಂಬುದಂತೂ ಸುಳ್ಳಲ್ಲ.
Published by:Ashwini Prabhu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ