ಕೇಂದ್ರ ಸರ್ಕಾರದ ದೇಶದಲ್ಲಿ ಇನ್ನಷ್ಟು ಉದ್ಯೋಗಾವಕಾಶಗಳನ್ನು (Job Creation) ಸೃಷ್ಟಿಸಲು ಹೊಸ ಯೋಜನೆಗಳನ್ನು ಪರಿಚಯಿಸಲು ಯೋಜನೆ ರೂಪಿಸುತ್ತಿದೆ. ಪದವಿಯನ್ನು ಮುಗಿಸಿರದ ಯುವಕ ಯುವತಿಯರಿಗೆ ಹೊಸ ರೀತಿಯ ಉದ್ಯೊಗ ಸೃಷ್ಟಿಗೆ ಕೇಂದ್ರ ಸರ್ಕಾರ ಮುಂದಾಗುವ ಎಲ್ಲ ಲಕ್ಷಣಗಳಿವೆ. ಇತ್ತೀಚಿಗೆ ನಡೆದ ನೀತಿ ಆಯೋಗದ ಕಾರ್ಯಕ್ರಮವೊಂದರಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಮಾತನಾಡಿ, ದೇಶದಲ್ಲಿ ಡ್ರೋನ್ ಸೇವೆ (Drone Service) ವೇಗವಾಗಿ ಹೆಚ್ಚುತ್ತಿದೆ. ಆದ್ದರಿಂದ ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ಸುಮಾರು ಒಂದು ಲಕ್ಷ ಡ್ರೋನ್ ಪೈಲಟ್ಗಳ (Drone Pilots) ಅಗತ್ಯವಿದೆ. ಕೇಂದ್ರ ಸರ್ಕಾರದ 12 ಸಚಿವಾಲಯಗಳು ಪ್ರಸ್ತುತ ದೇಶದಲ್ಲಿ ಡ್ರೋನ್ ಸೇವೆಗಳ ಬೇಡಿಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿವೆ ಎಂದು ನೀತಿ ಆಯೋಗದ (NITI Ayog) ಕಾರ್ಯಕ್ರಮದಲ್ಲಿ ಸಿಂಧಿಯಾ ಹೇಳಿದರು.
ದೇಶದಲ್ಲಿ ಡ್ರೋನ್ ಸೇವೆಯನ್ನು ಹೆಚ್ಚಿಸಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಸಿಂಧಿಯಾ ಹೇಳಿದರು. ಇದಕ್ಕಾಗಿ ಸರ್ಕಾರ ಹಲವು ಕಡೆ ಕೆಲಸ ಮಾಡುತ್ತಿದೆ. ನಾವು ಡ್ರೋನ್ ವಲಯವನ್ನು ಮೂರು ಹಂತಗಳಲ್ಲಿ ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಯಾವುದು ಆ ಮೂರು ಹಂತಗಳು? ಇವುಗಳಲ್ಲಿ ಮೊದಲನೆಯದು ನೀತಿ. ನಾವು ನೀತಿಯನ್ನು ಎಷ್ಟು ವೇಗವಾಗಿ ಅನುಷ್ಠಾನಗೊಳಿಸುತ್ತಿದ್ದೇವೆ ಎಂಬುದನ್ನು ನೀವು ನೋಡುತ್ತಿದ್ದೀರಿ. ಇದು ದೇಶದ ಅಭಿವೃದ್ಧಿಯನ್ನು ಇನ್ನಷ್ಟು ವೇಗವಾಗಿ ಮುಂದಕ್ಕೆ ಒಯ್ಯಲಿದೆ ಎಂದು ಕೇಂದ್ರ ಸಚಿವ ಸಿಂಧಿಯಾ ಭರವಸೆ ವ್ಯಕ್ತಪಡಿಸಿದರು.
ಪಿಎಲ್ಐ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಎರಡನೇ ಚಕ್ರ ಅಥವಾ ಎರಡನೇ ಹಂತವು ಪ್ರೋತ್ಸಾಹಕವಾಗಿದೆ ಎಂದು ಅವರು ಹೇಳಿದರು. ಉತ್ಪಾದನೆ-ಆಧಾರಿತ ಪ್ರೋತ್ಸಾಹ (ಪಿಎಲ್ಐ) ಯೋಜನೆಯು ದೇಶದಲ್ಲಿ ಡ್ರೋನ್ ಉತ್ಪಾದನೆ ಮತ್ತು ಸೇವೆಗಳನ್ನು ಮತ್ತಷ್ಟು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ವಲಯಕ್ಕೆ PLI ಯೋಜನೆಯನ್ನು ಸೆಪ್ಟೆಂಬರ್, 2021 ರಲ್ಲಿ ಪರಿಚಯಿಸಲಾಯಿತು. ಈ PLI ಯೋಜನೆಯು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಅನೇಕ ಹೊಸ ಕಂಪನಿಗಳು ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ತೋರಿಸುತ್ತಿವೆ ಎಂದು ಕೇಂದ್ರ ಸಚಿವ ಸಿಂಧಿಯಾ ತಿಳಿಸಿದರು.
12ನೇ ತೇರ್ಗಡೆಯಾದ ವ್ಯಕ್ತಿಗಳಿಗೆ ಡ್ರೋನ್ ಪೈಲಟ್ ತರಬೇತಿ ಡ್ರೋನ್ ವಲಯದಲ್ಲಿ ಪ್ರಗತಿಯ ಮೂರನೇ ಚಕ್ರವು ದೇಶೀಯ ಬೇಡಿಕೆಯನ್ನು ಸೃಷ್ಟಿಸುವುದು ಎಂದು ಕೇಂದ್ರ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು. ಕೇಂದ್ರ ಸರ್ಕಾರದ 12 ಸಚಿವಾಲಯಗಳು ಡ್ರೋನ್ ಸೇವೆಗಳಿಗೆ ಬೇಡಿಕೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. 12ನೇ ತರಗತಿ ಉತ್ತೀರ್ಣರಾದವರಿಗೆ ಮಾತ್ರ ಡ್ರೋನ್ ಪೈಲಟ್ ತರಬೇತಿ ನೀಡಬಹುದು ಎಂದರು. ಇದಕ್ಕಾಗಿ ಕಾಲೇಜು ಪದವಿ ಅಗತ್ಯವಿಲ್ಲ.
ಉದ್ಯೋಗಾವಕಾಶಗಳು ಕೇವಲ ಎರಡು-ಮೂರು ತಿಂಗಳ ತರಬೇತಿಯ ನಂತರ ಡ್ರೋನ್ ಪೈಲಟ್ ಆಗಬಹುದು. ಮಾಸಿಕ 30,000 ರೂ. ವೇತನ ಪಡೆಯಬಹುದು ಎಂದು ಕೇಂದ್ರ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭರವಸೆ ವ್ಯಕ್ತಪಡಿಸಿದರು.
1 ಲಕ್ಷ ಡ್ರೋನ್ ಪೈಲಟ್ಗಳ ಅಗತ್ಯವಿದೆ! “ನಮಗೆ ಸುಮಾರು ಒಂದು ಲಕ್ಷ ಡ್ರೋನ್ ಪೈಲಟ್ಗಳ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ.’’ ಹಾಗಾಗಿ ಈ ವಲಯದಲ್ಲಿ ಉದ್ಯೋಗವೂ ಸೃಷ್ಟಿಯಾಗಲಿದೆ. ಉತ್ಪಾದನೆಯ ಜತೆಗೆ ಸೇವಾ ವಲಯದಲ್ಲಿಯೂ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭವಿಷ್ಯದ ಹೊಸ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.
Drone ಖರೀದಿಗೆ ಕೇಂದ್ರ ಸರ್ಕಾರದಿಂದ 5 ಲಕ್ಷದವರೆಗೂ ಆರ್ಥಿಕ ನೆರವು! ಡ್ರೋನ್ಗಳ ಬಳಕೆಯನ್ನು ಹೆಚ್ಚಿಸಲು ಸರ್ಕಾರವು ವಿವಿಧ ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬೆನ್ನಲ್ಲೇ ಕೃಷಿಗಾಗಿ ಡ್ರೋನ್ಗಳನ್ನು ಖರೀದಿಸಲು ಸರ್ಕಾರವು 5 ಲಕ್ಷದವರೆಗೆ ಆರ್ಥಿಕ ನೆರವು (Economic Help) ನೀಡುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar) ಲೋಕಸಭೆಯಲ್ಲಿ (Lok Sabha) ಈ ಮಾಹಿತಿ ನೀಡಿದ್ದಾರೆ.
ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಬಿಡುಗಡೆ ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನದ (Drone Technology) ವಿಶಿಷ್ಟ ಪ್ರಯೋಜನಗಳ ದೃಷ್ಟಿಯಿಂದ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಡಿಸೆಂಬರ್ 2021 ರಲ್ಲಿ ಸಾರ್ವಜನಿಕ ಡೊಮೇನ್ಗಳಲ್ಲಿ ಕೀಟನಾಶಕ ಮತ್ತು ಪೋಷಕಾಂಶಗಳನ್ನು ಸಿಂಪಡಿಸಲು ಡ್ರೋನ್ಗಳ ಬಳಕೆಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಅನ್ನು ಹೊರಡಿಸಿದೆ.
ದೇಶದಲ್ಲಿ ಕೃಷಿಯನ್ನು ಸರಳ ಮತ್ತು ರೈತರಿಗೆ ಸುಲಭವಾಗಿ ತಲುಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದರ ಅಡಿಯಲ್ಲಿ ಕೇಂದ್ರ ಸರ್ಕಾರವು ಕೃಷಿಯಲ್ಲಿ ಡ್ರೋನ್ ಬಳಕೆಯನ್ನು ಉತ್ತೇಜಿಸುತ್ತಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ