Olympics: 2023ರಲ್ಲಿ IOC Session ನಿರ್ವಹಿಸುವ ಹೊಣೆ ಭಾರತದ ಹೆಗಲಿಗೆ! ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತದಲ್ಲಿ ಈ ಹಿಂದೆ 1983ರಲ್ಲಿ ಮೊದಲ ಬಾರಿಗೆ ಈ ಪ್ರತಿಷ್ಠಿತ IOC ಸಭೆಯನ್ನು ಆಯೋಜಿಸಿಜಿತ್ತು. ಅದರ ಬಳಿಕ ಭಾರತಕ್ಕೆ ಆ ಅವಕಾಶ ಸಿಕ್ಕಿರಲಿಲ್ಲ ಇದೀಗ ಮತ್ತೊಮ್ಮೆ ಅವಕಾಶ ಭಾರತದ ಪಾಲಿಗೆ ಒದಗಿ ಬಂದಿದೆ. 

ಚಿತ್ರಕೃಪೆ: ANI

ಚಿತ್ರಕೃಪೆ: ANI

  • Share this:
ನವದೆಹಲಿ: ಭಾರತದಲ್ಲಿ (India) ಒಲಿಪಿಂಕ್ಸ್ (Olympics) ಕ್ರೀಡಾಕೂಟ (Game) ನಡೆಯಬೇಕು ಎನ್ನುವುದು ಕ್ರೀಡಾಭಿಮಾನಿಗಳ ಕನಸು. ಆದ್ರೆ ಆ ಕನಸು ನನಸಾಗೋ ಕಾಲ ದೂರವೇನಿಲ್ಲ. ಯಾಕೆಂದರೆ ಒಲಿಪಿಂಕ್ಸ್ ಕ್ರೀಡೆಗೆ ಸಂಬಂಧಿಸಿದಂತೆ ಭಾರತ ಮಹತ್ವದ ಸಾಧನೆ ಮಾಡಿದೆ. ಮುಂದಿನ ವರ್ಷ ಅಂದರೆ 2023ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಅಧಿವೇಶನ (Session) ನಡೆಸುವ ಅವಕಾಶ ಭಾರತಕ್ಕೆ ಸಿಕ್ಕಿದೆ. ಚೀನಾದ (China) ಬೀಜಿಂಗ್‌ನಲ್ಲಿ ನಡೆಯುತ್ತಿರುವ 139 ನೇ ಐಒಸಿ ಅಧಿವೇಶನದಲ್ಲಿ ಭಾರತವು 2023ರ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಧಿವೇಶನವನ್ನು ಆಯೋಜಿಸುವ ಬಿಡ್ (Bid) ಅನ್ನು ಅವಿರೋಧವಾಗಿ ಗೆದ್ದಿದೆ. ಹೀಗಾಗಿ 2023ರ ಐಒಸಿ ಸಮ್ಮೇಳನ ಮುಂಬೈನಲ್ಲಿ ನಡೆಯುವುದು ಪಕ್ಕಾ ಆಗಿದೆ.

 ಭಾರತದ ಪರ ಶೇಕಡಾ 99ರಷ್ಟು ಮತ

2023 ರಲ್ಲಿ IOC ಅಧಿವೇಶನವನ್ನು ಆಯೋಜಿಸಲು ಅದರ ಉಮೇದುವಾರಿಕೆಯನ್ನು 75 ಸದಸ್ಯರು ಅನುಮೋದಿಸುವುದರೊಂದಿಗೆ, ಪ್ರಕ್ರಿಯೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಂದ ಭಾರತ ತನ್ನ ಬಿಡ್‌ನ ಪರವಾಗಿ ಐತಿಹಾಸಿಕ 99%ರಷ್ಟು ಮತಗಳನ್ನು ಪಡೆಯಿತು..

 4 ದಶಕದ ಬಳಿಕ ಭಾರತಕ್ಕೆ ಮತ್ತೊಮ್ಮೆ ಜವಾಬ್ದಾರಿ

ಭಾರತದಲ್ಲಿ ಈ ಹಿಂದೆ 1983ರಲ್ಲಿ ಮೊದಲ ಬಾರಿಗೆ ಈ ಪ್ರತಿಷ್ಠಿತ IOC ಸಭೆಯನ್ನು ಆಯೋಜಿಸಿಜಿತ್ತು. ಅದರ ಬಳಿಕ ಭಾರತಕ್ಕೆ ಆ ಅವಕಾಶ ಸಿಕ್ಕಿರಲಿಲ್ಲ ಇದೀಗ ಮತ್ತೊಮ್ಮೆ ಅವಕಾಶ ಭಾರತದ ಪಾಲಿಗೆ ಒದಗಿ ಬಂದಿದೆ.





ಇದನ್ನೂ ಓದಿ: Paytm: ಯಾರಿಗೆ ಸಿಗುತ್ತೆ 5 ಲಕ್ಷ ಸಾಲ? ಹೀಗೆ ಮಾಡಿದ್ರೆ ನೀವೂ ಪಡೆಯಬಹುದು ಲೋನ್

IOC ಅಧಿವೇಶನವು 101 ಮತದಾನದ ಸದಸ್ಯರು ಮತ್ತು 45 ಸದಸ್ಯರನ್ನು ಒಳಗೊಂಡಿರುವ IOC ಯ ಸದಸ್ಯರ ವಾರ್ಷಿಕ ಸಭೆಯಾಗಿದೆ. ಇದು ಒಲಂಪಿಕ್ ಚಾರ್ಟರ್ ಅಳವಡಿಕೆ ಅಥವಾ ತಿದ್ದುಪಡಿ, IOC ಸದಸ್ಯರು ಮತ್ತು ಪದಾಧಿಕಾರಿಗಳ ಆಯ್ಕೆ ಮತ್ತು ಒಲಿಂಪಿಕ್ಸ್ ಆತಿಥೇಯ ನಗರದ ಚುನಾವಣೆ ಸೇರಿದಂತೆ ಜಾಗತಿಕ ಒಲಿಂಪಿಕ್ಸ್ ಕ್ರೀಡಾಕೂಟದ ಪ್ರಮುಖ ಚಟುವಟಿಕೆಗಳನ್ನು ಚರ್ಚಿಸುತ್ತದೆ ಮತ್ತು ನಿರ್ಧರಿಸುತ್ತದೆ.

 “ಇದು ಭಾರತದ ಪಾಲಿಗೆ ಹೆಮ್ಮೆಯ ವಿಚಾರ”

2023 ರಲ್ಲಿ ಮುಂಬೈನಲ್ಲಿ ಐಒಸಿ ಅಧಿವೇಶನವನ್ನು ಆಯೋಜಿಸುವ ಹಕ್ಕನ್ನು ಭಾರತಕ್ಕೆ ನೀಡುವ ಇಂದಿನ ಅಗಾಧ ನಿರ್ಧಾರವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯೆ ನೀತಾ ಅಂಬಾನಿ ಅವರು "ಭಾರತದ ಒಲಿಂಪಿಕ್ ಆಕಾಂಕ್ಷೆಗಳಿಗೆ ಮಹತ್ವದ ಬೆಳವಣಿಗೆ ಮತ್ತು ಹೆಮ್ಮೆಯ ವಿಷಯವಾಗಿದೆ" ಎಂದು ಬಣ್ಣಿಸಿದ್ದಾರೆ.

“ಭಾರತದ ಕ್ರೀಡೆಯಲ್ಲಿ ಹೊಸ ಯುಗದ ಆರಂಭ”

“40 ವರ್ಷಗಳ ಕಾಯುವಿಕೆಯ ನಂತರ ಒಲಿಂಪಿಕ್ ಆಂದೋಲನವು ಭಾರತಕ್ಕೆ ಮರಳಿದೆ! 2023 ರಲ್ಲಿ ಮುಂಬೈನಲ್ಲಿ ಐಒಸಿ ಅಧಿವೇಶನವನ್ನು ಆಯೋಜಿಸುವ ಗೌರವವನ್ನು ಭಾರತಕ್ಕೆ ವಹಿಸಿದ್ದಕ್ಕಾಗಿ ನಾನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ ಎಂದು ನೀತಾ ಅಂಬಾನಿ ಹೇಳಿದ್ದಾರೆ.

"ಇದು ಭಾರತದ ಒಲಂಪಿಕ್ ಮಹತ್ವಾಕಾಂಕ್ಷೆಗೆ ಮಹತ್ವದ ಬೆಳವಣಿಗೆಯಾಗಲಿದೆ ಮತ್ತು ಭಾರತೀಯ ಕ್ರೀಡೆಗೆ ಹೊಸ ಯುಗದ ಆರಂಭಕ್ಕೆ ನಾಂದಿ ಹಾಡಲಿದೆ” ಅಂತ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವುದು ನಮ್ಮ ಕನಸಾಗಿದೆ ಅಂತ ಅವರು ಹೇಳಿದ್ದಾರೆ.

ಇದನ್ನೂ ಓದಿ: Best Investment Scheme: ಕೇವಲ 200 ರೂಪಾಯಿ ಹೂಡಿಕೆಯೊಂದಿಗೆ ನಿಮ್ಮದಾಗಿಸಿಕೊಳ್ಳಿ 14 ಲಕ್ಷ ರೂಪಾಯಿ

ಸಭೆಯಲ್ಲಿ ಗಣ್ಯಾತಿಗಣ್ಯರು ಭಾಗಿ

ಭಾರತದಿಂದ ಐಒಸಿ ಸದಸ್ಯೆಯಾಗಿ ಆಯ್ಕೆಯಾದ ಮೊದಲ ಮಹಿಳೆ ನೀತಾ ಅಂಬಾನಿ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಅಧ್ಯಕ್ಷ ಡಾ. ನರೀಂದರ್ ಬಾತ್ರಾ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು  ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ, ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಜೊತೆಗೆ ನಡೆದ 139 ನೇ IOC ಅಧಿವೇಶನದಲ್ಲಿ ಭಾಗಿಯಾಗಿದ್ದರು.
Published by:Annappa Achari
First published: