Export Market: ಭಾರತಕ್ಕೆ ಸಿಹಿ ಕೊಡುತ್ತಾ ಕ್ರಿಸ್ಮಸ್​? ಈ ವಿಚಾರದಲ್ಲಿ ಚೀನಾ ಹಿಂದಿಕ್ಕಿದ ಇಂಡಿಯಾ!

. ಅಮೇರಿಕಾಕ್ಕೆ ಕ್ರಿಸ್ಮಸ್ ಅಲಂಕಾರಿಕ ವಸ್ತುಗಳು (Christmas decorations) ಹಾಗೂ ಟೀ ಶರ್ಟ್‌ಗಳ ಅಗ್ರ ಐದು ಪೂರೈಕೆದಾರರಲ್ಲಿ ಭಾರತ (India) ಕೂಡ ಸೇರಿದೆ. ಯುಎಸ್ ಕಸ್ಟಮ್ಸ್ ಮಾಹಿತಿಯಂತೆ ಅಮೆರಿಕಕ್ಕೆ ಹಬ್ಬದ ಸರಕುಗಳು ಮತ್ತು ಪರಿಕರಗಳ ಸಮುದ್ರದ ಮೂಲಕ ಸಾಗಣೆಗಳು ಕಳೆದ ತಿಂಗಳು $20 ಮಿಲಿಯನ್‌ಗೆ ತಲುಪಿದವು, ಇದು ವರ್ಷದ ಹಿಂದಿನ ಅವಧಿಗಿಂತ ಸುಮಾರು ಮೂರು ಪಟ್ಟು ಮೌಲ್ಯವನ್ನು ತಲುಪಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಭಾರತ ಕೂಡ ರಫ್ತು ಮಾರುಕಟ್ಟೆಯಲ್ಲಿ (Export market) ಮುನ್ನಡೆ ಸಾಧಿಸುತ್ತಿದ್ದು ಇನ್ನೊಂದು ಚೀನಾ (China) ಆಗುವ ಸಾಮರ್ಥ್ಯವನ್ನು ದೇಶವು ಹೊಂದಿದೆ ಎಂಬುದಾಗಿ ಅನೇಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮೇರಿಕಾಕ್ಕೆ ಕ್ರಿಸ್ಮಸ್ ಅಲಂಕಾರಿಕ ವಸ್ತುಗಳು (Christmas decorations) ಹಾಗೂ ಟೀ ಶರ್ಟ್‌ಗಳ ಅಗ್ರ ಐದು ಪೂರೈಕೆದಾರರಲ್ಲಿ ಭಾರತ (India) ಕೂಡ ಸೇರಿದೆ. ಯುಎಸ್ ಕಸ್ಟಮ್ಸ್ ಮಾಹಿತಿಯಂತೆ ಅಮೆರಿಕಕ್ಕೆ ಹಬ್ಬದ ಸರಕುಗಳು ಮತ್ತು ಪರಿಕರಗಳ ಸಮುದ್ರದ ಮೂಲಕ ಸಾಗಣೆಗಳು ಕಳೆದ ತಿಂಗಳು $20 ಮಿಲಿಯನ್‌ಗೆ ತಲುಪಿದವು, ಇದು ವರ್ಷದ ಹಿಂದಿನ ಅವಧಿಗಿಂತ ಸುಮಾರು ಮೂರು ಪಟ್ಟು ಮೌಲ್ಯವನ್ನು ತಲುಪಿದೆ.

ಈ ಪ್ರಕ್ರಿಯೆಯಲ್ಲಿ ಚೀನಾದ ಕಟ್ಟುನಿಟ್ಟಿನ ಕೋವಿಡ್-ಶೂನ್ಯ ನೀತಿಯ ಕಾರಣದಿಂದ ಅಧಿಕವಾಗುತ್ತಿರುವ ವೆಚ್ಚಗಳು ಹಾಗೂ ಅಡೆತಡೆಗಳ ಮುಖಾಂತರ ಖರೀದಿದಾರರು ಪೂರೈಕೆ ಮೂಲಗಳನ್ನು ವೈವಿಧ್ಯಗೊಳಿಸುವುದರಿಂದ ಭಾರತವು ಫಿಲಿಪೈನ್ಸ್‌ಗಿಂತ ಸ್ಪಷ್ಟ ಮುನ್ನಡೆ ಸಾಧಿಸಿತು.

ಆರಂಭಿಕ ಕ್ರಿಸ್ಮಸ್ ಉಡುಗೊರೆಯ ಅಂತಹ ಫಲಾನುಭವಿಗಳಲ್ಲಿ ಒಬ್ಬರಾದ ಅಮಿತ್ ಮಲ್ಹೋತ್ರಾ, ಅವರ ಏಷ್ಯನ್ ಹ್ಯಾಂಡಿಕ್ರಾಫ್ಟ್ಸ್ ಪ್ರೈ ಸಂಸ್ಥೆಯು ಜಾಗತಿಕ ಬ್ರ್ಯಾಂಡ್‌ಗಳಾದ ವಾಲ್ಟ್ ಡಿಸ್ನಿ ಕಂ., ಲಂಡನ್‌ನ ಹ್ಯಾರೋಡ್ಸ್, ಟಾರ್ಗೆಟ್ ಕಾರ್ಪೊರೇಷನ್ ಮತ್ತು ಡಿಲ್ಲಾರ್ಡ್ಸ್ ಇಂಕ್‌ಗೆ ಅಲಂಕಾರಿಕ ವಸ್ತುಗಳನ್ನು ಪೂರೈಸುತ್ತದೆ. ಒಂದು ವರ್ಷದ ಹಿಂದಿನ ಆರ್ಡರ್‌ಗಳಿಗೆ ಹೋಲಿಸಿದರೆ 20% ಏರಿಕೆಯನ್ನು ದೃಢಪಡಿಸಿದ್ದು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದಾರೆ

ಕ್ರಿಸ್ಮಸ್ ಅಲಂಕಾರಿಕ ವಸ್ತುಗಳ ರಫ್ತಿನಲ್ಲಿ ಭಾರತದ್ದೇ ಮೇಲುಗೈ
ಈ ವರ್ಷ 3.2 ಮಿಲಿಯನ್ ಯುನಿಟ್ ಕ್ರಿಸ್‌ಮಸ್ ಅಲಂಕಾರಿಕ ಸಾಮಾಗ್ರಿಗಳನ್ನು ರಫ್ತು ಮಾಡಿದ್ದು ಕಳೆದ ವರ್ಷ ಈ ಪ್ರಮಾಣ 2.5 ಮಿಲಿಯನ್ ಇತ್ತು ಎಂದು ಸ್ವತಃ ಅಮಿತ್ ತಿಳಿಸಿದ್ದಾರೆ. ಕ್ರಿಸ್ಮಸ್ ಅಲಂಕಾರಿಕ ವಸ್ತುಗಳ ರಫ್ತಿನಲ್ಲಿ ಚೀನಾ ಪಾತ್ರ ಹಿರಿದಾದುದಾದರೂ ಇದೇ ಮೊದಲ ಬಾರಿಗೆ ಅನೇಕ ಖರೀದಿದಾರರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ಅಮಿತ್ ತಿಳಿಸಿದ್ದಾರೆ.

ಇದನ್ನೂ ಓದಿ: Explained: ಸ್ಟಾರ್‌ಬಕ್ಸ್‌ ನೂತನ ಸಿಇಒ ಲಕ್ಷಣ್‌ ನರಸಿಂಹನ್‌ ಯಾರು? ಬಯಲಾಯ್ತು ಇಂಟರೆಸ್ಟಿಂಗ್ ಮಾಹಿತಿ

ಇನ್ನು ಈ ಪ್ರವೃತ್ತಿ ಬರಿಯ ಕ್ರಿಸ್ಮಸ್ ಸರಕುಗಳಿಗೆ ಸೀಮಿತವಾಗಿಲ್ಲ, ಏಷ್ಯಾದ ಮೂರನೇ-ಅತಿದೊಡ್ಡ ಆರ್ಥಿಕತೆಯ ರಫ್ತುದಾರರಾಗಿರುವ ಇವರು ಅಮೆರಿಕಾ ಮತ್ತು ಯುರೋಪ್ ಎರಡರಿಂದಲೂ ಆರ್ಡರ್‌ಗಳಲ್ಲಿ ಗಮನಾರ್ಹ ಹೆಚ್ಚಳಕ್ಕೆ ಸಾಕ್ಷಿಯಾಗಿದ್ದಾರೆ. ಕಡಿಮೆ ವೆಚ್ಚದ ಕಾರ್ಮಿಕ ವಲಯಗಳಾದ ಉಡುಪು, ಕರಕುಶಲ ಹಾಗೂ ಎಲೆಕ್ಟ್ರಾನಿಕ್ಸ್ ಅಲ್ಲದ ಗ್ರಾಹಕ ಸರಕುಗಳಲ್ಲಿ ಇದು ಕಂಡುಬರುತ್ತದೆ.

ಅವಕಾಶ ಬಳಸಿಕೊಂಡಿರುವ ಭಾರತ
ಸಾಂಕ್ರಾಮಿಕ ರೋಗವು ಚೀನಾದಲ್ಲಿ ಹೆಚ್ಚುತ್ತಿರುವುದರಿಂದ ದೇಶವು ಕಟ್ಟುನಿಟ್ಟಾದ ಲಾಕ್‌ಡೌನ್ ನಿಯಮಗಳನ್ನು ಅಳವಡಿಸಿಕೊಂಡಿದೆ, ಹೀಗಾಗಿ ಭಾರತ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿದೆ. ಮಾರ್ಚ್‌ಗೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ 420 ಶತಕೋಟಿ ಡಾಲರ್‌ಗೆ ತಲುಪಿದ ಭಾರತದ ಸರಕು ರಫ್ತುಗಳು, ಏಪ್ರಿಲ್‌ನಿಂದ ಆರಂಭಗೊಂಡು ಐದು ತಿಂಗಳಲ್ಲಿ ಅದರ ಅರ್ಧದಷ್ಟು ಮಟ್ಟವನ್ನು ಈಗಾಗಲೇ ತಲುಪಿದೆ.

ಆರ್ಥಿಕ ವಿಶ್ಲೇಷಕರು ಇದನ್ನು ಉಪ-ಖಂಡದ ಅತಿದೊಡ್ಡ ಆರ್ಥಿಕತೆಗೆ ಉತ್ತಮ ಆರಂಭದ ಹಂತವಾಗಿ ವೀಕ್ಷಿಸುತ್ತಿದ್ದು, ಇದು ಪ್ರಸ್ತುತ ವಿಶ್ವದ ಅತ್ಯಂತ ವೇಗದಲ್ಲಿ ಪ್ರಗತಿಯನ್ನು ಕಾಣುತ್ತಿದೆ. ತೈವಾನ್ ಯುರೋಪಿಯನ್ ಯೂನಿಯನ್, ಅಮೆರಿಕಾ, ಜಪಾನ್ ಹೀಗೆ ಎಲ್ಲಾ ದೇಶಗಳು ಸುಸ್ಥಿರ ಜಾಗತಿಕ ವ್ಯಾಪಾರವನ್ನು ಉತ್ತೇಜಿಸಲು ಭಾರತಕ್ಕೆ ಅವಕಾಶ ನೀಡಲು ಸಿದ್ಧರಾಗಿದ್ದಾರೆ ಎಂದು ಹಿನ್ರಿಚ್ ಫೌಂಡೇಶನ್‌ನ ಸಂಶೋಧನಾ ಸಹೋದ್ಯೋಗಿ ಅಲೆಕ್ಸ್ ಕ್ಯಾಪ್ರಿ ತಿಳಿಸಿದ್ದಾರೆ.

ಮಾರ್ಚ್ ಅಂತ್ಯದ ವರ್ಷದಲ್ಲಿ ಭಾರತದ ಕ್ರಿಸ್‌ಮಸ್ ಅಲಂಕಾರ ರಫ್ತುಗಳು 2020 ರ ಆರ್ಥಿಕ ವರ್ಷದಿಂದ 54% ಕ್ಕಿಂತ ಹೆಚ್ಚಿವೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ, ಅದೇ ಅವಧಿಯಲ್ಲಿ ಕರಕುಶಲ ರಫ್ತುಗಳು ಸುಮಾರು 32% ರಷ್ಟು ಏರಿಕೆಯನ್ನು ಕಂಡಿವೆ.

ಹೂಡಿಕೆ ವೇಗಗೊಳಿಸಲು ಭಾರತಕ್ಕೆ ಸಹಕಾರಿಯಾಗಿರುವ ಅಂಶಗಳು
ಸಾಂಕ್ರಾಮಿಕ ನಂತರದ ಚೇತರಿಕೆಯ ಜೊತೆಗೆ ಜಾಗತಿಕ ಆರ್ಥಿಕತೆಯಿಂದ ಚೀನಾದ ನಿರಂತರ ಪ್ರತ್ಯೇಕತೆಯು ದೀರ್ಘಾವಧಿಯ ಸ್ಪರ್ಧಾತ್ಮಕತೆಯಲ್ಲಿ ತನ್ನ ಹೂಡಿಕೆಯನ್ನು ವೇಗಗೊಳಿಸಲು ಮತ್ತು 'ಗೆಲ್ಲಬಹುದಾದ' ಕ್ಷೇತ್ರಗಳಿಗೆ ಆದ್ಯತೆ ನೀಡಲು ಭಾರತಕ್ಕೆ ಅವಕಾಶವನ್ನು ಒದಗಿಸುತ್ತದೆ ಎಂದು ಕೆರ್ನಿಯಲ್ಲಿನ ಕಾರ್ಯಾಚರಣೆ ಮತ್ತು ಕಾರ್ಯಕ್ಷಮತೆ ಪಾಲುದಾರ ಸಿದ್ಧಾರ್ಥ್ ಜೈನ್ ಅಭಿಪ್ರಾಯವಾಗಿದೆ.

ಮಧ್ಯಮ ಮತ್ತು ದೊಡ್ಡ-ರಫ್ತು ಸಂಸ್ಥೆಗಳು ಕಳೆದ ಆರ್ಥಿಕ ವರ್ಷದಲ್ಲಿ ತಮ್ಮ ಆರ್ಡರ್ ದಾಖಲೆಗಳಲ್ಲಿ 30%-40% ರಷ್ಟು ಏರಿಕೆಯನ್ನು ಕಂಡಿವೆ ಮತ್ತು ಮಾರ್ಚ್ 2023 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಏರಿಕೆಯು ಹೆಚ್ಚು ಗೋಚರಿಸಲಿದೆ.

ಇದನ್ನೂ ಓದಿ:  Credit Score: ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಬೇಕೆ? ಕೂಡಲೇ ಈ 4 ಅಭ್ಯಾಸಗಳನ್ನು ನಿಲ್ಲಿಸಿ

ಸೂಪರ್‌ಡ್ರಿ, ರಾಲ್ಫ್ ಲಾರೆನ್, ಟಿಂಬರ್‌ಲ್ಯಾಂಡ್ ಮತ್ತು ನಪಾಪಿಜ್ರಿ ಸೇರಿದಂತೆ ಜಾಗತಿಕ ಬ್ರ್ಯಾಂಡ್‌ಗಳಿಗೆ ಉಡುಪುಗಳನ್ನು ರಫ್ತು ಮಾಡುವ ಮ್ಯಾಟ್ರಿಕ್ಸ್ ಕ್ಲೋಥಿಂಗ್, ಕೋವಿಡ್-ಪೂರ್ವ ವರ್ಷಕ್ಕೆ ಹೋಲಿಸಿದರೆ ಕಳೆದ ಆರ್ಥಿಕ ವರ್ಷದಲ್ಲಿ 45% ರಷ್ಟು ಆರ್ಡರ್‌ಗಳು ಏರಿಕೆ ಕಂಡಿದೆ.
Published by:Ashwini Prabhu
First published: